ಶನಿವಾರ, ಸೆಪ್ಟೆಂಬರ್ 9, 2017

ದೇವರ ದೀಪಕ್ಕೆ .....

ನಮ್ಮಲ್ಲಿ ದೇವರ ದೀಪಕ್ಕೆ ಯಾವ ಯಾವದೋ ಸಿಕ್ಕಿದ ಎಣ್ಣೆ ತುಪ್ಪಗಳನ್ನು
ಬಳಸುತ್ತಾರೆ? 

ಕೆಲವರು ಎಳ್ಳೇಣ್ಣೆ ಒಳ್ಳೆಯದು ಎಂದು , ಕೆಲವರು ಪಾಮ್ ಆಯಿಲ್ ಕೂಡ ಹಚ್ಚುತ್ತಾರೆ. 
ದೇವರ ದೀಪವನ್ನು ಹಸುವಿನ ತುಪ್ಪದಿಂದ ಹಚ್ಚುವಂತೆ
ಮತ್ತಾವುದರಿಂದ ಹಚ್ಚಬಹುದು?

ಕರ್ಪೂರಂ ಗೋಘೃತಮ್ ತೈಲಂ ಕೋಸುಂಭಂ ನಾರಿಕೇರಜಮ್!
ಆಜ್ಯಂ ಘೃತಂ ವಾ ಸಂಪಾದ್ಯ ಪುಮಾನೇವಂ ಸ್ವಶಕ್ತಿತಃ!!
ಗೋಘೃತೇನ ತು ಸರ್ವೇಷ್ಟಫಲಸಿದ್ಧ
ಿಂ ಲಭೇನ್ನರಃ
ಅಮಂಗಲ್ಯಹರಂ ತೈಲಂ ಕೌಸುಂಭಮ್ ಕೀರ್ತಿವರ್ಧನಮ್
ನಾರಿಕೇರಂ ಸೌಖ್ಯದಮ್ ಚ ಹ್ಯಾಜ್ಯಂ ಭೋಗೈಕ ಸಾಧನಮ್!
ಏರಂಡಂ ಮಾಹಿಷಘೃತಂ ಸರ್ವಥಾ ವರ್ಜಯೇದ್ಬುಧಃ!!

ಮೇಲಿನ ಪ್ರಮಾಣದ ಪ್ರಕಾರ
ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ಸಮಸ್ತ ಇಷ್ಟ ಪ್ರಾಪ್ತಿಯಾಗುತ್ತದೆ, 
ಎಳ್ಳೆಣ್ಣೆಯಿಂದ ದೀಪ ಹಚ್ಚಿದರೆ ಅಮಂಗಲ ಪರಿಹಾರವಾಗುತ್ತದೆ, 
ಕುಸುಬೇ ಎಣ್ಣೆಯಿಂದ ದೀಪ ಹಚ್ಚಿದರೆ ಕೀರ್ತಿಯೂ ಹೆಚ್ಚುತ್ತದೆ, 
ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಸೌಖ್ಯವು ಹೆಚ್ಚುತ್ತದೆ.
ಆಡಿನ ತುಪ್ಪದಿಂದ ದೀಪ ಹಚ್ಚುವುದು ಭೋಗಕ್ಕೆ (ಸುಖಾನುಭವಕ್ಕೆ)
ಉತ್ತಮಸಾಧನವು.
ಅಂದರೆ ಆಡಿನ ತುಪ್ಪದಿಂದ ದೇವರ ದೀಪವನ್ನು ಹಚ್ಚಿದರೆ ಸುಖವು ಸಿಗುತ್ತದೆ
ಆದರೆ ಹರಳೆಣ್ಣೇ ಮತ್ತು ಎಮ್ಮೆಯ ತುಪ್ಪವನ್ನು ದೇವರ ದೀಪ ಹಚ್ಚಲು ಸರ್ವಥಾ
ಉಪಯೋಗಿಸಬಾರದು .
ಆದ್ದರಿಂದ ಒಟ್ಟಾರೆ ಹಸುವಿನ ತುಪ್ಪ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ,
ಆಡಿನ ತುಪ್ಪ ಇವುಗಳಿಂದ ದೇವರ ದೀಪವನ್ನು ಹಚ್ಚಬಹುದು.

ದೇವರ ದೀಪ ಹಚ್ಚಲು ಹತ್ತಿ ಬತ್ತಿಯನ್ನು ಉಪಯೋಗಿಸುತ್ತೇವೆ.
ಇದೇ ರೀತಿ ಇನ್ಯಾವ ಬತ್ತಿಗಳಿಂದ ದೇವರ ದೀಪವನ್ನು ಹಚ್ಚಬಹುದು?

ಪಾದ್ಮೇನ ಜ್ವಲಿತಾ ದೀಪ್ತಿಃ ಸಾರ್ವಭೌಮಪ್ರದಾಯಿ
ನೀ
ಸರ್ವೇಷ್ಟದಾಯಿನೀ ನಿತ್ಯಂ ಸರ್ವಾಭಿಷ್ಟಾರ್ಥ ಸಿದ್ಧಿದಾ!!
ಕ್ಷಮೇಣ ಜ್ವಲಿತಾ ದೀಪ್ತಿಃ ಷಡೂರ್ಮಿಪರಿಹಾರಿಣೀ
ನಿತ್ಯಯೌವನದಾತ್ರಿ ಸ್ಯಾತ್ ಸರ್ವಾಭೀಷ್ಟಪ್ರದಾ
ಯಿನೀ
ದಶಾ ನಿರ್ಮಿತಯಾ ವರ್ತ್ಯಾ ಜ್ವಲಿತಾ ದೀಪಿಕಾ ಪರಾ!!
ಭವೇತ್ಪಾಪಕ್ಷಯಸ್ತಸ್ಯ ಜ್ಞಾನ ಸೌಭಾಗ್ಯ ಸಂಪದಃ!!
ಕಾರ್ಪಾಸವರ್ತಿದೀಪೇನ ಪುಣ್ಯಂ ಪಾಪಕ್ಶಯೋ ಭವೇತ್!
ಏತಾನ್ಸಂಭೂಯ ಯೋ ಮಹ್ಯಂ ದೀಪಂ ಯಚ್ಛತಿ ಮಾನವಃ
ಮದ್ಭಕ್ತಿಫಲಭಾಕ್ ನಿತ್ಯಂ ಸೋಶ್ವಮೇಧಫಲಂ ಲಭೇತ್!!

ಮೇಲಿನ ಪ್ರಮಾಣ ಓದಿ.
ತಾವರೆ ದಂಟಿನ ನಾರು ಕೇಳಿದ್ದೀರಲ್ಲವೇ. ಅದರಿಂದ ಬತ್ತಿಯನ್ನು ಮಾಡಿ
ಉರಿಸಿದರೆ ಸಾರ್ವಭೌಮತ್ವ ಪ್ರಾಪ್ತಿಯಾಗುತ್ತದೆ. ಸಕಲ ಇಷ್ಟಾರ್ಥಗಳನ್ನೂ
ಕೊಡುತ್ತದೆ.ಹಾಗೂ ಸಕಲಾಭೀಷ್ಟಸಿದ್ಧಿ
ಯಾಗುತ್ತದೆ
ಅಗಸೇ ನಾರಿನಿಂದ ಬತ್ತಿಯನ್ನು ಮಾಡಿ ಉರಿಸಿದರೆ ಹಸಿವೆ, ನೀರಡಿಕೆ,ಮುಪ್ಪು.
ಮೃತ್ಯು,ಶೋಕ ಹಾಗೂ ಮೋಹ ಎಂಬ ಆರು ಜೀವನದ ಧರ್ಮಗಳು
ಪರಿಹಾರವಾಗುತ್ತದೆ(೬ ಊರ್ಮಿಗಳು) ಮತ್ತು ನಿತ್ಯದಲ್ಲೂ ಯೌವನ
ಪ್ರಾಪ್ತಿಯಾಗುತ್ತದೆ. ಹಾಗೂ ಎಲ್ಲ ಅಭೀಷ್ಟಗಳನ್ನುಂಟು ಮಾಡುತ್ತದೆ.
ನಾರಿನಿಂದ ಬತ್ತಿಯನ್ನು ಮಡಿ ದೀಪವನ್ನು ಉರಿಸಿದರೆ
ಪಾಪನಾಶವಾಗುವುದಲ್ಲದೆ ಜ್ಞಾನ ಸೌಭಾಗ್ಯ ಸಂಪತ್ತುಗಳನ್ನು ಕೊಡುತ್ತದೆ.
ಹತ್ತಿಯಿಂದ ಬತ್ತಿಯನ್ನು ಮಾಡಿ ದೀಪವನ್ನು ಉರಿಸಿದರೆ ಪಾಪನಾಶವಾಗಿ
ಪುಣ್ಯವುಂಟಾಗುತ್ತದೆ.
ಆದ್ದರಿಂದ ಒಟ್ಟಿನಲ್ಲಿ ಹತ್ತಿಯಿಂದ ಮಾಡಿದ ಬತ್ತಿಯಿಂದ ದೇವರ ದೀಪವನ್ನು
ಹಚ್ಚುವಂತೆ ತಾವರೆ ದಂಟಿನ ನಾರು, ಅಗಸೆ ನಾರು ಹಾಗು ನಾರು ಇವುಗಳಿಂದ
ಬತ್ತಿಯನ್ನು ಮಾಡಿ ದೇವರ ದೀಪವನ್ನು ಹಚ್ಚ ಬಹುದು.

ಮರದ ಬಾಗಿಣ ಮತ್ತು ಮಹತ್ವಗಳು

*ಮರದ ಬಾಗಿಣ ಮತ್ತು ಮಹತ್ವಗಳು..*

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು..

೧. *ಅರಿಸಿನ:* _ಗೌರಿದೇವೀ._
೨. *ಕುಂಕುಮ:*_ಮಹಾಲಕ್ಷ್ಮೀ_
೩. *ಸಿಂಧೂರ:* _ಸರಸ್ವತೀ_
೪. *ಕನ್ನಡಿ:* _ರೂಪಲಕ್ಷ್ಮೀ._
೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._
೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
೭. *ಅಕ್ಕಿ:*_ಶ್ರೀ ಲಕ್ಷ್ಮೀ._
೮. *ತೊಗರಿಬೇಳೆ :*_ವರಲಕ್ಷ್ಮೀ_
೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_
೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
೧೨. *ಅಡಿಕೆ:*_ಇಷ್ಟಲಕ್ಷ್ಮೀ_
೧೩. *ಫಲ(ಹಣ್ಣು):* _ಜ್ಞಾನಲಕ್ಷ್ಮೀ_
೧೪. *ಬೆಲ್ಲ:*_ರಸಲಕ್ಷ್ಮೀ_
೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_
÷÷÷÷÷÷÷÷÷÷÷÷÷÷÷÷÷÷÷÷÷÷÷

ಮುತೈದೆ ದೇವತೆಯರು *೧೬* ಜನರು.  
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
*ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ,  ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*

_ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..
ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..
ಈ *೧೬* ದೇವತೆಗಳು ನಿತ್ಯಸುಮಂಗಲಿಯರು..
ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
೧೬ ಅರಿಸಿನ ದಾರ, 
೧೬ ಗಂಟುಗಳು, 
೧೬ ಬಾಗಿನ, 
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

# *ದಾನಗಳು ಮತ್ತು ಫಲಗಳು*

*೧. ಅರಿಸಿನ ದಾನ :* ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

*೨. ಕುಂಕುಮ ದಾನ :* ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

*೩. ಸಿಂಧೂರ ದಾನ:* ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

*೪. ಕನ್ನಡೀ(ರೂಪಲಕ್ಷ್ಮೀ) :* ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

*೫. ಬಾಚಣಿಗೆ :* ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

*೬. ಕಾಡಿಗೆ :* ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

*೭. ಅಕ್ಕಿ :* ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

*೮. ತೊಗರಿಬೇಳೆ :* ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

*೯. ಉದ್ದಿನ ಬೇಳೆ :* ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

*೧೦. ತೆಂಗಿನಕಾಯಿ :* ಇಷ್ಟಾರ್ಥಸಿದ್ಧಿಯಾಗುತ್ತದೆ.. , 
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

*೧೧. ವೀಳ್ಯದೆಲೆ :* ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

*೧೨. ಅಡಿಕೆ :* ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

*೧೩. ಫಲದಾನ :* ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

÷ಸಾಲಿಗ್ರಾಮ ಮಹತ್ವ
ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಪದ್ಮಪುರಾಣದಲ್ಲಿ ಸಾಲಿಗ್ರಾಮ ಶಿಲೆಯ ಬಗ್ಗೆ ಶಿವನು ಈ ರೀತಿ ಹೇಳಿದ್ದಾನೆ. ಮಹಾಲಿಂಗ ಕೋಟಿಭಿಃ ದೃಷ್ಟಿ ಯದ್ ಫಲಂ ಪೂಜತಿ ಸಾಲಿಗ್ರಾಮ ಶಿಲಾಯಂತು ಏಕಸ್ಯಂ ಇವ ತದ್ಭವೇದ್ (ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ನೋಡುವುದು ಮತ್ತು ಪೂಜಿಸಿದಕ್ಕೆ ಸಮಾನ) ದೇವಿ ಭಾಗವತ ಪುರಾಣದ ಪ್ರಕಾರ; ಜಲಂಧರನನ್ನು ಕೊಲ್ಲಲು ವಿಷ್ಣುವು ಆತನ ಸತಿ ಬೃಂದಾಳ ಪಾತಿವ್ರತ್ಯ ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ಆಕೆ ವಿಷ್ಣುವಿಗೆ ನಾಲ್ಕು ಅವತಾರವನ್ನು ಎತ್ತು ಎಂದು ಶಾಪ ಕೊಡುತ್ತಾಳೆ. ಶಾಪ ಮುಕ್ತಿಗಾಗಿ ವಿಷ್ಣುವು ಕಲ್ಲು (ಸಾಲಿಗ್ರಾಮ), ಹುಲ್ಲು (ದರ್ಬೆ), ಮರ (ಅಶ್ವತ್ಥ) ಮತ್ತು ಗಿಡವಾಗಿ (ತುಳಸಿ) ಅವತಾರ ಎತ್ತಿದ. ಇತಿಹಾಸದ ಪ್ರಕಾರ ಗಂಡಕಿ ಎಂಬ ಭಕ್ತೆ ಹಲವು ವರ್ಷ ತಪಸ್ಸು ಮಾಡಿ ವರವನ್ನು ಪಡೆದ ಫಲವಾಗಿ ವಿಷ್ಣುವು ಆಕೆಯ ಗರ್ಭವನ್ನು ಪ್ರವೇಶಿಸುತ್ತಾನೆ. ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ. ಎಲ್ಲಿ ಸಿಗುತ್ತದೆ? ನೇಪಾಳ ದೇಶದ ಮಸ್ತಾಂಗ್ ಪ್ರದೇಶದಲ್ಲಿ, ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ-ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳ ಇದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದೆ. ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾ ಎಂದು ಕರೆಯಲಾಗುತ್ತದೆ. ಗಂಡಕಿ ನದಿಯ ಪಾತ್ರದಲ್ಲಿರುವ ಮುಕ್ತಿನಾಥ, ದಾಮೋದರ ಕುಂಡಗಳನ್ನು ಸಾಲಿಗ್ರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ. ಹಿಂದುಗಳ ಸಂಪ್ರದಾಯದಂತೆ ಈ ಕಲ್ಲು 'ವಜ್ರ ಕೀಟ' ಎಂಬ ಹುಳುವಿಗೆ ಆಶ್ರಯ ತಾಣ. ವಜ್ರದ ಹಲ್ಲು ಹೊಂದಿರುವ ಈ ಕೀಟ, ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ಒಳಕ್ಕೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ. ಹಾಗೆಯೇ ಗಂಡಕಿ ನದಿಯ ಆಳವಾದ ಗರ್ಭದಲ್ಲಿ ಅಡಗಿರುವ ಸಾಲಿಗ್ರಾಮವೇ ಅಸಲಿ ಎಂಬ ನಂಬುಗೆಯೂ ಇದೆ. ಪಾಲಿಷ್ ಮಾಡಿದ, ನಕಲಿ ರೇಖೆ ಸೃಷ್ಟಿಸಿದ ಸಾಲಿಗ್ರಾಮಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುತ್ತವೆ. ಅಸಲಿ ಎಂಬುದನ್ನು ತಜ್ಞರಿಂದಲಷ್ಟೇ ಪತ್ತೆ ಹಚ್ಚಲು ಸಾಧ್ಯ. ಭಕ್ತರು ಈ ಬಗ್ಗೆ ಎಚ್ಚರ ವಹಿಸಿಬೇಕು. ಅಂಗಡಿಯಲ್ಲಿ ದೇವರ ಆರಾಧನೆ ಮಾಡಿಯೇ ಇದನ್ನು ವ್ಯಾಪಾರಕ್ಕೆ ಇಡುತ್ತಾರೆ. ಹೀಗಾಗಿ ತೊಂದರೆ ಕಾಣಿಸುವುದಿಲ್ಲ. ಅಸಲಿ ಸಾಲಿಗ್ರಾಮವನ್ನು ಪೂಜಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಯಾವ್ಯಾವ ಬಣ್ಣದಲ್ಲಿವೆ? ನಾಲ್ಕಾಣೆ ಅಗಲದಿಂದ ಹಿಡಿದು ಮುಷ್ಟಿಯಷ್ಟು ಗಾತ್ರದ ದೊಡ್ಡ ಸಾಲಿಗ್ರಾಮವೂ ಇದೆ. ಈ ಕಲ್ಲು ಕೆಂಪು, ನೀಲಿ, ಹಳದಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ದೊರೆಯುತ್ತವೆ. ಹಳದಿ ಮತ್ತು ಚಿನ್ನದ ಬಣ್ಣದ ಸಾಲಿಗ್ರಾಮವು ಶುಭಕಾರಕ. ಇದನ್ನು ಪೂಜಿಸಿದರೆ ಆರ್ಥಿಕ ಸುಧಾರಣೆಯಾಗಿ ಅಭ್ಯುದಯವಾಗುತ್ತದೆ. ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ. ಆದರೆ ಕಪ್ಪುಬಣ್ಣದ ಸಾಲಿಗ್ರಾಮವನ್ನು ಪೂಜಿಸುವುದೇ ಜಾಸ್ತಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಣ್ಣ ಬದಲಾಗುತ್ತಿರುತ್ತದೆ. ಸ್ಕಂದ ಮತ್ತು ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಪತ್ನಿ, ಮಕ್ಕಳು, ಆರೋಗ್ಯ, ಐಶ್ವರ್ಯ, ಶಾಂತಿ ದೊರೆಯುತ್ತದೆ. ಇದರ ನೀರಿನ ಸ್ಪರ್ಶದಿಂದ ಚಿಂತೆ, ಒತ್ತಡ, ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳೂ ಪೂರೈಸುತ್ತವೆ. ಸಾಲಿಗ್ರಾಮದಲ್ಲಿ ದಿವ್ಯಶಕ್ತಿ ಇದ್ದು, ಇದಕ್ಕೆ ಅಭಿಷೇಕ ಮಾಡಿದ ಪದಾರ್ಥ ಸೇವಿಸಿದರೆ (ಹಾಲು, ಮೊಸರು, ನೀರು ಇತ್ಯಾದಿ) ಆರೋಗ್ಯ ವೃದ್ಧಿಯಾಗುತ್ತದೆ. ಸಾಮಾನ್ಯಾವಾಗಿ ಗುಂಡಗೆ ಇರುವ ಈ ಶಿಲೆ, ನಾನಾ ಆಕಾರದಲ್ಲೂ ಸಿಗುತ್ತದೆ. ಪೂಜೆ ಹೇಗೆ? ಪಂಚಾಯತನ ಪೂಜೆ ಮಾಡುವಾಗ ವಿಷ್ಣುವಿನ ವಿಗ್ರಹದ ಬದಲಿಗೆ ಸಾಲಿಗ್ರಾಮವನ್ನು ಇಡುವುದು ಸಾಮಾನ್ಯ.  ಸಾಲಿಗ್ರಾಮವನ್ನು ನೀರಿನಲ್ಲಿ ಪ್ರತಿನಿತ್ಯ ಅಭಿಷೇಕ ಮಾಡಬೇಕು. ಒಂದು ಬಾರಿ ಅಭಿಷೇಕ ಮಾಡಲು ಆರಂಭಿಸಿದರೆ ಪ್ರತಿನಿತ್ಯ ಮಾಡಲೇಬೇಕು. ಅಭಿಷೇಕ ಮಾಡಲು ಸಾಧ್ಯವಿಲ್ಲ ಎಂದಾದರೆ(ಸೂತಕಾದಿಗಳಲ್ಲಿ) ಅಕ್ಕಿಯಲ್ಲಿ ಹಾಕಿಡಬೇಕು. ಆ ಅಕ್ಕಿ ಮುಗ್ಗಲು ಬರುತ್ತಿದೆಯಾ ಎಂಬುದನ್ನು ಗಮನಿಸುತ್ತಿರಬೇಕು. ಸ್ನಾನ ಮಾಡದೆ, ದುರಭ್ಯಾಸ ಮತ್ತು ಮೈಲಿಗೆಯಾದವರು ಇದನ್ನು ಮುಟ್ಟಬಾರದು. ನೆಲದ ಮೇಲೆ ಹಾಗೆಯೇ ಇಡಬಾರದು ಹಾಗೂ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಕರಂಡಿಕೆಯಲ್ಲಿ ಹಾಕಿ ಇಡಬೇಕು. ಇದರ ಮೇಲೆ ಜನರ ಕೆಟ್ಟ ದೃಷ್ಟಿ ಬಿದ್ದರೆ ಶಕ್ತಿ ವ್ಯಯವಾಗುತ್ತದೆ. ದೇವಾಲಯಗಳಲ್ಲಿ ಅವರವರ ಧರ್ಮಾಚರಣೆಗೆ ಅನುಗುಣವಾಗಿ ಯಾವುದೇ ಸಾಲಿಗ್ರಾಮವನ್ನು ಇಟ್ಟು ಪೂಜಿಸಬಹುದು. ಸಾಲಿಗ್ರಾಮವನ್ನು ಮನೆಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಇಟ್ಟು ಪೂಜಿಸಬಹುದು. ಆದರೆ ಎರಡು ಅಥವಾ ಬೆಸ ಸಂಖ್ಯೆಯಲ್ಲಿ ಪೂಜಿಸಬಾರದು. ಒಂದೇ ಒಂದು ಕಲ್ಲನ್ನು ಪೂಜಿಸುವುದು ತುಂಬಾ ಒಳ್ಳೆಯದು. ಪ್ರತಿನಿತ್ಯ ೧೨ ಸಾಲಿಗ್ರಾಮಗಳನ್ನು ಪೂಜಿಸಿದರೆ ವ್ಯಕ್ತಿಯ ಶ್ರೇಷ್ಠತೆಯು ವೃದ್ಧಿಸುತ್ತದೆ ಮತ್ತು ಅಪರಾಧದಿಂದ ಮುಕ್ತಿ ಹೊಂದುತ್ತಾನೆ ಎಂಬ ನಂಬುಗೆಯೂ ಇದೆ. ಯಾವುದಾದರೂ ಕಾರಣದಿಂದ ಈ ಕಲ್ಲಿಗೆ ಹಾನಿಯಾದರೆ ಅಥವಾ ಒಡೆದರೂ ಪೂಜಿಸಬಹುದು. ಪೂರ್ವಜರ ಕಾಲದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಸಾಲಿಗ್ರಾಮಕ್ಕೆ ಕಾರಣಾಂತರಗಳಿಂದ ಪೂಜೆ ಮುಂದುವರಿಸಲು ಸಾಧ್ಯವಾಗದಿದ್ದರೆ ದೇವಸ್ಥಾನ ಅಥವಾ ಮಠಕ್ಕೆ ಕೊಡಬಹುದು. ದೇವಸ್ಥಾನಗಳಲ್ಲೂ ಇವು ಅಧಿಕ ಸಂಖ್ಯೆಯಾದಾಗ ಪೂಜಿಸಲು ಸಾಧ್ಯವಾಗದಿದ್ದರೆ ಪ್ರಧಾನ ಶಕ್ತಿಯ ಆರಾಧನೆ ಮಾಡಿ ಕೆರೆ ಅಥವಾ ಬಾವಿಯಲ್ಲಿ ವಿಸರ್ಜಿಸುತ್ತಾರೆ.

#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ -13


#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ -13

ಭಾರತ ಹೇಗಿತ್ತೇಂದರೆ ಅತ್ಯಂತ ಸಂಪದ್ಭರಿತ ಹಾಗೂ ಸಮೃದ್ಧ ನಾಡಾಗಿತ್ತು, ಯುರೋಪಿಯನ್ನರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದರೆ ಗುಜರಾತಿನ ಒಬ್ಬ ಸಣ್ಣ ವ್ಯಾಪಾರಿ ಇದೇ ಹಡಗನ್ನೆ ಕೊಂಡುಕೊಂಡು ಅವರು ಕೇಳಿದಷ್ಟು ಹಣಕೊಟ್ಟು ಕಳುಹಿಸುತ್ತಿದ್ದರು.

ಇದನ್ನು ಕಂಡು ಪಾಶ್ಚಿಮಾತ್ಯರು ಭಾರತವನ್ನು ಅಧ್ಯಯನ ಮಾಡಲೆಂದು ಮೆಕಾಲೆಯನ್ನು ಭಾರತಕ್ಕೆ ಕಳುಹಿಸಿ ಕೊಡುತ್ತಾರೆ. ಆತ ಭಾರತದಾದ್ಯಂತ ಸಂಚರಿಸಿ ಒಂದು ವರದಿ ಸಲ್ಲಿಸುತ್ತಾನೆ. ಆ ವರದಿಯಲ್ಲಿ ಮೆಕಾಲೆ ಹೀಗೆ ದಾಖಲಿಸಿರುತ್ತಾನೆ. 'ಭಾರತೀಯರಿಗೆ ತಮ್ಮ ಪೂರ್ವಜರ ನೆನಪಿದೆ, ತಮ್ಮ ಪರಂಪರೆಯ ಇತಿಹಾಸವನ್ನು ಮರೆಸಿದರೆ ಭಾರತವನ್ನು ಆಳಬಹುದು ಎಂದು ವರದಿಯಲ್ಲಿ ದಾಖಲಿಸಿರುತ್ತಾನೆ. ಅದರಂತೆಯೇ ಆತನನ್ನು ಮತ್ತೆ ಭಾರತಕ್ಕೆ ಕಳುಹಿಸುತ್ತಾರೆ. ಮೆಕಾಲೆ, ತಮ್ಮ ಶಿಕ್ಷಣ ಪದ್ದತಿಯನ್ನು ಭಾರತದಲ್ಲಿ ತಳವುರಿಸುತ್ತಾನೆ. ಇದರಿಂದ ಭಾರತದಲ್ಲಿ ನಿಧಾನವಾಗಿ ಗುರುಕುಲ ಶಿಕ್ಷಣ ಪದ್ಧತಿ ನಶಿಸಲಾರಂಭಿಸಿ, ಇಂಗ್ಲಿಷ್ ಶಿಕ್ಷಣ ಪದ್ಧತಿ ಭಾರತದಲ್ಲಿ ತಳವುರುತ್ತದೆ. ಇದರಿಂದಾಗಬಹುದಾದ ಅನಾಹುತವನ್ನೆಲ್ಲಾ ಅರಿಯುತಿದ್ದ ಅಂದಿನ ಸಂನ್ಯಾಸಿ-ಸಾದುಗಳು ಭಾರತವನ್ನು ಮತ್ತೆ ಹಳೆಯ ವೈಭೋಗಕ್ಕೆ ಕೊಂಡೊಯ್ಯಲು ಸದಾ ಶ್ರಮಿಸುತ್ತಿದ್ದರು. ಅವರಲ್ಲಿ ಮುಖ್ಯವಾಗಿ,

ಸ್ಪೂರ್ತಿ ತುಂಬಿದ ಸಂನ್ಯಾಸಿಗಳು:

ಸ್ವಾಮಿ ವಿವೇಕಾನಂದರು:
ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತದಲ್ಲಿನ ಸ್ವಾತಂತ್ರ್ಯದ ಕಿಚ್ಚು ಕೂಡ ಹೇಳುವಂತಿರಲಿಲ್ಲ. ೧೮೫೭ರ ಸಂಗ್ರಾಮದ ನಂತರ ಭಾರತ ಸಂಪೂರ್ಣವಾಗಿ ಬ್ರಿಟಿಷ್ ರ ಗುಲಾಮರಾಗಿದ್ದರೆಂದರೆ ತಪ್ಪಾಗಲಾರದು.

ಈ ದುಷ್ಟ್ರಭಾವದಿಂದ ಅಮೇರಿಕ ಮತ್ತು ಯುರೋಪಿನ ಬುದ್ಧಿವಂತರನ್ನು ಹೊರಗೆಳೆಯುವ ಮೊದಲ ಯಶಸ್ವೀ ಸಾಹಸ ಮಾಡಿದ್ದು ಸ್ವಾಮಿ ವಿವೇಕಾನಂದರೇ.
ಸಿಡಿಲು ಬಡಿದಿದ್ದ ಭಾರತಕ್ಕೆ ಮತ್ತೆ ಸ್ವಾತಂತ್ರ್ಯ ಕಿಡಿ ಎಂಬ ಸ್ಪೂರ್ತಿಯ ಚೇತನ ತುಂಬಿದವರಲ್ಲಿ ಮೊದಲಿಗರು ಸ್ವಾಮಿ ವಿವೇಕಾನಂದರು. ಸ್ವಾಮಿಜಿಯವರ ಮನೋಗತಿ ಸಂಸ್ಥೆಯನ್ನು ಕಟ್ಟಿ ಸುಮ್ಮನಿರುವುದಾಗಿರಲಿಲ್ಲ. ಅವರ ಇಚ್ಛೆ ಶತ್ರುವಿನ ನಾಡಿನಲ್ಲಿ ಭವಿಷ್ಯದ ಹೊರಾಟಕ್ಕೆ ಪೀಠಿಕೆ ಬರೆಯ ಹೊರಟಿದ್ದರು. ಸ್ವಾಮೀಜಿ ಯಾವ ಯೂರೋಪು ನಮ್ಮನ್ನು ಗುಲಾಮರನ್ನಾಗಿಸಿತ್ತೋ, ಅದೇ ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬಬಲ್ಲವರನ್ನು ಅರಸುತ್ತಿತ್ತು ಸ್ವಾಮೀಜಿಯವರ ಹೃದಯ. ಮೊದಲು ಸ್ವಾಮೀಜಿಯವರು ಮಾನಸಿಕವಾಗಿ ಜನರನ್ನು ಕ್ರಾಂತಿಗೆ ಸಜ್ಜುಗೊಳಿಸುತ್ತಿದ್ದರು.

ಸ್ವಾಮಿ ರಾಮ ತೀರ್ಥರು:
ಸ್ವಾಮಿಜಿಯವರ ಸಾಲಲ್ಲೇ ಬರುವ ಮತ್ತೊರ್ವ ಕ್ರಾಂತಿ ತುಂಬಿದ ಸ್ಪೂರ್ತಿದಾಯಿತ್ವದ ವ್ಯಕ್ತಿತ್ವ ಹೊಂದಿದ್ದವರಾಗಿದ್ದ ಸಂತ ರಾಮತೀರ್ಥರು "ಭಾರತ ಎಂದರೆ ನಾನೇ,ನಾನೇ ಭಾರತ,ನನ್ನ ದೇಹವೇ ಈ ನೆಲ, ನನ್ನ ಕುತ್ತಿಗೆಯೇ ದಕ್ಷಿಣದ ಮಲಬಾರ್ ಚೋಳ ಮಂಡಲಗಳು. ಪಾದಗಳು ಕನ್ಯಾಕುಮಾರಿ. ನನ್ನ ಶಿರಸ್ಸೆ ಹಿಮಾಲಯ, ನನ್ನ ಕೂದಲುಗಳಲ್ಲಿ ಪ್ರತ್ಯಕ್ಷ ಗಂಗೆ ಬ್ರಹ್ಮಪುತ್ರೆಯರು ಹರಿಯುತ್ತಾರೆ. ನನ್ನ ವಕ್ಷಸ್ಥಳವೇ 'ವೀರ ನಾಡು ರಜಪೂತನ ಗುಜರಾತ, ನನ್ನ ಬಾಹುಗಳೇ ಪೂರ್ವ ಪಶ್ಚಿಮ ಭಾರತ' ಹೀಗೆ ಭಾರತದೊಂದಿಗೆ ತಮ್ಮನ್ನು ತಾವು ಒಂದುಗೂಡಿಸಿಕೊಂಡು ಘೋಷಿಸಿದವರು ಸ್ವಾಮಿ ರಾಮತೀರ್ಥರು. ಈ ಹೋಲಿಕೆಯನ್ನು ಪ್ರತಿಯೊಬ್ಬ ಭಾರತೀಯನು ತನ್ನಲ್ಲಿ ತಾನು ಎಂದುಕೊಂಡರೆ ಭಾರತ ಎಷ್ಟು ಭವ್ಯವಾದೀತು? ಊಹಿಸಿಕೊಳ್ಳಿ.
ಭಾರತೀಯರೆ... ಏಳಿ,ಎದ್ದೇಳಿ ಎಂದು ಎಚ್ಚರಿಸಿದ ವಿವೇಕಾನಂದರಂತೆಯೇ ಸ್ವಾಮಿ ರಾಮತೀರ್ಥರ ವಾಣಿಯೂ ಮೊಳಗಿತು. ಅದೇ ರೀತಿಯ ಚೈತನ್ಯ ಸ್ಪೂರ್ತಿಗಳ ಆಹ್ವಾನ, ಕಥೆಗಳ ನಿರೂಪಣೆ ತದನುರೂಪ ಸಂನ್ಯಸ್ತ ಜೀವನ ರಾಮತೀರ್ಥರದು.

ಸ್ವಾಮಿ ಶ್ರದ್ದಾನಂದರು:
ಶ್ರದ್ದಾನಂದರಿಗೆ ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಕನಸು ಅದೇಷ್ಟಿತ್ತೆಂದರೆ ತಮ್ಮ ಪೂರ್ವಾಶ್ರಮದಲ್ಲಿ ಮುನ್ ಶೀ ರಾಮನಾಗಿದ್ದ ಶ್ರದ್ದಾನಂದರು ಬರೇಲಿಯ ನಾಯಬ್ ತಹಸೀಲ್ದಾರನೇನೊ ಆದರು. ಆದರೆ ಸ್ವಾತಂತ್ರ್ಯದ ಪ್ರವೃತ್ತಿಯವರಿಗೆ ಬ್ರಿಟಿಷ್ ರ ಸರ್ಕಾರಿ ನೌಕರಿ ಇಷ್ಟವಾಗಿರಲಿಲ್ಲ. ಒಮ್ಮೆಯಂತು ಸೈನಿಕ ಅಧಿಕಾರಿಯ ವಿರುದ್ಧವೇ ಸಿಡಿದು ನಿಂತು ಕೆಲಸಕ್ಕೆ ರಾಜಿನಾಮೆ ನೀಡಿದರು. ತದ ನಂತರ ಸಂನ್ಯಾಸತ್ವ ಸ್ವೀಕಾರ ಮಾಡಿ ನಶಿಸಿಹೋಗುತ್ತಿದ್ದ ಗುರುಕುಲವನ್ನು ಪ್ರಾರಂಭಿಸಲು ಸಿದ್ದರಾದರು.೧೫ ವರ್ಷಗಳ ಕಾಲ ಗುರುಕುಲವನ್ನು ನಡೆಸಿ, ಅಲ್ಲಿಗೆ ಕಲಿಯಲು ಬರುವ ಶಿಷ್ಯರಿಗೆ ಕುದುರೆ ಸವಾರಿ,ಕತ್ತಿವರಸೆಗಳನ್ನು ಕಲಿಸಿದರು. ಭಾರತೀಯ ಅಧ್ಯಾತ್ಮವನ್ನು ಭಾರತೀಯರಿಗೆ ತುಂಬಿದರು. ಮತಾಂತರದ ವಿರುದ್ಧ ಸಿಡಿದು ನಿಂತರು. ಹೀಗೆ ತಮ್ಮ ಕಾಲಮಾನದಲ್ಲಿ ಸ್ವಾಮಿ ಶ್ರದ್ಧಾನಂದರು ಬಗೆಬಗೆಯಾಗಿ ಭಾರತೀಯರನ್ನು ಬಡಿದೆಬ್ಬಿಸಿದರು. 

ಹಾಗೆ ನೋಡುತ್ತಾ ಹೋದರೆ ಮಲಗಿದ್ದ ಭಾರತವನ್ನು ಬಡಿದೆಬ್ಬಿಸಿದವರೆಲ್ಲಾ ಭಾರತೀಯ ಸಂನ್ಯಾಸಿ ವೃಂದವೇ. ಭಾರತೀಯರಲ್ಲಿ ಮಲಗಿದ್ದ ಕ್ಷಾತ್ರತೇಜವನ್ನು ಬಡಿದೆಬ್ಬಿಸಿ ಮತ್ತೆ ಕ್ರಾಂತಿಯ ಕಿಡಿಯನ್ನು ಹಚ್ಚಿಸಿದವರು. ಇವರುಗಳ ಸ್ಪೂರ್ತಿ ಇಲ್ಲದಿದ್ದಿದ್ದರೆ ಭಾರತ ಮತ್ತೆ ಗುಲಾಮಗಿರಿಯಲ್ಲಿಯೇ ಉಳಿದು ಬಿಡುತ್ತಿತ್ತು.

ಪರಿಸರದ ಮಾಲಿನ್ಯ

ನಮ್ಮ ಪರಿಸರದ ಮಾಲಿನ್ಯ ಮಾಡುವುದರಲ್ಲಿ ನಮ್ಮ ಪ್ರಾರ್ಥನಾ ಮಂದಿರಗಳದ್ದೇ ಸಿಂಹ ಪಾಲು. ಕಾಲ ಬದಲಾಗಿದೆ  ಎಂದು ಹೇಳುತ್ತಾ ಹೇಳುತ್ತಾ ಆಧುನಿಕತೆಯ ತನ್ನದಾಗಿಸಿಕೊಂಡಿರುವ ಈ ಕಾಲದಲ್ಲೂ  ಸಂಕುಚಿತ ಮನೋಭಾವದಿಂದ  ಕೆಲವು ವಿಷಯಗಳಲ್ಲಿ  ಧೋರಣೆ ಬದಲಾಗದೇ ಹಿಂಸೆಗೆ ಕಾರಣವಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಮಕ್ಕಳು  ಓದು ಬರಹದಲ್ಲಿ  ಕಾಲ ಕಳೆಯುವ  ಹೂತ್ತಿನಲ್ಲಿ ಗ್ರಾಮದ ಗಲ್ಲಿಗಲ್ಲಿಗೆ ಇರುವ ಪ್ರಾರ್ಥನಾ ಮಂದಿರಗಳಲ್ಲಿ ಕರ್ಕಶ ಧ್ವನಿಯಲ್ಲಿ  ಕಾರ್ಯಕ್ರಮ ಗಳು ಪ್ರಾರಂಭ ವಾಗುತ್ತವೆ. ಇದಕ್ಕೆ ಒಂದು ಇತಿ ಮಿತಿ ಇರುವುದಿಲ್ಲ. ಕ್ರಮ ರೀತಿ ನೀತಿಯೂ ಇರುವುದಿಲ್ಲ. ವರ್ಷದಲ್ಲಿ ವಿಶೇಷ ಪೂಜೆ, ಉಪನ್ಯಾಸ  ಅಥವಾ  ಧಾರ್ಮಿಕ ಆಚರಣೆ ನಿಮಿತ್ತ  ಎಂದು ಹೇಳಿ ಸುಮ್ಮನಾಗ ಬಹುದು. ಆದರೆ ಖುಷಿ ಬಂದ ಹಾಗೆ ನಡೆಯುತ್ತಿರುವುದು ಅಜ್ಞಾನದ ಪರಮಾವಧಿ. 

ಪ್ರಾರ್ಥನಾ ಮಂದಿರ ಸ್ಥಾಪನೆಯ ಉದ್ದೇಶ ಬಿಡುವಿನ ವೇಳೆಯಲ್ಲಿ ದೇವರ ಧ್ಯಾನ ಮಾಡಿ ಮನಸ್ಸು ಹಗುರ ಮಾಡಿಕೊಳ್ಳುವ  ಒಂದು ಕೇಂದ್ರ. ಅದನ್ನೇ ಧಾರ್ಮಿಕ ಶ್ರದ್ಧಾ ಕೇಂದ್ರ ಎನ್ನುವುದು. ದೇವಸ್ಥಾನಗಳಿಗೂ ಪ್ರಾರ್ಥನಾ ಮಂದಿರಗಳಿಗೂ ವ್ಯತ್ಯಾಸ ಇದೆ. ದೇವಸ್ಥಾನ  ಹಲವು ಮಾಗಣೆಗಳಿಗೆ ಒಂದು. ಅಲ್ಲಿ ಪ್ರತಿ  ನಿತ್ಯ ಮೂರು ಹೂತ್ತಿನಲ್ಲಿ ಆರಾಧನೆ ನಡೆಯುತ್ತದೆ. ಆದರೆ ಪ್ರಾರ್ಥನಾ ಮಂದಿರಗಳ ಹಾಗಲ್ಲ. ಅವುಗಳ ಕಾರ್ಯಚಟುವಟಿಕೆ ಸೀಮಿತ.
ಭಕ್ತರ ಪರಿಸರದಲ್ಲಿ (residential area) ದೇವರ ಧ್ಯಾನದಲ್ಲಿ ಕಾಲಕಳೆಯಲು ಒಂದು  ಅವಕಾಶ. ಅದು ಹಿಂದೂ ಧರ್ಮದ ಗುಡಿಗಳಿರಲಿ, ಮುಸ್ಲಿಮರ ಮಸೀದಿಯೇ ಆಗಿರಲಿ ಅಥವಾ ಕ್ರಿಶ್ಚನ್ನಿನವರ ಚರ್ಚ್ ಆಗಿರಲಿ  ಇವೆಲ್ಲ ಪ್ರಾರ್ಥನಾ ಮಂದಿರದಗಳಿಗೆ ಹೋಗುವ ಭಕ್ತ  ಪ್ರಾರ್ಥನೆ ಮಾಡಿ ದೈನಂದಿನ ಕಾರ್ಯದಲ್ಲಿ ತೊಡಗಿಕೂಳ್ಳುತ್ತಾನೆ. ಇಂತಹ ಮಂದಿರಗಳಲ್ಲಿರುವ ಅರ್ಚಕ, ಮೌಲಿ ಅಥವಾ ಫಾದರ್ ಅಲ್ಲಿ ಬಂದಿರುವ ಭಕ್ತನ ಕಷ್ಟ ಪರಿಹಾರ ಸೂಚಿಸುವ ಕ್ರಮ ಪ್ರಸಾದ ಈ ಮೊದಲಾದ ನಂಬಿಕೆಗೆ ಒತ್ತು ನೀಡುವ ವಿಚಾರವೇ ಪ್ರಧಾನ. ಹಾಗಾಗಿ ಧ್ವನಿ ವರ್ಧಕ ಬಳಸುವ ಅವಶ್ಯಕತೆ ಇರುವುದಿಲ್ಲ.

ಮುಸ್ಲಿಮರ ಪ್ರಾರ್ಥನಾ ಮಂದಿರಗಳಾದ ಮಸೀದಿಗಳಲ್ಲಿ ಬಾಂಕ ಕೂಗುವ ಕ್ರಮ ಇದೆ. ಅದಕ್ಕೆ ಧ್ವನಿ ವರ್ಧಕ ಬಳಸುತ್ತಾರೆ. ಅದಕ್ಕೆ ಕೊಡುವ ವಾಲ್ಯುಂ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಕೇಳುವಂತಿರುತ್ತದೆ. ಇದು ಅಗತ್ಯವಿದೆಯಾ?  ಈಗೀಗ ಮಕ್ಕಳಿಗೆ ಮಾಡುವ ಪಾಠವೂ ಧ್ವನಿವರ್ಧಕದ ಮೂಲಕವೇ ನಡೆಯುತ್ತಿದೆ. ಅವರು ಮಾಡುವ ಪಾಠ ಊರವರಿಗೆ ಕೇಳುವ ಅಗತ್ಯವಿದೆಯಾ?   ಧಾರ್ಮಿಕ ಆಚರಣೆಗಳು ಆಯಾಯ ಮತದಾರರಿಗೆ ಮಾತ್ರ ಕೇಳಲು ಆಚರಿಸಲು ಇರುವುದೇ ವಿನಹಃ ಅನ್ಯಮತೀಯರಿಗೆ ಅದು ಸಹ್ಯವಲ್ಲ. ಈ ದೃಷ್ಟಿಯಿಂದ ನೋಡಿದರೂ ಸಾರ್ವಜನಿಕರ ಕಿವುಡುಗಚ್ಚವ ರೀತಿಯಲ್ಲಿ ಧ್ವನಿವರ್ಧಕದ ಬಳಕೆ ಅಗತ್ಯವಿಲ್ಲ. 
ಅದೂ ಅಲ್ಲದೇ ಧಾರ್ಮಿಕ ಕಾರ್ಯಕ್ರಮದ  ಹೆಸರಿನಲ್ಲಿ  10-20 ಜನರನ್ನು ಮುಂದೆ ಕೂರಿಸಿ ಕೊಂಡು ಊರವರಿಗೆ ಹರ್ಟ್ ಆಗುವ ರೀತಿಯಲ್ಲಿ ಧ್ವನಿವರ್ಧಕ ರಾತ್ರಿ 11 ಘಂಟೆಯ ಬಳಸುವುದೂ ಇದೆ. ಈ ಕ್ರಮ ಪ್ರತಿ ದಿನ ಮಸೀದಿ ಬದಲಾಯಿಸಿ ಮಾಡುವ ಕ್ರಮದಿಂದಾಗಿ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮಗಳು  ಸಮಾಜದ ನೆಮ್ಮದಿ  ಹಾಳುಗೆಡವುತ್ತಿದೆ.

ಈ  ಎಲ್ಲಾ ವಾಸ್ತವತೆಯನ್ನು ಅರಿತು ಪ್ರಾರ್ಥನಾ ಮಂದಿರಗಳು ( ಯಾವುದೇ ಜಾತಿ ಮತ ಧರ್ಮ ಭೇದವಿಲ್ಲದೆ ) ಕೇವಲ ಪ್ರಾರ್ಥನಾ ಮಂದಿರಗಳಾಗಿಯೇ ಕಾರ್ಯ ನಿರ್ವಹಿಸುವಂತಾಗಲಿ. ಅವರವರ ಧರ್ಮ  ಅವರವರು ಆಚರಣೆ ಅವರವರ ಮನೆಯಲ್ಲಿಯೇ ಮಾಡುವಂತಾಗಲಿ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಸತಿ ಗೃಹ ಪ್ರದೇಶದಲ್ಲಿ 
ಇತ್ತೀಚೆಗೆ ಹುಟ್ಟಿ ಬೆಳೆದಿರುವ  ಮತ್ತು ಮುಂದೆ ಹುಟ್ಟುವ ಪ್ರಾರ್ಥನಾ ಮಂದಿರಗಳಲ್ಲಿ  ಧ್ವನಿವರ್ಧಕದ ಬಳಕೆಯನ್ನು ನಿಷೇಧಿಸುವ ಅಗತ್ಯವಿದೆ.

ಧರ್ಮ ಎಂದರೇನು? ದೇವರು ಎಂದರೆ ಯಾರು?  ಈ ವಿಷಯಗಳಲ್ಲಿ  ಮಾತನಾಡುವುದೇ ಕಷ್ಟ. ಯಾಕೆಂದರೆ ಇವೆಲ್ಲವೂ ಆತ್ಮದಲ್ಲಿ  ಏಳುವ ಪ್ರಶ್ನೆ.  ಶರೀರಕ್ಕೆ  ಇವುಗಳ ಬಗ್ಗೆ ಗೊತ್ತಿಲ್ಲ. ಶರೀರ ಬದುಕಿನಲ್ಲಿ ಶರೀರಕ್ಕೆ  ಸಂಬಂಧಿಸಿದ ಗುಣಧರ್ಮಗಳಿಗೆ ಸ್ಪಂದಿಸುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನೊಳ ಗೊಂಡ ಶರೀರ.  ಶರೀರಕ್ಕೆ ಅಂತ್ಯ ಇದೆ. ಯಾವಾಗ ಶರೀರದಲ್ಲಿದ್ದ ಚೇತನ ಹೊರಟು ಹೋಗುತ್ತದೋ ಆವಾಗ ಶರೀರವನ್ನು ಹೆಣ ಎನ್ನುತ್ತಾರೆ. "ಅವನು (ರಾಮ) ಸತ್ತು ಹೋದ " ಈ ಮಾತಿನಲ್ಲಿ ಸತ್ತದ್ದು ಯಾರು?  ಹೋದದ್ದು ಯಾರು?  ಒಂದು ಶರೀರ ಬದುಕಿರುವಾಗ ಇದ್ದ ಕ್ರಿಯಾಶೀಲತೆ ಸತ್ತಾಗ ಇರುವುದಿಲ್ಲ. ಅಂದರೆ ಶರೀರದಿಂದ ಏನೋ ಒಂದು ಚೇತನ (ಶಕ್ತಿ, ಪ್ರಾಣ, ಆತ್ಮ ) ಹೋಗಿರುವುದೂ ಸತ್ಯ. ಬದುಕಿರುವಾಗ ಶರೀರದಲ್ಲಿ ಇರುವ ಚೇತನವನ್ನು ಯಾರು ಅರಿಯುತ್ತಾರೋ  ಅವನಿಗೆ ದೇವರು ಎಂದರೆ ಯಾರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ.  ಒಬ್ಬ ವ್ಯಕ್ತಿಯಲ್ಲಿ ಆತ್ಮ ಜ್ಞಾನದ ಲಕ್ಷಣ ಇದೆಯಾ ಎಂದು ತಿಳಿಯುವುದು ಹೇಗೆ? ಈಗ ಚಳಿಗಾಲ.  ಈ ಚಳಿಗೆ ಬೆಳಿಗ್ಗೆ. ಐದು ಘಂಟೆಗೆ ತಣ್ಣೀರು ಸ್ನಾನ ಪ್ರತಿ ದಿನ ಮಾಡಬೇಕು. ಆಗ ಆವನಿಗೆ ಚಳಿ ಆಂತ ಅನಿಸಲೇ ಬಾರದು.  ಆತ್ಮಕ್ಕೆ  ಚಳಿ ಸೆಖೆ ರೂಪ ಆಕಾರ ಬಣ್ಣ ಜಾತಿ ನೋವು ...... ಹೀಗೆ ಯಾವುದೂ ಇಲ್ಲ. ಎಲ್ಲವೂ ಇರುವುದು ಶರೀರಕ್ಕೆ. ಆದುದರಿಂದಲೇ ಶರೀರಕ್ಕೆ ಚಳಿ ಅನಿಸುವ ತಣ್ಣೀರು ಸ್ನಾನಕ್ಕೆ ಪ್ರತಿಕ್ರಿಯಿಸುವ ಬುದ್ಧಿ ಶರೀರದ ಮಾತು ಕೇಳುವುದಾದರೆ ಚಳಿ ಚಳಿ ಎಂದು ಹೇಳುತ್ತದೆ. ಆತ್ಮದ ಮಾತು ಕೇಳಿದರೆ  ಇನ್ನು ಎರಡು ಮೂರು ಚೆಂಬು ನೀರು ಹಾಕುವ ಎಂದೆನಿಸುವುದು.  
ಈ ಮಾತುಗಳನ್ನು  ಇಟ್ಟುಕೊಂಡು  ಹೇಳುವುದಾದರೆ ನಮ್ಮ ಧರ್ಮ ಆತ್ಮ ಧರ್ಮ,  (ಸಿಂಧು - ಹಿಂದುವಾಗಿ ಗುರುತಿಸಿ ಕೊಂಡದ್ದು)  ಇದು ವಿಶ್ವದಲ್ಲಿ  ಆಡಗಿರುವ ಧರ್ಮ,  ಹಾಗಾಗಿ ಸನಾತನ ಧರ್ಮಕ್ಕೆ  ಸ್ಥಾಪಕ ಅಂತ ಇಲ್ಲ. ವಿಶ್ವದ ಪ್ರತಿಯೊಂದು ಚರಾಚರ ವಸ್ತುಗಳಿಗೂ ಅವುಗಳದೇ ಆದ ಧರ್ಮ ಇದೆ. ಧರ್ಮದಿಂದ ವಸ್ತು ಪ್ರಬೇಧಗಳು ಜೀವ ಪ್ರಬೇಧಗಳು ಉಂಟಾಗುವುದು.......  ಆಧ್ಯಾತ್ಮ ಬರವಣಿಗೆಗೆ ಸಿಗುವುದು ಕಷ್ಟ. ಆತ್ಮ ಜ್ಞಾನದ ವಿಷಯ ವಾದುದರಿಂದ  ಆತ್ಮ ಸಾಕ್ಷಿಯೇ ಮೂಲ.

*ಸಮುದ್ರಮಥನ

*ಸಮುದ್ರಮಥನ ---ಹಿಂದೂ* *ಪೌರಾಣಿಕ ಪ್ರಸಂಗ* 

*ಪೌರಾಣಿಕ ಕಥೆಯಂತೆ  ದೇವತೆಗಳಿಗೂ - ದಾನವರಿಗೂ ನಡೆಯುತ್ತಿದ್ದ ನಿರಂತರ ಸಂಘರ್ಷ ಒಂದು ಜನಪ್ರಿಯ ಸಂಗತಿ . ಹೀಗೊಮ್ಮೆ ಅಮೃತಕ್ಕಾಗಿ ದೇವತೆಗಳು - ದಾನವರು(ರಾಕ್ಷಸರು) ಕ್ಷೀರಸಾಗರವನ್ನು ಕಡೆದರು. ಈ ರೋಚಕ ಕಥೆಯೇ ಸಮುದ್ರಮಥನ*. 

*ಸಮುದ್ರಮಥನದ ಇತರ ಹೆಸರುಗಳು —* 

*✿ ಸಮುದ್ರಮಂಥನಂ — ಮಂಥನಂ ಎಂದರೆ ಸಂಸ್ಕೃತದಲ್ಲಿ ಮಥನ ಅಥವಾ 'ಕಡೆಯುವುದು' ಎಂದರ್ಥ.*
*✿ ಸಾಗರ ಮಂಥನ — ಸಾಗರ ಸಮುದ್ರಕ್ಕೆ ಇನ್ನೊಂದು ಹೆಸರು.*
*✿ ಕ್ಷೀರಸಾಗರ ಮಂಥನ — ಕ್ಷೀರಸಾಗರ ಎಂದರೆ ಹಾಲಿನ ಸಮುದ್ರವೆಂದು.* 
*✿ ಕ್ಷೀರಸಾಗರ —  ಕ್ಷೀರ (ಹಾಲು) + ಸಾಗರ (ಸಮುದ್ರ).*

*ಹೀಗೆ ಸಮುದ್ರಮಥನ ಮಾಡುವಾಗ ಐರಾವತ , ಕಲ್ಪವೃಕ್ಷ ,* *ಕಾಮಧೇನು(ಬೇಡಿದನ್ನು ಕೊಡುವ ಹಸು) ,* *ಉಚ್ಚೈಶ್ರವಸ್ಸು(ಕುದುರೆ) ,* *ಶ್ರೀಲಕ್ಷ್ಮಿ , ಪಾಂಚಜನ್ಯ(ಶಂಖ)* , *ಕೌಸ್ತುಭ(ಮಹಾವಿಷ್ಣುವಿನ ಆಭರಣ) , ಅಪ್ಸರೆಯರು  ಹೀಗೆ* *ಮುಂತಾದ ಉಚ್ಚವಸ್ತುಗಳು ಸಮುದ್ರದಿಂದ ಸೃಷ್ಟಿಯಾಯಿತು. ಹೀಗೆ ಸಮುದ್ರದಿಂದ ಸೃಷ್ಟಿಯಾದ ಅವರವರ* *ಯೋಗ್ಯಾನುಸಾರವಾಗಿ ವಿತರಿಸಿಕೊಂಡರು. ಈ ಮಥನದಲ್ಲಿ ವಿಷವೂ ಸೃಷ್ಟಿಯಾಯಿತು , ಯಾರಿಗೂ ಬೇಡವಾದ ಈ ವಿಷವನ್ನು ಶಿವನು ಕುಡಿದುದ್ದು , ವಿಷವೂ ಶಿವನ ದೇಹ ಸೇರದಂತೆ ಪಾರ್ವತೀಯು ಗಂಟಲನ್ನು ಬಿಗಿಯಾಗಿ ಹಿಡಿದುದ್ದುರ ಕಥೆಯೇ ಬೇರೆ*

*ಸಮುದ್ರಮಥನಕ್ಕೆ ಕಾರಣ :*

*ಈ ಸಮುದ್ರಮಥನವೇ ಒಂದು ರೋಚಕ ಕಥೆ.* 
*ದೇವತೆಗಳ ರಾಜ ಇಂದ್ರ, ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , ದೂರ್ವಾಸ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು ಪ್ರಸಾದವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ ದೇವರುಗಳು ಅಸುರರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರರಾಜ ಬಲಿ ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು ವಿಷ್ಣುವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ.*

*ಕ್ಕ್ಷೀರಸಾಗರದ ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. ವಿಷ್ಣು ಒಂದು ಆಮೆಯಾಗಿ ತನ್ನ ಎರಡನೇ ಕೂರ್ಮಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು.*

*ಗಮನಿಸಿ, ಮಹಾಭಾರತದಲ್ಲಿನ ಕಥೆ* *ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ.*

*ಹಾಲಾಹಲ ('ಕಾಳಕೂಟ') ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , ಹಾಲಾಹಲ, ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. ವಿಷ್ಣುವಿನ ಸಲಹೆಮೇಲೆ, ದೇವತೆಗಳು ಶಿವನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,ನೀಲ = "ನೀಲಿ", ಕಂಠ = "ಗಂಟಲು") ಎನ್ನುತ್ತಾರೆ. (ಹಾಲಾಹಲ - ಶಿವನು ನುಂಗಿದ ವಿಷ)*

*ರತ್ನಗಳು*
*ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು* *ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ.*

*✿ ವರುನಿ ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ.*
*✿ ಉಚ್ಹೈಶ್ರವಸ್ಸು - ಅತಿಶ್ರೇಷ್ಠವಾದ  7-ತಲೆಯುಳ್ಳ ಕುದರೆ.*
*✿ ಕೌಸ್ತುಭ - ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ.*
*✿ ಕಾಮಧೇನು ಅಥವಾ ಸುರಭಿ - ಕೋರಿದುದನ್ನು ನೀಡುವ ಹಸು.*
*✿ ಪಾರಿಜಾತ - ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ.*
*✿ ಲಕ್ಷ್ಮಿ - ಭಾಗ್ಯ ಹಾಗೂ ಸಂಪತ್ತಿನ ದೇವತೆ - ವಿಷ್ಣುವಿನ ಪತ್ನಿ.*
*✿ ಐರಾವತ - ಇಂದ್ರನ ಆನೆ.*
*ಅಪ್ಸರೆಯರು,ರಂಭಾ, ಮೇನಕ, ಪುನ್ಜಿಕಸ್ಥಳ ಇತರರು ,*
*ಧನ್ವಂತರಿ - ದೇವತೆಗಳ ವೈದ್ಯ ಅಮೃತದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.)*
*ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ, ಹಾಗೂ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಭಿನ್ನವಾಗಿವೆ.*
*✿ ಶಾರಂಗ - ವಿಷ್ಣುವಿನ ಬಿಲ್ಲು.*
*✿ ಜ್ಯೆಸ್ಥ - ದೌರ್ಭಾಗ್ಯದ ದೇವತೆ.*

*ಸಮುದ್ರ ಮಂಥನದ ಹಲವರು ದೃಶ್ಯಗಳು*

*ಕೊನೆಯಲ್ಲಿ , ಧನ್ವಂತರಿ (ಸ್ವರ್ಗಲೋಕದ ವೈದ್ಯ) ಅಮೃತ ಉಳ್ಳ ಕೊಡದೊಂದಿಗೆ ಹೊರಬಂದ, ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - ಪ್ರಯಾಗ (ಈಗಿನ ಅಲ್ಲಹಾಬಾದ್), ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ ಕುಂಭಮೇಳವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಹರ್ಷದಿಂದ ಆಚರಿಸತೊಡಗಿದರು. ಭಯಬಿತರಾದ, ದೇವತೆಗಳು ವಿಷ್ಣುವಿಗೆ ಮನವಿ ಮಾಡಿದರು, ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸ್ಸಿನಿಂದ ಸೂರ್ಯ ಹಾಗೂ ಚಂದ್ರರು ಇದನ್ನು ಗಮನಿಸಿ, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳೆಗಿಳಿಯುವ ಮುನ್ನ, ಮೋಹಿನಿಯ ರೂಪದಲ್ಲಿದ್ದ ವಿಷ್ಣುವು ಸುದರ್ಶನ ಚಕ್ರದಿಂದ ರಾಹುವಿನ ತಲೆ ಉರುಳಿಸಿದರು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗೂ ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳ್ಳುತ್ತದೆ*

*ಕಥೆಯ ಕೊನೆಯಲ್ಲಿ ಪುನರ್ಚೆತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ.*