ಭಾನುವಾರ, ಜನವರಿ 28, 2018

ವಿವಿಧ ರೀತಿಯ ಆರತಿ

*ಭಗವಂತನಿಗೆ ಭಗವದ್ಭಕ್ತರು ವಿವಿಧ ರೀತಿಯ ಆರತಿಯಿಂದ ಸಂತುಷ್ಟನಾಗುತ್ತಾನೆಂದು ಹಿಂದಿನಿಂದಲೂ ನಡೆದು ಬಂದ ಪಧ್ಧತಿ ಎಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಮನಸ್ಸು ಶ್ರದ್ದಾ ಭಕ್ತಿ ಬಹು ಮುಖ್ಯ ಬನ್ನಿ ಸಂಖ್ಯೆಯ ದೃಷ್ಟಿಯಲ್ಲಿ ಆರತಿಯಲ್ಲಿ ಯಾವ ಫಲ ತಿಳಿಯೋಣ.*
1. *ಏಕಾರತಿ* ( ಒಂದು) ‌‌‌‍- ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ.
2. *ದ್ವಿ ಆರತಿ*( ಎರಡು)  - ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.
3. *ತ್ರಯ ಆರತಿ*( ಮೂರು)  - ಮಾಡುವುದರಿಂದ ಕುಟುಂಬ ಅಭಿವೃದ್ಧಿಯುಂಟಾಗುತ್ತದೆ.
4. *ಪಂಚ ಆರತಿ*( ಐದು)  - ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
5. *ನವ ಆರತಿ* ( ಒಂಬತ್ತು) - ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.
6. *ಏಕಾದಶ ಆರತಿ*( ಹನ್ನೊಂದು)  - ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.
7. *ದ್ವಾದಶ ಆರತಿ*( ಹನ್ನೆರಡು)  - ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ.
8. *ಷೋಡಶ ಆರತಿ*( ಹದಿನಾರು)  - ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ.
9.  *ಏಕವಿಂಶತಿ*( ಇಪ್ಪತ್ತೊಂದು)  ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.
10. *ಚತುರ್ವಿಂಶತಿ ಆರತಿ*( ಇಪ್ಪತ್ನಾಲ್ಕು) - ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
11. *ನಕ್ಷತ್ರ ಆರತಿ*( ಇಪ್ಪತ್ತೇಳು)- ಸಕಲ ದೇವತೆಗಳು ಅನುಗ್ರಹಿಸುತ್ತಾರೆ.
12. *ನಾಗ ಆರತಿ* ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.
13. *ಕೂರ್ಮ ಆರತಿ*- ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
14. (ನೂರೆಂಟು) *ಅಷ್ಟೋತ್ತರ ಶತದೀಪ* - ಲಕ್ಷ್ಮೀ ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*
ಇದು ಯಾವಾಗನಿಂತ ಬಂದ ಪದ್ಧತಿ?
*ವಿಷ್ಣೋರಂಗಾರಶೇಷೇಣ ಯೋsಂಗಾನಿ ಪರಿಮಾರ್ಜಯೇತ್|*
*ದುರಿತಾನಿ ವಿನಷ್ಯಂತಿ ವ್ಯಾಧಯೋ ಯಾಂತಿ ಖಂಡಶಃ ||*
ಎಂಬ ಉಕ್ತಿಯಂತೆ ಭಗವಂತನಿಗೆ ಮಾಡಿದ ಧೂಪಾರತಿಯ ಅಂಗಾರವನ್ನು ಹಚ್ಚಿಕೊಳ್ಳುವದರಿಂದ ನಮ್ಮ ಸಮಸ್ತ ದುರಿತಗಳು , ವ್ಯಾಧಿಗಳು ,  ಎಷ್ಟೋ ಕಡಿಮೆ ಆಗುತ್ತವೆ
ಅಕ್ಷತೆ ಊಟವಾಗಿದೆಯೆಂಬ ಸಂಕೇತ ಎಂದು ರಾಘವೇಂದ್ರ ವಿಜಯದಲ್ಲಿ ಉಲ್ಲೇಖವಿದೆ
: ನನಗೆ ತಿಳಿದ ಮಟ್ಟಿಗೆ. . ಪರಮಾತ್ಮನಿಗೆ ಮಾಡಿದ ಧೂಪಾರತಿಯ ಶೇಷವನ್ನು ದೇಹಕ್ಕೆ ಹಚ್ಚಿಕಳ್ಳುವುದರಿಂದ ಪಾಪಗಳ ವಿನಾಶವಾಗುತ್ತದೆ... ಹಾಗೂ...ಹಣೆಯಮೇಲೆ ಗದಾ ರೂಪದಲ್ಲಿ ಹಚ್ಚಿಕಳ್ಳುವುದರಿಂದ ಯಮ ಭಟರು ಸಹಾ ಸಮೀಪ ಬರಲು ಅಂಜುತ್ತಾರೆ ಅಂತ.. ಇನ್ನೂ
ಹಾಗಾಗಿ ಏಕಾದಶಿಯ ದಿವಸ ಕೇವಲ ಅಂಗಾರ ಧಾರಣೆ
ಅದು ಗುರ್ತು.. ಮಾತ್ರ. ಆದರೇ ಇದು ಅನಾದಿಕಾಲದಿಂದ ಬಂದ ಪದ್ಧತಿ.. ಶ್ರೀ ವೆಂಕಟೇಶ್ವರ ಕಲ್ಯಾಣದಲ್ಲಿ ವೆಂಕಪ್ಪ ಈ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಭೇಟೆಗೆ ಹೋದರು ಅಂತ ಕೇಳ್ತೇವೆ
Madhwavijaya da vyakhyana dalli angara akshategala ulleka ide
ಇದಲ್ಲದೇ *ರಾ ರಕ್ಷಾಣೋ ಅಗ್ನೆ ತವ ರಕ್ಷಣೇಭಿಃ* ಎಂಬ ವೇದದ ಉಕ್ತಿಯಂತೆ ಭಗವಂತನಿಗೆ ಅರ್ಪಿಸಿದ ಅಂಗಾರವನ್ನು ನಮ್ಮ ದೇಹದಲ್ಲಿ ಹಚ್ಚಿಕೊಳ್ಳುವದರಿಂದ ತಾವು ಹೇಳಿದಂತೆ ಸಮಸ್ತ ಭಯಗಳಿಂದಲೂ ರಕ್ಷಣೆ ದೊರಕುತ್ತದೆ ,  ಗದಾರೂಪದಲ್ಲಿರೋ ಅಂಗಾರ ಅಕ್ಷತೆಯನ್ನು ನೋಡಿದ ಯಮಭಟರು ನಮ್ಮ ಸಮೀಪ ಬರಲೂ ಸಹ ಅಂಜುತ್ತಾರೆ , ಆದರೆ ಯಾವನ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲವೋ ಅಂತಹವನ ಹಣೆ ಸ್ಮಶಾನ ದರ್ಶನಕ್ಕೆ ಸಮನಾದುದರಿಂದ ಅಂತಹವನ ಬರಿ ಹಣೆಯನ್ನು ನೋಡಿದಾಕ್ಷಣವೇ ಸಚೇಲ ಸ್ನಾನ ಮಾಡಬೇಕು ಅಂತ ಶಾಸ್ತ್ರದಲ್ಲಿ ತಿಳಿಸಲಾಗಿದೆ
ಅಂಗಾರ ಅಕ್ಷಂತೆ...ಹಚ್ಚಿದರೆ ಊಟಾಯ್ತು ಅಂದುಕೊಳ್ತಾರೆ...ಅದು ಹಾಗಲ್ಲ....
ಅಂ+ ಗಾರ = ಅಂಗಾರ ,
    *ಅಂ ಅನಂತಾಯ ನಮಃ* ಎಂಬ ಉಕ್ತಿಯಂತೆ ಅನಂತ ಶಬ್ದವಾಚ್ಯನಾದ ಭಗವಂತನಿಗೆ ಅರ್ಪಿಸಿದ *ಗಾರ* - ಧೂಪಾರತಿಯ ಶೇಷ ಇದನ್ನು ಊರ್ಧ್ವಮುಖವಾಗಿ  ಹಚ್ಚಿಕೊಳ್ಳುವದರಿಂದ  , ನಮ್ಮ ನಾಭಿಪ್ರದೇಶದಿಂದ ಹೊರಟ ಸುಶುಮ್ನಾ ನಾಡಿ ಬ್ರಹ್ಮ ರಂಧ್ರದವರೆಗೂ ಬಂದು ಸೇರುತ್ತದೆ ಅದು ಊರ್ಧ್ವಮುಖವಾಗಿಯೇ ಚಲನೆ ಆಗ್ತಾಯಿರಬೇಕು ಅಂದರೆ ನಮ್ಮ ಪ್ರಾಣ ಬ್ರಹ್ಮರಂಧ್ರದ ಮೂಲಕ ಹೋಗಲು ಸಾಧ್ಯ , ಭಗವಂತನಿಗೆ ಅರ್ಪಿಸಿದ ಈ ಶೇಷವನ್ನು ಊರ್ಧ್ವಮುಖವಾಗಿ ಹೊಟ್ಟೆಮೇಲೆ ಮೂರು ಕಡೆ ಎದೆಯ ಮೇಲೆ ಎರಡು ಕಡೆ , ಕುತ್ತಿಗೆ , ಹಾಗೂ ಹಣೆಯಿಂದ ಬ್ರಹ್ಮರಂಧ್ರ ಇರುವ ಸ್ಥಳದವರೆಗೂ ಹಚ್ಚಿಕೊಳ್ಳುವದರಿಂದ ಆ ಸುಷುಮ್ನಾ ನಾಡಿಯ ಚಲನೆಯು ಸರಿಯಾದ ಕ್ರಮದಲ್ಲಿ ಇರತ್ತೆ . ಅಕ್ಷತೆಯನ್ನು ಭ್ರೂಮಧ್ಯದಲ್ಲಿ ಹಚ್ಚಿಕೊಳ್ಳುವದರಿಂದ ಅಲ್ಲಿ ನಮ್ಮ ಧೀಶಕ್ತಿಯು ಕೇಂದ್ರೀಕರಣಗೊಂಡು ಮೇಧಾ ಶಕ್ತಿಯು ವೃದ್ಧಿ ಆಗುತ್ತದೆ . ಈ ಕಾರಣದಿಂದ  ಅಂಗಾರ ಅಕ್ಷತೆ ಹಚ್ಚಿಕೊಳ್ಳುವ ಸತ್ಸಂಪ್ರದಾಯ ಇದೆ
ಮಧ್ವವಿಜಯದ 10ನೇಸರ್ಗ
ದ 17ನೇ ಶ್ಲೋಕಕ್ಕೆ ಮಧ್ವವಿಜಯದ ವ್ಯಾಖ್ಯಾನ ಭಾವಪ್ರಕಶಿಕದ ಈ ರೀತಿ ವ್ಯಾಖ್ಯಾನ ಇದೆ .
ಶ್ರೀಮದಾಚಾರ್ಯರು ಗಂಗಾನದಿಯನ್ನು ದಾಟಿಬರುವುದನ್ನು ನೋಡಿ ತುರುಷ್ಕ ರಾಜ ಶ್ರೀಮದಾಚಾರ್ಯ ಜೋತೆ ಸಂಭಾಷಣೆ ಮಾಡುವಾಗ ಅವರ ಹಣೆಯಲ್ಲಿರುವ  ಅಂಗಾರ ಅಕ್ಷತೆಗಳನ್ನು ನೋಡಿ ತಮ್ಮ ಹಣೆಯಲ್ಲಿ ಇರುವುದೇನು. ಎಂದು ಕೇಳಲು ಶ್ರೀಮದಾಚಾರ್ಯರು ನೀವು ಕೈಯಲ್ಲಿ ಗದೆ ಹಿಡಿದರೆ ನಾವು ಅದನ್ನು ಹಣೆಯಲ್ಲಿ ಧರಿಸಿರುವೇವು ಎಂದು ಉತ್ತರಿಸಿದರು .
*ಕಿo ಲಲಾಟೇ ಇತಿ  ಪೃಷ್ಟೋ ರಾಜ್ಞಾಕರೇಣ ಗದಾo ಭವo* *ತೋ ಭಿಭ್ರoತಿ ವಯಂ ಲಲಾಟೇ ಇತ್ಯೂಚೇ ಇತ್ಯಾದ್ಯಶಬ್ದಾರ್ಥಃ*
ಶಸ್ತ್ರಪಾಣಿಗಳು ಕೈಯಲ್ಲಿ ಗದೆ ಹಿಡಿದರೆ ಶಾಸ್ತ್ರಪಾಣಿಗಳು ಹಣೆಯಲ್ಲಿ ಗದೆ (ಅಂಗಾರ ಅಕ್ಷತೆ)
ಧರಿಸಬೇಕು ಎಂಬುದು ಇಲ್ಲಿಯ ಮರ್ಮ   ಅಂಗಾರ ಅಕ್ಷತೆಗಳ ಧಾರಣೆಗೆ ಒಂದು ಅಪೂರ್ವ ಆಧಾರವಾಗಿದೆ ಎಂಬುದನ್ನು ಗಮಿನಿಸಬೇಕು

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?
ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?
ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯ ಬಹುದಷ್ಟೆ. ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು? ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ.
ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ. ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ.
ಆರ್ತ-ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಬರುತ್ತದೆ. ನೀವು ನೋಡಿರ ಬಹುದು ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವವರನ್ನು. ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ‘ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ‘ ಎಂದು ಸಾಂತ್ವನ ಹೇಳುತ್ತಾರೆ. ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯ ಪೂರ್ವಕ ತ್ಯಜಿಸ ಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ. ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ. ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ. ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು.
ರೌದ್ರ: ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರ ಬಹುದು. 'ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ಹಿರಿ ಮಗ ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ', ಇತ್ಯಾದಿ ಮಾತಾಡುವವರಿಗೆ ರೌದ್ರ ಚಿಂತನೆ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ. ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯ ಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ. ಇಂತಹ ಗುಣವುಳ್ಳ ಮಗುವನ್ನು ಅದರ ಮಾತಾ ಪಿತೃಗಳು ಒಳ್ಳೆಯ ಪೋಲೀಸ್ ಅಧಿಕಾರಿಯೋ, IAS ಅಧಿಕಾರಿಯನ್ನೋ ಮಾಡಿದಾಗ ಈ ಮನ ಪರಿವರ್ತನೆಯಾಗಿ ಆತ ಒಬ್ಬ ನಿಷ್ಟಾವಂತ ಮನುಷ್ಯನಾಗ ಬಹುದು. ಇಲ್ಲವಾದಲ್ಲಿ ಮತ್ತೆ ಪಾಪಿಯೇ ಆಗ ಬಹುದು.
ಧನ್ಯ: ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. ಇವನು ತನ್ನ ಕೊನೆಯ ಕಾಲದಲ್ಲಿ, 'ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ. ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.
ಶುಕ್ಲ : ಈ ಮರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನ ಬಹುದು. ಇದು ಹೇಗೆಂದರೆ ಇವರ ಮರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ. ಉದಾ: ಮಾಜಿ ರಾಷ್ಟ್ರಪತಿ ಕಲಾಂ ಮೇಷ್ಟ್ರು, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ಮಹಾತ್ಮಾ ಗಾಂಧೀಜಿ, ಹೋರಾಟದಲ್ಲೇ ಮಡಿಯುವ ಯೋಧರು ಇತ್ಯಾದಿ ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸು ನೀಗುವವರು. ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರ ಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು. ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ.
ಇಂತವರಿಗೆ ಮೋಕ್ಷ ಯೋಗವಿರುತ್ತದೆ. ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. ಆದರೆ ಇವರು ಆರ್ತ, ರೌದ್ರ, ಧನ್ಯ ಮರಣಗಳನ್ನು ದಾಟಿಯೇ ಬರ ಬೇಕು. ಇದು ಒಂದು ರೀತಿಯ ವಿಕಾಸ. 'ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಆದರೆ ಸಂಯೋಜಕರು ಸರಿ ಇರ ಬೇಕು. ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗ ಬಹುದು. ಅದಕ್ಕಾಗಿಯೇ ಪೂರ್ವ ಶೋಡಶ ಸಂಸ್ಕಾರಗಳಿರುವುದು.ಅದರ ಉದ್ದೇಶ ತಿಳಿಯದೆ ಸಂಸ್ಕಾರ ಪಡೆದರೂ ಪ್ರಯೋಜನವಿಲ್ಲ. ಅರ್ಥ ತಿಳಿದರೆ ಅವನಿಗೆ ಹಂತ ಹಂತಗಳಲ್ಲಿ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮರಣವೂ ಮೋಕ್ಷವೂ ಲಭ್ಯವಾಗುತ್ತದೆ.
ಎಲ್ಲರಿಗೂ ಶುಭವಾಗಲಿ

:ಕನಕಧಾರಾ ಸ್ತೋತ್ರ

ಶ್ರೀಮದ್ ಶಂಕರಾಚಾಯ೯ ವಿರಚಿತ:ಕನಕಧಾರಾ ಸ್ತೋತ್ರ
ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||
ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||
ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||
ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||
ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||
ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||
ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||
ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಂ
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||
ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||
ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||
ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||
ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||
ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||
ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||
ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||
ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||
ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||
ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||
ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||
ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೆ |
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಮ್
ಆಲೋಕಯ ಪ್ರತಿದಿನಂ ಸದಯೈರಪಾಙ್ಗೈಃ ||21||
ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||22||
ಸುವರ್ಣಧಾರಾ ಸ್ತೋತ್ರಂ ಯಚ್ಛಂಕರಾಚಾರ್ಯ ನಿರ್ಮಿತಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಕುಬೇರಸಮೋ ಭವೇತ್ ||

ಕಿಡ್ನಿ ಸಮಸ್ಯೆಯಾಗಿ ಡಯಾಲಿಸಿಸ್ ಮಾಡಿಸಲೇಬೇಕಾದ ಪರಿಸ್ಥಿತಿ ಬಂದಿದ್ದರೆ

ಕಿಡ್ನಿ ಸಮಸ್ಯೆಯಾಗಿ ಡಯಾಲಿಸಿಸ್ ಮಾಡಿಸಲೇಬೇಕಾದ ಪರಿಸ್ಥಿತಿ ಬಂದಿದ್ದರೆ, ಒಮ್ಮೆ ಈ ನಾಟಿ ವೈದ್ಯರನ್ನು ಭೇಟಿ ಮಾಡಿ..    ನನ್ನ ಹೆಸರು ರವಿ ಕುಮಾರ್ 42 ವರ್ಷ ವಯಸ್ಸು,ನಾನು ಮೈಸೂರಿನಲ್ಲಿ ವಾಸವಾಗಿದ್ದೇನೆ,2014 ರಲ್ಲಿ ಮೂತ್ರದಲ್ಲಿ ರಕ್ತ ಬಂದು ಉರಿ ಆಗುತ್ತಿತ್ತು ,ಕೊನೆಗೆ ಕೈ ಕಾಲು ಗಳು ಊತ ಬರಲು ಶುರುವಾಯಿತು ನಂತರ ಮೈಸೂರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಬ್ಲೆಡ್ ಟೆಸ್ಟ್ ಮಾಡಿಸಿದೆ ಆಗ ತಿಳಿಯಿತು ನನ್ನ ಎರಡೂ ಕಿಡ್ನಿಗಳೂ ಪೈಲೂರ್ ಆಗಿ ಕ್ರಿಯಾಟೀನ್ ಲೆವಲ್ 28 ಕ್ಕೆ ಬಂದಿತ್ತು, ಬಿ ಪಿ 430 ಇತ್ತು,ವೈದ್ಯರ ಸಲಹೆ ಮೇರೆಗೆ ಕಿಡ್ನಿ ಬೇರೆ ಹಾಕಿಸುವವರೆಗೂ ಡಯಾಲಿಸೀಸ್ ಮಾಡಿಸಬೇಕು,ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸುತ್ತಿದ್ದೆ,ನಾನು ಮೈಸೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೇನೆ,ನನಗೆ 15000 ಸಾವಿರ ಸಂಬಳ ಬರುತ್ತಿತ್ತು,ಒಂದು ತಿಂಗಳಿಗೆ ಡಯಾಲಿಸಿಸ್ ಮಾಡಿಸಬೇಕಾದರೆ 4500 ಖರ್ಚು ಬರುತ್ತಿತ್ತು, ಮನೆ ಬಾಡಿಗೆ ಕಟ್ಟಿ ಮಕ್ಕಳನ್ನು ಪೋಷಿಸುವುದು ಕಷ್ಟವಾಗಿತ್ತು.  ಬೆಂಗಳೂರಿನಲ್ಲಿ ನನ್ನ ಹೆಂಡತಿಯ ಸಂಬಂದಿಕರೊಬ್ಬರ ಬಳಿ ವಿಷಯ ತಿಳಿಸಿದೆ,ಅದಕ್ಕವರು ನೀನು ನೇರ ನನ್ನ ಮನೆಗೆ ಬಂದು ಬಿಡು ಇಲ್ಲೇ ನಮ್ಮ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ನಾಲ್ಕು ತಲೆಮಾರಿನ ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಅವರು ಗಿಡ ಮೂಲಿಕೆ ಚಿಕಿತ್ಸೆ ಕೊಡುತ್ತಾರೆ,ಮೂರು ವರ್ಷಗಳ ಕೆಳಗೆ ನಮ್ಮ ಸ್ನೇಹಿತರೊಬ್ಬರಿಗೂ ಇದೇ ರೀತಿ ಎರಡೂ ಕಿಡ್ನಿ ಪೈಲೂರ್ ಆಗಿತ್ತು ಒಂದೂವರೆ ವರ್ಷ ಡಯಾಲಿಸೀಸ್ ಮಾಡಿಸಿದ ಮೇಲೆ ಅವರ ಬಳಿ ಚಿಕಿತ್ಸೆ ಕೊಡಿಸಿದ್ದು,ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ,ಎಂದು ತಿಳಿಸಿದರು.ನಾನು ಕೂಡಲೇ ನಮ್ಮ ಸಂಬಂದಿಕರ ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ ವೈದ್ಯ ಶಿವಕುಮಾರ್ ರವರು ಇದ್ದರು, ರಿಪೋರ್ಟ್ಸ್ ನೋಡಿಸಿದೆ,ರಿಪೋರ್ಟ್ಸ್ ನೋಡಿದ ಮೇಲೆ ನಾಡಿ ಪರೀಕ್ಷೆ ಮಾಡಿ ಅವರ ಚಿಕಿತ್ಸಾ ವಿಧಾನ ಹಾಗೂ ಔಷದಿಯ ಉಪಯೋಗದ ಬಗ್ಗೆ ತಿಳಿಸಿದರು, ನನ್ನ ಎರಡೂ ಕಿಡ್ನಿಗಳಿಗೆ ಉಂಗುರ ಹಾಕಿ, ಔಷಧಿ ಕೊಟ್ಟು ಉಪಯೋಗಿಸುವ ವಿಧಾನ ತಿಳಿಸಿ ಒಂದು ವಾರಕ್ಕೆ ಎರಡು ಬಾರಿ ನೀವು ಡಯಾಲಿಸೀಸ್ ಮಾಡಿಸುತ್ತಿದ್ದೀರಿ,ನಮ್ಮ ಗಿಡ ಮೂಲಿಕೆ ಔಷದಿಯನ್ನು ನೀವು ಸೇವಿಸಿದ 15 ದಿನಗಳ ನಂತರ ವಾರಕ್ಕೂಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ಒಂದು ತಿಂಗಳ ನಂತರ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ನಂತರ ಎರಡನೇ ತಿಂಗಳು ಔಷಧಿ ಸೇವಿಸಿದ ಮೇಲೆ 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ಮೂರನೇ ತಿಂಗಳು ಔಷಧಿಯನ್ನು ಸೇವಿಸಿದ ಮೇಲೆ 20 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ಕನಿಷ್ಟ ನೀವು ನಮ್ಮ ಔಷದಿಯನ್ನು 13 ತಿಂಗಳು ಅಂದರೆ 2018 ಜನವರಿ ತಿಂಗಳಿ ನಿಂದ ಶುರು ಮಾಡಿ ಮುಂದಿನ ವರ್ಷ 2019 ಫೆಬ್ರವರಿ ನವರೆಗೂ ಸೇವಿಸಬೇಕು ನಮ್ಮ ಔಷದಿ ಸೇವಿಸಿದ ಆರು ತಿಂಗಳಿಗೆ ಡಯಾಲಿಸೀಸ್ ನ ಅವಶ್ಯಕತೆ ಸಂಪೂರ್ಣ ನಿಂತು ಹೋಗಿ ಮಾಮೂಲಿನಂತೆ ಮೂತ್ರ ವಿಸರ್ಜನೆ ಮಾಡಬಹುದು ಎಂದು ತಿಳಿಸಿದರು.ಔಷದಿ ತೆಗೆದುಕೊಂಡು,ನಿಮಗೆ ವಾಸಿಯಾದರೆ ನಾಲ್ಕು ಜನಕ್ಕೆ ಹೇಳಿ ಉಪಯೋಗವಾಗುತ್ತದೆ ಅಂತ ಹೇಳಿದರು, ವೈದ್ಯ ಶಿವಕುಮಾರ್ ರವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷದಿ ಸೇವಿಸಿದ ಎರಡು ವಾರ ಮೂರು ಬಾರಿ ಡಯಾಲಿಸೀಸ್ ಮಾಡಿಸಿದೆ,ಇನ್ನು ಉಳಿದ ಹದಿನೈದು ದಿನಗಳಲ್ಲಿ ವಾರಕ್ಕೂಂದರಂತೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿದೆ,  ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಬಹುದು ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,ಅವರು ಹೇಳಿದ ಹಾಗೆ ಆ ತಿಂಗಳಿನಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿದೆ, ಮತ್ತೆ ಮೂರನೇ ತಿಂಗಳು 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿ ಒಟ್ಟು ಐದು ತಿಂಗಳಿಗೆ ಡಯಾಲಿಸೀಸ್ ಮಾಡಿಸುವ ಅವಶ್ಯಕತೆ ನಿಂತುಹೋಯಿತು,ಅವರು ಆರು ತಿಂಗಳಿಗೆ ಡಯಾಲಿಸೀಸ್ ನಿಲ್ಲುತ್ತದೆ ಎಂದು ಹೇಳಿದ್ದರು ನನಗೆ ಐದು ತಿಂಗಳಿಗೆ ನನ್ನ ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು ,ಅವರು ಹೇಳಿದ ಹಾಗೆ 2016 ಏಪ್ರಿಲ್ ವರೆಗೂ ಗಿಡ ಮೂಲಿಕೆ ಔಷದಿಯನ್ನು ಸೇವಿಸಿದ್ದಕ್ಕೆ ನನ್ನ ಎರಡೂ ಕಿಡ್ನಿಗಳು ಗುಣಮುಖವಾಗಿ ಈಗ ನನ್ನ ಕ್ರಿಯಾಟಿನ್ ಲೆವೆಲ್ 1.2 ಇದೆ ಈಗ ನಾನು ಎಲ್ಲರಂತೆ ಚನ್ನಾಗಿದ್ದೇನೆ.
ಮಿತ್ರರೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನಮ್ಮಿಂದ ನಾಲ್ಕು ಜನರಿಗೆ ಸಹಾಯವಾಗಲಿಪಾರಂಪರಿಕ ವೈದ್ಯ
ಶಿವ ಕುಮಾರ್ ರವರ ವಿಳಾಸ
ಕಾಮಧೇನು ಚಿಕಿತ್ಸಾಲಯ, ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ, ಕೃಷ್ಣರಾಜಪುರ. ಬೆಂಗಳೂರು 560036
ಹಳೆ ಮದ್ರಾಸ್ ರಸ್ತೆ
ಮೊಬೈಲ್ ಸಂಖ್ಯೆ: 8970788888, 8747099983
ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರಗೆ

ಹೋಮ-ಹವನಗಳ ಮಹತ್ವ

ಹೋಮ-ಹವನಗಳ ಮಹತ್ವ
ಸನಾತನ ಸಂಸ್ಕೃತಿ
ನಮ್ಮ ಕೆಲವು ಬುಜೀಗಳು  ಹೋಮ-ಹವನ-ಯಜ್ಞಗಳನ್ನು ಮಾಡುವುದು ವ್ಯರ್ಥ,ಆ ಹಣವನ್ನು ಬಡವರಿಗೆ ದಾನಮಾಡಬೇಕೆಂದು  ಹೇಳುತ್ತಾರೆ.ಬಡವರಿಗೆ ದಾನ ಮಾಡುವ ಉದ್ದೇಶವಿದ್ದರೆ ಅದನ್ನು ಮಾಡೋಣ.ಅದಕ್ಕಾಗಿ ಹೋಮ-ಹವನಗಳನ್ನು ನಿಷೇಧಿಸಿ ದಾನ ಮಾಡಬೇಕೆಂಬ ನಿಯಮವೇನಿಲ್ಲ..!! ನಮ್ಮ ಸಂಸ್ಕೃತಿಯಲ್ಲಿ ಹೋಮ-ಹವನಗಳ ಮಹತ್ವವೇನು..?ಏನಕ್ಕಾಗಿ ಅವುಗಳನ್ನು ಮಾಡಬೇಕೆಂದು ಅಗತ್ಯ ದಾಖಲೆಗಳನ್ನು ನೀಡಿ ಸವಿವರವಾಗಿ ತಿಳಿಸುತ್ತಿದ್ದೇನೆ.ಈ ಲೇಖನವನ್ನು ಓದಿ.
ವೇದವೆಂದರೆ ಜ್ಞಾನ.ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು.ನಮ್ಮ ಆಚರಣೆ-ವಿಚಾರದಲ್ಲೇನಾದರೂ ಅನುಮಾನ ಬಂದರೆ "ವೇದವಾಕ್ಯಂ ಪ್ರಮಾಣಂ" ಎಂದು ಒಪ್ಪಿಕೊಳ್ಳುವವರು.ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು.ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.ಆ ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ. "ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್" "ಯಜ್ಞೋ ಹಿ ಶ್ರೇಷ್ಟತಮಂ ಕರ್ಮ" "ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ" "ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ,ಸಾಯಂ ಸಾಯಂ ಸೌಮನಸ್ಯ ದಾತಾ" "ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ" ನೆನಪಿಡಿ..ಇವು ಕೇವಲ ಉದಾಹರಣೆಗಳು.ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗಬಹುದು.
"ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೇ ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ" "ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ,ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು" "ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ" "ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸೂ ಉನ್ನತ ಸ್ಥಾನಕ್ಕೇರುತ್ತಿರಲಿ" "ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು" ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ.
ಆದ್ದರಿಂದ ಜನ್ಮದಿನ,ವ್ಯವಹಾರ ಪ್ರಾರಂಭದ ದಿನ,ಮದುವೆ,ಮುಂಜಿ,ದುಃಖದಲ್ಲಿ,ಖುಷಿಯಲ್ಲಿ ಆಜೀವನಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ.ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ.ಪಾಪಕರ್ಮಗಳು ದೂರವಾಗುತ್ತವೆಯೆಂದು ನಂಬಿದ್ದೇವೆ.ಹೋಮ ಮಾಡುವಾಗಿನ ಭಕ್ತಿ,ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ.ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ.ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆಮಾಡುತ್ತದೆ. ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ.ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ.ಪ್ರಕೃತಿಗೂ ಹೋಮದ ಫಲ ಸಿಗುತ್ತದೆ.ಹೇಗೆಂದು ಕೇಳುತ್ತೀರ..? ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ,ಪ್ರಕೃತಿದತ್ತವಾಗಿರಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ(ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ.ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ.ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶಪಡಿಸುತ್ತವೆ.ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತುಪಟ್ಟಿದೆ.
ವಿಶ್ವ ಸ್ವಾಸ್ಥ್ಯ ಸಂಘಟನೆಯ(WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ.
ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರಬೇಕು.ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರಬಾರದು.ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆಯೆಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ..
೧.ಶೀತ ಹಾಗೂ ತಲೆನೋವು
೨.ಟಿ.ಬಿ (ಕ್ಷಯರೋಗ)
೩.ಮಾನಸಿಕ ಒತ್ತಡ ಹಾಗೂ ಖಿನ್ನತೆ
೪.ಚರ್ಮಸಂಬಂಧಿ ಕಾಯಿಲೆಗಳು ೫.ಮೂತ್ರ ಸಂಬಂಧಿರೋಗಗಳು ೬.ಶ್ವಾಸಸಂಬಂಧಿ ರೋಗಗಳು,ಅಸ್ಥಮಾ ಇತರೆ
೭.ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು "ಯಜ್ಞ ಥೆರಪಿ" ಎಂಬ ವೈದ್ಯಕೀಯ ವಿಧಾನದಿಂದ ಗುಣಪಡಿಸಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ."ಯಜ್ಞ ಥೆರಪಿ" ಎಂಬ ಹೊಸವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು.ಇಂತಹ ಚಮತ್ಕಾರಕ,ರೋಗನಾಶಕ,ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದು.ಹೋಮಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು.ಈ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಹೋಗಬೇಕಾದ್ದು ನಮ್ಮ ಪರಮಕರ್ತವ್ಯ.
ಯಜ್ಞ ಹೋಮಗಳು ಪುರೋಹಿತರು ಉದರಪೋಷಣೆಗಾಗಿ ಮಾಡಿಕೊಂಡಿದ್ದು ಎಂಬ ಮನೋಭಾವ ಬದಲಾಗಲಿ.
ನಮ್ಮ ಸಂಸ್ಕೃತಿ,ಆಚರಣೆಯ ಬಗ್ಗೆ ಅಭಿಮಾನವಿರಲಿ.ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ,ಪೋಷಿಸುವ ಕಾಯಕ ನಮ್ಮದಾಗಲಿ.
ಲೋಕಾಃ ಸಮಸ್ತಾಃ ಸುಖಿನೋ ಭವಂತು

*ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!*

*ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!*
ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಟ್ಟುಙಿ, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯ ವೃದ್ಧಿಸುವುದು....
ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರದಂತೆ ತಡೆಯುವುದು.ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ಹೌದು, ಮೆಂತೆ ಕಾಳು ನೆನೆಸಿದ ನೀರಿನ ಉಪಯೋಗವನ್ನು ಪಡೆದುಕೊಳ್ಳಬೇಕಾದರೆ ಈ ಲೇಖನವನ್ನು ಓದಬೇಕು. ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸುವ ಮೆಂತೆ
ಇದರ ಲಾಭ ಪಡೆಯಬೇಕಾದರೆ ಒಂದು ತಿಂಗಳ ಕಾಲ ಹೀಗೆ ಮುಂದುವರೆಸಿ, ಆರೋಗ್ಯ ವೃದ್ಧಿಸಿಕೊಳ್ಳಿ.... ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗಿರುವುದನ್ನು ಒದಿ. 
ತೂಕ ಕಳೆದುಕೊಳ್ಳಲು
ಮೆಂತೆ ನೆನಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನೆಸಿದ ಮೆಂತೆಯನ್ನು ಸ್ವಲ್ಪ ತಿನ್ನುವುದರಿಂದ ಹಸಿವು ಕಡಿಮೆಯಾಗುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.
  
ಜೀರ್ಣಕ್ರಿಯೆ
ಮೆಂತೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಯು ಸರಾಗವಾಗಲು ನೆರವಾಗುವುದು ಮತ್ತು ಹೊಟ್ಟೆ ಉರಿಯನ್ನು ಶಮಗೊಳಿಸುವುದು.
  
ರಕ್ತದೊತ್ತಡ ನಿಯಂತ್ರಿಸುವುದು
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಮತ್ತು ಪೊಟಾಶಿಯಂ ಇದೆ. ಇವೆರಡು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.
  
ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು
ಮೆಂತೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದುಹಾಕುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರೊಂದಿಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.
  
ಸಂಧಿವಾತ
ಆ್ಯಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಮೆಂತ್ಯೆಯು ಸಂಧಿವಾತದ ನೋವನ್ನು ನಿವಾರಿಸುವುದು.
  
ಕ್ಯಾನ್ಸರ್ ತಡೆಗಟ್ಟುವುದು
ಮೆಂತೆಯು ದೇಹದ ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದು.
  
ಮಧುಮೇಹ
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಎನ್ನುವ ಪ್ರಮುಖ ನಾರಿನಾಂಶವು ರಕ್ತವು ಸಕ್ಕರೆ ಅಂಶವು ಹೀರಿಕೊಳ್ಳುವುದನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಬಹುದು.
  
ಕಿಡ್ನಿಯ ಕಲ್ಲು
ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.