ಬುಧವಾರ, ಆಗಸ್ಟ್ 2, 2017

ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು

ನಮ್ಮ ಪೂಜ್ಯನೀಯ ಭಗವದ್ಗೀತೆ ಯನ್ನು ಬಿಟ್ಟು ಬೇರೆ ಯಾವುದೇ ಧರ್ಮದಲ್ಲಿ ಕಾಣಲು ಸಾಧ್ಯವಿಲ್ಲ..
ಯೇ ಯಥಾ ಮಾಂ ಪ್ರಪದ್ಯಂತೇ
ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥
-ಯಾರು ಹೇಗೆ ನನ್ನನು  ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ.
ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು?
ಒಬ್ಬಬ್ಬರು ಒಂದೊಂದು ರೀತಿ ಉಪಾಸನೆ  ಮಾಡುತ್ತಾರೆ. ಅದರಿಂದ ಗೊಂದಲ, ಆವೇಶ. ಯಾರು ಯಾವ ರೀತಿ ಉಪಾಸನೆ ಮಾಡುತ್ತಾರೋ ಭಗವಂತ ಹಾಗೆಯೇ ಅನುಗ್ರಹಿಸುತ್ತಾನೆ. ನಾವು ಯಾವ ರೂಪದಿಂದ ಉಪಾಸನೆ ಮಾಡಿದರೂ ಅದು ವಿಶ್ವರೂಪನಾದ ಭಗವಂತನನ್ನು ಸೇರುತ್ತದೆ. ಅದಕ್ಕಾಗಿ ನಾವು ನಮ್ಮ ಪೂಜೆಯನ್ನು ಭಗವಂತನ ವಿಶೇಷ ವಿಭೂತಿ ಇರುವ ತುಳಸಿ, ಅಶ್ವತ್ಥವೃಕ್ಷ,  ಗೋವು ಇತ್ಯಾದಿ ರೂಪದಲ್ಲಿ ಪೂಜಿಸುತ್ತೇವೆ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ತುಳಸಿ ಗಿಡವನ್ನೇ ಭಗವಂತನೆಂದು ನಂಬಿ ಪೂಜಿಸದೇ, ತುಳಸಿಯಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ ಎಂದು ಪೂಜಿಸುವುದು ಮುಖ್ಯ. ಹೀಗೆ ನಮ್ಮ  ಪ್ರತಿಯೊಂದು ಕ್ರಿಯೆಯಲ್ಲಿ ನಮಗೆ ಭಗವಂತನ ಎಚ್ಚರ ಮತ್ತು ಜ್ಞಾನ ಅಗತ್ಯ.ಯಾವ ಹೆಸರಿನಿಂದ  ಭಗವಂತನನ್ನು ಕರೆದರೂ ಅದು ಸರ್ವಶಬ್ದ ವಾಚ್ಯ ಭಗವಂತನ ನಾಮ ಎನ್ನುವ ಎಚ್ಚರ ಅಗತ್ಯ. ಏಲ್ಲಿ ಕುಳಿತು ಪೂರ್ಣ ಅರ್ಪಣಾಭಾವದಿಂದ ಭಗವಂತನನ್ನು ನೆನೆದರೂ ಅದು ವಿಶ್ವರೂಪಿ ವಿಶ್ವಂಭರನನ್ನು ಸೇರುತ್ತದೆ. ಆತ ಸದಾ ನಮ್ಮ ರಕ್ಷಣೆ ಮಾಡುತ್ತಾನೆ. 

 -----------------------------------------------------------------------------------------------------------------------

*ಶ್ರಾವಣ ಮಾಸದಲ್ಲಿ ಅಸ್ಟಾಂಗ ಶನಿ ಪ್ರಭಾವ*
ಸೂರ್ಯನ ಚಲನ ಸಿದ್ಧಾಂತದಲ್ಲಿ ಸಂಭವಿಸುವ ಆಯನಗಳು (ಉತ್ತರಾಯಣ ಮತ್ತು ದಕ್ಷಿಣಾಯನ), ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದು ಹೋಗುವ ನಿರ್ದಿಷ್ಟ ದಿನಗಳು (ಮಾರ್ಚಿ-21 ಮತ್ತು ಸೆಪ್ಟೆಂಬರ್‌ 23) ಮತ್ತು ಕಾಲಮಾನಗಳ ನೈಸರ್ಗಿಕ ಪ್ರಭಾವಗಳನ್ನು ಅವಲೋಕಿಸಿ ನಭೋಮಂಡಲದಲ್ಲಿ ಸ್ಥಿರಪಟ್ಟಿರುವ ತಾರಾಮಂಡಲಗಳಲ್ಲಿನ ತಾರೆಗಳ ಸಂಖ್ಯೆ, ಸ್ಥಿರತೆ ಮತ್ತು ಆಕಾರಗಳನ್ನು ತೀವ್ರತರ ಸಂಶೋಧನೆಗಳಿಂದ ದೃಢಪಡಿಸಿ, ಪೂರ್ವ ಖಗೋಳ ಶಾಸ್ತ್ರಜ್ಞರು 12 ರಾಶಿಗಳನ್ನು ಸಿದ್ಧಪಡಿಸಿ ಸೂರ್ಯನು ಇಂತಹ ತಾರಾಮಂಡಲಗಳಲ್ಲಿ ಹಾದು ಹೋಗುವಾಗ ತಾರಾ ಮಂಡಲಗಳಿಂದ ನಭೋಮಂಡಲದತ್ತ ಎರಕ ಹೊಯ್ಯುವ ನಭೋಪ್ರಭಾವದ ಭೌತಿಕ ಗುಣಗಳು ಪೃಥ್ವಿಯ ಆತ್ಮದ ಮೇಲೆ ಎರಕ ಹೊಯ್ದಾಗ ಸಂಭವಿಸುವ ಭೌತಿಕ ಗುಣಗಳನ್ನು ಆಧರಿಸಿ ಜ್ಯೋತಿಷ್ಯ ಶಾಸ್ತ್ರಜ್ಞರು ಭವಿಷ್ಯವನ್ನು ನುಡಿಯುತ್ತಿದ್ದರು. 16ನೇ ಶತಮಾನದ ನಂತರ ದೂರಗಾಮಿ ಯುರೇನಸ್‌, ನೆಪ್ಚೂನ್‌ ಮತ್ತು ಪೊ್ಲೕಟೋ ಗ್ರಹಗಳನ್ನು ಗುರುತಿಸಿದ ನಂತರವೇ ಸೌರ ಮಂಡಲದಲ್ಲಿ ಸೂರ್ಯ, ಚಂದ್ರ ಮತ್ತು ಪೃಥ್ವಿ ಸೇರಿದಂತೆ 11 ಗ್ರಹಗಳಿವೆ ಎಂದು ತಿಳಿಯಲಾಯಿತು. ಸೂರ್ಯನಿಂದ 1427 ಮಿಲಿಯನ್‌ ಕಿ.ಮೀ. ದೂರದಲ್ಲಿ 143000 ಕಿ.ಮೀ. ಸುತ್ತಳತೆಯುಳ್ಳ ಎರಡನೇ ಅತಿದೊಡ್ಡ ಗ್ರಹವಾದ 16 ಚಂದಿರಗಳನ್ನು ಹೊಂದಿರುವ ಶನಿಗ್ರಹ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಮಹತ್ತರ ಸ್ಥಾನ ಪಡೆದಿರುತ್ತದೆ.
*ರಾಶಿ ಫಲ ಸಿದ್ಧಾಂತ*
2017, ಜುಲೈ 24ರ ಸೋಮವಾರ ಶ್ರಾವಣ ಮಾಸವು ಆರಂಭವಾಗಿ ಆಗಸ್ಟ್‌ 21ರ ಸೋಮವಾರವೇ ಮುಕ್ತಾಯಗೊಳ್ಳುವುದು. ಈ ಮಾಸದ ಪರ್ವಕಾಲ ಪ್ರಸಕ್ತ ವರ್ಷದ ಪರಮ ಪವಿತ್ರ ಕಾಲಮಾನ ಎನಿಸಿಕೊಂಡಿದೆ. ಏಕೆಂದರೆ, ಈ ಕಾಲಮಾನದಲ್ಲಿ ಸೂರ್ಯನು ಜುಲೈ 24 ರಂದು 52 ಮಹಾನಕ್ಷ ತ್ರಗಳನ್ನು ಹೊಂದಿದ ಸಿಂಹರಾಶಿಯಲ್ಲಿ ಪ್ರವೇಶಿಸಿ ಆಗಸ್ಟ್‌ 21ರಂದು ನಿರ್ಗಮಿಸುವ ಕಾಲಮಾನದಲ್ಲಿ, ನಕ್ಷ ತ್ರ ಮಂಡಲದಲ್ಲಿಯೇ 21ನೇ ಅಧಿಧಿಕ ಪ್ರಭಾವಳಿ ಹೊಂದಿದ್ದು, 84 ಲೈಟ್‌ ಇಯರ್‌ ದೂರದಲ್ಲಿರುವ ಹಾಗೂ ಪೃಥ್ವಿಗೆ ಹತ್ತಿರವಾಗಿರುವ 'ರೆಗ್ಯೂಲಸ್‌' ಮಹಾನಕ್ಷ ತ್ರವು ಅಂತರ್‌ ಪ್ರಭಾವದಂತಹ ನಭೋ ಪ್ರಭಾವವನ್ನು ಪೃಥ್ವಿಯ ಮೇಲೆ ಎರಕ ಹೊಯ್ಯುತ್ತಿರುತ್ತದೆ. ಇದರಿಂದ ಮಾನವ ಶರೀರದ ಭೌತಿಕ ಗುಣಗಳು ಬದಲುಗೊಳ್ಳುತ್ತವೆ. ಆಧ್ಯಾತ್ಮಿಕ, ದೈವಿಕ ಹಾಗೂ ಪುರಾಣಶಾಸ್ತ್ರಗಳ ಮಹತ್ತರ ಸ್ಥಾನವನ್ನು ಪಡೆದಿರುವ ಈ ಮಾಸದಲ್ಲಿ ಮಹಾಲಕ್ಷ್ಮಿ ವ್ರತ, ಮಂಗಳ ಗೌರಿ ವ್ರತ, ನಾಗರಪಂಚಮಿ, ಗೋಕುಲಾಷ್ಟಮಿ ಪವಿತ್ರ ದಿನಗಳನ್ನು ಆಚರಿಸುತ್ತಿದ್ದು ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರಗಳಂದು ಶನಿದೇವರು ಮತ್ತು ನವಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
*ಶನಿ ಮಹಾದೆಸೆ*
ಶ್ರಾವಣ ಮಾಸದ ಜ್ಯೋತಿಷ್ಯ ಫಲಗಳನ್ನು ಪರಾಮರ್ಶಿಸಿ ಮನೋವೈಜ್ಞಾನಿಕಶಾಸ್ತ್ರ, ರಾಶಿ ಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ನಕ್ಷ ತ್ರಗಳ ಕ್ಷ ರಣಾಕ್ಷ ರಗಳ ವಿಭಜನೆಯಿಂದ ರಾಜಯೋಗ ಮತ್ತ ಅಮೃತ ಸಿದ್ಧಯೋಗಗಳಂತಹ ಗಜಕೇಸರಿ ಯೋಗವನ್ನು ತಿಳಿಯಪಡಿಸಲಾಗಿದೆ. ಆಸಕ್ತರು ಹಲವು ಸಲ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ದೊರೆಯುವುದು. ಸಿಂಹ, ಕನ್ಯಾ ಮತ್ತು ತುಲಾರಾಶಿಯವರಿಗೆ 2017, ಸೆಪ್ಟೆಂಬರ್‌ 23, ಮೇಷ, ಮಕರ ಮತ್ತು ಕುಂಭ ರಾಶಿಯವರಿಗೆ ಡಿಸೆಂಬರ್‌ 24 ರಿಂದ ವೃಷಭ ಧನಸ್ಸು ಮತ್ತು ಮಿಥುನ ರಾಶಿಯವರಿಗೆ 2017 ಮಾರ್ಚ್‌ 21ರಿಂದ ಮತ್ತು ಮೀನ, ಕಟಕ, ವೃಶ್ಚಿಕ ರಾಶಿಯವರಿಗೆ ಆಗಸ್ಟ್‌ 29 ರಿಂದ ಶನಿ ಮಹಾ ಮಹಾದೆಸೆ ಪ್ರಾಪ್ತವಾಗಿ ಮುಂದಿನ ರಾಜಯೋಗ ಮತ್ತು ಅಮೃತಸಿದ್ಧ ಯೋಗದಂತಹ ಗಜಕೇಸರಿಯೋಗವು ಜರಗುವುದು. ಆಯಾಮಹಾದೆಸೆಗಳ ಅನ್ವಯ ವಿಶೇಷ ಪೂಜೆ ವೈದಿಕ ವಿಧಿಧಿ ವಿಧಾನಗಳನ್ನು ಆಚರಿಸಿದರೆ ಆಶಾದೀಪದಂತಹ ಭವಿಷ್ಯದತ್ತ ಮುನ್ನಡೆಯ ಬಹುದು.
*ಶನಿದೇವರ ಪೂಜಾಫಲ*
ಶ್ರಾವಣ ಮಾಸದ ಎಲ್ಲಾ ದಿನಗಳನ್ನು ಪವಿತ್ರ ದಿನಗಳೆಂದು ಭಾವಿಸಿ ಈ ಮಾಸದಲ್ಲಿ ಬರುವ ಎಲ್ಲಾ ಶನಿವಾರಗಳಂದು ಶನಿದೇವರಿಗೆ ವಿಶಿಷ್ಟ ಪೂಜೆ ಸಲ್ಲಿಸಿದರೆ; ಪ್ರಮುಖವಾಗಿ ಬಂಡವಾಳ ಹೂಡಿಕೆ, ಹಣದ ಲೇವಾದೇವಿಗಳಲ್ಲಿ, ಬೆಳ್ಳಿ ಬಂಗಾರ ಮತ್ತು ರತ್ನವ್ಯಾಪಾರಗಳಲ್ಲಿ ಉತ್ತಮ ಲಾಭದಾಯಕವಾಗಿದ್ದು, ನಿವಾಸದಲ್ಲಿ ಶಾಂತಿ, ಉತ್ತಮ ಆರೋಗ್ಯ, ಕಂಕಣ ಭಾಗ್ಯ, ವಿದೇಶ ವಾಸ್ತವ್ಯ, ಪ್ರೇಕ್ಷ ಣೀಯ ಸ್ಥಳಗಳಿಗೆ ಭೇಟಿ, ಸಾಲದ ಬಾಧೆಗಳಿಂದ ಮ

ಶ್ರೀ ಗಂಗಾಸ್ತೋತ್ರ

ಶ್ರೀ ಗಂಗಾಸ್ತೋತ್ರವನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀಗಂಗಾ ಸ್ತೋತ್ರದಲ್ಲಿ 14 ಪರಮ ಪವಿತ್ರವಾದ ರೋಗನಾಶಕವಾದ ಹಾಗೂ ಅತೀ ರಹಸ್ಯವುಳ್ಳ ಶ್ಲೋಕಗಳನ್ನು ರಚಿಸಿದ್ದಾರೆ..
ಶ್ರೀ ಗಂಗಾಸ್ತೋತ್ರವನ್ನು ಓದುತ್ತಿರುವವರಿಗೆ ಜೀವನದಲ್ಲಿ ಯಾವುದೇ ತರಹದ ಖಾಯಿಲೆಗಳು, ಚಿಂತೆಗಳು, ಯೋಚನೆಗಳು ಬರದೆ ದೇಹವು ವಜ್ರಕಾಯ ಶರೀರವಾಗುತ್ತದೆ..
🖎ಯಾರಿಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತು ಬರುತ್ತದೆಯೋ , ಯಾರಿಗೆ ಆಚೆಕಡೆ ಸುತ್ತಾಡಿದರೆ ತಲೆನೋವು ಬರುತ್ತದೆಯೋ , ಯಾರಿಗೆ B.P.ಇದ್ದು ಎಷ್ಟು ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುವುದಿಲ್ಲವೋ, ಯಾರಿಗೆ ತಮ್ಮ ಖಾಯಿಲೆಯನ್ನು ವೈದ್ಯರ ಬಳಿಗೆ ಹೇಳಿದರೆ ಅರ್ಥವಾಗುವುದಿಲ್ಲವೋ, ಅಂತಹವರು "ಶ್ರೀ ಗಂಗಾದೇವಿ" ಸ್ತೋತ್ರವನ್ನು ಓದಿದರೆ ಬಹಳ ಅನುಕೂಲವಾಗುತ್ತದೆ...
🖎ಯಾರು ತುಂಬಾ ಯೋಚನೆಯನ್ನು ಮಾಡುತ್ತಾರೋ, ಯಾರಿಗೆ ನಿದ್ದೆ ಬರುವುದಿಲ್ಲವೋ, ಯಾರು ಮನೋರೋಗಿಯಾಗಿರುತ್ತಾರೋ, ಯಾರಿಗೆ ಮಾತನಾಡುವಾಗ ದೇಹ ಅದರುತ್ತದೆಯೋ, ಯಾರಿಗೆ ಬೆವರು ಜಾಸ್ತಿ ಬರುತ್ತದೆಯೋ, ಯಾರಿಗೆ ಭಯ ಜಾಸ್ತಿ ಆಗುತ್ತಿದೆಯೋ, ಯಾರು ಶವವನ್ನು ನೋಡಿದರೆ ಭಯ ಪಡುತ್ತಾರೆಯೋ, ಯಾರು ಕನಸಿನಲ್ಲಿ ಬೆಚ್ಚಿ ಬೀಳುತ್ತಾರೋ, ಯಾರಿಗೆ ಕೆಟ್ಟ ಕನಸುಗಳು ಪದೇಪದೇ ಬರುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ಸ್ತೋತ್ರವನ್ನು ಓದಿ ಸುಮಂಗಲಿಯರಿಗೆ ತಾಂಬೂಲದಾನ ಮಾಡಿದರೆ ಸಕಲ ದೋಷಗಳು ನಿವಾರಣೆಯಾಗುತ್ತದೆ.. ರಾತ್ರಿ ಮಲಗುವ ಮುನ್ನ ಗಂಗಾದೇವಿ ಸ್ತೋತ್ರದ ಎರಡನೇ ಶ್ಲೋಕವನ್ನು ಹೇಳಿಕೊಂಡು ಮಲಗುವುದು ಶುಭ..
🖎ಯಾರಿಗೆ ಹೆಚ್ಚು ವಿದ್ಯೆ ಕಲಿಯಲು ಆಸಕ್ತಿ ಇದ್ದು , ಎಷ್ಟು ಓದಿದರೂ ಮರೆತು ಹೋಗುತ್ತಿದ್ದರೆ , ಯಾರಿಗೆ ಓದುವಾಗ ಹೆಚ್ಚು ಯೋಚನೆಗಳು ಬರುತ್ತಿದ್ದರೆ, ಯಾರಿಗೆ ಪರಿಕ್ಷಾ ಸಮಯದಲ್ಲಿ ದೇಹವು ಸರಿ ಇರುವುದಿಲ್ಲವೋ, ಅಂತವರು "ಶ್ರೀಗಂಗಾ ಸ್ತೋತ್ರ"ದ ೨ ನೇ ಶ್ಲೋಕವನ್ನು 7 ಸಾರಿ ನೀರಿನಲ್ಲಿ ಅಭಿಮಂತ್ರಿಸಿ, ಮಂತ್ರಿಸಿದ ನೀರನ್ನು ತಲೆಗೆ, ಕಣ್ಣುಗಳಿಗೆ, ಹಚ್ಚಿ ಉಳಿದ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಮಹಾವಿದ್ಯಾವಂತರಾಗುತ್ತಾರೆ..
🖎ಯಾರಿಗೆ ಸಕ್ಕರೆ ಖಾಯಿಲೆ ಇದ್ದು ತುಂಬಾ ಏರುಪೇರಾಗುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ದೇವಾಲಯದಲ್ಲಿ ಪೂಜೆ ಮಾಡಿಸಿ ಪಾನಕ ಕೋಸಂಬರಿ ಹಂಚಿದರೆ ಸಕ್ಕರೆ ಖಾಯಿಲೆಯು ಸಮತೋಲನದಲ್ಲಿರುತ್ತದೆ. ಆರೋಗ್ಯವಾಗಿರುತ್ತಾರೆ..
🖎ಯಾರು ಪ್ರತಿದಿವಸ ಸ್ನಾನ ಮಾಡುವಾಗ "ಶ್ರೀ ಗಂಗಾ ಸ್ತೋತ್ರವನ್ನು" ಹೇಳಿ ಸ್ನಾನವನ್ನು ಮಾಡಿದರೆ ಸರ್ವಪಾಪಗಳೂ ನಿವಾರಣೆಯಾಗಿ ದೇಹವು ವಜ್ರಕಾಯವಾಗುತ್ತದೆ..  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೇಜೋವಂತರಾಗಿಯೂ, ಕಾಂತಿವಂತರಾಗಿಯೂ, ದೈವಾಂಶರಾಗಿಯೂ ಕಾಣುತ್ತಾರೆ..
🖎ಹೀಗೆ  ಒಂದೊಂದು  ಸ್ತೋತ್ರಕ್ಕೂ ಒಂದೊಂದು  ಅರ್ಥ ಮತ್ತು ಮಹತ್ವವಿದೆ. ವಿಶೇಷ ಶಕ್ತಿಯಿದೆ.

ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ |
ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 ||
ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ |
ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 ||
ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ |
ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 ||
ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತಃ ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ || 4 ||
ಪತಿತೋದ್ಧಾರಿಣಿ ಜಾಹ್ನವಿ ಗಂಗೇ ಖಂಡಿತ ಗಿರಿವರಮಂಡಿತ ಭಂಗೇ |
ಭೀಷ್ಮಜನನಿ ಹೇ ಮುನಿವರಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ || 5 ||
ಕಲ್ಪಲತಾಮಿವ ಫಲದಾಂ ಲೋಕೇ ಪ್ರಣಮತಿ ಯಸ್ತ್ವಾಂ ನ ಪತತಿ ಶೋಕೇ |
ಪಾರಾವಾರವಿಹಾರಿಣಿ ಗಂಗೇ ವಿಮುಖಯುವತಿ ಕೃತತರಲಾಪಾಂಗೇ || 6 ||
ತವ ಚೇನ್ಮಾತಃ ಸ್ರೋತಃ ಸ್ನಾತಃ ಪುನರಪಿ ಜಠರೇ ಸೋಪಿ ನ ಜಾತಃ |
ನರಕನಿವಾರಿಣಿ ಜಾಹ್ನವಿ ಗಂಗೇ ಕಲುಷವಿನಾಶಿನಿ ಮಹಿಮೋತ್ತುಂಗೇ || 7 ||
ಪುನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ |
ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯಶರಣ್ಯೇ || 8 ||
ರೋಗಂ ಶೋಕಂ ತಾಪಂ ಪಾಪಂ ಹರ ಮೇ ಭಗವತಿ ಕುಮತಿಕಲಾಪಮ್ |
ತ್ರಿಭುವನಸಾರೇ ವಸುಧಾಹಾರೇ ತ್ವಮಸಿ ಗತಿರ್ಮಮ ಖಲು ಸಂಸಾರೇ || 9 ||
ಅಲಕಾನಂದೇ ಪರಮಾನಂದೇ ಕುರು ಕರುಣಾಮಯಿ ಕಾತರವಂದ್ಯೇ |
ತವ ತಟನಿಕಟೇ ಯಸ್ಯ ನಿವಾಸಃ ಖಲು ವೈಕುಂಠೇ ತಸ್ಯ ನಿವಾಸಃ || 10 ||
ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || 11 ||
ಭೋ ಭುವನೇಶ್ವರಿ ಪುಣ್ಯೇ ಧನ್ಯೇ ದೇವಿ ದ್ರವಮಯಿ ಮುನಿವರಕನ್ಯೇ |
ಗಂಗಾಸ್ತವಮಿಮಮಮಲಂ ನಿತ್ಯಂ ಪಠತಿ ನರೋ ಯಃ ಸ ಜಯತಿ ಸತ್ಯಮ್ || 12 ||
ಯೇಷಾಂ ಹೃದಯೇ ಗಂಗಾ ಭಕ್ತಿಸ್ತೇಷಾಂ ಭವತಿ ಸದಾ ಸುಖಮುಕ್ತಿಃ |
ಮಧುರಾಕಂತಾ ಪಂಝಟಿಕಾಭಿಃ ಪರಮಾನಂದಕಲಿತಲಲಿತಾಭಿಃ || 13 ||
ಗಂಗಾಸ್ತೋತ್ರಮಿದಂ ಭವಸಾರಂ ವಾಂಛಿತಫಲದಂ ವಿಮಲಂ ಸಾರಮ್ |b
ಶಂಕರಸೇವಕ ಶಂಕರ ರಚಿತಂ vm ಪಠತಿ ಸುಖೀಃ ತವ ಇತಿ ಚ ಸಮಾಪ್ತಃ || 14 ||

.
Collected by Whatsapp.

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!
(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ)
★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!.
★ ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...
ಮಿತ್ರರೇ,
ಈ ಮೆಸೆಜ್ ಓದಲು 5 ನಿಮಿಷ ಬೇಕಾಗಬಹುದು.ಸಮಯ ಮಾಡಿಕೊಂಡು ರಾತ್ರಿಯಾದರು ಓದಿ.
ಓದಿ ಆದ ಮೇಲೆ ಬೇರೆಯವರಿಗೂ ಕಳಿಸಿ, ಓದಲು ತಾಳ್ಮೆ ಇಲ್ಲದಿದ್ದರೆ ಕೂಡಲೇ ಫಾರ್ ವರ್ಡ್ ಮಾಡಿಬಿಡಿ....
ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.
H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.
"ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.
ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ. ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತು ಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ...
ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ. ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್, ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".
ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ.
ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅ  ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು.  ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ.  ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು.  ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ.  ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ. ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ.  ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ?
ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ.
ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು! !!!!!
ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ.
ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆಂದರೆ, ನಮಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ?
ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು.  ಸ್ವಾತಂತ್ರ್ಯ ಬಂದು 70 ವರ್ಷ ತುಂಬುತ್ತ ಬಂತು. ಇಷ್ಟು ವರ್ಷ ಮಲಗಿದ್ದು ಸಾಕು, ಇನ್ನಾದರು ಎಚ್ಚೆತ್ತು ಕೊಳ್ಳೊಣ.  ನಮಗಲ್ಲದಿದ್ದರು ನಮ್ಮ ಪೀಳಿಗೆಗಾದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ ಸಮಾಜವಾಗಲೀ.....
ಸೂಚನೆ: ಕೇವಲ ದೇಸಿತಳಿ ದನಗಳಿಂದ ಮಾತ್ರ ಔಷಧಿ ತಯಾರಿಸುತ್ತಾರೆ.
ಇಲ್ಲಿ ಕೇವಲ ಸಾಂಕೇತಿಕವಾಗಿ ನೀಡಲಾಗಿದ್ದು, ಔಷಧಿ ಪಡೆಯುವವರು ಪರಿಣಿತರ ಸಲಹೆ ಪಡೆಯಲೇಬೇಕು.
"ಆರೋಗ್ಯವಂತ ಸಮಾಜಕ್ಕಾಗಿ ಪ್ರಕಟಣೆ" 
Collected by Whatsapp.

ತನು ತಂಬಿಲ

ತನು ತಂಬಿಲ ಎಂದರೆ ಏನು ಅನ್ನುವುದನ್ನು ತಿಳಿಯೋಣ..
ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ.
ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ ಗಾಯಕ್ಕೆ ಹರಶಿಣ ಹಚ್ಚಿ ಅದನ್ನು ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ. ಗಾಯವನ್ನು ಉಲ್ಬಣಗೊಳಿಸುವ ಗೋಮಯ ಮತ್ತು ಬಾಳೆದಿಂಡು ಇಂದಿಗೂ ನಾಗ ಸೇವೆಯಲ್ಲಿ ನಿಷಿದ್ಧ.
ತುಳುನಾಡಿನ ಸೃಷ್ಟಿಕರ್ತ ಪರಶುರಾಮನೆ ಆದರೂ ಅದಕ್ಕೆ ಫಲವತ್ತತೆಯನ್ನು ತುಂಬಿದ್ದು ನಾಗಗಳು. ಹೀಗಾಗಿ ನಾವು ನಾಗಗಳಿಂದ ನಮ್ಮ ನಾಡನ್ನು ಪಡೆದು ಕೊಂಡವರಾಗಿದ್ದೇವೆ. ನಾಗ ನೆಲೆಯ ಭೂಮಿಯು ನಮ್ಮದ್ದು ಆಗಿದ್ದರಿಂದ ನಾಗರ ಹಾವು ನಮಗೆ ಕಣ್ಣಿಗೆ ಕಾಣುವ ದೇವರು ಅನ್ನುವ ಅಭಿಮಾನ. ವಿಶೇಷವಾಗಿ ತುಳುನಾಡಿನಲ್ಲಿ ಮುಕ್ಕೋಟಿ ದೇವತೆಗಳಿಂದ ಏನನ್ನು ಪಡೆಯಬಹುದೋ ಅದನ್ನು ನಾಗದೆವರನ್ ಪಡೆಯಬಹುದು ಅನ್ನುತ್ತವೆ ತುಳು ಜಾನಪದ ಕಥೆಗಳು. ಯಾಕೆಂದರೆ ನಾಗ ಸಂಪತ್ತು ಅನ್ನುವ ನಿಧಿಯ ಒಡೆಯ. ಉತ್ತಮವಾದ ಸ್ವಾಸ್ಥ್ಯವನ್ನು ನೀಡುವ ಆರೋಗ್ಯ ಪ್ರದಾಯಕ. ಸಂತಾನವನ್ನು ಕರುಣಿಸುವವ ಅಲ್ಲದೆ ಜಲ ಸಂಪತ್ತಿನ ಅಧಿಪತಿ. ಇಂತಹ ಮಹಿಮೆಯುಳ್ಳ ನಾಗದೇವರು ಪರಶುರಾಮ ಸೃಷ್ಟಿಯ, ಬೇಡಿದ್ದನ್ನು ನೀಡುವ ಕಾಮಧೇನು ಅನ್ನುವುದರಲ್ಲಿ ಎರಡು ಮಾತಿಲ್ಲ .

-ಓ ಭಾರತ

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ॥

-ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲ,  ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು  ಹುಟ್ಟಿಸಿಕೊಳ್ಳುತ್ತೇನೆ.  ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ  ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು  ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಇಲ್ಲಿ ಧರ್ಮ ಸೋಲುವುದು ಅಂದರೆ ಅದು ಒಂದು ಮನೆಗೆ-  ಒಂದು ದೇಶಕ್ಕೆ ಸಂಬಂಧಪಟ್ಟಿದ್ದಲ್ಲ. ಇಡೀ ವಿಶ್ವದಲ್ಲೇ ಧರ್ಮಕ್ಕೆ ನೆಲೆ ಸಿಗದ ಪರಿಸ್ಥಿತಿ ಬಂದಾಗ ಭಗವಂತನ ಅವತಾರವಾಗುತ್ತದೆ. ದುಷ್ಟ ಶಕ್ತಿಗಳು ಭೂಮಿಯ ಮೇಲೆ ಹಿಡಿತ ಸಾಧಿಸಿ ಸತ್ವಗುಣದ ತಲೆ ಎತ್ತದಂತೆ ಮಾಡಿದಾಗ, ಭಗವಂತ ತನ್ನನ್ನು ತಾನು ಭೂಮಿಯ ಮೇಲೆ ಸೃಷ್ಟಿಸಿಕೊಳ್ಳುತ್ತಾನೆ. "ತದಾSSತ್ಮಾನಂ ಸೃಜಾಮ್ಯಹಮ್" ಎನ್ನುವಲ್ಲಿ 'ನಾನು ನನ್ನ ಆತ್ಮೀಯರನ್ನು ಕಳುಹಿಸುತ್ತೇನೆ'
ಎನ್ನುವ ಹಾಗು 'ನಾನೇ ಅವತರಿಸುತ್ತೇನೆ' ಎನ್ನುವ ಎರಡು ಧ್ವನಿ ಇದೆ. ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು(ದೇವತೆಗಳನ್ನು) ಭೂಮಿಗೆ ಕಳುಹಿಸುತ್ತಾನೆ. ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ. ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು  ವಿಜೃಂಭಿಸಿದಾಗ, ಕೊನೆಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ. ಕೃಷ್ಣನ ಅವತಾರವಾದ
ಸಮಯದ ಸ್ಥಿತಿಯನ್ನು ಗಮನಿಸಿದಾಗ ಆ ಕಾಲದ ಧರ್ಮದ ಪಾಡೇನು ಎನ್ನುವುದು ಸ್ಪಷ್ಟವಾಗುತ್ತದೆ. ಜರಾಸಂಧ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುಮಾರು 22,800 ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಕಂಸನಿಗೆ ತನ್ನ ಮಗಳನ್ನು ಕೊಟ್ಟು ಆತನನ್ನು ಎತ್ತಿಕಟ್ಟಿ, ಶೂರಸೇನನನ್ನು ಸೆರೆಮನೆಗೆ ಹಾಕುವಂತೆ ಕುತಂತ್ರ ಮಾಡಿ, ಅದರಲ್ಲಿ  ಯಶಸ್ವಿಯಾಗಿದ್ದ ಜರಾಸಂಧ. ಇನ್ನು ಆತನ ಮಿತ್ರ ನರಕಾಸುರ ಸುಮಾರು 16,100  ರಾಜಕುಮಾರಿಯರನ್ನು ಸೆರೆಮನೆಯಲ್ಲಿಟ್ಟಿದ್ದ. ಭೀಷ್ಮಾಚಾರ್ಯರೊಂದಿಗೆ ಶಾಂತಿ ಒಪ್ಪಂದ  ಮಾಡಿಕೊಂಡು ಇಡೀ ಭೂಲೋಕದಲ್ಲಿ ತನ್ನದೇ ಆದ ಏಕಚಕ್ರಧಿಪತ್ಯವನ್ನು ಸ್ಥಾಪಿಸುವ, ಹಾಗು   ಜನರನ್ನು ಸುಲಿಗೆ ಮಾಡುವ ಕುತಂತ್ರ ರೂಪಿಸಿದ್ದ ಜರಾಸಂಧ. ಅಂದಿನ ಭಾರತ ಇಂದಿನ  ಭಾರತದಂತಿರಲಿಲ್ಲ. ಅದು ಅತಿದೊಡ್ಡ ಭೂ ಭಾಗವಾಗಿತ್ತು. ಒಂದು ವೇಳೆ ಕೃಷ್ಣನ ಅವತಾರ ಆಗದೇ ಇದ್ದಿದ್ದರೆ ಇಡೀ ಭೂಲೋಕ ಈ ಪಾಪಿಗಳ ಕೈವಶವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೃಷ್ಣ
ಅವತರಿಸಿದ. ಕಂಸನನ್ನು ಕೊಂದು ಶೂರಸೇನನನ್ನು ಮರಳಿ ರಾಜನನ್ನಾಗಿ ಮಾಡಿದ ಕೃಷ್ಣ,  ನರಕಾಸುರನನ್ನು ಕೊಂದು, ಆತನ ಕೈ ಕೆಳಗಿನ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿದ. ಹೀಗೆ  ಬಿಡುಗಡೆಗೊಂಡ ರಾಜಕುಮಾರಿಯರು ಶೀಲ ಶಂಕಿಸುವ ಸಮಾಜಕ್ಕೆ ಹೆದರಿದಾಗ ಅವರಿಗೆ ಅಭಯವನ್ನು   ಕೊಟ್ಟು, ಅವರನ್ನು ತಾನೇ ಮದುವೆಯಾಗಿ ಅವರ ಗೌರವವನ್ನು ಕಾಪಾಡಿದ. ಜರಾಸಂಧ ಕೃಷ್ಣನ ಮೇಲೆ
ಸುಮಾರು 23 ಅಕ್ಷೌಹಿಣಿ ಸೈನ್ಯದೊಂದಿಗೆ ದಾಳಿ ಮಾಡಿದಾಗ ಓಡಿ ಹೋದಂತೆ ನಟಿಸಿ, ನಂತರ  ಭೀಮಾರ್ಜುನರೊಂದಿಗೆ ಜರಾಸಂಧನನ್ನು ಸಂಧಿಸಿ- ಅಲ್ಲಿ ನಡೆದ ಮಲ್ಲ ಯುದ್ಧದಲ್ಲಿ ಭೀಮನಿಂದ  ಜರಾಸಂಧನ ವದೆಯಾಗುವಂತೆ ಮಾಡಿದ. ಹಾಗು ಆತನ ಸೆರೆಯಲ್ಲಿದ್ದ ಎಲ್ಲಾ ರಾಜಕುಮಾರರರನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಟ್ಟ. ಹೀಗೆ ಇಡೀ ಭೂಲೋಕ ಅಧರ್ಮದ ದಾಸ್ಯಕ್ಕೆ ಗುರಿಯಾಗುವ ಸಂದರ್ಭ ಬಂದಾಗ ಮಾತ್ರ ಭಗವಂತನ ಅವತಾರ ಭೂಲೋಕದಲ್ಲಿ ಆಗುತ್ತದೆ.

*ಗ್ರಹ ಸ್ಥಾನದಿಂದ ರೋಗ ನಿರ್ಣಯ*

*ಗ್ರಹ ಸ್ಥಾನದಿಂದ ರೋಗ ನಿರ್ಣಯ*
*ಇಂಟ್ರೋ : ಜಾತಕ ವ್ಯಕ್ತಿಯ ಆಗುಹೋಗುಗಳ ಕನ್ನಡಿ ಇದ್ದಂತೆ. ಕುಂಡಲಿಯಲ್ಲಿ ಲಗ್ನವೇ ರೋಗಿಯ ಸ್ಥಾನ, ಸಪ್ತಮ ಸ್ಥಾನವೇ ವೈದ್ಯನ ಸ್ಥಾನ, ಚತುರ್ಥ ಸ್ಥಾನವಾದ 4ನೇ ಸ್ಥಾನವೇ ಔಷಧದ ಸ್ಥಾನ. ಷಷ್ಟ ಸ್ಥಾನವೇ ರೋಗದ ಗುಣ ಅವಗುಣ ತೋರಿಸುವ ಸ್ಥಾನವಾಗಿದೆ.* ಜಾತಕ ಭವಿಷ್ಯ ಸೂಚಕ. ಜಾತಕ ಕುಂಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ವ್ಯಕ್ತಿಯ ಆಗು ಹೋಗುಗಳನ್ನು ಗುರುತಿಸಬಹುದು. ಆತನಿಗೆ ಮುಂದೆ ಬರಬಹುದಾದ ರೋಗವನ್ನು ನಿರ್ಣಯಿಸಬಹುದು. 1-4-7-10ನೇ ಸ್ಥಾನಗಳಲ್ಲಿ ಪಾಪಗ್ರಹಗಳು ಇದ್ಡು ಲಗ್ನಾಧಿಪತ್ನಿಯಾದ 1ನೇ ಅಧಿಪತಿ ಮತ್ತು ಚಂದ್ರನು ಪಾಪ ಗ್ರಹಗಳಿಂದ ಕೂಡಿ ಪಾಪ ಸ್ಥಾನಗಳಲ್ಲಿದ್ದರೂ. ಅಷ್ಟಮಾಧಿಪತಿಯಾದ 8ನೇ ಅಧಿಪತಿ ಪಾಪಗ್ರಹವಾಗಿ ಲಗ್ನದಲ್ಲಿ ಇರುವಾಗ ಲಗ್ನಕ್ಕೆ ಶುಭ ಸಂಬಂಧವಾಗಲಿ. ಶುಭಗ್ರಹಗಳ ದೃಷ್ಟಿಯಾಗಲಿ ಇಲ್ಲದೆ ಇರುವಾಗ ಇತರ 4-7-10ರಲ್ಲಿ ಶುಭಗ್ರಹಗಳು ಇಲ್ಲದೆ ಲಗ್ನಾಧಿಪತಿ ಮತ್ತು ಚಂದ್ರ ನಿರ್ಬಲರಾಗಿದ್ದರೆ ರೋಗಿಗೆ ಮಾರಣಾಂತಿಕ ಗಂಡಾಂತರ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಲಗ್ನಾಧಿಪತಿ ಮತ್ತು ಚಂದ್ರ ಬಲಿಷ್ಟರಾಗಿದ್ದು 8ನೇ ಅಧಿಪತಿ 11ರಲ್ಲಿದ್ದರು 1-4-7-10-5-9ರಲ್ಲಿ ಅಂದರೆ ಕೇಂದ- ತ್ರಿಕೋಣದಲ್ಲಿ ಶುಭಗ್ರಹಗಳು ಅಧಿಕವಾಗಿದ್ದು ಪಾಪಗ್ರಹಗಳು 3-11ನೇ ಸ್ಥಾನಗಳಲ್ಲಿ ಇದ್ದರು 1-4-7-10ರಲ್ಲಿ ಗುರು ಶುಕ್ರರು ಇದ್ದಾಗ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಹೇಳಬಹುದು.
1-4-10ನೇ ಸ್ಥಾನಗಳು ಬಲವಾಗಿದ್ದು 7ನೇ ಸ್ಥಾನ ನಿರ್ಬಲವಾಗಿದ್ದರೆ ಈಗ ಚಿಕಿತ್ಸೆ ಕೂಡಿಸುತ್ತಿರುವ ವೈದ್ಯರಿಂದ ರೋಗ ಗುಣ ಆಗುವುದಿಲ್ಲವೆಂದು ಮತ್ತೊಬ್ಬ ವೈದ್ಯರಿಂದ ಚಿಕಿತ್ಸೆ ಕೊಡಿಸ ಬೇಕೆಂತಲು 1-10-7ನೇ ಸ್ಥಾನಗಳು ಬಲಿಷ್ಟವಾಗಿದ್ದು 4ನೇ ಸ್ಥಾನ ನಿರ್ಬಲವಾಗಿದ್ದರೆ ಕೂಡಿಸುತ್ತಿರುವ ಔಷಧವನ್ನು ಬಿಟ್ಟು ಬೇರೆ ಔಷಧಿಯನ್ನು ಕೂಡಿಸುವುದರಿಂದ ಗುಣವಾಗುವುದೆಂದು ನಿರ್ಣಯಿಸಬಹುದು. 1-4-7ನೇ ಸ್ಥಾನಗಳು ಬಲಿಷ್ಟವಾಗಿ 10ನೇ ಸ್ಥಾನ ನಿರ್ಬಲವಾಗಿದ್ದರೆ ಆಲಸ್ಯದಿಂದ ಅಂದರೆ ನಿಧಾನವಾಗಿ ಗುಣವಾಗುವುದೆಂದು ತಿಳಿಯಬಹುದು.
ಷಷ್ಠ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿ ಯಾವ ಗ್ರಹಗಳು ಇರುತ್ತವೆಯೋ ಅಥವಾ 6ನೇ ಅಧಿಪತಿ ಯಾವ ಗ್ರಹಗಳಿಂದ ಕೂಡಿರುತ್ತಾನೆಯೋ ಆಯಾ ಗ್ರಹಗಳ ಕಾರಕ ಸಂಬಂಧದಿಂದ ರೋಗವನ್ನು ನಿರ್ಣಯಿಸುವುದು ಉತ್ತಮ.
ಹೇಗೆಂದರೆ 6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ರವಿಯ ಸಂಬಂಧ ಇದ್ದರೆ ಪಿತ್ತೋದ್ರೇಕದಿಂದ ರೋಗವು ಇರುವುದೆಂದು, ಚಂದ್ರ ಶುಕ್ರರ ಸಂಬಂಧ ಉಂಟಾಗಿದ್ದರೆ ಶೀತಕ್ಕೆ ಸಂಬಂಧಪಟ್ಟ ರೋಗವೆಂದು, ಶನಿ-ಬುಧರ ಸಂಬಂಧ ಉಂಟಾಗಿದ್ದರೆ ವಾತ ಸಂಬಂಧವಾದ ರೋಗವೆಂತಲೂ, ರಾಹು ಕೇತುಗಳ ಸಂಬಂಧವಾದರೆ ವಿಷ ಸಂಬಂಧವಾದದ್ದೆಂತಲೂ ಅಥವಾ ತ್ರಿದೋಷದಿಂದ ಕೂಡಿರುವುದೆಂದು ತಿಳಿಯಬಹುದು.
6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ಕುಜ ರಾಹು ಸಂಬಂಧ ಉಂಟಾದರೆ ಕೆಟ್ಟ ಹುಣ್ಣು ಮಾಟ ಮರೆವು ಅಥವಾ ಕ್ರೂರ ಜಾಡ್ಯ ಉಂಟಾಗುವ ಸಾಧ್ಯತೆ ಇರುತ್ತದೆ.
ಚಂದ್ರ, ರಾಹು, ಶುಕ್ರ, ರಾಹು ಸಂಬಂಧವುಂಟಾದರೆ ಮೇಹರೋಗ ಶೀತ ವಿಷಮ ಜಾಡ್ಯವೆಂತಲೂ, ರವಿ, ರಾಹು ಸಂಬಂಧ ಉಂಟಾದರೆ ಸನ್ನಿಪಾತ ಜ್ವರ ಅಥವಾ ಪಿತ್ತ ಸನ್ನಿಯೆಂತಲೂ. ಶನಿ - ರಾಹು ಸಂಬಂಧ ಇದ್ದರೆ ವಾತ ಜ್ವರ ವಾತ ವಿಷಮಜಾಡ್ಯ ಅಥವಾ ವಾತ ಸನಿಯಂತಲೂ ರವಿ ಕುಜರ ಸಂಬಂಧ ಇದ್ದರೆ ಶೀತೋಷ್ಣ ವೈಪರೀತ್ಯ ಜ್ವರ ಅಥವಾ ಕ್ಷ ಯ ರೋಗ ಎಂತಲೂ ತಿಳಿಯಬಹುದು.
*ಹರೇ ಕಾರ್ಪರೇಷ ಕೃಪಾ*
ಈಲೇಖನವನ್ನು ಹಿಂದೆ ಒಂದು ಬಾರಿ ಹಾಕಿದ್ದರು ಕೆಲವರು ಕೆಳಿದ್ದಕ್ಕಾಗಿ ಮತ್ತೋಮ್ಮೆ ಹಾಕಲಾಗಿದೆ
collection by whatsapp

"ಜಪ" ದ, ಚಿಂತನೆ.

ಹರೇಶ್ರೀನಿವಾಸ
  "ಜಪ" ದ, ಚಿಂತನೆ.
"ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ  ಬಂದಿದೆ ಎಂದರೆ ತಪ್ಪಾಗಲಾರದು.
"ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ
"ಜ" ಕಾರೋ ಜನ್ಮ ವಿಚ್ಚೇದನ
"ಪ" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll
"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.
"ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.
"ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ:
🔹ವಾಚಕ
🔹ಉಪಾಂಶು
🔹ಮಾನಸೀ ಜಪ.
ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.
ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ  ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.
ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.
ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.
ಜಪದಲ್ಲಿ ವಿಧಗಳಿವೆ.
🔶ನಿತ್ಯ ಜಪ
🔶ವೈಯಕ್ತಿಕ ಜಪ
🔶ಪ್ರಾಯಶ್ಚಿತ್ತ ಜಪ
🔶ಅಚಲ ಜಪ
🔶ಜಲ ಜಪ
🔶ಅಖಂಡ ಜಪ
🔶ಪ್ರದಕ್ಷಿಣ ಜಪ
🔶ಲಿಖಿತ ಜಪ
🔶ಕಾಮ್ಯ ಜಪ
ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ       ಪಠಿಸಲಾಗುತ್ತದೆ. ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.
ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸ ಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿ ಕೊಳ್ಳ ಬೇಕು.
ಅಸಂಖ್ಯಾ ಮಸುರಂ ಯಸ್ಮಾತ್l
ತಸ್ಮಾದತೆ ಗಣೀಯತೆ ದೈವಂll
ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.
ಪ್ರತಿ ನಿತ್ಯವೂ ಜಪ ಮಾಡುವುದರಿಂದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ. ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಭಗವಂತನ ಕಡೆಗೆ ವಂತೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ  ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಗುರೋರಾಘವೇಂದ್ರ