ಮಂಗಳವಾರ, ನವೆಂಬರ್ 28, 2017

ನಿಮಗೆ ಮನೆಮದ್ದನ್ನು ಹೇಳ್ತಿವಿ ಬನ್ನಿ

 ಒಣ ತುಟಿಗಳ ಸಮಸ್ಯೆ :
ಒಣ ತುಟಿಗಳ ಸಮಸ್ಯೆ ನಾವುಗಳು ಕೇಳಿ ಬರುವಂತಹ ಸಾಮಾನ್ಯ ಸಮಸ್ಯೆ ಅದರಲ್ಲೂ ಈ ಚಳಿಗಾಲದಲ್ಲಿ ಇದು ಸರ್ವೇ ಸಾಮಾನ್ಯ .
ಈ ಒಣ ತುಟಿಗಳ ಸಮಸ್ಯೆಗೆ ಮೂಲ ಕಾರಣ:
೧.ವಾತಾವರಣ
೨.ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇಲ್ಲದೆ ಇರುವುದು .
೩.ಸೂರ್ಯನ ಕಿರಣಗಳು
೪.ಸಕ್ಕರೆ ಕಾಯಿಲೆ
೫. ಕಬ್ಬಿಣಂಶದ ಕೊರತೆ
ಒಣ ತುಟಿಗಳ ಬಗ್ಗೆ ಗಮನ ಕೊಡದೆ ಹೋದರೆ ತುಟಿಗಳು ಹೊಡೆದು ರಕ್ತ ಬಂದು ಅದು ಇನ್ನೊಂದು ಸಮಸ್ಯೆಗೆ ಕಾರಣ ವಾಗುತ್ತದೆ.
ಈ ಒಣ ತುಟಿಗಳ ಸಮಸ್ಯೆ ಯಿಂದ ಹೊರಬರಲು ನಾವು ನಿಮಗೆ ಮನೆಮದ್ದನ್ನು ಹೇಳ್ತಿವಿ ಬನ್ನಿ
೧ಸಕ್ಕರೆ ಮತ್ತು ಜೇನು ತುಪ್ಪ :
ಒಂದು ಬಟ್ಟಲಿನಲ್ಲಿ 2 ಚಮಚ ಸಕ್ಕರೆ ಮತ್ತು 1 ಚಮಚ ಜೇನು ತುಪ್ಪ ಸೇರಿಸಿ ನಿಮ್ಮ ತುಟ್ಟಿಗಳ ಮೇಲೆ ಹಾಕಿ ಸ್ವಲ್ಪ ಹೊತ್ತು ಬಿಡಿ ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ ,ಸಕ್ಕರೆಯಲ್ಲಿರುವ ಅಂಶ ಒಣ ತುಟಿಗಳನ್ನು ಸರಿಪಡಿಸುವುದರ ಜೊತೆ ಸ್ವಾಭಾವಿಕ ವಾಗಿ ನಿಮ್ಮ ತುಟಿಗಳನ್ನು ಮೃದು ವಾಗಿಸುತ್ತದೆ .

೨.ಹಾಲಿನ ಕೆನೆ :
ಸ್ವಲ್ಪ ಹಾಲಿನ ಕೆನೆ ತೆಗೆದುಕೊಂಡು ನಿಮ್ಮ ತುಟಿಯ ಸುತ್ತ ದಿನಕ್ಕೆ 2 ರಿಂದ 3 ಸಲ ಇರಿಸಿಕೊಳ್ಳಿ ಸ್ವಲ್ಪ ಸಮಯದ ನಂತರ ಒಂದು ಹತ್ತಿ ಬಟ್ಟೆಯನ್ನು ಬೆಚ್ಚನೆಯ ನೀರಿನಲ್ಲಿ ಅದ್ದಿ ನಿಮ್ಮ ತುಟಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು .

೩.ಸೌತೆಕಾಯಿ:
ಸೌತೆಕಾಯಿಯನ್ನು ಕತ್ತರಿಸಿ ದಿನಕ್ಕೆ 2 ರಿಂದ 3 ಸಲ ನಿಮ್ಮ ತುಟಿಗಳನ್ನು ಮೃದುವಾಗಿ ಉಜ್ಜಿಕೊಳ್ಳಬೇಕು,ಸೌತೆಕಾಯಿಯಲ್ಲಿರುವ ನೀರಿನ ಅಂಶ ಒಣ ತುಟಿಗಳ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ .
೪.ನೀರು:

ಈ ಒಣ ತುಟಿಗಳ ಸಮಸ್ಯೆಗೆ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಇರದಿರುವುದು ಒಂದು ಕಾರಣ,ಅದಕ್ಕೆ ಆದಷ್ಟು ಜಾಸ್ತಿ ಜಾಸ್ತಿ ನೀರು ಕುಡಿಯಿರಿ ,ನೀರು ಒಣ ತುಟಿಗಳನ್ನು ಮಾಯವಾಗುವಂತೆ ಮಾಡುವುದರ ಜೊತೆ ನಿಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳನ್ನೂ ಹೊರ ಹಾಕುತ್ತದೆ .

**ಹುರುಳಿ**
ಮೊದಲು ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಕರಗಿಸಿ, ಬಳಿಕ ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗದ೦ತೆ ತಡೆಗಟ್ಟಲು ಹಾಗೂ ಈಗಾಗಲೇ ಉ೦ಟಾಗಿರಬಹುದಾದ ಹರಳುಗಳನ್ನು ಹೊರದಬ್ಬಲು ಪ್ರತಿದಿನವೂ ನೀವು ಮೂತ್ರಪಿ೦ಡಾಕಾರದ ಹುರುಳಿಯನ್ನು ಸೇವಿಸತಕ್ಕದ್ದು. ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ತೊಳೆದು ಹೊರದೂಡಲು ಲಭ್ಯವಿರುವ ಅತ್ಯುತ್ತಮವಾದ ಮನೆಮದ್ದುಗಳ ಪೈಕಿ ಒ೦ದಾಗಿದೆ
ಈ ಕೆಳಗಿನ ಕೆಲ ಸಲಹೆಗಳು ಕೋಪವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ.
1. ಯೋಚನೆ: ತುಂಬಾ ಕೋಪ ಬಂದರೆ ಕೋಪಕ್ಕೆ ಕಾರಣವಾದ ವಿಷಯವನ್ನು ಯೋಚಿಸಬಾರದು. ಅದರ ಬಗ್ಗೆ ಯೋಚಿಸಿದಷ್ಟು ಕೋಪ ಹೆಚ್ಚಾಗುವುದು ಅಲ್ಲದೆ ಕಡಿಮೆಯಾಗುವುದಿಲ್ಲ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಕೋಪ ಸ್ವಲ್ಪ ತಣಿದ ಮೇಲೆ ನಂತರ ಯೋಚಿಸಿ ನಿಮ್ಮ ನಿರ್ಧಾರ, ಇಷ್ಟ-ಕಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು.
2. ಉಸಿರಾಟ: ತುಂಬಾ ಕೋಪ ಬಂದು ಅದನ್ನು ನಿಯಂತ್ರಿಸಲು ಸಾಧ್ಯನೆ ಇಲ್ಲ ಎಂದು ಅನಿಸಿದರೆ ಈ ರೀತಿ ಮಾಡಿ. ಈ ಸಲಹೆ ನಿಮಗೆ ಸಿಲ್ಲಿ ಅನಿಸಿದರೂ ಕೋಪ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಎಲ್ಲಾ ಯೋಚನೆ ಬಿಟ್ಟು ನಿಮ್ಮ ಉಸಿರಾಟದ ಕಡೆ ಗಮನ ಕೊಡಿ. ಈ ರೀತಿ ಎರಡು ನಿಮಿಷ ಮಾಡಿದರೆ ಸಾಕು ಕೋಪ ತನ್ನಿಂದ ತಾನೆ ಕಡಿಮೆಯಾಗುತ್ತದೆ.
3. ನಿರ್ಧಾರ: ಕೋಪ ತಣ್ಣಗಾದ ಮೇಲೆ ಸರಿ-ತಪ್ಪುಗಳ ಬಗ್ಗೆ ಯೊಚಿಸಿ. ಅಗ ತಪ್ಪು ಅನಿಸಿದ್ದನ್ನು ಹೇಳಿಬಿಡಿ. ಸಾಕಷ್ಟು ಬಾರಿ ನಮ್ಮ ತಪ್ಪು ನಮಗೆ ಗೊತ್ತಾಗುವುದಿಲ್ಲ.
4. ಕ್ಷಮೆ: ಒಂದು ವೇಳೆ ನಿಮ್ಮ ಕಡೆಯಿಂದ ತಪ್ಪು ಇದೆ ಎಂದು ಮನವರಿಕೆಯಾದರೆ ಕ್ಷಮೆ ಕೇಳಲು ಹಿಂಜರಿಕೆ ಬೇಡ. ಈ ರೀತಿಯ ವ್ಯಕ್ತಿತ್ವ ಬೆಳೆಸಿಕೊಂಡರೆ ನಿಮಗೆ ಲಾಭ ಹೊರತು ನಷ್ಟವೇನು ಉಂಟಾಗುವುದಿಲ್ಲ.
ಹೊಕ್ಕಳಿಗೆ ತೆಂಗಿನೆಣ್ಣೆ ಬಿಟ್ಟರೆ ಅನೇಕ ಆರೋಗ್ಯ ಸಮಸ್ಯೆಗಳು ಮಾಯವಾಗುವುದು
ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಆಹಾರ ಪದಾರ್ಥಗಳಿಗೆ ಉತ್ತಮ ರುಚಿಯನ್ನು ನೀಡುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ, ಪೌಷ್ಠಿಕಾಂಶ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ.
ಈ ಎಣ್ಣೆಯು ಚರ್ಮದ ಆರೋಗ್ಯ ಹಾಗೂ ಅಂಗವರ್ಧನಕ್ಕೆ ಬಹು ಉಪಕಾರಿ. ಇದರ ಬಳಕೆಯಿಂದ ತ್ವಚೆಯು ಆಕರ್ಷಕ ಹೊಳಪನ್ನು ಪಡೆದುಕೊಳ್ಳಬಹುದು. ಅಲ್ಲದೆ ಸೊಂಟದ ಭಾಗದಲ್ಲಿ ಮತ್ತು ಹೊಕ್ಕಳು ಭಾಗಕ್ಕೆ ಅನ್ವಯಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ಸೊಂಟದ ಭಾಗದಲ್ಲಿ ಶೇಖರಣೆಗೊಂಡಿರುವ ಕೊಬ್ಬುಗಳು ಬಹುಬೇಗ ಕರಗುವುದು ಎಂದು ಹೇಳಲಾಗುತ್ತದೆ. ಅಪರೂಪದ ವಿಶೇಷತೆಯನ್ನು ಒಳಗೊಂಡಿರುವ ತೆಂಗಿನೆಣ್ಣೆಯ ಬಳಕೆಯಿಂದ ಇನ್ನೂ ಯಾವೆಲ್ಲಾ ಉಪಯೋಗವನ್ನು ಪಡೆದುಕೊಳ್ಳಬಹುದು? ಎನ್ನುವದರ ವಿವರಣೆ ಇಲ್ಲಿದೆ ನೋಡಿ...
ಫಲವತ್ತತೆಯನ್ನು ಸುಧಾರಿಸುವುದು
ಹೊಕ್ಕಳಿಗೆ ತೆಂಗಿನೆಣ್ಣೆ ಹಾಕುವುದರಿಂದ ಫಲವಂತಿಕೆಯ ಪ್ರಮಾಣ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಇದರಲ್ಲಿ ಟ್ರೈಗ್ಲಿಸರೈಡ್ ಸಮೃದ್ಧವಾಗಿರುವುದರಿಂದ ಫಲವಂತಿಕೆಯ ಸುಧಾರಣೆಗೆ ಸಹಾಯವಾಗುವುದು.
  
ಶೀತವನ್ನು ತಡೆಗಟ್ಟುತ್ತದೆ
ತೆಂಗಿನೆಣ್ಣೆ ತಂಪಿನ ಗುಣವನ್ನು ಹೊಂದಿದೆ. ಆದರೂ ದೇಹದ ಶೀತ ಮತ್ತು ಅನಾರೋಗ್ಯವನ್ನು ತಡೆಗಟ್ಟುತ್ತದೆ. ದೇಹದ ಶಕ್ತಿ ಹೆಚ್ಚಿಸಲು ಹಾಗೂ ಉಷ್ಣವನ್ನು ತಗ್ಗಿಸಲು ಬಹು ಸಹಕಾರಿ ಎಂದು ಹೇಳಲಾಗುವುದು.

ಹೊಟ್ಟೆ ಸೆಳೆತ ಹಾಗೂ ಮುಟ್ಟಿನ ನೋವು ನಿವಾರಕ
ಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಬಿಡುವುದರಿಂದ ಹೊಟ್ಟೆ ನೋವು ಹಾಗೂ ಮುಟ್ಟಿನಿಂದ ಬಳಲುವ ಹೊಟ್ಟೆ ನೋವನ್ನು ನಿವಾರಿಸಬಹುದು. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಉದರದ ನೋವು ನಿವಾರಿಸಲು ಸಹಾಯಮಾಡುವುದು. ಅಲ್ಲದೆಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಹಾಕುವುದರಿಂದ ಉತ್ತಮ ದೃಷ್ಟಿಯನ್ನು ಪಡೆದುಕೊಳ್ಳಬಹುದು.
  
ಹೊಕ್ಕಳಿಗೆ ಎಣ್ಣೆಯನ್ನು ಹಾಕುವ ವಿಧಾನ
ಮೊದಲು ಒಂದು ಹತ್ತಿ ಉಂಡೆಯನ್ನು ತಯಾರಿಸಿಕೊಳ್ಳಿ.
ನಂತರ ಆ ಉಂಡೆಯನ್ನು ತೆಂಗಿನೆಣ್ಣೆಯಲ್ಲಿ ಅದ್ದಿ.
ಎಣ್ಣೆಯಿಂದ ಕೂಡಿದ ಹತ್ತಿ ಉಂಡೆಯನ್ನು ಹೊಕ್ಕಳಿನ ಮೇಲೆ ಇರಿಸಿ.
ನಂತರ 15 ನಿಮಿಷಗಳಕಾಲ ಆ ವಲಯವನ್ನು ಮಸಾಜ್ ಮಾಡಿ.
  
ಏಕೆ ಪ್ರಯೋಜನಕಾರಿ?
ಹೊಕ್ಕಳು ಬಳ್ಳಿಯ ಸಹಾಯದಿಂದಲೇ ತಾಯಿ ಹೊಟ್ಟೆಯಲ್ಲಿರುವ ಮಗು ಆಹಾರವನ್ನು ಪಡೆದುಕೊಳ್ಳುತ್ತದೆ. ಹೊಕ್ಕಳು ಬಳ್ಳಿಯಿಂದ ಸಾವಿರಾರು ನರಗಳ ಸಂಪರ್ಕ ಇರುತ್ತದೆ. ಈ ಸ್ಥಳದಲ್ಲಿ ತೆಂಗಿನೆಣ್ಣೆ ಹಾಕುವುದರಿಂದ ಆಂತರಿಕ ಅಂಗಗಳು ಬಹಳ ಆರೋಗ್ಯಕರವಾಗಿರಲು ಸಹಾಯವಾಗುವುದು.. ಕೇವಲ ತೆಂಗಿನ ಎಣ್ಣೆ ಮಾತ್ರವಲ್ಲ, ಇನ್ನಷ್ಟು ಇತರ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು,, ಅವು ಯಾವುದು ಎಂಬುದನ್ನು ಮುಂದೆ ಓದಿ...
  
ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ
ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ, ಒಂದೆರಡು ಚಮಚ ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳಿ. ಇದು ಕೊಂಚ ವಿಚಿತ್ರವಾಗಿ ಕಂಡರೂ ಈ ಪ್ರಾಚೀನ ವಿಧಾನ ನಿಜವಾಗಿಯೂ ಕೆಲಸ ಮಾಡುತ್ತದೆ.
  
ಫ್ಲೂ ಜ್ವರ ಮತ್ತು ಶೀತವಾಗಿದೆಯೇ?
ಫ್ಲೂ ಜ್ವರ ಮತ್ತು ಶೀತವಾಗಿದೆಯೇ? ಒಂದು ಚಿಕ್ಕ ತುಂಡು ಬಟ್ಟೆಯನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಿ ರಾತ್ರಿ ಮಲಗುವಾಗ ಹೊಕ್ಕಳ ಮೇಲಿಸಿರಿ. ಬೆಳಿಗ್ಗೆದ್ದಾಗ ಜ್ವರ ಮತ್ತು ಶೀತ ಕಡಿಮೆಯಾಗಿರುತ್ತದೆ.
  
ಮುಟ್ಟಿನ ದಿನಗಳಲ್ಲಿ
ಮಾಸಿಕ ದಿನಗಳ ನೋವಿನಿಂದ ಬಳಲುತ್ತಿರುವ ಮಹಿಳೆಯರು ಒಂದು ಚಿಕ್ಕ ತುಂಡು ಬಟ್ಟೆಯನ್ನು ಕೊಂಚ ಬ್ರಾಂದಿಯಲ್ಲಿ ತೋಯಿಸಿ ರಾತ್ರಿ ಮಲಗುವ ಮುನ್ನ ಹೊಕ್ಕುಳ ಮೇಲಿಟ್ಟು ಮಲಗಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ
  
ಕೆಲವು ಹನಿ ಬೇವಿನ ಎಣ್ಣೆ
ಕೆಲವು ಹನಿ ಬೇವಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡುವ ಮೂಲಕ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುತ್ತವೆ. ಅಲ್ಲದೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಮಸಾಜ್ ಮಾಡುವ ಮೂಲಕ ಮುಖದ ಕಾಂತಿ ಹೆಚ್ಚುತ್ತದೆ.
  
ಕೊಬ್ಬರಿ ಎಣ್ಣೆ
ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಸುತ್ತಲಿನ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಬಹುದು. ಇನ್ನು ನಿಮಗೆ ನಿಮ್ಮ ತ್ವಚೆ ಸೌಮ್ಯ ಮತ್ತು ಆರೋಗ್ಯಕರವಾಗಿರಬೇಕೆಂಬ ಬಯಕೆಯೇ? ಹಾಗಾದರೆ ಒಂದು ಹನಿ ಹಸುವಿನ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿ.
ಸುಖ ಜೀವನಕ್ಕೆ ಕಾಮತ್ ರ ಸಪ್ತ ಸೂತ್ರಗಳು :
೧. ಈಗಿನ ಕಾಲ ಪರಿಸ್ಥಿತಿಯಲ್ಲಿ ಹಣ ಬಹಳ ಮುಖ್ಯ. ಆದರೆ ಹಣವನ್ನೇ ಜೀವನದ ಗುರಿ ಮಾಡಿಕೊಳ್ಳಬೇಡಿ. ಕೋಟ್ಯಾಧೀಶರಾಗುವುದು ಬೇಡ. ಸಾಲ ಸೋಲ ಗಳಿಲ್ಲದ ಕೆಲವು ಲಕ್ಷಗಳಾದರೂ ನಿಮ್ಮಬಳಿ ಇರಲಿ. ಯಾವುದನ್ನೂ ಕಾನೂನು ಕಾಯ್ದೆಯ ಚೌಕಟ್ಟಿನೊಳಗೆ ಸಂಪಾದಿಸಿರಿ.
೨. ಬಾಡಿಗೆ ಮನೆ ಎಂದಿಗೂ ನಿಮಗೆ ಖುಷಿತರಲಾರದು. ಅಲ್ಪ ತೃಪ್ತರಾಗಿ ಚಿಕ್ಕದಾದರೂ ಚೊಕ್ಕದಾದ ನಿಮ್ಮದೇ ಒಂದು ಸಣ್ಣ ಸ್ವಂತ ಮನೆ ಮಾಡಿಕೊಳ್ಳಿರಿ. ಸಾಲಮಾಡಿ ಮನೆ ಮಾಡಿದ್ದರೆ ಆದಷ್ಟು ಶೀಫ್ರ ಸಾಲತೀರಿಸಿ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.
೩. ಎಲ್ಲಕ್ಕಿಂತಾ ಅತಿಮುಖ್ಯ ನಿಮ್ಮ ಆರೋಗ್ಯ. 
ನಿಮ್ಮ ಆಹಾರ -  ನಿಮ್ಮ ಚಿಂತನೆ ನಿಮ್ಮ ಆರೋಗ್ಯ ನಿರ್ಧರಿಸುತ್ತದೆ. ಆದುದರಿಂದ ಹಿತ ಮಿತ ಆರೋಗ್ಯಯುಕ್ತ  ಸಾತ್ವಿಕ ಆಹಾರ , ವ್ಯಾಯಾಮ , ಧ್ಯಾನ ಹಾಗೂ ಮನಸ್ಸಿಗೆ ಸಕಾರಾತ್ಮಕ ಭಾವನೆ ಉಂಟುಮಾಡುವ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿರಿ. ಅದರ ಜತೆಗೆ ಮೆಡಿಕಲ್ ಪಾಲಿಸಿ ಮಾಡುವುದನ್ನು ಮರೆಯದಿರಿ
 ಗ೦ಟಲಿನ ಕಫ ಹೊರ ಹಾಕಲು  ಪರಿಣಾಮ  ಕಾರಿ ವಿದಾನ
ನಮಗೆ ಶೀತ ಆದಾಗ ಅಥವಾ ನಮ್ಮ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಸೋಂಕು ಉಂಟಾದಾಗ, ಕಫ ಉಂಟಾಗುವುದು ಸಾಮಾನ್ಯ. ಇದು ಜೀವಕ್ಕೆ ಕುತ್ತು ತರುವಂತದಲ್ಲ ಎಂದರೂ ಇದನ್ನು ಸರಿಯಾದ ಸಮಯಕ್ಕೆ ತೊಲಗಿಸದಿದ್ದರೆ ಅದು ನಿಮ್ಮ ಶ್ವಾಸಕೋಶದ ನಳಿಕೆಗಳಿಗೆ ತಡೆಯೊಡ್ಡಿ, ಉಸಿರಾಟದ ನಾಳದ ಮೇಲ್ಭಾಗದಲ್ಲಿ ಎರಡನೆಯ ಸೋಂಕು ಹುಟ್ಟು ಹಾಕಬಹದು.
ಇಂದು ಈ ಲೇಖನದಲ್ಲಿ ನಾನು ನಿಮಗೆ ಗಂಟಲಿನ ಕಫವನ್ನು ಹೊರಹಾಕಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳು ಯಾವುಗಳೆಂದು ತಿಳಿಸುತ್ತೇನೆ ಓದಿರಿ.
1. ಉಪ್ಪು ನೀರು
ಒಂದು ಲೋಟದಷ್ಟು ಉಗುರುಬೆಚ್ಚಗಿನ ನೀರಿಗೆ ಕಾಲು ಚಮಚದಷ್ಟು ಉಪ್ಪು ಬೆರೆಸಿ. ಈ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬೇಕು. ಉಪ್ಪಿಗೆ ಬ್ಯಾಕ್ಟೀರಿಯಾಗಳನ್ನೂ ಕೊಳ್ಳುವ ಸಾಮರ್ಥ್ಯ ಇದ್ದು ಇದು ಸೋಂಕನ್ನು ತಡೆಗಟ್ಟಿ ಕಫ ಹೆಚ್ಚಾಗುವುದನ್ನು ತಡೆಯುತ್ತದೆ.
2. ಶುಂಠಿ
ಶುಂಠಿಯು ಒಂದು ನೈಸರ್ಗಿಕ ಆಂಟಿಹಿಸ್ಟಾಮೈನ್ ಮತ್ತು ಮೂಗುಕಟ್ಟುವುದರ ನಿವಾರಕ. ಅಲ್ಲದೆ ಇದರಲ್ಲಿ ಶಗೋಲ್ ಎಂಬ ಪದಾರ್ಥವಿದ್ದು ಇದು ಶೀತ ಉಂಟುಮಾಡುವ ವೈರಾಣುಗಳೊಂದಿಗೆ ಹೋರಾಡುತ್ತದೆ. ಶುಂಠಿಯ ವೈರಾಣು-ವಿರೋಧಿ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಗಳೊಂದಿಗೆ, ಇದು ಉಸಿರಾಟವನ್ನು ಸುಲಭ ಕೂಡ ಮಾಡುತ್ತದೆ.
ಒಂದು ಶುಂಠಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಚಮಚದಷ್ಟು ಶುಂಠಿಯ ತುಂಡುಗಳನ್ನು ಒಂದು ಲೋಟದಷ್ಟು ಬಿಸಿ ಬಿಸಿ ನೀರಿನಲ್ಲಿ ಹಾಕಿ. ಶುಂಠಿ ನೀರಿನೊಂದಿಗೆ ಬೆರೆಯಲು ಸ್ವಲ್ಪ ಹೊತ್ತು ಬಿಟ್ಟು, ನಂತರ ಅದಕ್ಕೆ ಎರಡು ಚಮಚದಷ್ಟು ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಿರಿ. ಪರ್ಯಾಯವಾಗಿ ನೀವು ಕೆಲವಷ್ಟು ಶುಂಠಿಯ ತುಂಡುಗಳನ್ನು ಹಾಗೆ ಬಾಯಲ್ಲಿ ಅಗಿಯಬಹುದು.
3. ಮೆಣಸಿನ ಪುಡಿ
ಮೆಣಸು ನಿಮ್ಮ ಗಂಟಲಿನಲ್ಲಿರುವ ಕಫವನ್ನು ಕಡಿಮೆ ಮಾಡಿ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಕೆಮ್ಮಿನಿಂದ ಉಂಟಾದ ಎದೆ ನೋವು ಮತ್ತು ಗಂಟಲು ಕೆರೆತವನ್ನೂ ಕಡಿಮೆ ಮಾಡುತ್ತದೆ.
ಮೊದಲಿಗೆ ಕಾಲು ಚಮಚದಷ್ಟು ಮೆಣಸಿನ ಪುಡಿ, ಕಾಲು ಚಮಚದಷ್ಟು ತುರಿದ ಶುಂಠಿ, ಒಂದು ಚಮಚದಷ್ಟು ಜೇನುತುಪ್ಪ – ಈ ಮೂರರ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಎರಡು ಚಮಚದಷ್ಟು ನೀರನ್ನು ಬೆರೆಸಿ, ಕಲಿಸಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಕಫ ಕಡಿಮೆ ಆಗುತ್ತದೆ.
4. ನಿಂಬೆಹಣ್ಣು
ಕಫವನ್ನು ಮತ್ತು ಲೋಳೆಯನ್ನು ಹೋಗಲಾಡಿಸುವುದರಲ್ಲಿ ನಿಂಬೆಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಕೇವಲ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇರುವದಷ್ಟೇ ಅಲ್ಲದೆ, ಅದರಲ್ಲಿರುವ ವಿಟಮಿನ್ C ನಿಮ್ಮ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
ಮೊದಲಿಗೆ ಎರಡು ಚಮಚದಷ್ಟು ನಿಂಬೆರಸವನ್ನು ಒಂದು ಚಮಚದಷ್ಟು ಜೇನುತುಪ್ಪ ಮತ್ತು ಒಂದು ಲೋಟದಷ್ಟು ಕುದಿಸಿದ ನೀರಿಗೆ ಬೆರೆಸಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಇನ್ನೊಂದು ವಿಧಾನ ಎಂದರೆ ನಿಂಬೆಹಣ್ಣನು ಕೇವಲ ಎರಡು ಭಾಗ ಮಾಡಿ. ಒಂದು ತುಂಡಿನ ಮೇಲೆ ಮೆಣಸಿನ ಪುಡಿ ಮತ್ತು ಉಪ್ಪನ್ನು ಉದುರಿಸಿ, ಅದನ್ನು ಚೀಪಿ.
5. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ-ವಿರೋಧಿ, ವೈರಾಣು-ವಿರೋಧಿ ಮತ್ತು ಉರಿತ-ವಿರೋಧಿ ಗುಣಗಳಿದ್ದು ಇದು ಉಸಿರಾಟದ ನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಕಫವನ್ನು ನಿರ್ಮೂಲನೆ ಮಾಡಲು ಬೆಳ್ಳುಳ್ಳಿ ಚೆನ್ನಾಗಿ ಜೇಜ್ಜಿಕೊಳ್ಳಿ. ಈ ಜೇಜ್ಜಿದ ಬೆಳ್ಳುಳ್ಳಿಯ ಎಸಳುಗಳನ್ನು ಬೆಳಗ್ಗೆ ಎದ್ದೊಡನೆ ಮತ್ತು ಮಲಗುವ ಮುನ್ನ ನೀರಿನೊಂದಿಗೆ ಸೇವಿಸಿ.
ನಿಮ್ಮ ಮೂಗಿನಲ್ಲಿ ಕಟ್ಟಿಕೊಂಡಿರುವ ಲೋಳೆಯನ್ನು ಹೋಗಲಾಡಿಸಬೇಕೆಂದರೆ ಬೆಳ್ಳುಳ್ಳಿಯನ್ನು ಹಿಂಡಿ ಅದರ ರಸ ತೆಗಿಯಿರಿ. ನಂತರ ಈ ಬೆಳ್ಳುಳ್ಳಿ ರಸವನ್ನು ಒಂದು ಲೋಟದಷ್ಟು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣದ ಕೆಲವು ಹನಿಗಳನ್ನು ನಿಮ್ಮ ಮೂಗಿನೊಳಗೆ ಬಿಟ್ಟುಕೊಳ್ಳಿ. ಇದು ಕಟ್ಟಿಕೊಂಡಿರುವ ಲೋಳೆಯನ್ನು ನೀರು ಮಾಡಿ ಅದು ಆಚೆ ಬರುವಂತೆ ಮಾಡುತ್ತದೆ

 ಹಲವರು ತಿಳಿದಿರುವಂತೆ ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು ತಪ್ಪು ಅಭಿಪ್ರಾಯ. ಆದರೆ ಅತಿಯಾದ ಕೊಬ್ಬಿನ ಅಂಶವಿರುವ ಆಹಾರ ಸೇವನೆಯಿಂದ ಸಕ್ಕರೆ ಕಾಯಿಲೆ ಬೇಗನೆ ಬರಬಹುದು. ಯಾವುದೇ ವ್ಯಕ್ತಿಯ ಆಹಾರದಲ್ಲಿ ಅತಿಯಾದ ಕೊಬ್ಬಿನ ಅಂಶ ಮತ್ತು ಸಕ್ಕರೆಯ ಅಂಶವೂ ಅಧಿಕವಾಗಿದ್ದರೆ, ಹಾಗೂ ಬಹಳ ವರ್ಷಗಳ ಕಾಲ ಅದೇ ಪದ್ದತಿಯನ್ನು ಅನುಸರಿಸುತ್ತಿದ್ದರೆ ೩೦ ವರ್ಷ ವಯಸ್ಸು ಪ್ರಾರಂಭವಾಗುತ್ತಿಂದಂತೆಯೇ ಸಕ್ಕರೆ ಕಾಯಿಲೆಯ ರೋಗ ಲಕ್ಷಣ ಕಂಡುಬರುತ್ತದೆ.
ಮೂಲವ್ಯಾಧಿ ಎಂಬುದು ಗುದದ್ವಾರದಲ್ಲಿರುವ ರಕ್ತನಾಳಗಳ ಒತ್ತಡ ಉಂಟಾಗಿ ಅವು ಬಾತು ನೋವು/ ಸ್ರಾವವನ್ನು ಉಂಟುಮಾಡುವ ರೋಗ. ಇದರ ಮುಖ್ಯ ಕಾರಣ ಅಗ್ನಿಮಾಂದ್ಯ, ಅಜೀರ್ಣ, ಮಲಬದ್ಧತೆ, ಆಹಾರದ ಅಸಮ್ಯಕ, ಅನಿಯ ಮಿತ ಆಹಾರ ಸೇವನೆ, ಬೊಜ್ಜು, ಹೆಚ್ಚು ಕುಳಿತು ಕೆಲಸ (ಅವ್ಯಾಯಮ). ಮಲಬದ್ದತೆ ಯಿಂದ ಸಮಸ್ಯೆ ಶುರುವಾಗಿ ನೋವು, ಮಲ ವಿಸರ್ಜನೆ ವೇಳೆ ರಕ್ತ ಸ್ರಾವ ಕಾಣಿಸಿಕೊಳ್ಳು­ವುದು. ಆರ್ಯುವೇದದಲ್ಲಿ ಇದಕ್ಕೆ ಔಷಧಿ, ಆಹಾರ, ವಿಹಾರಗಳ ಮೂಲಕ ಸಂಪೂರ್ಣ ಪರಿಹಾರ ಸೂಚಿಸಲಾಗಿದೆ.
ಆಯುರ್‌ ಔಷಧ
ಮೂಲವ್ಯಾಧಿ ಮೊಳಕೆಗಳು ಗಾತ್ರದಲ್ಲಿ ದೊಡ್ಡದಾಗಿದ್ದರೆ ಕ್ಷಾರ ಸೂತ್ರದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ
ತ್ರಿಫಲ ಚೂರ್ಣ, ಅವಿಪತ್ತಿಕರ ಚೂರ್ಣ ಉತ್ತಮ
ಹರಳೆಣ್ಣೆಯನ್ನು ಬಿಸಿ ಹಾಲಿನ ಜೊತೆಗೆ ಸೇವಿಸಿದರೆ ಮೂಲವ್ಯಾಧಿಯನ್ನು ದೂರವಿಡಬಹುದು
ಅಮೃತ ಬಳ್ಳಿಯ ಕಷಾಯ ಉತ್ತಮ ಪೇಯ
ಆಹಾರ ಹೇಗಿರಬೇಕು?
ಪಥ್ಯ: ಹೆಚ್ಚು ನೀರನ್ನು ಸೇವಿಸುವುದು, ಮಜ್ಜಿಗೆ, ಬೆಣ್ಣೆ, ಅಂಜೂರ ಹಣ್ಣು, ಪಪ್ಪಾಯ, ನೇರಳೆ ಹಣ್ಣು, ಹೆಚ್ಚು ನಾರಿನ ಅಂಶ ಇರುವ ಆಹಾರ, ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಹಾಗಲ, ಸೋರೆಕಾಯಿ, ಹೀರೆಕಾಯಿ, ಪಡವಲ, ಮೂಲಂಗಿ, ಕರಿಬೇವು ಹೆಚ್ಚಾಗಿ ಸೇವಿಸಿ.
ಅಪಥ್ಯ: ಮಾಂಸ, ಮೊಟ್ಟೆ, ಮೀನು, ಆಲೂಗಡ್ಡೆ, ಬಟಾಣಿ, ಮೈದಾ ಪದಾರ್ಥ, ಜಂಕ್‌ ಆಹಾರ.
ವಿಹಾರ: ವ್ಯಾಯಾಮ, ಪ್ರಸನ್ನತೆ.
ಮನೆ ಮದ್ದು :
* ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು.
* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.
* ಹಾಲಿನಲ್ಲಿ ಒಣ ಖರ್ಜೂರ / ಉತ್ತುತ್ತಿ ರಾತ್ರಿ ಹೊತ್ತು ನೆನೆಯಿಸಿಟ್ಟು ಬೆಳಿಗ್ಗೆ ತಿನ್ನಬೇಕು ಮತ್ತು ಆ ಹಾಲನ್ನು ಕುಡಿಯಬೇಕು.
* 50 ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.
* ಹೊನಗೊನೆ ಸೊಪ್ಪಿನ ರಸ 20 ಮಿಲಿ, ಮೂಲಂಗಿ ಸೊಪ್ಪಿನ ರಸ 20 ಮಿಲಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಹೊತ್ತು ಎರಡು- ಮೂರು ವಾರ ಕುಡಿಯಬೇಕು.
* ಸುವರ್ಣ ಗೆಡ್ಡೆಯನ್ನು ಹೋಳು ಮಾಡಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು 5 ಗ್ರಾಂನಷ್ಟನ್ನು ತುಪ್ಪ, ಜೇನುತುಪ್ಪ, ಬೆಲ್ಲ ಯಾವುದಾದರೊಂದರಲ್ಲಿ ಬೆರೆಸಿ ತಿನ್ನಬೇಕು.
* ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
* ಅಳಲೆಕಾಯಿ ಪುಡಿಯನ್ನು ಬೆಲ್ಲ ಸೇರಿಸಿ ತಿನ್ನಬೇಕು.
* 25 ಮಿಲಿ ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.
* ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.
* ಸೌತೆಕಾಯಿ ರಸ ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* 20 ಗ್ರಾಂ ಕೊತ್ತಂಬರಿ ಬೀಜ (ಧನಿಯ)ವನ್ನು ಪುಡಿ ಮಾಡಿ 4 ಲೋಟ ನೀರು ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕಿಳಿಸಿ ಶೋಧಿಸಿ ಹಾಲು, ಸಕ್ಕರೆ ಸೇರಿಸಿ ಪ್ರತಿದಿನ ಎರಡು ಹೊತ್ತು ಸೇವಿಸಬೇಕು.
*ಆಗ ತಾನೇ ಕರೆದ ಹಾಲಿಗೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ದಿನವೂ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.
*ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು.
*ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪೌಡರ ದಿನಕ್ಕೆ ಎರಡು ಚಮಚೆ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಿ.
*ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೀರಲ ಹಣ್ಣು ಬಹಳ ಒಳ್ಳೆಯದು.
* ಮೂಲಂಗಿಯನ್ನು ಹೆರೆದು ಮೊಸರಲ್ಲಿ ಕಲಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟರೆ ಬಹಳ ರುಚಿಕರವಾಗಿರುತ್ತದೆ. ಅದು ಮೂಲವ್ಯಾಧಿಗೆ ಬಹಳ ಒಳ್ಳೆಯದು.
*ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ.
*ಎಂಟು ಗ್ಲಾಸು ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.
*ಎರಡು ತೊಲೆಯಷ್ಟು ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು.
*ಪ್ರತಿದಿನ ಬೆಳಗ್ಗೆ ಎರಡೂವರೆ ತೊಲೆಯಷ್ಟು ಮೂಲಂಗಿ ರಸವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು. ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ  ಡೋಣಿ ಸ್ನಾನ (ಟಬ್-ಬಾಥ್), ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗುವಂತೆ ಮಾಡಬೇಕು.
*ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.
*ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.
*ಸುವರ್ಣ ಗೆಡ್ಡೆಯನ್ನು ಸಣ್ಣದಾಗಿ ಕತ್ತರಿಸಿ ಒಣಗಿಸಿ ಪುಡಿಮಾಡಬೇಕು . ಎರಡು ಚಮಚ ಪುಡಿಗೆ ಎರಡು ಚಮಚ ಸಕ್ಕರೆ ಬೆರೆಸಿ ಬೆಳಗ್ಗೆ – ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
*ಬಿಲ್ವ ಪತ್ರೆಯ ರಸವನ್ನು ನಿತ್ಯ ಬೆಳಗ್ಗೆ ೫-೬ ಚಮಚ ಸೇವಿಸಬೇಕು.
*ಚನ್ನಾಗಿ ಹಣ್ಣಾದ ಬಾಳೆಹಣ್ಣಿಗೆ ಏಲಕ್ಕಿಯನ್ನು ಹುದುಗಿಸಿಟ್ಟು ತಿನ್ನಬೇಕು.
*ಎಳೆ ಮೂಲಂಗಿಯನ್ನು ನಿತ್ಯ ಸೇವಿಸಿದರೆ ಒಳ್ಳೆಯದು. ೬ ಚಮಚ ಮೂಲಂಗಿ ರಸವನ್ನು ೬ ಚಮಚ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
*೨ ಚಮಚ ಬಿಳಿ ಎಳ್ಳು , ೨ ಚಮಚ ಕಲ್ಲು ಸಕ್ಕರೆ , ೨ ಚಮಚ ಹಸುವಿನ ಬೆಣ್ಣೆಯನ್ನು ಅರೆದು ನಿತ್ಯ ಬೆಳಗ್ಗೆ ಸೇವಿಸಬೇಕು.
*ರಾತ್ರಿ ೧ ಲೋಟ ನೀರಿಗೆ ೬ ಚಮಚ ಗರಿಕೆಯ ರಸ ಹಾಕಿ ಇಡಬೇಕು. ಮರುದಿನ ಬೆಳಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ರಕ್ತ ಬೀಳುವುದು ನಿಲ್ಲುತ್ತದೆ. ಇದನ್ನು ೧೫ ರಿಂದ ೩೦ ದಿನಗಳ ಕಾಲ ಕುಡಿಯಬೇಕು. ಹೀಗೆ ಮಾಡಿದರೆ ದೇಹ ತಂಪಾಗುತ್ತದೆ.
*ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಶಮನವಾಗುತ್ತದೆ.
*ಎಕ್ಕದ ಎಲೆ ಹಾಗೂ ನುಗ್ಗೆ ಸೊಪ್ಪನ್ನು ಅರೆದು ಮೊಳಕೆಗೆ ಹಚ್ಚಿದರೆ ಗುಣವಾಗುತ್ತದೆ.
*ನುಗ್ಗೆ ಸೊಪ್ಪು ಮತ್ತು ಮೂಲಂಗಿ ಸೊಪ್ಪನ್ನು ಅರೆದು ಹಚ್ಚಿದರೆ ಮೊಳಕೆಯ ನೋವ್ವು ಗುಣವಾಗುತ್ತದೆ.
*೪-೫ ಚಮಚ ಈಸಬ್ಗೋಲನ್ನು (ತಂಪಿನ ಬೀಜ) ಹುಡಿಮಾಡಬೇಕು. ಇದನ್ನು ತಣ್ಣೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ಊಟದ ೧ ಗಂಟೆ ಮೊದಲು ಕುಡಿದರೆ ಮೊಳಕೆ ಯುಳ್ಳ  ಮೂಲವ್ಯಾಧಿ ಹಾಗೂ ರಕ್ತ ಮೂಲವ್ಯಾದಿ ಎರಡೂ ಶಮನವಾಗುತ್ತವೆ.
* ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.
* ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತೆಯನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ತಿನ್ನಬೇಕು.
* ಒಂದು ಈರುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.
* ಮೂಲಂಗಿ ಸೊಪ್ಪಿನ ರಸಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಬಾರಿಯಂತೆ ಎರಡರಿಂದ ಮೂರು ವಾರ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.
* ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು.
* ಹುಣಸೆ ಹಣ್ಣಿನ ಮರದ ಚಿಗುರು ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.
* ತುಳಸಿ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
* ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.
* ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.
* ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
* 4 ಚಮಚ ಕೊತ್ತಂಬರಿಯನ್ನು 4 ಲೋಟ ನೀರು ಹಾಕಿ ಕುದಿಸಿ ಹಾಲು ಮತ್ತು ಸಕ್ಕರೆ ಹಾಕಿ ಟೀ ಬದಲು ಕುಡಿಯುವುದು ಒಳ್ಳೆಯದು. ಆಗ ತಾನೇ ಕರೆದ ಹಾಲಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ಮೂಲವ್ಯಾಧಿ ಗುಣಮುಖವಾಗುವುದು.
* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.
* ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ.
* ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು.
* ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ.
* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.
* ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
* ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.
* ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು ಕೂಡ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.
ಲೇಪನ – ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಲೇಪಿಸಬೇಕು. ತ್ರಿಫಲಾ ಕಷಾಯದಿಂದ ತೊಳೆದುಕೊಳ್ಳಬೇಕು.
ಕ್ಷಾರಸೂತ್ರ – ಔಷಧೀಯ ದ್ರವ್ಯದಲ್ಲಿ ದಾರಗಳನ್ನು ಅದ್ದಿ ತೆಗೆದು ಒಣಗಿಸಿರುತ್ತಾರೆ. ಅದನ್ನು ಕಟ್ಟಿ ನಂತರ ಕತ್ತರಿಸಿ ತೆಗೆಯುತ್ತಾರೆ. ಪರಿಣಿತ ತಜ್ಞ ವೈದ್ಯರ ಬಳಿ ಈ ಚಿಕಿತ್ಸೆ ತೆಗೆದುಕೊಳ್ಳಬೇಕು. ಔಷಧಿ ಚಿಕಿತ್ಸೆಯಿಂದ ಕಡಿಮೆಯಾಗದಿದ್ದಲ್ಲಿ ಕ್ಷಾರಸೂತ್ರ ಚಿಕಿತ್ಸೆ ಉತ್ತಮವಾದುದು.
ಯಾವ ಬಗೆಯ ಆಹಾರ ಒಳ್ಳೆಯದು ?
ಪಥ್ಯ – ಹಳೆಯ ಅಕ್ಕಿಯ ಅನ್ನ, ಹೆಸರು ಬೇಳೆ, ತೊಗರಿಬೇಳೆ ಕಟ್ಟು, ಮಜ್ಜಿಗೆ, ಹಾಲು, ತುಪ್ಪ, ಬೆಣ್ಣೆ ಸೇವಿಸಬಹುದು. ಮೂಲಂಗಿ, ಪಡವಲಕಾಯಿ, ಬಸಳೆ, ಹೊನಗೊನ್ನೆ ಸೊಪ್ಪು, ಜೀರಿಗೆ, ಹಿಂಗು, ಬಾಳೆಹಣ್ಣು ಸೇವನೆ ಒಳ್ಳೆಯದು. ಬಾಳೆಹಣ್ಣನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಬಾಳೆಯ ಹೂವನ್ನು ಅರೆದು ರಸ ತೆಗೆದು ಮಜ್ಜಿಗೆ ಬೆರೆಸಿ ಕುಡಿಯಬೇಕು. ಬಾಳೆದಿಂಡನ್ನು ರಸ ತೆಗೆದು ಕುಡಿಯಬೇಕು.
ನೆಲ್ಲಿಕಾಯಿ ಸಂಡಿಗೆ – ನೆಲ್ಲಿಕಾಯಿ ಸಿಗುವ ಕಾಲದಲ್ಲಿ ಸಂಗ್ರಹಿಸಿಟ್ಟು ಕೊಳ್ಳಬೇಕು. ನೆಲ್ಲಿಕಾಯಿಗಳನ್ನು ಕುಟ್ಟಿ ಅದರ ಬೀಜ ತೆಗೆಯಬೇಕು. ಇದನ್ನು ನೆನೆಸಿದ ಉದ್ದಿನಬೇಳೆಯೊಂದಿಗೆ ತರಿತರಿಯಾಗಿ ರುಬ್ಬಿ ಉಪ್ಪು, ಖಾರ, ಶುಂಠಿ ಬೆರೆಸಿ ಬಟ್ಟೆಯ ಮೇಲೆ ಸಂಡಿಗೆ ಹಾಕಬೇಕು. ಪ್ರತಿದಿನ ಇದನ್ನು ಊಟದೊಂದಿಗೆ ಎಣ್ಣೆಯಲ್ಲಿ ಕರಿಯದೇ ಒಣಸಂಡಿಗೆಯನ್ನೇ ಸೇವಿಸಬೇಕು. ಊಟದಲ್ಲಿ ನಂಚಿಕೊಂಡು ತಿಂದರೆ ಚೆನ್ನಾಗಿರುತ್ತದೆ.
ಇದನ್ನು ಪ್ರತಿದಿನ ತಿನ್ನುವುದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತಸ್ರಾವ ನಿಂತು ಮೂಲವ್ಯಾಧಿಯ ತೊಂದರೆಯೂ ಕಡಿಮೆಯಾಗುತ್ತದೆ. ಉಷ್ಣತೆ ತಗ್ಗುತ್ತದೆ. ಹೊಟ್ಟೆಯಲ್ಲಿ ಉರಿ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
ಕರಿಬೇವಿನ ಚಟ್ನಿಪುಡಿ – 500 ಗ್ರಾಂ ಕರಿಬೇವು, 250 ಗ್ರಾಂ ಹುರಿಗಡಲೆ, 10 ಒಣ ಮೆಣಸಿನಕಾಯಿ, ಚಿಟಿಕೆ ಹಿಂಗು.
ನೆರಳಿನಲ್ಲಿ ಒಣಗಿಸಿದ ಕರಿಬೇವನ್ನು, ಸ್ವಲ್ಪ ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಹಿಂಗಿನೊಂದಿಗೆ ಹುರಿದು ಹುರಿಗಡಲೆಯೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡು ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಬಳಸಬಹುದು.
ಕರಿಬೇವಿನ ಚಿತ್ರಾನ್ನ – ಅಕ್ಕಿ 2 ಕ್, ಕರಿಬೇವು 20 ಎಲೆ, ಒಂದು ಚಮಚೆ ಕಾಳು ಮೆಣಸು, ಜೀರಿಗೆ ಒಂದು ಚಮಚೆ, ಒಣಕೊಬ್ಬರಿ ತುರಿ ಒಂದು ಹಿಡಿ, ತುಪ್ಪ 5 ಚಮಚೆ, ಉಪ್ಪು ರುಚಿಕೆ ತಕ್ಕಷ್ಟು.
ಉದುರಾಗಿ ಅನ್ನ ತಯಾರಿಸಿಟ್ಟುಕೊಳ್ಳಬೇಕು. ಕರಿಬೇವನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಬೇಕು. ಜೀರಿಗೆ, ಮೆಣಸನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಕರಿಬೇವನ್ನು ಬಾಣಲೆಯಲ್ಲಿ ಬಾಡಿಸಬೇಕು. ಕೈಯಿಂದ ಪುಡಿ ಮಾಡಿಕೊಳ್ಳಬೇಕು. ತುಪ್ಪದ ಒಗ್ಗರಣೆ ಹಾಕಿ ಜೀರಿಗೆ, ಮೆಣಸಿನ ತರಿ, ಕರಿಬೇವಿನ ಪುಡಿ ಹಾಕಿ ಸೌಟಿನಿಂದ ಕೈಯಾಡಿಸಬೇಕು. ನಂತರ ಇದಕ್ಕೆ ಅನ್ನ ಹಾಕಿ ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲೆಸಿ ಮುಚ್ಚಿಡಬೇಕು. ಮೂಲವ್ಯಾಧಿಯವರಿಗೆ ಮಾತ್ರವಲ್ಲ ಅಜೀರ್ಣ ಮತ್ತು ಜ್ವರ ಬಿಟ್ಟ ನಂತರವೂ ಇದು ಉತ್ತಮ ಆಹಾರ.
ಕೊತ್ತಂಬರಿ ಚಟ್ನಿ – ಕೊತ್ತಂಬರಿ ಸೊಪ್ಪು 2 ಕಟ್ಟು, ಒಣ ಮೆಣಸಿನಕಾಯಿ-2, ಕಡಲೆಬೇಳೆ 2 ಚಮಚೆ, ಉದ್ದಿನಬೇಳೆ 2 ಚಮಚೆ, ಜೀರಿಗೆ 2 ಚಮಚೆ, ಹುಣಸೆ ರಸ ಸ್ವಲ್ಪ, ಒಣ ಕೊಬ್ಬರಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಬೇಕೆನಿಸಿದಲ್ಲಿ ಬೆಲ್ಲ, ಎಣ್ಣೆ ಸ್ವಲ್ಪ.
ಕೊತ್ತಂಬರಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಬೇಕು. ನಂತರ ಬಾಣಲಿಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಬೇಕು. ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಒಣ ಮೆಣಸಿನಕಾಯಿ ಒಗ್ಗರಣೆಗೆ ಹಾಕಿಕೊಳ್ಳಬೇಕು. ಅದಕ್ಕೆ ಹುಣಸೆ ರಸ, ಉಪ್ಪು, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಚಟ್ನಿ ತಯಾರಿಸಿಕೊಳ್ಳಬೇಕು. ಅದಕ್ಕೆ ನೀರು ಹಾಕದೇ ರುಬ್ಬಿಕೊಳ್ಳಬೇಕು. ಈ ಚಟ್ನಿಯನ್ನು ಒಂದು ವಾರ ಕಾಲ ಇಟ್ಟರೂ ಹಾಳಾಗುವುದಿಲ್ಲ. ಅನ್ನ, ರೊಟ್ಟಿ, ಚಪಾತಿ ಜೊತೆಗೆ ತಿನ್ನಲು ರುಚಿ.
ಗುಲ್ಕಂದ್ – ಗುಲಾಬಿ ದಳಗಳು 1 ಭಾಗ, ಜೇನುತುಪ್ಪ ಅರ್ಧ ಭಾಗ, ಕಲ್ಲುಸಕ್ಕರೆ ಪುಡಿ ಅರ್ಧ ಭಾಗ ಅಥವಾ ಜೇನುತುಪ್ಪ, ಗುಲಾಬಿ ಸಮಭಾಗ ತೆಗೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ಗುಲಾಬಿದಳಗಳನ್ನು ಆಯ್ದು ದಳಗಳನ್ನು ಬಿಡಿಸಿಟ್ಟುಕೊಳ್ಳಬೇಕು. ನಂತರ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೊಳೆದ ನಂತರ ಆರಲು ಬಿಡಬೇಕು. ತೇವಾಂಶ ಇಲ್ಲದಂತೆ ಒಣಗಿರಬೇಕು. ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲು ಸಕ್ಕರೆ ಪುಡಿ ಉದುರಿಸಿ ಗುಲಾಬಿ ಹರಡಬೇಕು. ನಂತರ ಜೇನುತುಪ್ಪ ಹಾಕಬೇಕು. ಮತ್ತೆ ಕಲ್ಲು ಸಕ್ಕರೆ ಪುಡಿ, ಗುಲಾಬಿ, ಜೇನುತುಪ್ಪ ಹಾಕಬೇಕು. ಇದೇ ರೀತಿ ಹತ್ತು ಪದರ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಮುಚ್ಚಬೇಕು. ತೇವಾಂಶ ಒಳಹೋಗದಂತೆ ಗಟ್ಟಿಯಾಗಿ ಮುಚ್ಚಬೇಕು. ನಂತರ ಈ ಜಾಡಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಗಲು ಹೊತ್ತು ಬಿಸಿಲಿನಲ್ಲಿ ಇಟ್ಟು ಸೂರ್ಯಾಸ್ತದ ನಂತರ ಮನೆಯೊಳಗಡೆ ತೆಗೆದಿಡಬೇಕು. ಇದೇ ರೀತಿ 3 ವಾರ ಅಂದರೆ 21 ದಿನಗಳು ಮಾಡಬೇಕು. ನಂತರ ಮೇಲಿನ ಬಟ್ಟೆ ತೆಗೆಯಬೇಕು. ರುಚಿಕರವಾದ ಗುಲ್ಕಂದ್‌ ಸಿದ್ಧವಾಗುತ್ತದೆ. ಗುಲಾಬಿದಳಗಳು ಜೇನು ಮತ್ತು ಕಲ್ಲು ಸಕ್ಕರೆಯಲ್ಲಿ ಬೆರೆತು, ಕಲೆತು ಮೃದುವಾಗಿರುತ್ತವೆ. ಏಲಕ್ಕಿ ಪುಡಿ ಬೆರೆಸಿದಲ್ಲಿ ಘಮ ಘಮ ಪರಿಮಳ ಬರುತ್ತದೆ. ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದಲ್ಲಿ ಇದು ಅತ್ಯುತ್ತಮ ಆಹಾರ ಮತ್ತು ಔಷಧಿಯಾಗಿ ಕೆಲಸ ಮಾಡುತ್ತವೆ. ಒಂದು ಚಮಚೆ ಗುಲ್ಕಂ್ ತಿಂದು ಹಾಲು ಕುಡಿಯಬೇಕು. ಬಾಳೆಹಣ್ಣಿನೊಂದಿಗೆ ಬೆರೆಸಿ ತಿನ್ನಬಹುದು.
ಪಪ್ಪಾಯ ಹಣ್ಣಿನ ಸಲಾಡ್- ಪಪ್ಪಾಯ ಹಣ್ಣನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಹಾಲು, ಜೇನು ಬೆರೆಸಿ ತಿಂದಲ್ಲಿ ಒಳ್ಳೆಯದು. ಪಪ್ಪಾಯದೊಂದಿಗೆ ಬಾಳೆಹಣ್ಣು, ಕರಬೂಜ ಹಣ್ಣುಗಳನ್ನು ಬೆರೆಸಿಕೊಳ್ಳಬಹುದು.
ಪುಂಡಿ ಸೊಪ್ಪಿನ ಚಟ್ನಿ – 2 ರಿಂದ 3 ಕಟ್ಟು ಪುಂಡಿ ಸೊಪ್ಪು, ಒಣಮೆಣಸಿನಕಾಯಿ 6, ಉದ್ದಿನ ಬೇಳೆ 4 ಚಮಚೆ, ಮೆಂತ್ಯ 2 ಚಮಚೆ, ಜೀರಿಗೆ ಒಂದು ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ.
ಪುಂಡಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಚೆನ್ನಾಗಿ ಒಣಗಿಸಿದ ಮೇಲೆ ಎಣ್ಣೆ ಹಾಕಿ ಹುರಿಯಬೇಕು. ನಂತರ ಕಾಯಿ, ಉದ್ದಿನಬೇಳೆ ಪುಡಿ, ಮೆಂತ್ಯ, ಜೀರಿಗೆ, ಉಪ್ಪು ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಕೆಲದಿನಗಳ ಕಾಲ ತೆಗೆದಿಟ್ಟಲ್ಲಿ ಕೆಡುವುದಿಲ್ಲ.

*ಕೃಷ್ಣ ಏಕೆ ಮಣ್ಣು ತಿಂದ?*

|| *ಕೃಷ್ಣ ಏಕೆ ಮಣ್ಣು ತಿಂದ?*  ||

೧.ಮಣ್ಣನ್ನು ಬಹಳ ಇಷ್ಟಪಡುವವ.
ನಾವು ಒಂದು ಕೊಟ್ಟರೆ ಮಣ್ಣು (ಭೂಮಿ) ಅದನ್ನು ನೂರು ಪಟ್ಟು ಸಹಸ್ರಪಟ್ಟು ಮಾಡಿ ನಮಗೆ ನೀಡುತ್ತದೆ.ಇದು ಮಣ್ಣನಲ್ಲಿರುವ ಮತ್ತೊಂದು ಗುಣ. ಅರ್ಥಾತ್ ಮಣ್ಣನಲ್ಲಿ ದೇವರು ಇಟ್ಟಿರುವ ಮತ್ತೊಂದು ಗುಣ. ಭೂಮಿಯಲ್ಲಿ ಒಂದು ಭೀಜವನ್ನು ಬಿತ್ತಿದರೆ, ಸಹಸ್ರಾರು ಬೀಜಗಳಿಂದ ಕೂಡಿದ ನೂರಾರು ಫಲಗಳನ್ನು ನೀಡುವ ದೊಡ್ಡ ವೃಕ್ಷವನ್ನೇ ನೀಡುತ್ತದೆ ಒಂದು ಭತ್ತವನ್ನು ಬಿತ್ತಿದರೆ ಅನೇಕಾನೇಕ ಭತ್ತ ಗಳಿಂದ ಕೂಡಿದ ಭತ್ತದ ಬೆಳೆ ಯನ್ನೇ ನೀಡುತ್ತದೆ ಭೂಮಿ.
ಒಂದಕ್ಕೆ ಒಂದೇ ಆದರೆ ಗತಿಯೇನು?
ಆದರೆ ಯೋಚಿಸಿ! ಒಂದಕ್ಕೆ ಒಂದೇ ಕೊಡುವ ಎಂದಾಗಿದ್ದರೆ!  ಭೂಮಿಯಲ್ಲಿ ಒಂದು ಬೀಜ ಬಿತ್ತಿ ದಾಗ ಪುನಃ ನಮಗೆ ಒಂದೇ ಬೀಜ ಕೊಡುವುದಾಗಿದ್ದರೆ, ಭೂಮಿಯಲ್ಲಿ ಬೀಜ ಬಿತ್ತಲು ಯಾರು ಪ್ರವೃತ್ತರಾಗುತ್ತಾರೆ? ಜೊತೆಗೆ, ಬಿತ್ತವುದು ಸಾಧ್ಯವೆ? ಎಂಬ ಪ್ರಶ್ನೆ ಬರುತ್ತದೆ.ಬೆಳಕು ದದ್ದನ್ನು ಪುನಃ ಬಿತ್ತವುದೇ ಆಗಿದ್ದರೆ ತಿನ್ನವುದಕ್ಕೆ ಏನು ಉಳಿಯುತ್ತದೆ? ಒಂದು ಭತ್ತಕ್ಕೆ ಒಂದೇ ಭತ್ತ, ಒಂದು ಬೇಳಗೆ ಒಂದೇ ಬೇಳೆ ಎಂದಾಗಿದ್ದರೆ ಗತಿ ಏನು?
 ಆದರೆ ಹಾಗಾಗಿದಯೇ? ನಾವು ಒಂದು ಭತ್ತ ಬಿತ್ತಿದರೆ ನಮಗೆ ಸಿಗುವ ಭತ್ತಗಳು ಎಷ್ಟು? ನಾವು ಜೋಳ ಬಿತ್ತಿದಾಗ ನಮಗೆ ಸಿಗುವ ಜೋಳದ ರಾಶಿ ಎಷ್ಟು? ನೂರಾರು ಸಾವಿರಾರು ಧಾನ್ಯಗಳು ಸಿಗುತ್ತವೆ.ನಮಗೆ ನಾವು ಒಂದೇ ಒಂದು ಮಾವಿನ ಹಣ್ಣಿನ ಭೀಜ ಬಿತ್ತಿದರೆ, ಅದರಿಂ ದ ಹುಟ್ಟುವ ಮರದಿಂದ ನೂರಾರು ಸಾವಿರಾರು ಮಾವಿನ ಹಣ್ಣುಗಳನ್ನು ಪಡೆಯುತ್ತವೆ.ಹಾಗಾದರೆ ನಾವು ಭೂಮಿಗೆ ಕೊಟ್ಟಿದ್ದು, ಭೂಮಿಯಲ್ಲಿ ಡಿಪಾಸಿಟ್ ಮಾಡಿದ್ದು ಕೇವಲ ಒಂದು ಬೀಜ ಆದರೆ ಭೂಮಿ ನಮಗೆ ನೀಡುವ ಫಲ ಎಷ್ಟು? ಗಿಡವನ್ನು ಚೆನ್ನಾಗಿ ಸಂರಕ್ಷಣೆ ಮಾಡಿದರೆ ಸಾವಿರಾ ರು ಹಣ್ಣುಗಳನ್ನು ನೂರಾರು ವರ್ಷಗಳವರೆಗೆ ನಮಗೆ ನೀಡು ತ್ತದೆ.ಇದು ಭೂಮಿಯ ಗುಣ ಎನ್ನುವುದಕ್ಕಿಂತ ಭೂಮಿಯಲ್ಲಿ ದೇವರಿಟ್ಟಿರುವ ಗುಣ.
ದೇವರು ಇಷ್ಟಪಡುವ ಗುಣ
ಈ ಗುಣ ಭಗವಂತನಿಗೆ ಬಹಳ ಪ್ರಿಕರವಾದ ಗುಣ.ಒಂದನ್ನು ನೀಡಿದರೆ ಅದನ್ನು ಸಾವಿರ ಮಾಡಿ ನೀಡುವ ಈ ಗುಣ ಏನಿದೆ ಅದು ಭಗವಂತನಿಗೆ ಬಹಳ ಇಷ್ಟವಾದ ಗುಣ.ಕೆಲವರಲ್ಲಿ ಇಂತಹ ಗುಣ ಇರುತ್ತದೆ.ಇತರರು ತಮಗೆ ಎಷ್ಟು ಕೊಡುತ್ತಾರೆಯೋ ಅಷ್ಟನ್ನು ಮರಳಿ ಕೊಡುವುದು ಅದು.ಭಗವಂತನಿಗೆ ಇಷ್ಟವಾ ಗುವುದಿಲ್ಲ. ಆದರೆ ಇಂತಹ ಗುಣ ಭಗವಂತನಿಗೆ ಬಹಳ ಇಷ್ಟವಾಗುತ್ತದೆ ತಮಗೆ ಅವರು ಏನನ್ನೂ ಕೊಡದಿದ್ದರೂ ಸಹ ತಾವು ಅವರಿಗೆ ಕೊಡುವುದು, ಒಂದಕ್ಕೆ ಹತ್ತು ನೀಡುವುದ ನೂರಕ್ಕೆ ಸಾವಿರ ಕೊಡುವುದು ಏನಿದೆ ಅದು ದೇವರಿಗೆ ಪ್ರಿಯ ವಾದದ್ದು.ಅಂತಹ ಗುಣವನ್ನು  ಭೂಮಿಯಲ್ಲಿ ಕಂಡ ಭಗವಂತ.
ಈ ಗುಣ ಭೂಮಿಯಲ್ಲಿ ಮಾತ್ರವಲ್ಲ ಭೂದೇವಿ ಅವಳು ಎಲ್ಲ ದೇವತೆಗಳ ಪ್ರತಿನಿಧಿ.ಎಲ್ಲ ದೇವತೆಗಳಲ್ಲಿಯೂ ಈ ಗುಣ ಇದೆ.ಎಲ್ಲ ದೇವತೆಗಳೂ ಮಾಡುವುದು ಇದನನ್ನೇ ವೈಶ್ವದೇವ -ಔಪಾಸನ -ಅಗ್ನಿಹೋತ್ರ-ವಾಜಪೇಯ ಹೀಗೆ ಅನೇಕವಿಧ ಯಜ್ಞಯಾಗದಿ ಗಳಲ್ಲಿ ಜನರು ದೇವತೆಗಳಿಗೆ ಆಹುತಿಯನ್ನು ನೀಡುತ್ತಾರೆ ಎಷ್ಟು ಆಹುತಿ ನೀಡುತ್ತಾರೆ? ಬೇಕಾದಷ್ಟು ಶ್ರೀಮಂತಿಕೆ  ಇದೆ ಎಂದು ಹೇಳಿ.ತಪ್ಪಲೆಗಟ್ಟಲೆ ಚರು ಆಹುತಿ ನೀಡಿದರೆ ಅಗ್ನಿಯೇ ಆರಿಹೋಗುತ್ತದೆ ಅಷ್ಟೇ. ಹಾಗಾದರೆ ದೇವತೆಗಳಿಗೆ ಜನರು ನೀಡುವ ಆಹುತಿ ಎಷ್ಟು?  ಒಂದು ಸಣ್ಣ ಪಾತ್ರೆಯಲ್ಲಿ ಹಿಡಿಯುಷ್ಟು ತುಪ್ಪ ಅಥವಾ ಚರು.ಆದರೆ ಕೊಟ್ಟ ಸ್ವಲ್ಪ ಅಜ್ಯಾಹುತಿಯಿಂದಲೇ ಸಂತುಷ್ಟರಾದ ದೇವತೆಗಳು ಮಳೆಯನ್ನು ಸುರಿಸಿ ಸುಬಿಕ್ಷೆಯನ್ನು ಕೊಟ್ಟು ಜಗತ್ತಿಗೆ ಕೊಡುವಂತಹ ಸೌಭಾಗ್ಯ ಎಂತಹದು?  ಹಾಗಾಗಿ ಅಲ್ಪ ಕೊಟ್ಟಿದ್ದನ್ನೇ ಸಾವಿರ ಪಟ್ಟು  ಮಾಡಿ ನೀಡುವ ಎಲ್ಲ ದೇವತೆ ಗಳೂ ಭಗವಂತನಿಗೆ ಬಹಳ ಪ್ರೀಯರೆ.ಭೂದೇವಿ ಎಲ್ಲ ದೇವತೆಗಳ ಪ್ರತಿನಿಧಿ ಅಷ್ಟೇ  ಭೂಮಿ ಒಬ್ಬಳೇ ಪ್ರೀತಿಪಾತ್ರಳು ಎಂದಲ್ಲ.
  ಅತಂಹ ಎಲ್ಲ ದೇವತೆಗಳನ್ನು ಭಗವಂತ ಪ್ರೀತಿಯಿಂದ ಕಾಣು ತ್ತಾನೆ ಅವರ ಮೇಲೆ ವಿಶೇಷ ಅನುಗ್ರಹ ಮಾಡುತ್ತಾನೆ.ಯಾಕೆಂದರೆ ಇಷ್ಟೆಲ್ಲ ಜೀವರಾಶಿಗಳನ್ನು ಅವರು ಕೊಟ್ಟ ಅಲ್ಪ ಆಹುತಿ ಗಳಿಂದ ಬೀಜಗಳಿಂದ ತೃಪ್ತರಾಗಿ ಅಪಾರ ಮಳೆ-ಬೇಳೆ ಗಳನ್ನು ಕೊಟ್ಟು ಅನುಗ್ರಹ ಮಾಡುತ್ತಾರೆ ದೇವತೆಗಳು.ಇದು ಭಗವಂತನಿಗೆ ಬಹಳ ಪ್ರೀತಿಕರ ವಾದ ಗುಣ.ಆ ಕಾರಣಕ್ಕಾಗಿ  ಭಗವಂತ ಮಣ್ಣನ್ನು ತಿನ್ನುವ ಮೂಲಕ ಮುತ್ತಿಕ್ಕುವ ಮೂಲಕ ದೇವತೆಗಳ ಬಗ್ಗೆ ಭೂದೇವಿಯ ಬಗ್ಗೆ ತನಗಿರುವ ಅಪಾರ ಪ್ರೀತಿಯನ್ನು  ಸೂಚಿಸಿದ.

----------------------------------------------------------------
ಭಯ ಪರಿಹರಿಸುವ ಕರ್ಮಗಳೇ ಭಯಪ್ರದವಾಗುವ ನಾಕು ಕರ್ಮಗಳನ್ನು ಈ ಹಿಂದೆ ನೋಡಿದ್ದೆವು... ಅವುಗಳಲ್ಲಿ ಮೊದಲನೆಯದ್ದು ಮಾನ(ಜ್ಞಾನ)ವರಿಯದೆ ಮಾಡಿದ "ಅಗ್ನಿಹೋತ್ರ"
ಅಗ್ನಿಹೋತ್ರವೆಂದರೆ ಅಗ್ನಿಯಲ್ಲಿ ಭಗವಂತನ ಆರಾಧನೆ..ಪಂಚಭೂತಗಳಲ್ಲಿ ದೇವರನ್ನು ಕಾಣಲು ಶಾಸ್ತ್ರಕಾರರು ತಿಳಿದ ಶ್ರೇಷ್ಠ ಪ್ರತೀಕ ಇದಾಗಿದೆ..ಭಗವಂತ ಜ್ಞಾನಾನಂದಮಯನಾದ ಅಪ್ರಾಕೃತ ಬೆಳಕಿನ ಸ್ವರೂಪನು,ದೋಷರಹಿತನು ಎನ್ನುವುದಾಗಿ ಶಾಸ್ತ್ರಕಾರರು ತಿಳಿಸಿರುವರು.ಈ ಬಗೆಯ ಬೆಳಕಿನ ಪರಿಚಯ ನಮಗಿಲ್ಲವಾದ್ದರಿಂದ ಅದನ್ನು ಈ ಕಣ್ಣಿನಿಂದ ಕಾಣುವುದು ಅಸಾಧ್ಯ..ಅದಕ್ಕಾಗಿ ಕಾಣುವ ಒಂದು ಬೆಳಕು ಬೇಕು..
ಆ ಕಾಣುವ ಬೆಳಕಿನಲ್ಲೊಂದು "ಅಗ್ನಿ".
ಈ ಬೆಳಕಿನಲ್ಲಿ ಕಾಣದ ಬೆಳಕಿನ(ಜ್ಞಾನಾನಂದಮಯನ) ಅನುಸಂಧಾನವೇ "ಅಗ್ನಿಹೋತ್ರ"ಎಂದರೆ...
ಈ ಬೆಳಕಿನೊಳಗೆ ಭಗವಂತನನ್ನು ನೆನೆಯುತ್ತಾ ಆಹುತಿಗಳನ್ನು ನೀಡುವಿಕೆಯೇ ಮಾನಪೂರ್ವಕ ಮಾಡಿದ ಅಗ್ನಿಹೋತ್ರವು...
ಅಗ್ನಿಯಲ್ಲಿ ನೀಡುವ ಪ್ರತಿಯೊಂದು ಆಹುತಿಗಳನ್ನೂ ನೇರ ಸ್ವೀಕರಿಸುವವನು ನಾರಾಯಣನೇ ಎನ್ನುವ ಎಚ್ಚರ ಇರಬೇಕು.ಕೃಷ್ಣ ಈ ಸಂಗತಿಯನ್ನು ಬಹಳ ಸ್ಪಷ್ಟವಾಗಿಯೇ ಗೀತೆಯಲ್ಲಿ ತಿಳಿಸಿರುವನು.."ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ"..ನಾನಲ್ಲವೇ ಎಲ್ಲ ಯಜ್ಞಗಳಲ್ಲೂ ಕೂತು ಆಹುತಿಗಳನ್ನುಣ್ಣುವವ..ಹಾಗೂ ಅದರ ಒಡೆತನ ಪಡೆದವನೆಂದು ಕೃಷ್ಣನ ಮಾತಿನ ಅರ್ಥ..ಕೃಷ್ಣ ಈ ಮಾತನ್ನು ಹೇಳುವಾಗ "ಹಿ"(ಅಹಂ "ಹಿ")ಕಾರವನ್ನು ಹೇಳಿರುವನು..ಹಿ ಎಂದರೆ ನಾನೇ ಸ್ವಿಕರಿಸುವೆನೆನ್ನುವುದು ಶಾಸ್ತ್ರ ಪ್ರಸಿದ್ದ ಎಂದರ್ಥ...ಯಜುರ್ವೇದದ ಆರಂಭದಿಂದ ಕೊನೆಯ ತನಕ ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚಿಗೆ "ಯಜ್ಞೋ ವೈ ವಿಷ್ಣುಃ"ಎನ್ನುವ ಮಾತು ಪುನರಾವರ್ತನೆಗೊಂಡಿದೆ ಎನ್ನುವುದು ಯಜುರ್ವೇದವನ್ನು ಅಧ್ಯಯನ ಮಾಡಿರುವವರ ಮಾತು..ಹೀಗೆ ಯಾವುದೇ  ದೇವತೆಗಳಿಗೆ ಸಂಬಂಧಿಸಿದ ಯಜ್ಞ ಇರಲಿ ಅದರಲ್ಲಿ ಪ್ರಧಾನಾಹುತಿ ನನಗೆ ಮೀಸಲು ಎನ್ನುತ್ತಾನೆ ಕೃಷ್ಣ..
ಆದರೆ ಶಾಸ್ತ್ರದ ಗಂಧಗಾಳಿಯೇ ಅರಿಯದ ಮಂದಿ ಯಾಜ್ಞಿಕ ಪ್ರಕ್ರಿಯಲ್ಲಿ ತೊಡಗಿ ಅಗ್ನಿಯಲ್ಲಿ ಕೊಡುವ ಆಹುತಿ ಬರೀ ಆಯಾಯ ದೇವತೆಗಳಿಗೆ ಮಾತ್ರ ಮೀಸಲು ಎನ್ನುತ್ತಾ ತಾವೂ ಹೊಂಡಕ್ಕೆ ಬೀಳುವುದಲ್ಲದೆ ಯಜಮಾನನ್ನು ಹೊಂಡಕ್ಕೆ ತಳ್ಳುವರು...ಅದೇ ಅಗ್ನಿಯ ಬಗೆಗೆ ಸರಿಯಾಗಿ ತಿಳಿದ ಜ್ಞಾನಿಗಳು ಅಗ್ನಿಯೊಳಗಿನ ದೇವರನ್ನು ಪೂಜಿಸಿ ತಾವೂ ಎತ್ತರಕ್ಕೇರುವುದಲ್ಲದೆ ಉಳಿದವರನ್ನೂ ಎತ್ತರಕ್ಕೇರಿಸುವರು...
ಆದ್ದರಿಂದ ಅಗ್ನಿಹೋತ್ರವೆಂದರೆ ಬರಿಯ ಅಗ್ನಿ(ಬೆಂಕಿ) ಅಥವಾ ಅಗ್ನಿದೇವ ಎನ್ನುವುದಷ್ಟನೇ ತಿಳಿಯದೆ ದೇವತೆಯ ಒಳಗೆ ಕೂತ ದೇವರನ್ನು ತಿಳಿದು ಆಚರಿಸುವುದೇ ಮಾನಪೂರ್ವಕವಾದ "ಅಗ್ನಿಹೋತ್ರ" ಎನ್ನುವುದು ವಿದುರನ ಅಭಿಪ್ರಾಯವಾಗಿದೆ...

ಸ್ನಾನಂ

.
ಸ್ನಾನಂ  ಸಂಧ್ಯಾ  ಜಪೋ  ಹೋಮಃ  ಸ್ವಾಧ್ಯಾಯೋ  ದೇವತಾರ್ಚನಂ | ಅತಿಥಿರ್ವೈಶ್ವದೇವಶ್ಚ  ನಿತ್ಯಮಿತ್ಯಭಿಧೀಯತೇ  ||
=  ಸ್ನಾನ,  ಸಂಧ್ಯಾವಂದನ,  ಜಪ,  ಹೋಮ(ಔಪಾಸನ)  ವೇದಶಾಸ್ತ್ರಾಭ್ಯಾಸ,  ದೇವಪೂಜಾ,  ಅತಿಥಿಭೋಜನ,  ವೈಶ್ವದೇವ-  ಈ  (ಐದು) ಪಂಚಕರ್ಮಗಳು  ನಿತ್ಯಕರ್ಮಗಳಾಗಿವೆ. – ಪ್ರಾತಃಸ್ನಾತುಮಶಕ್ತಸ್ಯ  ರೋಗಾದ್ಯೈರ್ವಾಭಯಾಚ್ಚ  ವಾ  |  ಪೂರ್ವ  ವಸ್ತ್ರ  ಪರಿತ್ಯಾಗಾಚ್ಛುಚಿಸ್ತಸ್ಮಾದ್ಭವೇತ್ತದಾ  |
=  ರೋಗಾದಿಗಳಿಂದಾಗಲೀ  ಭಯದಿಂದಾಗಲೀ  ಪ್ರಾತಃಕಾಲದಲ್ಲಿ  ಸ್ನಾನ  ಮಾಡುವುದಕ್ಕೆ  ಅಶಕ್ತನಾದರೆ  ಮೊದಲಿನ  ವಸ್ತ್ರವನ್ನಾದರೂ  ಬಿಟ್ಟು  ಬೇರೆ ಶುದ್ಧವಸ್ತ್ರವನ್ನು  ಧರಿಸಬೇಕು.—ಸಪ್ತಾಹಃ  ಪ್ರಾತರಸ್ನಾಯೀದ್ವಿಜಃ  ಶೂದ್ರತ್ವಮಾಪ್ನುಯಾತ್ |  ತಸ್ಮಾತ್  ಸ್ನಾನಂ  ಪ್ರಕರ್ತವ್ಯಂ  ರವಿವಾರೇ  ಸದೈವ  ಹಿ||
=  (ದೇಶಕಾಲಾದಿ ಕಾರಣಗಳಿಂದಾಗಿ) ಏಳುದಿನಗಳ  ವರೆಗೆ  ಪ್ರಾತಃಸ್ನಾನ  ಮಾಡಲು  ಅಶಕ್ತನಾದರೆ  ಶೂದ್ರತ್ವವು(ಆಚಾರಹೀನತ್ವವು)  ಪ್ರಾಪ್ತವಾಗುವುದು.  ಏಳುದಿನಗಳಲ್ಲೇ  ಸ್ನಾನಮಾಡುವುದಾದರೆ  ಆದಿತ್ಯವಾರವೇ  ಉತ್ತಮವು.--   ಮಾಂತ್ರಂ ಭೂಮಂ  ತಥಾಗ್ನೇಯಂ  ವಾಯವ್ಯಂ  ದಿವ್ಯಮೇವ  ಚ  |  ವಾರುಣಂ  ಮಾನಸಂ  ಚೈವ  ಸಪ್ತ  ಸ್ನಾನಾನ್ಯನುಕ್ರಮಾತ್  ||
=  ಸ್ನಾನದಲ್ಲಿ  ಮಂತ್ರಪೂರ್ವಕ  ಸ್ನಾನ(ಮಂತ್ರಮಾತ್ರದಿಂದೇಸ್ನಾನ),   ಭೂಮಿ, ಅಗ್ನಿ,   ವಾಯು,  ದಿವ್ಯ,  ವಾರುಣ,  ಮಾನಸ  ಹೀಗೆ  ಏಳು ಭೇದಗಳಿರುವವು. – ಆಪೋಹಿಷ್ಟಾದಿಭಿರ್ಮಾಂತ್ರಂ  ಮೃದಾಲೇಪಸ್ತು   ಪಾರ್ಥಿವಂ  |  ಆಗ್ನೇಯಂ  ಭಸ್ಮನಾ  ಸ್ನಾನಂ  ವಾಯವ್ಯಂ  ಗೋರಜಃ  ಸ್ಮೃತಂ  |  ಯತ್ತು  ಸಾತಪವರ್ಷೇಣ  ಸ್ನಾನಂ  ತದ್ದಿವ್ಯಮುಚ್ಯತೇ  |  ಅವಗಾಹೋ  ವಾರುಣಂ ಚ ಮಾನಸಂ ವಿಷ್ಣು  ಚಿಂತನಂ||
=  ಆಪೋಹಿಷ್ಠಾದಿ  ಮಂತ್ರಗಳಿಂದ  ಮಾರ್ಜನ (ಪ್ರೋಕ್ಷಣ)  ಮಾಡಿಕೊಂಡರೆ  ಮಂತ್ರಸ್ನಾನವಾಗುವುದು.  ಶುದ್ಧ  ಮೃತಿಕೆಯನ್ನು  ಮೈಗೆ  ಮೆತ್ತಿಕೊಂಡರೆ  ಭೂಮಿ (ಪಾರ್ಥಿವ)ಸ್ನಾನವೂ,  ಭಸ್ಮದಿಂದ  ಮೈಯ್ಯನ್ನು  ಒರಸಿಕೊಂಡರೆ  ಆಗ್ನೇಯಸ್ನಾನವೂ,  ಗೋಧೂಳಿಯನ್ನು  ಬಳಿದುಕೊಂಡರೆ  ವಾಯುಸ್ನಾನವೂ,  ಬಿಸಿಲುಸಹಿತ  ಮಳೆಯಲ್ಲಿ  ನೆನೆದರೆ  ದಿವ್ಯಸ್ನಾನವೂ,  ಪ್ರವಾಹಗಳಲ್ಲಿ  ಮುಳುಗಿದರೆ  ವಾರುಣೇಸ್ನಾನವೂ  ವಿಷ್ಣುವನ್ನು  ಮನಸ್ಸಿನಲ್ಲಿ  ಧ್ಯಾನಿಸಿದರೆ  ಮಾನಸ  ಸ್ನಾನವೂ  ಆಗುವುದು. --- ಗಲಾದಧಃ  ಕ್ಷಾಳನಮೇವ  ಕಂಠಸ್ನಾನಂ  ಚ  ನಾಭೌ  ಕಟಿಸಂಜ್ಞಿಕಂ  ತು  |  ಆರ್ದ್ರೇಣ  ವಸ್ತ್ರೇಣ  ವಿಮೃಜ್ಯ  ದೇಹಂ  ಸ್ನಾನಂ  ಭವೇತ್ಕಾಪಿಲ  ಸಂಜ್ಞಿಕಂ  ಚ    ||  
=  ಕುತ್ತಿಗೆಯ  ಕೆಳಗೆ  ಸ್ನಾನಮಾಡಿದರೆ  ಕಂಠಸ್ನಾನವೆಂತಲೂ,  ನಾಭಿಯಕೆಳಗೆ  ಸ್ನಾನಮಾಡಿದರೆ  ಕಟಿಸ್ನಾನವೆಂತಲೂ  ಒದ್ದೆ  ವಸ್ತ್ರದಿಂದ  ಮೈಯ್ಯೊರಸಿಕೊಂಡರೆ  ಕಾಪಿಲ  ಸ್ನಾನವೆಂತಲೂ  ಹೆಸರುಗಳಿವೆ.--  ವಾರುಣೇನೈವ ವಿಪ್ರಸ್ತು  ಪ್ರಾತಃ  ಸರ್ವತ್ರ  ಶಿಷ್ಯತೇ  |  ವಿಧಿನಾ  ವಿಧಿಹೀನಂ  ತು  ಸ್ನಾತೋಪ್ಯಸ್ನಾತ  ಏವ  ಸಃ  ||
=  ವಿಪ್ರನು  ಪ್ರಾತಃಕಾಲದಲ್ಲಿ  “ವಾರುಣ” ಸ್ನಾನವನ್ನು  ವಿಧಿಪೂರ್ವಕವಾಗಿ   ಮಾಡಬೇಕು.  ವಿಧಿಪೂರ್ವಕವಾಗಿ  ಮಾಡದಿದ್ದರೆ  ಸ್ನಾನಮಾಡದರೂ  ಮಾಡದವನಂತೆಯೇ  ಸರಿ.---  ಪ್ರಾತರ್ಮಧ್ಯಾಹ್ನಯೋಃ  ಸ್ನಾನಂ  ವಾನಪ್ರಸ್ಥ  ಗ್ರಹಸ್ಥಯೋಃ  |  ಯತೇ  ಸ್ತ್ರಿಷವಣಂ  ಸ್ನಾನಂ  ಸಕೃತ್ತು  ಬ್ರಹ್ಮಚಾರಿಣಃ||
=  ಗೃಹಸ್ಥ  ಮತ್ತು  ವಾನಪ್ರಸ್ಥರು  ಪ್ರಾತಃಕಾಲ  ಮತ್ತು  ಮಧ್ಯಾಹ್ನ  ಸ್ನಾನಮಾಡತಕ್ಕದ್ದು.  ಯತಿಗಳು(ಸನ್ಯಾಸಿಗಳು)  ಮೂರುಹೊತ್ತೂ  ಸ್ನಾನಮಾಡತಕ್ಕದ್ದು.  ಬ್ರಹ್ಮಚಾರಿಗಳು  ಒಂದು  ಹೊತ್ತೇ  ಸ್ನಾನಮಾಡಬೇಕು

ನವಗ್ರಹಗಳು ನಿಮ್ಮ ಜೀವನ ಮತ್ತು ನಿಮ್ಮ ಮನೆ

ನಿಮ್ಮ ಈ ಒಂಭತ್ತು ಅಭ್ಯಾಸಗಳಿಂದ, ನವಗ್ರಹಗಳು  ನಿಮ್ಮ ಜೀವನ ಮತ್ತು ನಿಮ್ಮ ಮನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತವೆ.
 
ನವಗ್ರಹಗಳು ನಮ್ಮ ದೇಹದಲ್ಲಿ  ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುತ್ತೇವೆ.ಅವುಗಳಿಗೆ ಪರಿಹಾರವೆಂದರೆ:--
೧. ನಮ್ಮ ಮನೆಗಳಿಗೆ ಯಾರಾದರೂ ಅತಿಥಿಗಳು-ಅಭ್ಯಾಗತರು ಬಂದಾಗ, ಅವರು ಅತಿಥಿಗಳಿರಲಿ ಅಥವಾ ಕೆಲಸದ ನೌಕರರು/ಆಳುಗಳಿರಲಿ ಅವರಿಗೆ ಕುಡಿಯಲು ಲೋಟದಲ್ಲಿ ಶುಧ್ಧ ನೀರನ್ನು/ಹಾಲನ್ನು ಕೊಡಬೇಕು.
ಹೀಗೆ ಶುಧ್ಧ ನೀರನ್ನು   ಕುಡಿಯಲು ಕೊಟ್ಟರೆ ರಾಹುಗ್ರಹದಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಜೀವನದಲ್ಲಿ ಯಾವುದೇ ತೊಂದರೆಗಳು/ಅಘಾತಕರ ಘಟನೆಗಳು ಸಂಭವಿಸುವುದಿಲ್ಲ.
೨. ನಿಮಗೆ ಎಲ್ಲಂದರೆ ಅಲ್ಲಿ ಉಗುಳುವ ಅಭ್ಯಾಸವಿದ್ದರೆ, ನಿಮಗೆ ಅಕಸ್ಮಾತ್ ಹೆಸರು ಮತ್ತು ಗೌರವ ಬಂದಲ್ಲಿ, ಅದು ಬಹಳ ದಿನ ಇರಲಾರದು. ಎಲ್ಲಂದರೆ ಅಲ್ಲಿ ಉಗುಳಿದರೆ ಬುಧಗ್ರಹದ ಅವಕೃಪೆ.
ಉಗುಳುವುದನ್ನು ಕೈ ತೊಳೆಯುವ ಬಚ್ಚಲಿನಲ್ಲಿ(wash basin) ಮಾತ್ರ ಉಗಳಬೇಕು. ಆಗ ಮಾತ್ರ ನಿಮ್ಮ ಹೆಸರು ಮತ್ತು ಗೌರವ ವೃಧ್ಧಿಯಾಗುತ್ತವೆ.
೩. ಕೆಲವರಿಗೆ ತಿಂಡಿ, ತಿನಿಸು, ಊಟ ಮಾಡಿದ ತಟ್ಟೆಗಳನ್ನು /ಪಾತ್ರೆಗಳನ್ನು ಹಾಗೆ ಇಡುವ ಅಭ್ಯಾಸ ಇರುತ್ತದೆ.  ಅಂತಹವರಿಗೆ ಜೀವನದಲ್ಲಿ ಗೆಲವು ಖಾಯಂ ಆಗಿ ಸಿಗುವುದಿಲ್ಲ. ಅಂಥಹವರು ನಿರಂತರ ಹೋರಾಟ ಮಾಡುತ್ತಿರಬೇಕು ಹಾಗೂ ಆದರೂ ಅವರಿಗೆ ಒಳ್ಳೆಯ ಹೆಸರು ಸಿಗುವುದಿಲ್ಲ.
ನೀವು ಉಪಯೋಗಿಸಿದ ತಟ್ಟೆ/ಲೋಟ/ಪಾತ್ರೆಗಳನ್ನು (ಸಾಧ್ಯವಾದಷ್ಟು) ಬೇಗ ತೊಳೆದು ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
ಹೀಗೆ ಮಾಡುವುದರಿಂದ  ಚಂದ್ರ ಮತ್ತು ಶನಿ ಗ್ರಹಗಳನ್ನು ಗೌರವಿಸಿದಂತಾಗಿ ಅವರುಗಳು ಸಂತೃಪ್ತರಾಗುತ್ತಾರೆ.
ಇದರಿಂದ ನಿಮಗೆ ಮನಃಶಾಂತಿ ಸಿಗುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆ-ತಡೆಗಳಿರುವುದಿಲ್ಲ.
೪. ನಮ್ಮ ಮನೆಗಳಲ್ಲಿ ಇರುವ ಗಿಡಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ.
ಅವುಗಳಿಗೆ ನಮ್ಮ ಪ್ರೀತಿ ಮತ್ತು ಆರೈಕೆ ಅವಶ್ಯವಿದೆ.
ನಿತ್ಯ ಮುಂಜಾನೆ ಮತ್ತು ಸಂಜೆ ಅವುಗಳಿಗೆ ನೀರು ಉಣಿಸಿದ್ದಲ್ಲಿ, ಗುರು, ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಆರಾಧಿಸಿ ಅವುಗಳ ಅನುಗ್ರಹ ಪಡೆದಂತೆ ಆಗುತ್ತದೆ.
ಇದರಿಂದ ನಮಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿ ಬರುತ್ದದೆ.
ದಿನ ನಿತ್ಯ ಮರಗಿಡಗಳಿಗೆ ನೀರು ಉಣಿಸುವವರಿಗೆ ಮಾನಸಿಕ ಸಮಸ್ಯೆ/ಖಿನ್ನತೆ, ಮಾನಸಿಕ ಒತ್ತಡಗಳು ಎಂದೆಂದಿಗೂ ಆಗುವುದಿಲ್ಲ..!.
೫. ಯಾರು ತಮ್ಮ ಪಾದರಕ್ಷೆ /ಚಪ್ಪಲಿ, ಕಾಲ ಕವಚ (shoes), ಕೈ ಕವಚಗಳು ಮತ್ತು ಕಾಲು ಚೀಲಗಳನ್ನು ಮನೆಗೆ ಬಂದಾಗ ಎಲ್ಲೆಂದರೆ ಅಲ್ಲಿ ಬಿಟ್ಟಿರುತ್ತಾರೆಯೋ/ಎಸೆದಿರುತ್ತಾರೆಯೋ ಅವರಿಗೆ ಅವರ ಶತ್ರುಗಳು ಹೆಚ್ಚಿನ ತೊಂದರೆ ಕೊಡುತ್ತಾರೆ‌. ಅವುಗಳನ್ನು ಮನೆಗೆ ಬಂದಾಗ ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇಟ್ಟಲ್ಲಿ ಗುರುವು ಪ್ರಸನ್ನನಾಗಿ ಶತ್ರುಗಳು ದೂರವಾಗಿ ಸಮಾಜದಲ್ಲಿ ನಿಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆ.
೬. ಹಾಸಿಗೆಯಿಂದ ಮುಂಜಾನೆ ಎದ್ದ ನಂತರ  ನಿಮ್ಮ ಹಾಸಿಗೆ ಸ್ವಚ್ಚವಾಗಿ ಇಟ್ಟು ಕೊಳ್ಳ ಬೇಕು, ಹಾಗೆ ಇಡದೇ, ನೀವು ಎದ್ದ ನಂತರ ಹಾಸಿಗೆಯ ಹೊದಿಕೆ, ನಿಮ್ಮ ಹೊದಿಕೆ, ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮನ್ನು ಶನಿ ಮತ್ತು ರಾಹುಗಳು ಕಾಡುತ್ತವೆ. ನೀವು ನಿತ್ಯ ಧರಿಸುವ ಬಟ್ಟೆಗಳು ಸ್ವಚ್ಚ ಇಲ್ಲದಿದ್ದರೆ ನಿಮ್ಮ ನಿತ್ಯದ ಕೆಲಸ ಕಾರ್ಯಗಳು ಎಂದೆಂದಿಗೂ ಸುಗಮವಾಗಿ ನಡೆನಯುವುದಿಲ್ಲ..!
ನೀವೂ ಮತ್ತು ನಿಮ್ಮ ಸುತ್ತಲಿನವರೂ ಸಂತೋಷವಾಗಿರುವುದಿಲ್ಲ.
ಇದನ್ನು ತಡೆಯಲು ನೀವು ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆಯನ್ನು ಸ್ವಚ್ಚವಾಗಿ ಇಟ್ಟುಕೊಂಡರೆ ನಿಮ್ಮ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ.
೭. ನಾವು ಯಾವಾಗಲೂ ನಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸತ್ಯ ಸಂಗತಿಯೆಂದರೆ ನಾವುಗಳು ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಕೈ ಕಾಲುಗಳನ್ನು ಮತ್ತು ಪಾದಗಳನ್ನು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಗೆ ಹೊರಗಿನಿಂದ ಬಂದಾಗ  ಮುಖ,  ಕೈ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು.  ( ಸಾಧ್ಯವಾದರೆ ತೊಳೆದುಕೊಂಡೆ ಮನೆಯ ಒಳಗೆ ಪ್ರವೇಶಿಸಿದರೆ ಉತ್ತಮ )
ಇದರಿಂದ ನಿಮಗೆ ಮನಃಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಹಾಗೂ ಅನವಶ್ಯಕ ಸಿಟ್ಟು ಹಾಗೂ ಮನಸ್ಸಿಗೆ ಕಿರಿ-ಕಿರಿ ಆಗುವುದಿಲ್ಲ ಹಾಗೂ ದಿನಃ ಪೂರ್ತಿ ಸಂತೋಷವಾಗಿರುತ್ತೀರ.
ಇನ್ನಾದರೂ ಈ ಬಗ್ಗೆ ವ್ಯವಸ್ಥೆ ಮಾಡಿಕೊಂಡು, ಅದನ್ನು ಪಾಲಿಸಿ ಜೀವನದಲ್ಲಿ ಆಗುವ ಆಧ್ಬುತ ಬದಲಾವಣೆಗಳನ್ನು ಗಮನಿಸಿರಿ..!
೮. ನೀವು ಪ್ರತಿದಿನ ಮನೆಗೆ ಬರುವಾಗ ಮನೆಯಲ್ಲಿ ಉಪಯೋಗಿಸುವ ಯಾವುದಾದರೂ ವಸ್ತುವನ್ನು ಹೂವು/ಹಣ್ಣು/ತರಕಾರಿ ಕೈಯಲ್ಲಿ ಹಿಡಿದು ಮನೆಗೆ ತರಬೇಕು.
ಹಾಗೆ ಮಾಡಿದರೆ ಅಂತಹ ಮನೆಯಲ್ಲಿ, ಮನೆಯ ಲಕ್ಷ್ಮಿಯು (ಸಂಪತ್ತಿನ ಅಧಿಪತಿ) ಮತ್ತು ಶುಕ್ರನು ಮನೆಯಲ್ಲಿ ಖಾಯಂ ಆಗಿ ನೆಲಸುತ್ತಾರೆ.
೯. ನೀವು ಉಪಹಾರ/ಊಟ ಮಾಡಿದ ತಟ್ಟೆಯಲ್ಲಿ ಯಾವತ್ತೂ  ಆಹಾರವನ್ನು ಉಳಿಸಬೇಡಿರಿ.
ಹಾಗೆ ಉಳಿಸಿದರೆ ನವಗ್ರಹಗಳೆಲ್ಲವೂ ನಿಮಗೆ ವಿರೋಧವಾಗಿ ನೀವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. 

ಕಾಗೆ ಪದೇ ಪದೇ ಮನೆ ಮುಂದೆ ಕೂಗುತ್ತಿದ್ದರೆ ಏನು ನಡೆಯುತ್ತದೆ ಗೊತ್ತಾ?*             ‌                                                           
ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಬಂಧುಗಳು ತೀರಿಕೊಂಡಾಗ ಕಾಗೆಗೆ ಪಿಂಡ ಇಡುತ್ತೇವೆ. ಮೂರನೇ ದಿನದಿಂದ ಹತ್ತನೇ ದಿನದ ತನಕ ಪಕ್ಷಿಗಳಿಗೆ ಎಂದರೆ ಕಾಗೆಗಳಿಗೆ ಪಿಂಡ ಎಂದರೆ ಆಹಾರ ಇಡುವುದನ್ನು ನೋಡುತ್ತಿರುತ್ತೇವೆ. ಮರಣಿಸಿದವರು ಕಾಗೆ ರೂಪದಲ್ಲಿ ಕುಟುಂಬಿಕರು ಇಟ್ಟ ಆಹಾರವನ್ನು ತಿನ್ನಲು ಬರುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಹಾಗಾಗಿ ಪಿಂಡ ಇಡುವ ಸಂಪ್ರದಾಯ ಇದೆ. ಕರ್ಮಕಾಂಡದ ಭಾಗವಾಗಿ ಕಾಗೆಗಳಿಗೆ ಅನ್ನ ಇಡುತ್ತಿರುತ್ತೇವೆ. ಆ ಆಹಾರವನ್ನು ಕಾಗೆ ತಿಂದರೆ ತಮ್ಮ ಹಿರಿಯರು ಸಂತೃಪ್ತಿ ಹೊಂದಿದರು ಎಂದು ಒಂದು ವೇಳೆ ಕಾಗೆ ಮುಟ್ಟದಿದ್ದರೆ ಅವರಿಗೆ ಇಷ್ಟವಾದ ಬಯಕೆ ಏನೋ ನಾವು ತೀರಿಸದಿದ್ದ ಕಾರಣ ಅವರು ಅಸಂತೃಪ್ತಿಗೆ ಒಳಗಾಗಿದ್ದಾರೆ ಎಂದುಕೊಳ್ಳೂತ್ತೇವೆ.                          ‌                             
ಅದಕ್ಕೆ ಪುರಾಣದಲ್ಲಿ ಒಂದು ವೃತ್ತಾಂತ ಇದೆ. ರಾವಣನು ನವಗ್ರಹಗಳನ್ನು ಬಂಧಿಸಲು ಬಂದಾಗ ಅದನ್ನು ನೋಡಿ ಯಮಧರ್ಮ ರಾಜ ಭಯ ಬೀಳುತ್ತಾನೆ. ತನ್ನನ್ನು ಬಂಧಿಸುತ್ತಾನೆ ಎಂದು ತಿಳಿದು ಬೇರೆ ದಾರಿ ಇಲ್ಲದೆ ಅಲ್ಲಿ ಇದ್ದ ಕಾಗೆಗೆ ತಪ್ಪಿಸಿಕೊಳ್ಳುವ ಮಾರ್ಗ ಇದ್ದರೆ ಹೇಳು ಎನ್ನುತ್ತಾನೆ. ಕಾಗೆ ತನ್ನಲ್ಲಿ ಪ್ರವೇಶಿಸು ಎಂದು ಹೇಳುತ್ತದೆ. ಆ ರೀತಿ ತನ್ನಲ್ಲಿ ಪ್ರವೇಶಿಸಿದ ಕೂಡಲೆ ಕಾಗೆ ದೂರ ಹಾರಿ ರಾವಣನಿಂದ ರಕ್ಷಿಸುತ್ತದೆ. ಆಗ ಯಮನು ಕಾಗೆಗೆ ಒಂದು ವರ ನೀಡುತ್ತಾರೆ. ನಿನಗೆ ಯಾರು ಅಮಾವಾಸ್ಯೆ ದಿನ ಅಥವಾ ಬಂಧುಗಳು ತೀರಿಕೊಂಡ ತಿಥಿಯಲ್ಲಿ ಆಹಾರ ಇಡುತ್ತಾರೋ ಆ ಆಹಾರ ನೀನು ತಿಂದರೆ ಅವರ ಪಿತೃದೇವತೆಗಳು ನರಕದಲ್ಲೂ ಸಹ ಆನಂದಿಸುತ್ತಾರೆ. ಹಾಗಾಗಿ ಕಾಗೆಗೆ ಆಹಾರ ಇಡುವುದು ಆಚಾರವಾಗಿದೆ.                        ‌                             
ನಾವು ಏನಾದರೂ ವ್ರತಗಳನ್ನು ಮಾಡಿದಾಗ ನಾವು ತಿನ್ನದೇ ಹೋದರೂ ಮೂಕ ಜೀವಿಗಳಿಗೆ ಆಹಾರ ಇಡಬೇಕು. ಆದರೆ ಶನಿದೇವರ ಅನುಗ್ರಹ ಪಡೆದ ಕಾಗೆಗೆ ಆಹಾರ ಇಟ್ಟರೆ ಶನಿದೇವರ ಅನುಗ್ರಹ ಪಡೆದಂತೆ. ಇನ್ನೂ ಕೆಲವರ ನಂಬಿಕೆ ಪ್ರಕಾರ ಕಾಗೆ ಕೆಲವು ಸೂಚನೆಗಳನ್ನು ಕೊಡುತ್ತದೆ ಎಂದು ನಂಬುತ್ತಾರೆ. ನಮ್ಮ ಪೂರ್ವಿಕರ ಜೀವನ, ಮರಣ ಕಾಗೆಯೊಂದಿಗೆ ಬೆರೆತಿದೆ ಎಂದು ನಂಬುತ್ತಾರೆ. ಸತ್ತವರ ನಮ್ಮ ಪೂರ್ವಿಕರೇ ಕಾಗೆ ರೂಪದಲ್ಲಿ ಇರುತ್ತಾರೆ ಎಂಬುದು ಬಹಳಷ್ಟು ಮಂದಿಯ ನಂಬಿಕೆ. ಶ್ರಾದ್ಧ ಕರ್ಮಗಳ ಸಮಯದಲ್ಲಿ ಕಾಗೆ ಪಿಂಡ ತಿಂದರೆ ಸತ್ತರ ಆತ್ಮ ಸಂತೃಪ್ತಿ ಪಡೆಯುತ್ತದೆಂದು ಸಹ ಹೇಳುತ್ತಿರುತ್ತಾರೆ. ಕಾಗೆಗಳು ನಮ್ಮ ಭವಿಷ್ಯವನ್ನು ಊಹಿಸುತ್ತವೆ ಎಂದು ಕಾಗೆ ಕೂಗಿದರೂ ಕೆಲವು ಪ್ರದೇಶಗಳಲ್ಲಿ ಕೂತರೂ, ಮುಟ್ಟಿದರೂ, ಒದ್ದರೂ ಅದು ನಡೆಯಲಿರುವ ಅಂಶಗಳಿಗೆ ಸೂಚನೆ ಎಂದು ಕೆಲವು ನಂಬಿಕೆಗಳಿವೆ. ಒಂದು ವೇಳೆ ನೀವು ಹೊರಗೆ ಹೋಗುವಾಗ ಕಾಗೆ ಬಂದು ಜೋರಾಗಿ ಕೂಗಿ ಹೋಯಿತು ಎಂದರೆ ನೀವು ಹೊರಡುತ್ತಿರುವ ಕೆಲಸ ಅಥವಾ ಪ್ರಯಾಣ ಸಕ್ಸಸ್ ಆಗುತ್ತದೆ ಎಂಬ ಸೂಚನೆ. ತುಂಬಿದ ಕೊಡದ ಮೇಲೆ ಕೂತಿರುವ ಕಾಗೆಯನ್ನು ಯಾರು ನೋಡುತ್ತಾರೋ ಅವರು ಶ್ರೀಮಂತರಾಗುತ್ತಿದ್ದಾರೆ ಎಂದರ್ಥ. ಒಂದು ವೇಳೆ ಕಾಗೆ ತನ್ನ ಬಾಯಲ್ಲಿ ರೊಟ್ಟಿ, ಬ್ರೆಡ್ ಅಥವಾ ಮಾಂಸವನ್ನು ಹಿಡಿದು ಹೊರಟಿತು ಎಂದರೆ ಏನೋ ಶುಭಸುದ್ದಿ ಕೇಳಲಿದ್ದೀರಿ ಎಂದರ್ಥ. ಮನೆ ಬಳಿ ಅಥವಾ ಕಚೇರಿ ಬಳಿ ಅಥವಾ ಊರಲ್ಲಿ ಕೂಗಿದರೆ ಅದು ಅಶುಭ ಸಂಕೇತ. ಆ ಪ್ರದೇಶದ ಮುಖ್ಯಸ್ಥ ಸಮಸ್ಯೆಗೆ ಸಿಗುತ್ತಾನೆ ಎಂದರ್ಥ. ಒಂದು ವೇಳೆ ತಲೆಮೇಲೆ ಕಾಗೆ ಕೂತರೆ ಅವರು ಅವಮಾನಗಳಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಕಾಗೆ ಮಹಿಳೆಯ ತಲೆ ಮೇಲೆ ಅಥವಾ ಅವರ ಮೇಲೆ ಕೂತರೆ ಆಕೆಯ ಗಂಡ ಸಮಸ್ಯೆಗೆ ಸಿಕ್ಕಿಬೀಳುತ್ತಾರೆ ಎಂದರ್ಥ. ಒಂದು ವೇಳೆ ಕಾಗೆ ಸಂಜೆ ಹೊತ್ತು ಆಗ್ನೇಯ ದಿಕ್ಕಿನಿಂದ ಬರುವುದು ನೋಡಿದರೆ ದ್ರವ್ಯ ಲಾಭ ಎಂದರ್ಥ

ಎಲ್ಲಿದೆ ಕುಟುಂಬ ರಾಜಕಾರಣ...???

ಎಲ್ಲಿದೆ ಕುಟುಂಬ ರಾಜಕಾರಣ...???
ಜನತಾದಳದಿಂದ #ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು ಅವರ ಮಗ #ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿ ಆಗಿದ್ದರು ... ಈಗ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಅಭ್ಯರ್ಥಿ... #ಪ್ರಜ್ವಲ್ ರೇವಣ್ಣನ ಎಂಟ್ರಿ ಶುರುವಾಗಿದೆ..
#ಕಾಂಗ್ರೆಸ್ ನಿಂದ #ನೆಹರು ಪ್ರಧಾನಿ ಆದರು..... ಅವರ ಮಗಳು #ಇಂದಿರಾ ಕೂಡ ಪ್ರಧಾನಿ ಆಗಿದ್ದಳು .... ಈ ಇಂದಿರಮ್ಮನ ಮಗ ಪೈಲೆಟ್ #ರಾಜೀವ್_ಗಾಂಧಿ ಕೂಡ ಪ್ರಧಾನಿ ಆಗಿದ್ರು.... ಇನ್ನೂ ಇಟಲಿ ಮೇಡಂ ಸೋನಿಯಾ
2004 ರಲ್ಲಿ ಪ್ರಧಾನಿ ಆಗಲು ಸಿದ್ಧತೆ ನಡೆಸುವಾಗಲೆ #ಸುಬ್ರಮಣ್ಯಂ_ಸ್ವಾಮಿ ಅಂದಿನ ರಾಷ್ಟ್ರಪತಿ #ಅಬ್ದುಲ್_ಕಲಾಂ ಗೆ ದೂರು ಕೊಟ್ಟು ಇಟಲಿ ಪ್ರಜೆ ಭಾರತದ ಪ್ರಧಾನಿ ಆಗಲು ಸಾಧ್ಯವಿಲ್ಲ ಅಂತ ವಾದ ಮಂಡಿಸಿ ಗೆದ್ದರು.. ಈಗ ಮತ್ತೆ ಸೋನಿ ಮೇಡಂ ತಮ್ಮ ಸುಪುತ್ರನಿಗೆ ಅಂದ್ರೆ #ರಾಹುಲ್_ಗಾಂಧಿ ಗೆ ಅಧ್ಯಕ್ಷ ಸ್ಥಾನ ಕೊಟ್ಟು ಕುಟುಂಬ ರಾಜಕಾರಣವನ್ನೆ ಬೆಳೆಸುತ್ತಿದ್ದಾರೆ.... ಇದೊಂದು ದುರಂತವೇ ಸರಿ..
ಇನ್ನು ನಮ್ಮ #ಬಿಜೆಪಿಗೆ ಬಂದ್ರೆ ಸಾಮಾನ್ಯ ಪತ್ರಕರ್ತನಾಗಲು ಹೊರಟಿದ್ದ #ಅಟಲ್ ಪ್ರಧಾನಿ ಆದರು...
ರಾಜಸ್ಥಾನದ ಬಿಸಿಲಲ್ಲಿ ಸಂಘದ ಪ್ರಚಾರಕ್ ಆಗಿ ಕೆಲಸ ಮಾಡುತ್ತಿದ್ದ #ಅಡ್ವಾಣಿ ಗೃಹ ಮಂತ್ರಿ ಮತ್ತು ಉಪಪ್ರಧಾನಿ ಆದರು...
ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯ ಹುಡುಗ #ನರೇಂದ್ರ_ಮೋದಿ ಭವ್ಯ ಭಾರತದ ಹೆಮ್ಮೆಯ ಪ್ರಧಾನಿ ಆದರು...
ದೇವಸ್ಥಾನದಲ್ಲಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದ #ಯೋಗೀಜಿ ಮುಖ್ಯಮಂತ್ರಿ ಆದರು....
ಸೋರುತ್ತಿದ್ದ ಮನೆಯಲ್ಲಿ ಹುಟ್ಟಿ ದಲಿತನೆಂಬ ಹಣೆಪಟ್ಟಿ ಇದ್ದ #ರಾಮನಾಥ್_ಕೋವಿಂದ್ ರಾಷ್ಟ್ರಪತಿ ಆದರು...
ಆಂಧ್ರ ಪ್ರದೇಶದ ಹಳ್ಳಿಗಳಲ್ಲಿ ಪಕ್ಷದ ಭಿತ್ತಿ ಪತ್ರಗಳನ್ನು ಅಂಟಿಸುತ್ತಿದ್ದ ಸಾಮಾನ್ಯ ಕಾರ್ಯಕರ್ತ #ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಆಗಿದ್ದಾರೆ..
ಸೈಕಲ್ ನಲ್ಲಿ ಹಳ್ಳಿ ಹಳ್ಳಿಗಳಗೆ ಹೋಗಿ ರೈತರನ್ನು ಸಂಘಟಿಸಿದ
#ಯಡಿಯೂರಪ್ಪ ಮುಖ್ಯಮಂತ್ರಿ ಆದರು...
ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಆಗಿದ್ದ #ಅರುಣ್_ಜೆಟ್ಲಿ ಕೈಯಲ್ಲಿ ಇಂದು ಭಾರತದ ಅರ್ಥ ವ್ಯವಸ್ಥೆ ಇದೆ...
ಅಮೇರಿಕದ ರಸ್ತೆಗಳಲ್ಲಿ ಸೇಲ್ಸ್ ಗರ್ಲ್ ಆಗಿದ್ದ #ನಿರ್ಮಲ_ಸೀತಾರಾಮನ್ ಇಂದು ಭವ್ಯ ಭಾರತದ ರಕ್ಷಣಾ ಸಚಿವೆ...
ಇದು ಬಿಜೆಪಿಯ ಕೊಡುಗೆ.... ಹೌದು ಕೆಲವು ಬಿಜೆಪಿ ನಾಯಕರ ಮಕ್ಕಳು ಕೂಡ ರಾಜಕೀಯ ಮಾಡುತ್ತಿದ್ದಾರೆ... ಹಾಗಂತ ಅವರಿಗೆಲ್ಲರಿಗೂ ತಂದೆಯರು ಬಿಟ್ಟು ಹೋದ ಹುದ್ದೆ ಕೊಡಲು ಬಿಜೆಪಿ ಪಕ್ಷವೇನೂ ಕುಟುಂಬ ರಾಜಕೀಯ ಮಾಡುತ್ತಿಲ್ಲ...

ಅರಬ್ ರಾಷ್ಟ್ರದ ಮೂಲ ನಮ್ಮ ವೈದಿಕ ಧರ್ಮ

*ಅರಬ್ ರಾಷ್ಟ್ರದ ಮೂಲ ನಮ್ಮ ವೈದಿಕ ಧರ್ಮವೆಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ! ವೈದಿಕ ಧರ್ಮವೆಂಬ ವಿಶ್ವಧರ್ಮ!!!!*
ನಮ್ಮ ವೈದಿಕ ಧರ್ಮ ಸನಾತನ ಸಂಸ್ಕೃತಿಯ ವಾರಸುದಾರರು ನಾವು. ಇಸ್ಲಾಮಿಕ್ ಪೂರ್ವ ಅರೇಬಿಯಾದಲ್ಲಿ ವೈದಿಕ ಇತಿಹಾಸವಿತ್ತು ಅದರ ಗುಪ್ತ ಸತ್ಯ ತಿಳಿಸೋ ಪ್ರಯತ್ನ.
ಇಂದು ಅರಬ್ ರಾಷ್ಟ್ರಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ. ಆದರೆ ನಿಮಗೆಲ್ಲಾ ಅರಬ್ ಇತಿಹಾಸ ತಿಳಿದರೆ ಆಘಾತವಾಗಬಹುದು. ಅರಬ್ ನಾಗರಿಕತೆ ಶ್ರೀಮಂತ ನಾಗರಿಕತೆಗಳಲ್ಲಿ ಒಂದಾಗಿತ್ತು ಮತ್ತು ಪ್ರಪಂಚದಲ್ಲಿ ಹೆಚ್ಚು ಪ್ರಗತಿಪರವಾಗಿತ್ತು ಯಾಕಂದ್ರೆ ಆವಾಗ ವೈದಿಕ ಧರ್ಮ ಅಲ್ಲಿತ್ತು. ಅರಬ್ ಇತಿಹಾಸವನ್ನು ಕೆದಕಿದರೆ ಅಲ್ಲಿಯ ಮೂಲ ಧರ್ಮದ ಬಗ್ಗೆ ತಿಳಿಯುತ್ತದೆ. ಅವರು ಮೊದಲು ವೈದಿಕ ಸಂಪ್ರದಾಯವನ್ನೇ ಅನುಸರಿಸುತ್ತಿದ್ದರು. ಜಗತ್ತಿನೆಲ್ಲೆಡೆ ಇಸ್ಲಾಂ ದಾಳಿಯಾದ ಹಾಗೆ ಅಲ್ಲಿಯೂ ದಾಳಿಯಾಗಿ ಆ ನಾಹರಿಕತೆಯನ್ನು ನಾಶಪಡಿಸಿತು. ಒಂದು ಅದ್ಭುತ ಯುಗದ ನಾಶಕ್ಕೆ ಕಾರಣವಾಯಿತು.
ಅರಬ್ ರಾಷ್ಟ್ರ ಕುದುರೆಗಳಿಗೆ ಹೆಸರುವಾಸಿಗಿದೆ‌. ಅರಬ್ ಕುದುರೆಗಳು ಶತಮಾನಗಳಿಂದಲೂ ಜಗತ್ತಿನ ಅನೇಕ ದೇಶಗಳಿಗೆ ಸರಬರಾಜು ಆಗುತ್ತವೆ. ಅರಬ್ ಅಥವಾ ಅರಬ್ ಸ್ಥಾನ ಎಂಬ ಶಬ್ದ ಮೂಲತಃ ಸಂಸ್ಕೃತದ ಆರ್ವಸ್ಥಾನ ಪದದಿಂದ ಆದದ್ದು. ಆರ್ವ ಅಂದ್ರೆ ಕುದುರೆ,ಸ್ಥಾನ ಎಂದರೆ ಸ್ಥಳ ಎಂದರ್ಥ. ಇಲ್ಲಿ ಒಂದು ವಿಷಯ ಅರ್ಥವಾಗುತ್ತದೆ ಸಂಸ್ಕೃತದ ಆರ್ವಸ್ಥಾನ ಅರಬ್ ಅಂತ ಆಗಿದೆ ಅಂದ್ರೆ ಅಲ್ಲಿ ಸಂಸ್ಕೃತ ಭಾಷೆಯಿತ್ತ. ಸಂಸ್ಕೃತ ಭಾಷೆ ನಮ್ಮ ವೈದಿಕ ಧರ್ಮದ್ದಲ್ಲವೇ?
ಸಂಸ್ಕೃತ ಭಾಷೆಯಿಂದ ಅನೇಕ ಸ್ಥಳೀಯ ಭಾಷೆಗಳು ಹುಟ್ಟಿಕೊಂಡಿವೆ . ಅರೇಬಿಕ್ ಭಾಷೆಯ ಮೂಲ ಕೂಡಾ ಸಂಸ್ಕೃತ ಭಾಷೆಯೇ. ಇವಾಗಲೂ 1000 ಸಂಸ್ಕೃತ ಪದಗಳು ಅರೇಬಿಕ್ ಭಾಷೆಯಲ್ಲಿವೆ. ಅರಬ್ ರಾಷ್ಟ್ರದಲ್ಲಿ ಅನೇಕ ಕತ್ತಿಗಳು ಸಂಸ್ಕೃತ ಹೆಸರಿನಿಂದಲೇ ಇದ್ದವು,ಇವಾಗಲೂ ಇರಬಹುದು. ಅಲ್ಲಿ ಆವಾಗ ಗಣಿತ ಶಾಸ್ತ್ರವನ್ನು ಹಿಂದುಸಾ ಎಂದು ಕರೆಯಲಾಗುತ್ತಿತ್ತು. ಖಗೋಳ ಶಾಸ್ತ್ರದ ಗ್ರಂಥವಾದ ಬ್ರಹ್ಮ-ಸ್ಪುತ ಸಿದ್ಧಾಂತವನ್ನು ಸಿಂದ್-ಹಿಂದ್ ಎಂದು ಕರೆಯಲಾಗುತ್ತಿತ್ತು.
ಅರಬ್ಬರು ಭಾರತದಿಂದ ತುಂಬಾ ಪ್ರಭಾವಿತರಾಗಿದ್ದರು. ಪ್ರಸಿದ್ಧ ವಿದ್ವಾಂಸ ಡಬ್ಲೂ.ಎಚ್.ಸಿದಿಖಿ ಹೀಗೆ ಬರೆಯುತ್ತಾರೆ,
ಅರಬ್ಬರು ಹಿಂದು ಶಬ್ದವನ್ನು ಗೇಲಿ ಮಾಡ್ತಾರೆ ಎನ್ನುವ ಕಲ್ಪನೆ ಇದೆ. ಆದರೆ ಅದು ಸಂಪೂರ್ಣ ತಪ್ಪು. ವಾಸ್ತವವಾಗಿ ಅರಬ್ಬರು ಹಿಂದುಗಳು ಮತ್ತು ಹಿಂದು ಧರ್ಮವನ್ನು ಗೌರವಿಸುತ್ತಾರೆ.
ಅರಬ್ಬರು ಹಿಂದೂ ಧರ್ಮವನ್ನು ಶ್ಲಾಘಿಸುತ್ತಿದ್ದ ಅನೇಕ ಪದ್ಯಗಳನ್ನು ಬರೆದಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ.
“ಕಾಫವೊಮಾಲ್ ಫಿಕ್ರಾ ಮಿನ್ ಉಲ್ಯೂಮಿನ ಟ್ಯಾಬ್
ಆಸ್ರಾಯ್ಕಲುವಾನ್ ಅಮತಾಲ್ ಹವಾ ತಾಜಾಖ್ರೂ
ನಾವು ತಾಜಾಖಾಯ್ರೋಬಾ ಉಡಾನ್ ಕಲಾಲ್ವೇಡ್-ಇ ಲಿಬೊವಾ
ವಾಲುಕಾಯಯೆ ಜಟಾಲಿ, ಹು ಯೌಮಾ ಟ್ಯಾಬ್ ಅಯ್ರುರು
ವಾ ಅಬಲೋಳ ಅಜಬು ಅರ್ಮೆಮನ್ ಮಹದೇವಾ
ಮನೋಜೈಲ್ ಇಲಾಮುದ್ದೀನ್ ಮನ್ಹಮ್ ವಾ ಸಾಯಟ್ಟರು
ವಾ ಸಾಹಬಿ ಕೇ-ಯಾಮ್ ಫೀಮಾ-ಕಾಮಿಲ್
ಮಿಂಡೆ ಯೌಮನ್ ವಾ ಯಕುಲಮ್ ನೋ ಲತಾಬಾಹನ್ ಫೆಯೆನ್ನೆಕ್ ತವ್ಜಾರೂ
ಮಸ್ಸಾಯರೆ ಅಖಾಲಕನ್ ಹಾಸನ ಕುಲ್ಲಾಹಮ್
ನಜುಮುಮ್ ಅಜ- ಸುಮ್ಮ ಗಾಬುಲ್  ಹಿಂದುನಲ್ಲಿ.”
ಇದರ ತತ್ವಾರ್ಥ ಪಾಪ,ಕ್ರೋಧ, ವ್ಯರ್ಥತೆಯಿಂದ ಮನುಷ್ಯ ಜೀವನವನ್ನು ಕಳೆಯುತ್ತಾನೆ. ಅವನು ಒಮ್ಮೆ ಮಹಾದೇವನನ್ನು ಶುದ್ಧ ಹೃದಯದಿಂದ ಪೂಜಿಸಿದರೆ
ಅವನಿಗೆ ಮೋಕ್ಷ ದೊರೆಯುತ್ತದೆ. ಭಾರತದಲ್ಲಿ ಒಂದು ದಿನದ ನಿವಾಸವು ಮೋಕ್ಷ ಪಡೆಯುತ್ತದೆ. ಈ ಕವಿತೆ 1850 BCಯಲ್ಲಿ ಬರೆಯಲ್ಪಟ್ಟಿದ್ದು. ಇದಕ್ಕಿಂತಲೂ
ಸಾಕ್ಷಿ ಬೇಕಾ ಅರಬ್ಬರ ಮೂಲ ವೈದಿಕ ದರ್ಮವೆನ್ನೋಕೆ. ಜಿರಾಮ್ ಬಿಂಟೋ ಎನ್ನುವ ಕವಿ ರಾಜ ವಿಕ್ರಮಾದಿತ್ಯನನ್ನು ಶ್ಲಾಘಿಸುವ ಕವಿತೆಯನ್ನು ಬರೆದಿದ್ದರು. ಕುತೂಹಲಕಾರಿ ವಿಷಯವೆಂದರೆ ಸರ್ ಡಬ್ಲೂ ಡ್ರಮ್ಮೊಂಡ್ ಬರೆದ ಪುಸ್ತಕದಲ್ಲಿ 350ಕ್ಕಿಂತಲೂ ಹೆಚ್ಚಿನ ದೇವತೆಗಳ ಆರಾಧನೆಯನ್ನು ಅರಬ್ಬರು ಮಾಡುತ್ತಿದ್ದರು. ಆ ದೇವತೆಗಳ ಅಸ್ತಿತ್ವವು ಕಾಬಾ ಮಂದಿರದಲ್ಲಿ ಕಂಡು ಬರುತ್ತದೆ ಎಂದು ಆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.ಅಂದರೆ ಅರಬ್ಬರ ಮೂಲ ನಮ್ಮ ಹಿಂದೂ ಧರ್ಮವೇ
ಅಂತಾಯ್ತು.
ಮೊಹಮ್ಮದರು ಕಾಬಾವನ್ನು ವಶಪಡಿಸಿಕೊಳ್ಳುವ ಮುನ್ನ ಕಾಬಾ ಅಂತರಾಷ್ಟ್ರೀಯ ವೈದಿಕ ಮಂದಿರವಾಗಿತ್ತು. ವೇದ,ಗ್ರಂಥ,ಉಪನಿಷತ್ತುಗಳ ಪಠಣ ಅಲ್ಲಿ
ಆಗ್ತಿತ್ತು. ಆ ಸ್ಥಳವನ್ನು ಮುಸಲ್ಮಾನರು ಹರಾಮ್ ಎಂದು ಕರೆಯುತ್ತಾರೆ. ಈ ಹರಾಮ್ ಎಂಬ ಶಬ್ದವು ಸಂಸ್ಕೃತದ ಹರಮಾಮ್ ಎಂಬ ಶಬ್ದದಿಂದ ಬಂದದ್ದು.
ಹರಿಯಾಮ್ ಎಂಬ ಪದವು ಹರಿ/ವಿಷ್ಣುವನ್ನು ಉಲ್ಲೇಖಿಸುತ್ತದೆ.
ಅರೇ ಕಾಬಾದಲ್ಲಿ ಹರಿ/ವಿಷ್ಣು ಅಂದ್ರೆ ಅಚ್ಚರಿಯಲ್ವೆ?
ಅಂದ್ರೆ ಅಲ್ಲಿ ಮೊದಲು ವೈದಿಕ ಧರ್ಮವಿತ್ತು ಅಂತಾಯ್ತು.
ಕಾಬಾ ಎಂಬ ಪದವು ಸ್ವತಃ ಗ್ರಾಬ್/ಗ್ರಹವನ್ನು ವಿವರಿಸುತ್ತದೆ. ಕಾಬಾವು ಗಾಳಿಯನ್ನು ಎದುರಿಸಲು
ಖಗೋಳವಾಗಿ ಆಧಾರಿತವಾಗಿದೆ. ಕಾಬಾದ ಆಯತಾಕಾರ ತಳದ ಸಣ್ಣ ಅಕ್ಷವು ಬೇಸಿಗೆಯ ಸೂರ್ಯೋದಯ ಮತ್ತು ಚಳಿಗಾಲದ ಸೂರ್ಯಾಸ್ತದ ಕಡೆಗೆ ಒಗ್ಗುವ ಹಾಗೆ ಜೋಡಿಸಲ್ಪಟ್ಟಿದೆ. ಇದರಲ್ಲಿ 360 ವೈದಿಕ ದೇವತೆಗಳ ಪ್ರತಿಮೆಗಳಿದ್ದವು ಮತ್ತು ಸೂರ್ಯನಿಗೆ ಸಂಭಂದಿಸಿರುವ ಮಂದಿರವಿತ್ತು. ಕಾಬಾದ ಪ್ರತಿಯೊಂದು ಗೋಡೆಯು ಒಂದೊಂದು ದಿಕ್ಕನ್ನು ಸೂಚಿಸುತ್ತದೆ. ಕಾಬಾದ ಮಧ್ಯಭಾಗದಲ್ಲಿ ಆಕ್ಟೋಗೋಮ್ ಪೀಠವಿದೆ. ಇದು ಹಿಂದೂ ಧರ್ಮದ ತಾಂತ್ರಿಕ ಮಾದರಿಯಿಂದ ಪಡೆಯಲಾಗಿದೆ.
ಇಂದು ಅದನ್ನು ಮುಕಾಮ್-ಇ-ಇಬ್ರಾಹಿಂ ಎಂದು ಕರೆಯುತ್ತಾರೆ.
ಅನಕ್ಷರಸ್ತರಾಹಿದ್ದ ಮೊಹಮ್ಮದ್ ದಾಳಿ ಮಾಡಿ ಹೊಸ ಧರ್ಮವನ್ನು ಆವಿಷ್ಕಾರ ಮಾಡಲಿಲ್ಲ. ವೈದಿಕ ಧರ್ಮದ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನಜ ಸ್ಥಾಪಿಸಿದರು. ವೈದಿಕ ಧರ್ಮದ ತಳಹದಿಯ ಬಗ್ಗೆ ತಿಳಿಯಬಾರದು ಅಂತ ಅನೇಕ ನಿರ್ಭಂದನೆಗಳನ್ನ ಜಾರಿಗೆ ತಂದರು. ಅದಕ್ಕಾಗಿ ಹಿಂದುಗಳ ಆಚರಣೆಗಳ ವಿರದ್ಧ ಆಚರಣೆಗಳನ್ನು ಜಾರಿಗೆ ತಂದರು. ವೈದಿಕ ಧರ್ಮ ವೈಜ್ಞಾನಿಕ ತಾರ್ಕಿಕದಿಂದ ನಿರೂಪಿಸಲಾಗಿದೆ,ವೈದಿಕ ಧರ್ಮದ ಪ್ರತಿಯೊಂದು ಸಂಪ್ರದಾಯವೂ ವೈಜ್ಞಾನಿಕವಾಗಿದೆ. ಇದನ್ನರಿಯದ ಮೊಹಮ್ಮದರು ಕಾಬಾದ 360 ವಿಗ್ರಹಗಳನ್ನು ನಾಶಮಾಡಿದರು. ಆದರೆ ಶಿವಲಿಂಗವನ್ನು ಮಾತ್ರ ಅವರಿಂದ ಹಾಳು ಮಾಡಲಾಗಲಿಲ್ಲ. ಶಿವಲಿಂಗ್ ವಿರೂಪಗೊಂಡಿತು,ಅದಕ್ಕೆ ಬೆಳ್ಳಿಯ ಪದರವನ್ನು ಹಾಕಿ ಗುರುತು ಸಿಗದಂತೆ ಮಾಡಲು ಪ್ರಯತ್ನಿಸಿದರು ಅದು ಸಾಧ್ಯವಾಗಲಿಲ್ಲ. ಇವಾಗ ಅದನ್ನು ಆಸ್ವಾ ಎಂದು ಕರೆಯುತ್ತಿದ್ದರು. ಆಸ್ವಾದ್ ಎಂಬುದು ಸಸ್ಕೃತದ ಅಶ್ವೆಟ್ ಪದ ಅಂದರೆ ಕಪ್ಪುಕಲ್ಲು.
ಅರೇ ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷೇಧವಲ್ವಾ?
ಹಾಗಾದರೆ ಆಸ್ವಾದ್(ಕಪ್ಪುಕಲ್ಲು) ಎಂಬುದು ಎಲ್ಲಿಂದ ಬಂತು. ಅಂದರೆ ಅರಬ್ಬಿನ ಮೂಲ ವೈದಿಕ ಧರ್ಮ ಅಂತಾಯ್ತಲ್ಲ.
ಅರಬ್ಬರು ನಮ ಮತ್ತು ಯಜ ಪದಗಳನ್ನು ವಿಡಂಬಣೆ ಮಾಡಿ ನಮಾಜ್ ಎಂದು ಮಾಡಿದರು. ನಮ ಮತ್ತು ಯಜ ಅಂದ್ರೆ ಪೂಜೆ ಮತ್ತು ಆರಾಧನೆ ಎಂದರ್ಥ. ನಮ ಮತ್ತು ಯಜ ವೈದಿಕ ಧರ್ಮದ ಸಂಸ್ಕೃತ ಪದಗಳು. ಮೊಹಮ್ಮದರು ಅನಕ್ಷರಾಗಿದ್ರಿಂದ ಅದು ಗೊತ್ತಾಗಲೇ ಇಲ್ಲ ಅದಕ್ಕಾಗಿ ನಮಾಜ್ ಎಂದು ಕರೆದರು. ಇವಾಗ ಅರ್ಥವಾಯಿತಲ್ವಾ ನಮಾಜ್ ಎಂಬುದರ ಅರ್ಥ.
ಅರಬ್ಬಿನ ಮೂಲ ಧರ್ಮ ಯಾವುದು ಅಂತ ಗೊತ್ತಾಯ್ತಾ?
ಹಿಂದುಗಳ ಪೂರ್ವ ದಿಕ್ಕನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮೊಹಮ್ಮದರು ಅದಕ್ಕೆ ವಿರುದ್ಧವಾಗಿ ಅಂದರೆ ಪಶ್ಚಿಮದ ಕಡೆ ಪ್ರಾರ್ಥಿಸಲು ಅನುಯಾಯಿಗಳಿಗೆ ಹೇಳಿದರು. ಅಂದ್ರೆ ಮೂಲ ಧರ್ಮವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು.
ಕಾಬಾದಲ್ಲಿ ಮೊದಲು ವಿಗ್ರಹ ಪೂಜೆ ಇತ್ತು,ಮೊಹಮ್ಮದರು ದಾಳಿ ಮಾಡಿ ಅವುಗಳನ್ನು ನಾಶ ಮಾಡಿ. ವಿಗ್ರಹ ಪೂಜೆ ನಿಷೇಧ ಮಾಡಿದರು. ಯಾಕಂದ್ರೆ ವಿಗ್ರಹ ಪೂಜೆ ಮುಂದುವರೆದರೆ ಅದರ ಮೂಲತಃ ಧರ್ಮ ಯಾವುದು ಅಂತ ಗೊತ್ತಾಗುತ್ತದೆ ಎಂದು.
ಅದಕ್ಕಾಗೇ ವಿಗ್ರಹ ಪೂಜೆ ಇಸ್ಲಾಮಿಕ್ ವಿರೋಧಿ ಅಂತಾಯ್ತು.
ವೈದಿಕ ಧರ್ಮದಲ್ಲಿ ಹಾಡುವುದು ಸಾಮನ್ಯ. ಹೆಚ್ಚಿನ ವೇದಗಳನ್ನು ಮೌಖಿಕ ಪಠಣದ ಮೂಲಕ ಕಲಿಸಲಾಗುತ್ತದೆ. ಸಂಗೀತ ಹಿಂದುಗಳ ಅವಿಭಾಜ್ಯ ಅಂಗ. ಸಂಗೀತ ದೇವರ ಭಾಷೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಇಸ್ಲಾಮಿನಲ್ಲಿ ಸಂಗೀತ ನಿಷಿದ್ಧವಿದೆ. ಸಂಗೀತವನ್ನು ಇಸ್ಲಾಮಿಕ್ ವಿರೋಧಿ ಎಂದು ಮೊಹಮ್ಮದರು ಜಾರಿಗೆ ತಂದರು. ಕಾರಣವಿಷ್ಟೆ ಇಸ್ಲಾಮಿನ ಮೂಲ ಧರ್ಮ ವೈದಿಕ ಧರ್ಮವೆಂಬುದು ಗೊತ್ತಾಗಬಾರದೆಂದು.
ಮುಸಲ್ಮಾನರ ಪವಿತ್ರ ಸಂಕೇತ 786. ಅದನ್ನು ಅವರು ಪವಿತ್ರ ಸಂಕೇತವೆನ್ನುತ್ತಾರೆ. ಆ 786 ಯಾಕೆ ಆಯ್ಕೆ ಮಾಡಿದ್ದಾರೆ ಅಂತ ಅವರಿಗೆ ಕೇಳಿದರೆ ಗೊತ್ತಿದ್ದರೂ ಉತ್ತರಿಸೋಕೆ ಸಾಧ್ಯವಿಲ್ಲ!! ಯಾಕಂದ್ರೆ 786 ಅರೇಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಹಿಂದೂ ಧರ್ಮದ ಪವಿತ್ರ ಸಂಕೇತ OMನ್ನು ನಿರೂಪಿಸುತ್ತದೆ. ಓಂ ನಮ್ಮ ಸ್ವತ್ತಲ್ವಾ ಅದು ಹಿಂದೂ ಧರ್ಮದ ಸಂಕೇತವಲ್ವಾ? ಇಸ್ಲಾಂ ಧರ್ಮದ ತಳ ಹಿಂದೂ ಧರ್ಮವೇ ಅಂತಾಯ್ತು.
ಮೊಹಮ್ಮದರು ಹಿಂದೂ ಧರ್ಮದ ಆಚರಣೆಗೆ ವಿರುದ್ಧವಾಗಿ ಅವರ ಆಚರಣೆಗಳನ್ನು ತರಲು ಪ್ರಯತ್ನಿಸಿದರು. ಕ್ರೂರತೆಯನ್ನು ಬೆಂಬಲಿಸಿದರು ಅದಕ್ಕಾಗೆ ಅವರ ಧರ್ಮ ಬೇರೆ ಧರ್ಮವನ್ನು ಸಹಿಸಿಕೊಳ್ಳೋದಿಲ್ಲ. ಇವಾಗ ಇಡೀ ಜಗತ್ತಿಗೆ ಸ್ಪಷ್ಠವಾಗಿ ಅರ್ಥವಾಗ್ತಿದೆ ಅವರ ಧರ್ಮ ಇನ್ನೊಂದು ಧರ್ಮವನ್ನು ಸಹಿಸೊಲ್ಲವೆಂಬುದು.
ಅರಬ್ ರಾಷ್ಟ್ರಗಳಲ್ಲಿ ಅನೇಕ ಸಲ ವೈಜ್ಞಾನಿಕ ಸಂಶೋಧನೆ ಮಾಡಲು ವಿಜ್ಞಾನಿಗಳು ಪ್ರಯತ್ನಿಸಿದ್ದರು ಆದರೆ ಅರಬ್ ರಾಷ್ಟ್ರದವರು ಸಹಕರಿಸಲಿಲ್ಲ. ಕಾರಣವಿಷ್ಟೇ
ಇಸ್ಲಾಮಿನ ಮೂಲ ಗೊತ್ತಾಗಬಹುದೆಂದು.
ಹೆಮ್ಮೆಯಿಂದ ಹೇಳಿ ಸನಾತನ ಸಂಸ್ಕೃತಿಯ ವಾರಸುದಾರರು ನಾವು.