ಭಾನುವಾರ, ಜನವರಿ 28, 2018

*ಕಾಳಸರ್ಪ ಯೋಗಾಯೋಗ*

 *ಕಾಳಸರ್ಪ ಯೋಗಾಯೋಗ*🕉
ಸಂಗ್ರಹಿಸಿದ್ದು
ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು. ಭಯಪೀಡಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗ್ತಾನೆ, ಇನ್ನಿಲ್ಲದ ತೊಂದರೆಗೆ ಸಿಕ್ಕಿ ಹಾಕೊಳ್ತಾನೇ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂಬೋಣ. ಮನೋವಿಜ್ಞಾನಿಗಳು ಈ ಅಂಶವನ್ನೇ ಹೇಳ್ತಾರೆ. ಎಲ್ಲಿಯವರೆಗೆ ನೀವು ಭಯಪೀಡಿತರಾಗಿರ್ತೀರೋ ಅಲ್ಲಿಯವರೆಗೆ ರೋಗಗಳು ನಿಮ್ಮನ್ನು ಕಾಡುತ್ತವೆ ಅಂತ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳೋದಾದ್ರೆ ಕಾಳಸರ್ಪ ಯೋಗ ಅನ್ನೋದು ಮನಸ್ಸಿನ ಭೀತಿಗೆ ಸಂಬಂಧಿಸಿದ್ದು.
ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಹಾಗಾಗಿ ಜಾತಕದಲ್ಲಿ ರಾಹು ಇರುವ ಸ್ಥಾನವನ್ನು ಸರ್ಪದ ಶಿರೋಭಾಗವೆಂತಲೂ, ಕೇತುವಿನ ಸ್ಥಾನವನ್ನು ಸರ್ಪದ ಬಾಲದ ತುದಿಗೂ ಹೋಲಿಸುತ್ತಾರೆ. ಸರ್ಪದ ತಲೆ ಮತ್ತು ಬಾಲದ ನಡುವೆ ಇನ್ನುಳಿದ ಗ್ರಹಗಳು (ರವಿ, ಸೋಮ, ಕುಜ, ಶುಕ್ರ, ಬುಧ, ಗುರು, ಶನಿ) ಇದ್ದರೆ ಆ ಯೋಗವನ್ನು ಕಾಳಸರ್ಪ ಯೋಗವೆನ್ನುತ್ತಾರೆ. ಅಂತಹ ಯೋಗದಲ್ಲಿ ಜನಿಸಿದವರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆಯಿದೆ. ಕೆಲವರಂತೂ ಕಾಳಸರ್ಪ ಯೋಗವನ್ನು ದೋಷಕ್ಕೆ ಹೋಲಿಸುತ್ತಾರೆ. ಕಾಳಸರ್ಪ ದೋಷದಿಂದ ವಿಮುಕ್ತಿ ಹೊಂದಲು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಬೇಕೆಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಕಾಳಸರ್ಪ ದೋಷ ಪರಿಹಾರಕ್ಕಾಗಿ ಕಾಳಸರ್ಪ ಯಂತ್ರವನ್ನು ಮನೆಯೊಳಗಿಟ್ಟು ಪೂಜಿಸುವುದುಂಟು. ಅದರಿಂದಾಗಿ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ.
ಆದರೆ ಗ್ರಹಗಳ ಚಲನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಜಾತಕನ ಗ್ರಹಕೂಟದಲ್ಲಿ ರಾಹು, ಕೇತುಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಹಾಗಾಗಿ ಕಾಳಸರ್ಪ ದೋಷವಿದ್ದರೂ ಮನುಷ್ಯನ ಸ್ವಭಾವದ ಮೇಲಾಗುವ ಪರಿಣಾಮಗಳು ಬೇರೆಯಾಗೇ ಇರುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗವಿದ್ರೂ ಹೆದರಿಕೊಳ್ಳೋ ಅವಶ್ಯಕತೆ ಇಲ್ಲ.
ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸ್ಥಾನಕ್ಕೆ ಅನುಗುಣವಾಗಿ ಕಾಳಸರ್ಪ ಯೋಗವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದ ಮೇಲೆ ಜ್ಯೋತಿಷಿಗಳು ಜಾತಕನ ಫಲವನ್ನು ಹೇಳುತ್ತಾರೆ. ಏಳು ಬಗೆಯ ಕಾಳಸರ್ಪ ಯೋಗಗಳೆಂದರೆ, ಅನಂತ, ಕಾಳಿಕಾ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ ಮತ್ತು ತಕ್ಷ ಕ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ರಾಹು ಸಂಬಂಧಿತ ಆಹಾರ ಅಂದರೆ ಉದ್ದು. ಅದರ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಶರೀರದಲ್ಲಿ ಟಾಕ್ಸಿಕ್‌ಅಂಶ ಹೆಚ್ಚುತ್ತದೆ. ವಾತದೋಷ ಉಂಟಾಗುತ್ತದೆ. ದೋಷದ ಕಾರಣ ವಾಯು ನೋವು ಮತ್ತಿತರ ಸಮಸ್ಯೆಗಳು ಕಾಣಬಹುದು. ಆ ಕಾರಣ ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಧ್ಯಾನ, ಪ್ರಾಣಾಯಾಮ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು. ಆಗ ಕಾಳಸರ್ಪ ದೋಷ ಕುರಿತಂತೆ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ.
*ಅನಂತ ಕಾಳಸರ್ಪ:*
ಲಗ್ನದಲ್ಲಿ ರಾಹುವಿದ್ದು ಕೇತು ಏಳನೆಯ ಮನೆಯಲ್ಲಿದ್ದರೆ ಜಾತಕನಿಗೆ ಅನಂತ ಕಾಳಸರ್ಪ ಯೋಗವಿರುತ್ತದೆ. ಅಂತಹ ಜಾತಕನು ವೃಥಾ ಅಪವಾದಕ್ಕೆ ಗುರಿಯಾಗುತ್ತಾನೆ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾನೆ ಎನ್ನಲಾಗುತ್ತದೆ.
*ಕಾಳಿಕಾ ಕಾಳಸರ್ಪ:*
ರಾಹು ಲಗ್ನದಿಂದ ಎರಡನೆಯ ಮನೆಯಲ್ಲಿದ್ದು, ಕೇತು ಎಂಟನೆಯ ಮನೆಯಲ್ಲಿದ್ದರೆ ಕಾಳಿಕಾ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ಯೋಗವಿರುವ ಜಾತಕನು ಆರ್ಥಿಕ ಸಮಸ್ಯೆಗಳಲ್ಲಿ ಬಳಲುವ ಸಾಧ್ಯತೆ ಹೆಚ್ಚು.
*ವಾಸುಕಿ ಕಾಳಸರ್ಪ:*
ರಾಹು ಲಗ್ನದಿಂದ ಮೂರನೆಯ ಮನೆಯಲ್ಲಿದ್ದು ಕೇತು ಒಂಬತ್ತನೆಯ ಮನೆಯಲ್ಲಿದ್ದರೆ ವಾಸುಕಿ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕಳತ್ರ ದೋಷವಿರುತ್ತದೆ ಎನ್ನಲಾಗುತ್ತದೆ. ಕೋರ್ಟಿನ ವ್ಯವಹಾರಗಳು ಅವರ ಪರವಾಗಿ ಆಗುವುದು ಕಡಿಮೆ.
*ಶಂಖಪಾಲ ಕಾಳಸರ್ಪ:*
ಲಗ್ನದಿಂದ ರಾಹು ನಾಲ್ಕನೆಯ ಮನೆಯಲ್ಲಿದ್ದು ಕೇತು 10ನೇ ಮನೆಯಲ್ಲಿದ್ದರೆ ಶಂಖಪಾಲ ಕಾಳಸರ್ಪ ಯೋಗವಿರುತ್ತದೆ. ಈ ಯೋಗದ ಜಾತಕನು ಸ್ವಯಂಕೃತಾಪರಾಧಕ್ಕೆ ಒಳಗಾಗಿ ತಾನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಅದರಲ್ಲೂ ಆಸ್ತಿ, ಭೂ ವಿವಾದಗಳಲ್ಲಿ ತೊಂದರೆ ಹೆಚ್ಚು. ಆರ್ಥಿಕವಾಗಿಯೂ ಸಾಕಷ್ಟು ತೊಂದರೆಗಳಿಗೆ ತುತ್ತಾಗುತ್ತಾನೆ ಎಂದು ಜ್ಯೋತಿಷಿಗಳು ಅಭಿಪ್ರಾಯಿಸುತ್ತಾರೆ.
*ಪದ್ಮ ಕಾಳಸರ್ಪ:*
ಲಗ್ನದಿಂದ ಐದನೆಯ ಮನೆಯಲ್ಲಿ ರಾಹುವಿದ್ದು ಕೇತು 11ನೇ ಮನೆಯಲ್ಲಿದ್ದರೆ ಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರನ್ನು ಅನುವಂಶಿಕ ಅಥವಾ ಸಂತಾನ ದೋಷ ಕಾಡುವ ಸಾಧ್ಯತೆ ಹೆಚ್ಚು.
*ಮಹಾಪದ್ಮ ಕಾಳಸರ್ಪ:*
ಲಗ್ನ ಭಾವದಿಂದ ರಾಹು ಆರನೆಯ ಮನೆಯಲ್ಲಿದ್ದು ಕೇತು 12ನೇ ಮನೆಯಲ್ಲಿದ್ದರೆ ಮಹಾಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಈ ಯೋಗವಿರುವವರು ಪದೇ ಪದೇ ವೈಪಲ್ಯವನ್ನು ಎದುರಿಸುತ್ತಾರೆ.
*ತಕ್ಷಕ ಕಾಳಸರ್ಪ*:
ಲಗ್ನ ಭಾವದಿಂದ ರಾಹು ಏಳನೆಯ ಮನೆಯಲ್ಲಿದ್ದು ಕೇತು ಒಂದನೇ ಮನೆಯಲ್ಲಿದ್ದರೆ ತಕ್ಷ ಕ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರು ವೃಥಾ ಅಪವಾದಗಳಿಗೆ ಸಿಲುಕುತ್ತಾರೆ. ವ್ಯಾಪಾರ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ

*ತಾಳೆ ಮರದ ಸೇಂದಿ (ಕಲಿ) ಕುಡಿದರೆ ಕ್ಯಾನ್ಸರ್ ಮಂಗಮಾಯ..!

*ತಾಳೆ ಮರದ ಸೇಂದಿ (ಕಲಿ) ಕುಡಿದರೆ ಕ್ಯಾನ್ಸರ್ ಮಂಗಮಾಯ..!* https://kannada.ap2tg.com/palm-water-check-to-cancer-scientists-proves-that/#.WmWp5UxAmSU.whatsapp
ತಾಳೆ ಮರದ ಸೇಂದಿ ಕುಡಿದರೆ ಕ್ಯಾನ್ಸರ್ ಮಂಗಮಾಯ..!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಳೆ ಅಥವಾ ಈಚಲು ಮರದ ಸೇಂದಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದೆಂದು ನಮ್ಮ ಪೂರ್ವಜರು ಆ ಕಾಲದಲ್ಲೇ ಹೇಳಿದ್ದಾರೆ.ಅದೀಗ ಸತ್ಯವೆಂದು ಋಜುವಾತಾಗಿದೆ…ಈ ಮಾತುಗಳನ್ನು ನಾವು ಹೇಳುತ್ತಿಲ್ಲ. ಉಸ್ಮಾನಿಯಾ ಬಯಲಾಜಿಕಲ್ ಸೈನ್ಸ್ ಪ್ರೊಫೆಸರ್ ಆಗಿರುವ ಭೂಕ್ಯಾ ಭೀಮಾ ರವರ ಪ್ರಕಾರ, ಮಸಾಲೆ ಪದಾರ್ಥಗಳು, ಮಾಂಸಾಹಾರ, ಜಂಕ್ ಫುಡ್ ಸೇವಿಸುವುದರಿಂದ ಅಸ್ತವ್ಯಸ್ತಗೊಂಡಿರುವ ನಮ್ಮ ಜೀರ್ಣಾಂಗಗಳ ವ್ಯವಸ್ಥೆಯನ್ನು ಸರಿಪಡಿಸುತ್ತದೆಂದು ಸಂಶೋಧಕರು ಹೇಳುತ್ತಾರೆ. ಅಷ್ಟೇ ಅಲ್ಲದೆ ತಾಳೆ ಮರದ ಸೇಂದಿ ಕುಡಿಯುವುದರಿಂದ ಕ್ಯಾನ್ಸರ್ ರೋಗವನ್ನು ಹೊಡೆದೋಡಿಸಬಹುದೆಂದು ಉಸ್ಮಾನಿಯಾ ಸಂಶೋಧನಾ ವಿಭಾಗ ಹೇಳುತ್ತದೆ.
ತಾಳೆ ಸೇಂದಿಯಲ್ಲಿರುವ 53 ಬಗೆಯ ಸೂಕ್ಷ್ಮ ಜೀವಿಗಳಲ್ಲಿ, 18 ಬಗೆಯ ಸೂಕ್ಷ್ಮ ಜೀವಿಗಳು ಮನುಷ್ಯನಲ್ಲಿರುವ ರೋಗಕಾರಕ ಸೂಕ್ಷ್ಮ ಜೀವಿಗಳನ್ನು ನಾಶಮಾಡುತ್ತವೆಂದು ಐಐಸಿಟಿ ವಿಜ್ಞಾನಿಗಳು ಗುರುತಿಸಿದ್ದಾರೆ. ತಾಳೆ ಸೇಂದಿಯಲ್ಲಿರುವ ‘ಸ್ಯಾಕರೋಮೈಸೆಸ್ ‘ಎಂಬ ಸೂಕ್ಷ್ಮ ಜೀವಿಗಳು, ಮಾನವನ ಹೊಟ್ಟೆಯಲ್ಲಿರುವ ಕ್ಯಾನ್ಸರ್ ರೋಗಕ್ಕೆ ಕಾರಣವಾದ ಓಬಿಎಸ್2 ಎಂಬ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿರೋಧಿಸುವ ಗುಣವಿದೆಯೆಂದು… ಅತಿಸಾರ,ಟೈಫಾಯ್ಡ್ ರೋಗಗಳು ಬರಲು ಕಾರಣವಾದ ವೈರಸ್ ಗಳ ಮೇಲೆ ತಾಳೆ ಸೇಂದಿಯಲ್ಲಿರುವ ಸೂಕ್ಷ್ಮಾಣುಗಳು ಆಂಟಿಬಯಾಟಿಕ್ ಆಗಿ ಕೆಲಸ ಮಾಡುತ್ತವೆಂದು ಹೇಳುತ್ತಾರೆ. ಆದರೆ, ಹುಳಿಯಾದ ಸೇಂದಿಯನ್ನು ಕುಡಿಯುವುದು ಅನಾರೋಗ್ಯಕರವೆಂದು, ಸೇಂದಿಯನ್ನು ಮರದಿಂದ ಇಳಿಸಿದ ಒಂದು ಗಂಟೆಯೊಳಗೆ ಕುಡಿಯಬೇಕೆನ್ನುತ್ತಾರೆ. ಇಲ್ಲವಾದಲ್ಲಿ ಸೇಂದಿಯಲ್ಲಿ ಆಲ್ಕೊಹಾಲ್ ಅಂಶ ಹೆಚ್ಚಾಗಿ ಅನಾರೋಗ್ಯವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಗಳ ಸಂಖ್ಯೆ ಹೆಚ್ಚಾಗುತ್ತವೆಂದು ಉಸ್ಮಾನಿಯ ಯೂನಿವರ್ಸಿಟಿ ಸಂಶೋಧನಾ ವಿಭಾಗದ ವಿಜ್ಞಾನಿಗಳು ಹೇಳುತ್ತಾರೆ.

ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ

ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ
ವೇದಗಳಲ್ಲಿ ಜಾತಿ ಪದ್ಧತಿ ಎನ್ನುವುದು ಇಲ್ಲ. ಅರ್‍ಯ ಜನಾಂಗವು ಪರದೇಶದಿಂದ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿಯ ಜನರನ್ನು ಸೋಲಿಸಿ ಅವರನ್ನು ಆಳುಗಳನ್ನಾಗಿ ಮಾಡಿಕೊಂಡರೆಂಬುದು ಇದುವರೆಗೂ ನಾವು ನಂಬಿದಂತಹ ಅತಿ ದೊಡ್ಡ ಸುಳ್ಳು . ಇದು ವಿದೇಶಿಯರು ಚಿತ್ರಿಸಿದಂತಹ ಸುಳ್ಳು. ನಮ್ಮ ಜನರನ್ನು ಈ ಸುಳ್ಳಿನಿಂದ ನಂಬಿಸಿ, ನಮ್ಮನ್ನು ಬೇರೆ ಬೇರೆ ಮಾಡಿ ತಾವು ಲಾಭವನ್ನು ಪಡೆದುಕೊಂಡರು. ಅವರು ಆಗ ತಮ್ಮ ಸ್ವಾರ್ಥಕ್ಕಾಗಿ ಮಾಡಿದಂತಹ ಸುಳ್ಳನ್ನು ನಂಬಿ, ಈಗಲು ಜನರು ಅಶಾಂತಿ ಇಂದ ಬಾಳುತ್ತಿದ್ದಾರೆ.
ಸತ್ಯಾಂಶದಲ್ಲಿ ವೇದವು ಬಸವಣ್ಣನವರು ಹೇಳಿದಂತೆ “ಕಾಯಕವೇ ಕೈಲಾಸ” ಎಂಬುದನ್ನು ಸಾರುತ್ತದೆ. ಯಾವುದೇ ಕೆಲಸವಾನ್ನು ಗೌರವದಿಂದ ಹಾಗು ಪೂಜ್ಯತೆ ಇಂದ ಮಾಡಬೇಕು ಎಂದು ವೇದ ಮಂತ್ರಗಳು ಸಾರುತ್ತದೆ. ಹಲವಾರು ಕಡೆ ದಾಸ / ದಸ್ಯು ಅಥವ ರಕ್ಷಸ್ ಎಂಬ ಪದವನ್ನು ಆರ್‍ಯನ್ನರ ಗುಲಾಮರು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಿದೇಶಿಯರ ಈ ತಪ್ಪು ಗೊತ್ತಿಲ್ಲದೆ ಮಾಡಿದಂತಹ ತಪ್ಪಲ್ಲ ಬದಲಾಗಿ ಬೇಕೆಂದಲೇ ಚಿತ್ರಿಸಿದಂತಹ ತಪ್ಪು. ನಾವು ಏಕೆ ಈ ವಿದೇಶಿಯರ ಮೇಲೆ ಹೆಚ್ಚು ಕೋಪತೋರಿಸಿದ್ದೇವೆ ಎಂದರೆ ಇವರ ಸ್ವಂತ ಲಾಭಕ್ಕಾಗಿ ನೊರಾರು ವರ್ಷಗಳಿಂದ ಜನರನ್ನು ಮೋಸಮಾಡಿ ವೇದಗಳನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ.
ವೇದಗಳಲ್ಲಿ ಶೂದ್ರರೂ ಸೇರಿದಂತೆ ಎಲ್ಲಾ ಚತುರ್ವರ್ಣರನ್ನು ಗೌರವದಿಂದ ಆರ್‍ಯ ಎಂದು ಸಂಭೋದಿಸುವುದನ್ನು ನಾವು ಕಾಣುತ್ತೇವೆ. ವೇದಗಳೇ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದಂತಹ ದೇಶದಲ್ಲಿ, ಸನಾತನ ಪಾಠವಾದ ವೇದಗಳನ್ನೇ ಮರೆತು, ಜಾತಿಯು ಹುಟ್ಟಿನಿಂದ ಬರುವಂತಹದ್ದೆಂದು ನಂಬಿದ್ದೇವೆ. ಜಾತಿಯ ಆಧಾರದ ಮೇಲೆ ಜನರನ್ನು ವಿಂಗಡಿಸುವಂತಹ ನೀಚ ಕೃತ್ಯವನ್ನು ಮಾಡುತ್ತಿದ್ದೇವೆ ಹಾಗು ಕೆಲವು ನಿರ್ದಿಷ್ಟ ಜಾತಿಗಳಲ್ಲಿ ಹುಟ್ಟಿದ ಜನರನ್ನು ಶೂದ್ರರೆಂದು ಕರೆಯುತ್ತಿದ್ದೇವೆ.
ಕೆಲವು ಕಮ್ಯುನಿಸ್ಟರು ಮತ್ತು ಪಕ್ಷಪಾತಿ ಪುರಾತನ ಶಾಸ್ತ್ರಜ್ಞರು ಈಗಾಗಲೇ ನಮ್ಮ ಸಮಾಜಕ್ಕೆ ದೊಡ್ಡ ಹಾನಿಯನ್ನುಂಟು ಮಾಡಿ ಸಮಾಜದಲ್ಲಿ ಬಿನ್ನಾಭಿಪ್ರಾಯ ಎಂಬ ವಿಷ ಬೀಜವನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಬಾರಿ ಆಳವಾಗಿ ನೆಟ್ಟಿದ್ದಾರೆ. ಇದರಿಂದಾಗಿ ಪಾಪ ಈಗಿನ ದಲಿತರು ತಮ್ಮನ್ನು ತಾವೆ ಹೊರಜಾತಿಯವರು ಎಂದು ತಿಳಿದು ದೊರ ಉಳಿದಿದ್ದಾರೆ. ಈ ಅಂತರದಿಂದ ಎಲ್ಲರು ಒಂದಾಗಲು ಹೇಗೆ ತಾನೆ ಸಾಧ್ಯ? ಈ ಎಲ್ಲಾ ಸಮಸ್ಯೆಗಳಿಗೆ ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದೇ ಔಷದ.
ಜಾತಿ ಪದ್ದತಿ ಎನ್ನುವುದು ವೇದಗಳಲ್ಲಿ ಇದೆಯೋ ಇಲ್ಲವೋ ಎಂದು ತಿಳಿಯುವುದೇ ಈ ಲೇಖನದ ಮುಖ್ಯ ಉದ್ದೇಶ.
೧) ನಮ್ಮ ಮೊದಲನೆಯ ಲೇಖನದಲ್ಲಿ ಚರ್ಚಿಸಿದಂತೆ ವೇದಗಳಲ್ಲಿ ಯಾವ ವರ್ಣದವರನ್ನು ಮೇಲು ಕೀಳು ಎಂದು ಭಾವಿಸಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗು ಶೂದ್ರರ ನಡುವೆ ದ್ವೇಶ ಭಾವನೆ ಹುಟ್ಟುವಂತಹ ಯಾವ ವಸ್ತುವು ಇಲ್ಲ.
೨)ಜಾತಿ ಎಂಬುದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಪರಿಕಲ್ಪನೆ. ಇತ್ತೀಚಿನ ದಿನಗಳಲ್ಲಿ ಜಾತಿ/ ಕಾಸ್ಟ್ ಎಂಬುದು ಬಹಳ ಭಿನ್ನವಾಗಿ ಅರ್ಥೈಸಲಾಗುತ್ತಿದೆ. ವರ್ಣ ಹಾಗು ಜಾತಿ ಎಂಬ ಪದವನ್ನು ಬಹಳಾ ತಪ್ಪಾಗಿ ಅರ್ಥೈಸಿಕೊಂಡು ಬಳಸುತ್ತಿದ್ದಾರೆ, ಆದರೆ ವೇದದ ಪ್ರಕಾರ ವರ್ಣ ಹಾಗು ಜಾತಿ ಎಂಬ ಪದಗಳಿಗೆ ಬೇರೆಯೇ ಅರ್ಥವಿದೆ. ಜಾತಿ ಎಂಬುದನ್ನು ಸೂಚಿಸಲು ವರ್ಣ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತಿದೆ ಆದರೆ ನಿಜ ಸಂಗತಿ ಎಂದರೆ ಈ ಪದಗಳೆಲ್ಲವೂ ಬೇರೆ ಬೇರೆ ಅರ್ಥ ಹೊಂದಿರುವಂತ್ತದ್ದು.
೩)ಇತ್ತೀಚಿನ ದಿನದ ಜಾತಿ/ ಕಾಸ್ಟ್ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಹಾಳುಮಾಡಲು ಪಾಶ್ಚಾತ್ಯರ ಬಳುವಳಿ ಹೆಚ್ಚು. ತಮಗೆ ಬೇಕಾದಂತೆ ಕಾಸ್ಟ್ ಎಂಬ ಪದವನ್ನು ಅರ್ಥೈಸಿ ಜನರನ್ನು ಬೇರೆ ಬೇರೆಯಾಗಿ ವಿಂಗಡಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿದ್ದಾರೆ. ಜಾತಿ ಎಂಬುದು ಪೂರ್ಣವಾಗಿ ಯುರೋಪಿಯನ್ನರ ಅನ್ವೇಷಣೆಯಾಗಿದ್ದು ವೇದಗಳಲ್ಲಿ ಅದಕ್ಕೆ ಹೋಲಿಕೆಯಾಗುವ ಪದವೇ ಕಂಡುಬರುವುದಿಲ್ಲ.
ಜಾತಿ:
ನ್ಯಾಯ ಸೂತ್ರವು “ಸಮಾನ ಪ್ರಸವಾತ್ಮಿಕ ಜಾತಿಃ” ಎಂದು ಸೂಚಿಸಿದೆ. ಇದರರ್ಥ ಒಂದೇ ಮೂಲದ ಹುಟ್ಟಿಗೆ ಜಾತಿ ಎನ್ನುತ್ತಾರೆ, ಆದರೆ ನಾವು ಒಂದೇ ರಕ್ತದ ಮೂಲಕ್ಕೆ ಜಾತಿ ಎಂದು ತಪ್ಪು ತಿಳಿದಿದ್ದೇವೆ. ಒಂದೇ ಜೀವಿಯ ಮೂಲಕ್ಕೆ ಜಾತಿ ಎನ್ನುತ್ತೇವೆ.
ಋಷಿಗಳು ಈ ಭೂಮಿಯ ಮೇಲಿರುವ ಹುಟ್ಟನ್ನು ೪ ವಿಧಗಳಾಗಿ ವಿಂಗಡಿಸಿದ್ದಾರೆ.
(೧) ಉದ್ಭಜ – ಭೂಮಿಯಿಂದ ಹುಟ್ಟುವಂತಹ ಜೀವ ( ಸಸ್ಯಗಳು, ಮರಗಳು, ಗಿಡಗಳು, …)
(೨) ಅಂಡಜ – ಮೊಟ್ಟೆಗಳಿಂದ ಹುಟ್ಟುವಂತಹ ಜೀವಿಗಳು ( ಪಕ್ಷಿ ಹಾಗು ಸರಿಸೃಪ)
(೩) ಪಿಂಡಜ – ಗರ್ಭದಿಂದ ಹುಟ್ಟುವಂತಹ ಜೀವಿಗಳು (ಸಸ್ತನಿ)
(೪) ಉಷ್ಮಜ – ವಾತವರಣಕ್ಕೆ ಅನುಗುಣವಾಗಿ ಹುಟ್ಟುವಂತಹ ಜೀವಿಗಳು (ಸೂಕ್ಷ್ಮಾಣುಗಳು)
ಜಾತಿ ಎಂಬುದು ಪರಮಾತ್ಮನ ಒಂದು ಸೃಷ್ಟಿ. ಪ್ರತಿಯೊಂದು ಪ್ರಾಣಿಯೂ ಬೇರೆ ಬೇರೆ ಜಾತಿಗೆ ಸೇರಿರುವಂತದ್ದು. ಹೀಗೆ ಇಡಿ ಮಾನವ ಕುಲವೇ ಒಂದು ಜಾತಿ ಆಗಿರುತ್ತದೆ. ಪ್ರತಿಯೊಂದು ಜಾತಿಯು ತನ್ನದೇ ಆದ ದೈಹಿಕ ಮತ್ತು ಭೌತಿಕ ಗುಣಗಳಿಂದ ಕೊಡಿರುತ್ತದೆ. ಒಂದು ಜಾತಿಯ ಜೀವಿಯು ಇನ್ನೊಂದು ಜಾತಿಯ ಜೀವಿಯೊಂದಿಗೆ ಕೂಡಲು ಸಾಧ್ಯವೇ ಇಲ್ಲ.
ಆದ್ದರಿಂದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಹಾಗು ಶೂದ್ರ ಒಂದೇ ಜಾತಿಗೆ ಸೇರಿದ್ದು, ಇವರನ್ನು ಬೇರೆ ಬೇರೆ ಜಾತಿ ಎಂದು ಕರೆಯಲಾಗುವುದಿಲ್ಲ ಏಕೆಂದರೆ ಇವರಿಬ್ಬರ ದೈಹಿಕ ಗುಣಗಳು ಒಂದೇ ಆಗಿದೆ. ಬ್ರಾಹ್ಮಣ ಮತ್ತು ಶೂದ್ರರು ಒಂದೇ ಮೂಲ / ಜಾತಿ ಯಲ್ಲಿ ಹುಟ್ಟಿದವರು.
ಆದರೆ ಈಗ ಜಾತಿ ಎಂಬ ಪದಕ್ಕೆ ಬೇರೆಯೇ ಅರ್ಥವಿದೆ. ಮನುಷ್ಯನನ್ನು ವಿಂಗಡಿಸುವ ಸಲುವಾಗಿ ಜಾತಿ ಎಂಬ ಪದದ ಅರ್ಥವನ್ನು ಮನಸೊ ಇಚ್ಚೆ ಉಪಯೋಗಿಸಿದ್ದಾರೆ. ಹೀಗಾಗಿ ಪ್ರತಿಯೊಂದು ಗುಂಪಿನ ಜನರು ತಾವು ಇಂತಹದ್ದೆ ಜಾತಿ ಎಂದು ರೂಢಿಸಿಕೊಂಡು ಬಂದಿದ್ದಾರೆ, ಆದರೆ ನಿಜ ಸ್ವರೂಪದಲ್ಲಿ ಎಲ್ಲಾ ಮಾನವರು ಒಂದೇ ಜಾತಿ.
ವರ್ಣ:
ಜಾತಿಗೂ, ವರ್ಣಕ್ಕೂ ಬಹಳ ವ್ಯತ್ಯಾಸವಿದೆ. ವೇದದ ಪ್ರಕಾರ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಹಾಗು ಶೂದ್ರರ ಜೊತೆಗೆ ಆರ್‍ಯ ಮತ್ತು ದಸ್ಯು ಎಂಬ ವರ್ಣಗಳೂ ಸೇರಿವೆ. ಇದನ್ನು ಅರ್ಥಮಾಡಿಕೊಳ್ಳದವರು ವರ್ಣವೇ ಜಾತಿ ಹಾಗು ಜಾತಿಯು ತಂದೆಯಿಂದ ಮಕ್ಕಳಿಗೆ ಬರುವಂತದ್ದು ಎಂದು ತಪ್ಪು ತಿಳಿದಿದ್ದಾರೆ.
ವರ್ಣ ಎಂದರೆ ಹುಟ್ಟಿನಿಂದ ಬರುವಂತದಲ್ಲ ಬದಲಾಗಿ, ಇಷ್ಟ ಪಟ್ಟು ಸ್ವೀಕರಿಸಿದಂತದ್ದು ಅಥವ ತನ್ನ ಸ್ವಂತ ಇಚ್ಚೆ ಇಂದ ತೆಗೆದುಕೊಂಡಂತಹ ನಿರ್ಣಯ. ಜಾತಿಯು ಪರಮಾತ್ಮನ ಸೃಷ್ಟಿಯಾದರೆ ವರ್ಣವು ನಮ್ಮ ಇಚ್ಚೆ. ಇಂದು ನಾನು ಕ್ಷತ್ರಿಯನಾಗಿದ್ದರೆ, ಮುಂದಿನ ದಿನಗಳಲ್ಲಿ ಬ್ರಾಹ್ಮಣನೂ, ಶೂದ್ರನೂ ಆಗಬಹುದು. ಇದರಿಂದಾಗಿ ವೇದ ಧರ್ಮವು ವರ್ಣಾಶ್ರಮ ಧರ್ಮ ಅಂತಲೂ ಕರೆಸಿಕೊಂಡಿದೆ.
ಆಧ್ಯಾತ್ಮಕತೆ ಹಾಗು ಜ್ಞಾನಕ್ಕೆ ಸಂಬಂಧ ಪಟ್ಟಂತಹ ಕಾರ್ಯಗಳಿಗೆ ತೊಡಗಿಸಿಕೊಂಡವರನ್ನು ಬ್ರಾಹ್ಮಣನೆಂದು,
ರಕ್ಷಣೆ ಹಾಗು ಯುಧ್ಧ ಕಾರ್ಯಗಳಿಗೆ ತೊಡಗಿಸಿಕೊಂಡವರನ್ನು ಕ್ಷತ್ರಿಯನೆಂದು
ವ್ಯಾಪಾರ ಹಾಗು ಪ್ರಾಣಿ ಸಾಕಾಣಿಕೆಗಳಲ್ಲಿ ತೊಡಗಿಸಿಕೊಂಡವರನ್ನು ವೈಶ್ಯರೆಂದು ಹಾಗು
ಇತರೆ ಸಹಾಯ ಕೆಲಸಗಳಾನ್ನು ಮಾಡುವವನನ್ನು ಶೂದ್ರನೆಂದು ಹೇಳುತ್ತದೆ.
ವರ್ಣವು ಇಷ್ಟಪಟ್ಟು ಮಾಡುವಂತಹ ಕೆಲಸಗಳಿಗೆ ಸಂಭಂಧಪಟ್ಟಿರುತ್ತದೆಯೆ ಹೊರೆತು ಹುಟ್ಟಿನಿಂದ ಬರುವಂತಹದಲ್ಲ.
ಬ್ರಾಹ್ಮಣರು ದೇವರ ಬಾಯಿಂದ, ಕ್ಷತ್ರಿಯರು ಕೈಗಳಿಂದ, ವೈಶ್ಯರು ತೊಡೆಗಳಿಂದ ಹಾಗು ಶೂದ್ರರು ಕಾಲುಗಳಿಂದ ಉಗಮಿಸಿದ್ದಾರೆ ಎಂದು ಧೃಢಪಡಿಸಲು ಕೆಲವು ಪುರುಷಸೂಕ್ತಿಯ ಮಂತ್ರಗಳನ್ನು ಉಲ್ಲೀಖಿಸುತ್ತಾರೆ. ಈ ಮಂತ್ರವನ್ನು ಉಲ್ಲೇಖಿಸಿ ವೇದದಲ್ಲಿ ವರ್ಣವು ಹುಟ್ಟಿನಿಂದ ಬರುವಂತದ್ದು ಎಂದು ಸಾಧಿಸುತ್ತಾರೆ, ಆದರೆ ಈ ಮಂತ್ರದ ನಿಜ ಅರ್ಥವೇ ಬೇರೆ.
ಯಜುರ್ವೇದ ೪೦.೮
ಈ ಮಂತ್ರದ ಪ್ರಕಾರ ಪರಮಾತ್ಮನಿಗೆ ಯಾವುದೇ ಆಕಾರವಿಲ್ಲ. ನಿರಾಕಾರಿಯಾದಂತಹ ದೇವನು ಒಂದು ಬೃಹದಾಕಾರದ ಮನುಷ್ಯನ ರೂಪ ತಳೆದು ವರ್ಣಗಳನ್ನು ಸೃಷ್ಟಿಸಲು ಹೇಗೆ ಸಾಧ್ಯ?
ವೇದವು ಕರ್ಮದ ಸಿಧ್ಧಾಂತವನ್ನು ಬಹಳಾ ಗಾಢವಾಗಿ ಪರಿಗಣಿಸಿ, ಪ್ರತಿಪಾದಿಸುತ್ತದೆ. ವರ್ಣವು ದೇವರ ಅಂಗಾಂಗ ಗಳಿಂದ ಸೃಷ್ಟಿಯಾಗಿದ್ದರೆ, ಅದು ಕರ್ಮ ಸಿಧ್ಧಾಂತವನ್ನು ಅರ್ಥಹೀನವನ್ನಾಗಿ ಮಾಡುತ್ತದೆ ಯಾಕೆಂದರೆ ಕರ್ಮ ಸಿಧ್ಧಾಂತದ ಪ್ರಕಾರ ಶೂದ್ರನಾಗಿ ಹುಟ್ಟಿದಂತವನು ಮುಂದಿನ ಜನ್ಮದಲ್ಲಿ ರಾಜನಮಗನಾಗಿ ಹುಟ್ಟಬಹುದು. ಶೂದ್ರನು ನಿಜವಾಗಿಯೂ ದೇವರ ಕಾಲುಗಳಿಂದ ಹುಟ್ಟಿದ್ದಾದರೆ ಮುಂದಿನ ಜನ್ಮದಲ್ಲಿ ರಾಜನ ಮಗನಾಗಲು ಹೇಗೆ ಸಾಧ್ಯ?
ಅದಲ್ಲದೆ ಒಂದು ಜನ್ಮದಲ್ಲಿ ತಾನು ಮಾಡಿದಂತಹ ಪಾಪ, ಪುಣ್ಯಗಳ ಆಧಾರದ ಮೇಲೆ ಮುಂದಿನ ಜನ್ಮವು ಅವಲಂಬಿಸಿರುತ್ತದೆ ಎಂದು ಕರ್ಮ ಸಿಧ್ಧಾಂತವು ಪ್ರತಿಪಾದಿಸುತ್ತದೆ.
ಆತ್ಮಕ್ಕೆ ಕಾಲದ ಪರಿಮಿತಿ ಇಲ್ಲದಿರುವುದರಿಂದ ಆತ್ಮವು ಯಾವ ವರ್ಣಕ್ಕೂ ಸೇರುವುದಿಲ್ಲ. ಆತ್ಮವು ಮನುಷ್ಯನ ಜನ್ಮ ತಳೆದ ನಂತರ ಮಾತ್ರ ಇಂತಹ ವರ್ಣ ಎಂದು ಹೇಳಲು ಸಾಧ್ಯ. ಹೀಗಿರುವಾಗ ವರ್ಣವು ದೇವರ ಅಂಗಾಂಗಗಳಿಂದ ಹುಟ್ಟಿರುವುದು ಅಸಂಭದ್ಧವಾಗುತ್ತದೆ.
ಯಜುರ್ವೇದದ ೩೧ನೇ ಅಧ್ಯಾಯ, ಹತ್ತನೆ ಮಂತ್ರವು ಬಾಯಿ, ಕೈ, ತೂಡೆ ಹಾಗು ಕಾಲುಗಳು ಯಾರು? ಎಂದು ಪ್ರಶ್ನಿಸುತ್ತದೆ. ಇದಕ್ಕೆ ಮುಂದಿನ ಮಂತ್ರವು ಬ್ರಾಹ್ಮಣ ಬಾಯಿ, ಕ್ಷತ್ರಿಯ ಕೈ, ವೈಶ್ಯ ತೊಡೆ ಹಾಗು ಶೂದ್ರ ಕಾಲು ಎಂದು ಉತ್ತರಿಸುತ್ತದೆ. ಇಲ್ಲಿ ಒಂದು ಮುಖ್ಯವಾದ ವಿಷಯ ಗಮನಕ್ಕೆ ತೆಗೆದುಕೊಳ್ಳಬೇಕು. ಬ್ರಾಹ್ಮಣ ಬಾಯಿ ಎಂದು ಈ ಮಂತ್ರವು ಹೇಳುತ್ತದೆಯೆ ಹೊರೆತು ಬ್ರಾಹ್ಮಣ ಬಾಯಿಂದ ಜನಿಸಿದವನೆಂದು ಹೇಳುವುದಿಲ್ಲ. ಜನರಲ್ ತಿಮ್ಮಯ್ಯ ಯಾರು ಎಂದು ಕೇಳಿದರೆ ನಾವು ಅವರೊಬ್ಬರು ಮಹಾನ್ ಕ್ಷತ್ರಿಯ ಎನ್ನುತ್ತೇವೆ. ಇದರರ್ಥ ಅವರು ಕ್ಷತ್ರಿಯರಾದ್ದರು ಎಂದೇ ಹೊರೆತು ಅವರು ಕ್ಷತ್ರಿಯನಿಗೆ ಹುಟ್ಟಿದವನೆಂದಲ್ಲ.
ವಾಸ್ತವದಲ್ಲಿ ಬ್ರಾಹ್ಮಣರು ಅಥವ ಬುದ್ಧಿಜೀವಿಗಳು ಮೆದಳು ಅಥವ ಬಾಯಿಯ ಕ್ರಿಯೆ ಮಾಡುತ್ತಾರೆ. ಅಂದರೆ ಯಾರು ಸಮಾಜದಲ್ಲಿ ಯೋಚನೆ ಮಾಡಿ ಮಾತನಾಡುತ್ತಾರೋ ಅವರು ಬ್ರಾಹ್ಮಣರಾಗುತ್ತಾರೆ. ಕ್ಷತ್ರಿಯರು ಕೈಗಳು ಮಾಡುವ ಕೆಲಸ ಅಂದರೆ ಸಮಾಜದಲ್ಲಿ ಹಲವಾರು ರೀತಿಯ ಸಹಾಯ ಮಾಡಿ ಶಕ್ತಿ ತುಂಬುತ್ತಾರೆ. ಅಥರ್ವಣ ವೇದದಲ್ಲಿ ವೈಶ್ಯರಿಗೆ ಮಧ್ಯ ಎಂಬ ಪದದ ಬಳಕೆಯಾಗಿದೆ. ಮಧ್ಯ ಎಂದರೆ ಹೊಟ್ಟೆಯ ಭಾಗವು ಸೇರುತ್ತದೆ. ಶೂದ್ರರು ಅಥವ ಶ್ರಮಶಕ್ತಿಗಳು ಕಾಲಿನ ಕೆಲಸ ಅಂದರೆ ಸಮಾಜದ ಅಡಿಪಾಯ ಕಟ್ಟಿ ಕಾರ್ಯನಿರ್ವಹಿಸಿ ಮುನ್ನಡೆಯುವಂತೆ ಮಾಡುತ್ತಾರೆ.
ಇದರ ಮುಂದಿನ ಮಂತ್ರವು ಮನುಷ್ಯನ ಇತರೆ ಭಾಗಗಳಾದ ಮೆದಳು, ಕಣ್ಣು ಮತ್ತು ಇತರೆ ಭಾಗಗಳ ಬಗ್ಗೆ ಹೇಳುತ್ತದೆ. ಪುರುಷಸೂಕ್ತವು ಮಾನವ ಸಮಾಜದ ಉಗಮ ಹಾಗು ಒಂದು ಅರ್ಥಪೂರ್ಣ ಸಮಾಜವು ಒಳಗೊಳ್ಳಬೇಕಾದ ವಸ್ತುಗಳ ಬಗ್ಗೆ ಹೇಳುತ್ತದೆ.
ಇಂತಹ ಸುಂದರವಾದ ಹಾಗು ಸುಲಭವಾದ ಮಂತ್ರಗಳನ್ನು, ತಮ್ಮ ಸ್ವಂತ ಲಾಭಕ್ಕಾಗಿ ಇದಕ್ಕೆ ತದ್ವಿರುದ್ಧವಾಗಿ ಅರ್ಥೈಸಿರುವುದು ಬಹಳ ಶೋಚನೀಯ ಮತ್ತು ಹೀನಾಯವಾದ ಕೆಲಸ. ಮನುಸ್ಮೃತಿ, ರಾಮಾಯಣ, ಮಹಭಾರತ, ಭಗವತ್ ಗೀತ, ಹಾಗು ಬ್ರಾಹ್ಮಣ ಪಠ್ಯಗಳಲ್ಲಿಯೊ ಸಹ ಮನುಷ್ಯನು ದೇವರ ಮಾಂಸಖಂಡಗಳನ್ನು ಹರಿದುಕೊಂಡು ಹುಟ್ಟಿದ ಎಂಬ ಹುಚ್ಚುತನದ ಸಿದ್ಧಾಂತವಿಲ್ಲ.
ಈ ಹುಚ್ಚುತನದ ಸಿದ್ಧಾಂತಗಳಿಂದಾಗಿ ಇಂದಿಗೊ ಬ್ರಾಹ್ಮಣರನ್ನು ಮೇಲು ಜಾತಿ ಎಂದು, ಶೂದ್ರರನ್ನು ಕೀಳು ಜಾತಿ ಎಂದು ಜನರು ನೋಡುತ್ತಿದ್ದಾರೆ. ಆದರೆ ಮೊದಲೇ ಪ್ರಸ್ತಾಪಿಸಿದ ಹಾಗೆ ವೇದದಲ್ಲಿ ಎಲ್ಲಾ ಕೆಲಸಗಳಿಗೂ ಒಂದೇ ರೀತಿಯ ಗೌರವ ಕೊಡುವುದರಿಂದ ಮೇಲು ಕೀಳು ಎಂಬ ಭಾವನೆ ವೇದಗಳಲ್ಲಿ ಇಲ್ಲವೇ ಇಲ್ಲ.
ವೇದ ಧರ್ಮದ ಪ್ರಕಾರ ಪ್ರತಿಯೊಬ್ಬನು ಶೂದ್ರನಾಗಿಯೇ ಹುಟ್ಟುವುದು. ಅನಂತರ ಅವರವರ ಶಿಕ್ಷಣದ ಪ್ರಕಾರ ಬ್ರಾಹ್ಮ್ಣನೋ, ಕ್ಷತ್ರಿಯನೋ ಅಥವ ವೈಶ್ಯನೋ ಎಂದು ನಿರ್ಧರಿಸಲಾಗುತ್ತದೆ. ಶಿಕ್ಷಣದ ಪೊರೈಕೆಯು ಎರಡನೆಯ ಜನ್ಮವೆಂದು ಕರೆಯಲ್ಪಡುತ್ತದೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ದ್ವಿಜರೆಂದು ಕರೆಯಲ್ಪಡುತ್ತಾರೆ. ಯಾರು ಶಿಕ್ಷಣ ಪಡೆಯುವುದಿಲ್ಲವೋ ಅವನು ಶೂದ್ರನಾಗಿಯೇ ಮುಂದುವರೆಯುತ್ತಾನೆ ಹಾಗು ಶ್ರಮ ಶಕ್ತಿಯಾಗಿ ಕೆಲಸಮಾಡುತ್ತಾನೆ. ಅವನಿಗೆ ಎರಡನೆಯ ಹುಟ್ಟು ಇರುವುದಿಲ್ಲ ಆದರೆ ಅವನನ್ನು ಎಂದಿಗೂ ಕೇಳು ಭಾವನೆಯಿಂದ ನೋಡುವುದಿಲ್ಲ.
ಬ್ರಾಹ್ಮಣನ ಮಗನು ಶಿಕ್ಷಣದಲ್ಲಿ ಅನುತ್ತೀರ್ಣನಾದರೆ ಅವನು ಶೂದ್ರನಾಗಿಯೇ ಉಳಿಯುತ್ತಾನೆ ಹಾಗು ಶೂದ್ರನ ಮಗನೇನಾದರೊ ಶಿಕ್ಷಣದಲ್ಲಿ ಉತ್ತೀರ್ಣನಾದರೆ ಬ್ರಾಹ್ಮಣನೋ, ವೈಶ್ಯನೋ, ಕ್ಷತ್ರಿಯನೋ ಆಗುತ್ತಾನೆ. ಇಂದಿನ ಶಿಕ್ಷಣದಲ್ಲಿ ಹೇಗೆ ಪದವಿಯನ್ನು ಕೊಡಲಾಗುತ್ತದೊ ಹಾಗೆಯೆ ವೇದ ಪದ್ಧತಿಯಲ್ಲಿ ಯಜ್ಞೋಪವಿತ ಪದವಿ ಕೊಡಲಾಗುತ್ತಿತ್ತು. ಯಜ್ಞ ಪಾವಿತ್ರ್ಯಾತೆಯನ್ನು ವೇದವು ಸೂಚಿಸಿತ್ತು. ಯಾರು ಈ ಪಾವಿತ್ರ್ಯತೆಯನ್ನು ಕಾಪಾಡುತಿರಲಿಲ್ಲವೋ ಅವರಿಗೆ ಶಿಕ್ಷಣವನ್ನು ಕೊಡಲಾಗುತ್ತಿರಲಿಲ್ಲ.
ವೇದಗಳಲ್ಲಿ ಇಂತಹ ವರ್ಣ ಬದಲಾವಣೆಗೆ ಹಲವಾರು ಉದಾಹರಣೆಗಳಿವೆ:
೧) ಆತ್ರೇಯ ಋಷಿಯು ಒಬ್ಬ ದಾಸನ ಮಗ ಅಥವ ಅಪರಾಧಿಯ ಮಗನಾಗಿದ್ದ, ಆದರೆ ಅವನು ಅತ್ಯುತ್ತಮ ಬ್ರಾಹ್ಮಣನಾಗಿ ಬದಲಾವಣೆಗೊಂಡು, ಋಗ್ವೇದ ತಿಳಿಯಲು ತುಂಬಾ ಮುಖ್ಯವಾದಂತಹ ಆತ್ರೇಯ ಬ್ರಾಹ್ಮಣ ಹಾಗು ಆತ್ರೇಯ ಉಪನಿಷದ್ ಗಳನ್ನು ಬರೆದರು.
೨) ಐಲುಶ ಋಷಿಯು ಒಬ್ಬ ಜೊಜುಕೋರ ಹಾಗು ಕೀಳುವ್ಯಕ್ತಿತ್ವ ಹೊಂದಿದ ದಾಸಿ ಪುತ್ರನಾಗಿದ್ದ. ಇವನು ಋಗ್ವೇದಗಳನ್ನು ಸಂಪೊರ್ಣವಾಗಿ ತಿಳಿದು ಹಲವಾರು ಸಂಶೋಧನೆಗಳನ್ನು ಮಾಡಿದ. ಇವನು ಕೇವಲ ಋಷಿಗಳಿಂದ ಆಮಂತ್ರಣಗೊಂಡಿದ್ದಲ್ಲದೆ ಅವನ್ನನ್ನು ಆಚಾರ್ಯನೆಂದು ಪರಿಗಣಿಸಲಾಯಿತು. (ಆತ್ರೇಯ ಬ್ರಾಹ್ಮಣ ೨:೧೯)
೩) ಸತ್ಯಕಾಮ್ ಜಾಬಾಲ್ ಒಬ್ಬ ವೈಶ್ಯಯ ಮಗನಾಗಿದ್ದರೂ ನಂತರ ಬ್ರಾಹ್ಮಣನಾದ.
೪) ಪ್ರಿಷಾದ್ ಎಂಬುವವನು ದಕ್ಷ ಮಹರಾಜನ ಮಗನಾದರೊ ಶೂದ್ರನಾದ. ನಂತರ ಅವನು ಪಶ್ಚಾತ್ತಾಪ ಪಟ್ಟು ತಪಸ್ಸು ಮಾಡಿ ಮೋಕ್ಷವನ್ನು ಪಡೆದ. (ವಿಷ್ಣು ಪುರ್‍ಆಣ ೪.೧.೧೪)
ವೇದಗಳಲ್ಲಿ ಶೂದ್ರರು ತಪಸ್ಸುಮಾಡಬಾರದೆಂದು ನಿರ್ಬಂಧಿಸಿದ್ದರೆ. ಪ್ರಿಷಾದನು ತಪಸ್ಸು ಮಾಡಲು ಹೇಗೆ ಸಾಧ್ಯವಾಗುತಿತ್ತು?
೫) ನಿಧೇಷಿತ ಮಹರಾಜನ ಮಗನಾದ ನಭಾಗನು ವೈಶ್ಯನಾದ ಹಾಗು ನಭಾಗನ ಹಲವು ಮಕ್ಕಳು ಕ್ಷತ್ರಿಯರಾದರು ( ವಿಷ್ಣು ಪುರಾಣ ೪.೧.೧೩)
೬) ನಭಾಗನ ಮಗನಾದ ಧ್ರ್‍ಇಷ್ಟನು ಬ್ರಾಹ್ಮಣನಾದ ಹಾಗು ಇವನ ಮಗನು ಕ್ಷತ್ರಿಯನಾದ (ವಿಷ್ಣು ಪುರಾಣ ೪.೨.೨)
೭) ಭಗವತ್ ಗೀತೆಯ ಪ್ರಕಾರ ಅಗ್ನಿವೇಷನು ರಾಜನ ಮಗನಾಗಿದ್ದರೊ ಬ್ರಾಹ್ಮಣನಾದ.
೮) ವಿಷ್ಣು ಪುರಾಣ ಹಾಗು ಭಗವತ್ ಗೀತೆಯ ಪ್ರಕಾರ ರಾಥೋತಾರ್ ಕ್ಷತ್ರಿಯನ ಮಗನಾಗಿ ಹುಟ್ಟಿದ್ದರೊ ಬ್ರಾಹ್ಮಣನಾದ.
೯) ಹಾರಿತ್ ಎಂಬುವವನು ಸಹ ಕ್ಷತ್ರಿಯನ ಮಗನಾಗಿ ಹುಟ್ಟಿದ್ದರೊ ಬ್ರಾಹ್ಮಣನಾದ. (ವಿಷ್ಣು ಪುರಾಣ ೪.೩.೫)
೧೦) ಶೌನಿಕನು ಕ್ಷತ್ರಿಯನ ಮಗನಾದರೊ ಬ್ರಾಹ್ಮಣನಾದ. (ವಿಷ್ಣು ಪುರಾಣ ೪.೮.೧)
ವಾಯುಪುರಾಣ, ವಿಷ್ಣು ಪುರಾಣ ಮತ್ತು ಹರಿವಂಶ ಪುರಾಣದ ಪ್ರಕಾರ ಶೌನಿಕ್ ಋಷಿಯ ಮಕ್ಕಳು ಎಲ್ಲಾ ನಾಲ್ಕು ವರ್ಣಗಳಿಗೂ ಸೇರಿದವರಾಗಿದ್ದಾರೆ.
ಗ್ರಿತ್ ಸಮಾದ್, ವೀತವ್ಯ ಮತ್ತು ವ್ರಿತ್ ಸಮಾತಿಯಲ್ಲಿಯೊ ಸಹ ಇಂತಹ ಉದಾಹರಣೆಗಳಿವೆ.
೧೧) ಚಂಡಾಳನ ಮಗನಾದ ಮಾತಂಗ ನಂತರ ಬ್ರಾಹ್ಮಣನಾದ.
೧೨) ಪುಲತ್ಸ್ಯ ಋಷಿಯ ಮಗನಾದ ರಾವಣನು ನಂತರ ರಾಕ್ಷಸನಾದ.
೧೩) ರಘು ರಾಜನ ಮಗನಾದ ಪ್ರವ್ರಿದ್ದನು ನಂತರ ರಾಕ್ಷಸನಾದ.
೧೪) ತ್ರಿಶಂಕನು ರಾಜನಾದರೊ ಮುಂದೆ ಚಂಡಾಳನಾದ.
೧೫) ವಿಷ್ವಾಮಿತ್ರ ಕ್ಷತ್ರಿಯನಾಗಿದ್ದರೊ ಬ್ರಾಹ್ಮಣನಾದ. ಇವನ ಮಕ್ಕಳು ಶೂದ್ರರಾದರು.
೧೬) ಹಸ್ತಿನಾಪುರ ಸಾಮ್ರಾಜ್ಯದ ಮಂತ್ರಿಯಾಗಿದ್ದ ವಿದುರನು ದಾಸಿಯ ಮಗನಾಗಿ ಹುಟ್ಟಿ ಬ್ರಾಹ್ಮಣನಾದ.
ವೇದಗಳಲ್ಲಿ ಶೂದ್ರ ಎಂಬ ಪದವು ಸುಮಾರು ೨೦ ಬಾರಿ ಬಂದಿದೆ ಆದರೆ ಎಲ್ಲಿಯೂ ಈ ಪದಕ್ಕೆ ಅಗೌರವ ತೋರಿಸಿಲ್ಲ. ಶೂದ್ರರು ಅಸ್ಪೃಶ್ಯರು, ಕೇವಲ ಹುಟ್ಟನ್ನು ಆಧರಿಸುವವರು, ವೇದಗಳನ್ನು ಕಲಿಯಲು ಅವರಿಗೆ ಅವಕಾಶನೀಡಬಾರದು, ಬೇರೆ ವರ್ಣಗಳಿಗಿಂತ ಕೀಳುಮಟ್ಟದವರು, ಯಜ್ಞಗಳಲ್ಲಿ ಪಾಲ್ಗೊಳ್ಳಲು ಅರ್ಹತೆಯಿಲ್ಲದವರು ಎಂದು ಎಲ್ಲಿಯೊ ಹೇಳಿಲ್ಲ.
ವೇದಗಳಲ್ಲಿ ಶೂದ್ರರೆಂದರೆ ಶ್ರಮ ಜೀವಿಗಳು ಎಂದು ಅರ್ಥವಿದೆ (ತಪಸೇ ಶೂದ್ರಂ – ಯಜುರ್ವೇದ ೩೦.೫). ಈ ಕಾರಣದಿಂದಲೇ ಪುರುಷಸೂಕ್ತವು ಶೂದ್ರರನ್ನು ಇಡೀ ಮಾನವ ಸಮಾಜದ ಆಧಾರ ಸ್ತಂಭಗಳೆಂದು ಕರೆಯಲಾಗಿದೆ.
ವೇದಗಳ ಪ್ರಕಾರ ೪ ವರ್ಣಗಳು ೪ ಆಯ್ಕೆಮಾಡಿಕೊಂಡ ಕೆಲಸಗಳಿಗೆ ಅನ್ವಯಿಸುವುದರಿಂದ, ಪ್ರತಿಯೂಬ್ಬರೂ ಬೇರೆ ಬೇರೆ ಪರಿಸ್ಥಿತಿ ಸಂದರ್ಭಗಳಿಗೆ ತಕ್ಕಂತೆ ವರ್ಣಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೂಬ್ಬರೂ ನಾಲ್ಕು ವರ್ಣಗಳಿಗೆ ಸೇರಿದವರಾಗಿದ್ದಾರೆ, ಆದರೆ ತಾವು ಯಾವ ಕೆಲಸವನ್ನು ಹೆಚ್ಚಾಗಿ ಮಾಡುತ್ತಾರೂ ಅವರು ಆ ವರ್ಣಕ್ಕೆ ಸೇರಿದವರಾಗಿರುತ್ತಾರೆ. ವೇದಗಳು ಹಾಗು ಪುರುಷಸೂಕ್ತದ ಸಾರದ ಪ್ರಕಾರ ಪ್ರತಿಯೂಬ್ಬರೂ ೪ ವರ್ಣಗಳಿಗೆ ಸೇರಲು ಪ್ರಯತ್ನಪಡಬೇಕೆಂದು ಹೇಳುತ್ತದೆ.
ಋಷಿಗಳಾದ ವಶಿಷ್ಠ, ವಿಶ್ವಾಮಿತ್ರ, ಅಂಗಿರ, ಗೌತಮ, ವಾಮದೇವ ಮತ್ತು ಕಣ್ವ ನಾಲ್ಕೂ ವರ್ಣದ ಗುಣಗಳನ್ನು ಪ್ರದರ್ಶಿಸಿದ್ದಾರೆ. ಇವರು ವೇದ ಮಂತ್ರಗಳ ಅರ್ಥವನ್ನು ಸಂಶೋಧನೆ ಮಾಡಿ, ದಾಸ್ಯ ಪದ್ಧತಿಯನ್ನು ನಾಶ ಮಾಡಿ, ದೈಹಿಕ ಕೆಲಸಮಾಡಿ, ಸಮಾಜಕಲ್ಯಾಣಕ್ಕಾಗಿ ಸಂಪತ್ತಿನ ನಿರ್ವಾಹಣೆಯನ್ನು ಮಾಡಿದ್ದಾರೆ. ನಾವು ಸಹ ಇವರನ್ನು ಅನುಸರಿಸಬೇಕು.
ಅಂತಿಮವಾಗಿ ವೇದಗಳು ಎಲ್ಲಾ ಮನುಷ್ಯರು ಒಂದೇ ಜಾತಿ ಎಂದು ಹೇಳಿದೆ, ವ್ರೃತ್ತಿ ಗೌರವವನ್ನು ಎತ್ತಿ ಹಿಡಿದಿದೆ, ಮತ್ತು ಎಲ್ಲಾ ಮಾನವರಿಗೆ ಅವರು ಇಷ್ಟಪಟ್ಟ ವರ್ಣವನ್ನು ಆಯ್ಕೆ ಮಾಡಿಕೊಳ್ಳಲು ಸಮಾನ ಅವಕಾಶ ಕಲ್ಪಿಸಿದೆ.
ಜನ್ಮಾಧಾರಿತ ಭೇದಭಾವಗಳು ವೇದಗಳಲ್ಲಿ ಇಲ್ಲವೇ ಇಲ್ಲ. ಇದನ್ನರಿತ ನಾವು ಈ ಜಾತಿ, ಮತ ಎಂಬ ಹುಚ್ಚು ಅರ್ಥಗಳನ್ನು ದಹಿಸಿ ನಾವೆಲ್ಲಾ ಒಂದಾಗಬೇಕು. ಜನ್ಮಾಧಾರಿತ ಭೇದಭಾವಗಳನ್ನು ತೊರೆದು, ನಾವೆಲ್ಲರೂ ವೇದಗಳ ಆಶ್ರಯದಡಿ ಒಂದಾಗಿ ಒಂದು ಅರ್ಥಪೂರ್ಣ ಸಮಾಜವನ್ನು ಕಟ್ಟಲು ಶ್ರಮಿಸೋಣ

ಶುಕ್ರವಾರ, ಜನವರಿ 19, 2018

ಯಾರು ನಮಸ್ಕಾರಕ್ಕೆ ಯೋಗ್ಯರು?*

*ಯಾರು ನಮಸ್ಕಾರಕ್ಕೆ ಯೋಗ್ಯರು?*
ನಮಸ್ಕಾರಕ್ಕೆ ಯೋಗ್ಯರು?  ಎಂಬುದಕ್ಕೆ ನಮ್ಮ ಸೂಕ್ತಕಾರರು ಕೊಡುವ ವಿವರಣೆಯನ್ನು ನೋಡಿದರೆ ಆಶ್ಚರ್ಯವಾಗದಿರದು. ಒಂದು ಸೂಕ್ತದ ಸುತ್ತ ಇಂದಿನ ಚಿಂತನ ನಡೆಸಬೇಕೆನಿಸಿದೆ.
ವಾಂಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ |
ವಿದ್ಯಾಯಾಂ ವ್ಯಸನಂ  ಸ್ವಯೋಷಿತಿ ರತಿರ್ಲೋಕಾಪವಾದಾದ್ಭಯಮ್ ||
ಭಕ್ತಿಃ ಶೂಲಿನಿ  ಶಕ್ತಿರ್ ಆತ್ಮ ದಮನೇ ಸಂಸರ್ಗ ಮುಕ್ತಿಃ ಖಲೈಃ |
ಏತೇ ಯೇಷು ವಸಂತಿ  ನಿರ್ಮಲಗುಣಾಸ್ತೇಭ್ಯೋ ಮಹದ್ಭ್ಯೋ ನಮಃ ||
ಸಜ್ಜನರ ಸಹವಾಸದಲ್ಲಿ ಆಸೆ, ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ,ತನ್ನ ಪತ್ನಿಯಲ್ಲಿ ಸುಖಪಡುವಿಕೆ, ಲೋಕಾಪವಾದದದೆಸೆಯಿಂದ ಹೆದರಿಕೆ, ದೇವರಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸುವುದರಲ್ಲಿ ಶಕ್ತಿ, ದುರ್ಜನರೊಡನೆ ಸಹವಾಸತ್ಯಾಗ, ಈ ನಿರ್ಮಲವಾದ ಗುಣಗಳು ಯಾರಲ್ಲಿರುತ್ತವೆಯೋ ಅಂತಹ ಮಹಾತ್ಮರಿಗೆ ನಮಸ್ಕಾರ."
ಸಜ್ಜನರ ಸಹವಾಸ:
ಎಂತಹ ಜನರಿಗೆ ನಮಸ್ಕರಿಸಬೇಕು? ನಮಸ್ಕಾರಕ್ಕೆ  ಅರ್ಹ ವ್ಯಕ್ತಿಗಳ ಮೊದಲನೆಯ ಗುಣವೇ ಸಜ್ಜನ ಸಹವಾಸ. ಸರ್ವಜ್ಞ ವಚನದಲ್ಲಿ ಸಜ್ಜನರ ಸಹವಾಸವನ್ನು ಚೆನ್ನಾಗಿ ಬಣ್ಣಿಸಲಾಗಿದೆ. “ ಸಜ್ಜನರ ಒಡನಾಟ ಹೆಜ್ಜೇನು ಸವಿದಂತೆ, ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ. ಸಜ್ಜನನಾರು, ದುರ್ಜನನಾರು ಎಂದು ತಿಳಿಯಲು ಬಹಳಕಾಲ ಬೇಕಾಗುವುದಿಲ್ಲ. ಸೂಕ್ತಕಾರರು ಹೇಳುತ್ತಾರೆ….. “ ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ” ಅಂದರೆ ಮನಸ್ಸಿನಲ್ಲೂ ಮಾತಿನಲ್ಲೂ ಮತ್ತು ಕರ್ಮದಲ್ಲೂ ಒಂದೇ ಆಗಿರುವವರು ಮಹಾತ್ಮರು ಅಥವಾ ಸಜ್ಜನರು.  ವ್ಯಕ್ತಿಗಳ ನಡವಳಿಕೆಗಳಲ್ಲಿಯೇ ವೆತ್ಯಾಸವು ತಿಳಿಯದೆ ಇರದು. ಹೀಗೆ ಸಜ್ಜನನಾರು ಎಂದು ತಿಳಿದು ಅಂತವರ ಸಹವಾಸ ಮಾಡುವಂತಹ ಆಸೆಯುಳ್ಳವನು ನಮಸ್ಕಾರಕ್ಕೆ ಯೋಗ್ಯನು.
ಪರರ ಗುಣಗಳಲ್ಲಿ ಪ್ರೀತಿ:
ಎರಡನೆಯ ಯೋಗ್ಯತೆ ಎಂದರೆ ಪರರ ಗುಣಗಳಲ್ಲಿ ಪ್ರೀತಿ. ಸಾಮಾನ್ಯವಾಗಿ ಎಲ್ಲರಿಗೂ ತನ್ನನ್ನು ಬಣ್ಣಿಸಿಕೊಳ್ಳುವ ಪರಿಪಾಠ. ಅಂತರಂಗ ಶುದ್ಧಿಯ ಬಗ್ಗೆ  ಬಸವಣ್ಣನವರು ಹೇಳುತ್ತಾರೆ ” ತನ್ನ ಬಣ್ಣಿಸಬೇಡ, ಇದಿರಹಳಿಯಲು ಬೇಡ” ಮನುಶ್ಯನಿಗಿರುವ ಈ ದೌರ್ಬಲ್ಯವನ್ನು ಮೆಟ್ಟಿನಿಲ್ಲುವುದು ಬಲು ಕಷ್ಟ.ಸಾಮಾನ್ಯವಾಗಿ ಒಂದು ಚಿಕ್ಕ ಸಹಾಯವನ್ನು ನಾವು ಇತರರಿಗೆ ಮಾಡಿದ್ದರೂ ಅದನ್ನು ಬಲು ದೊಡ್ಡದು ಮಾಡಿ ಸಿಕ್ಕಿದವರಿಗೆಲ್ಲಾ ಹೇಲಿದ್ದೇ ಹೇಳಿದ್ದು, ಜಂಬಾ ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು! ಅದು ಎಷ್ಟೇ ದೊಡ್ದದಿರಲಿ ಮತ್ತೊಬ್ಬರ ಸದ್ಗುಣಗಳನ್ನು ಗುರುತಿಸುವ ಕೆಲಸವನ್ನು ನಾವು ಮಾಡುವುದಿಲ್ಲ.ಆದರೆರು  ಯಾರು ಇನ್ನೊಬ್ಬರ ಸದ್ಗುಣವನ್ನು ಪ್ರೀತಿಸುತ್ತಾನೆ,ವನಿಗೆ ನಮಸ್ಕರಿಸು, ಎಂದು ಈ ಸೂಕ್ತವು ಕರೆಕೊಡುತ್ತದೆ.
ಗುರುವಿನಲ್ಲಿ ವಿಧೇಯತೆ:
“ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಗುರುವಿನ ಮಹತ್ವವನ್ನು ದಾಸರು ಚೆನ್ನಾಗಿ ಬಣ್ಣಿಸಿದ್ದಾರೆ. ಗುರು ಅಂದರೆ ಯಾರು?  ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಯಾರು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ದ ಕಡೆಗೆ ಕರೆದುಕೊಂಡು    ಹೋಗುತ್ತಾನೋ ಅವನು ಗುರು ಎನಿಸಿಕೊಳ್ಳುತ್ತಾನೆ. ಜೀವನದಲ್ಲಿ ಮುನ್ನಡೆಯಬೇಕಾದರೆ ಒಬ್ಬ ಗುರುವಿನ ಅವಶ್ಯಕತೆ ಇದೆ. ಅಂತವನಿಗೆ ವಿಧೇಯನಾಗಿರು. ಅಂತವನು ನಮಸ್ಕರಿಸಿಕೊಳ್ಳಲು ಯೋಗ್ಯ.
ವಿದ್ಯೆಯಲ್ಲಿ ಆಸಕ್ತಿ:
ವಿದ್ಯೆಯಲ್ಲಿ ಆಸಕ್ತಿಹೊಂದಿದವನು ನಮಸ್ಕಾರಕ್ಕೆ ಯೋಗ್ಯ. ಹಾಗಾದರೆ ವಿದ್ಯೆ ಎಂದರೇನು? ಎಂಬ ಅರಿವಿರಬೇಕಲ್ಲವೇ? ವೇದವು ಹೇಳುತ್ತದೆ “ ಸಾ ವಿದ್ಯಾ  ಯಾ ವಿಮುಕ್ತಯೇ” ಅಂದರೆ ಮನುಷ್ಯನನ್ನು ಎಲ್ಲಾ ಬಂಧನದಿಂದ ಬಿಡುಗಡೆಗೊಳಿಸುವುದು ವಿದ್ಯೆ. ವಿದ್ಯೆ ಅಂದರೆ ನಾವೆಲ್ಲಾ ತಿಳಿದಿರುವುದೇ ಬೇರೆಯಲ್ಲವೇ? ವಿದ್ಯಾವಂತನೆಂದರೆ ಅವನು ಯಾವುದಾದರೂ ಪದವಿ[ಡಿಗ್ರೀ] ಪಡೆದಿರಬೇಕು. ಪದವಿ ಯಾಕಾಗಿ? ಒಂದು ನೌಕರಿಗಾಗಿ. ಯಾರೋ ಒಬ್ಬರ ಕೈ ಕೆಳಗೆ ಕೆಲಸ ಮಾಡಲು ಪಡೆಯುವ ಪದವಿಯು ವಿದ್ಯೆ ಎನಿಸಿಕೊಳ್ಳುತ್ತದೆಯೇ? ಎರಡುಹೊತ್ತಿನ ಹೊಟ್ಟೆಪಾಡಿಗೆ ಅಗತ್ಯವಾದ ನೌಕರಿ ಮಾಡಲು ಅಗತ್ಯವಿರುವ ಯಾವುದೇ ಪದವಿಯನ್ನು  ವಿದ್ಯೆ ಎನ್ನಲಾದೀತೇ? ವೇದದ ಪ್ರಕಾರ ಇದೆಲ್ಲಾ ವಿದ್ಯೆಯೇ ಅಲ್ಲ. ಕಾರಣ. ಹೆಚ್ಚು ಹೆಚ್ಚು ಪದವಿ ಪಡೆದಷ್ಟೂ ಹೆಚ್ಚು ಹೆಚ್ಚು ಬಂಧನಗಳು ಅಂಟಿಕೊಳ್ಳುತ್ತವೆ. ಪಡೆದ ಪದವಿಯಿಂದ ಉದ್ಯೋಗ, ಕೀರ್ತಿ, ಪ್ರಸಿದ್ಧಿ, ಸಂಸಾರ, ಹೀಗೆ ಒಂದರಮೇಲೊಂದು ಬಂಧನಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಅಂದರೆ ಮದುವೆಯಾಗುವುದಾಗಲೀ, ನೌಕರೀ ಮಾಡುವುದಾಗಲೀ ಬಂಧನವೆಂದು ತಿಳಿಯಬೇಕಾಗಿಲ್ಲ. ಆದರೆ ಸಾಮಾನ್ಯವಾಗಿ   ಮನುಷ್ಯನು ಅಲ್ಪ ತೃಪ್ತನಲ್ಲ.ಒಂದು ಪಡೆದ ನಂತರ ಮತ್ತೊಂದು ಪಡೆಯುವ ಆಸೆ ಸಹಜವಾಗಿರುತ್ತದೆ. ಆದರೆ ಇಷ್ತಕ್ಕೇ ನಿಲ್ಲದೆ ವಿದ್ಯೆಯ ನಿಜವಾದ ಅರ್ಥ ತಿಳಿದು ಕಮಲದ ಎಲೆಯ ಮೇಲಿನ ನೀರಿನಂತೆ ಸಂಸಾರದಲ್ಲಿ ಇದ್ದೂ ಅದಕ್ಕೇ ಅಂಟಿಕೊಳ್ಳದೆ ಎಲ್ಲಾ ಬಂಧನಗಳಿಂದಲೂ ಮುಕ್ತನಾಗಿರುವ ಸ್ವಭಾವವನ್ನು ಕಲಿತರೆ ಅದು ವಿದ್ಯೆ. ಅಂತಹ ವಿದ್ಯೆಯಲ್ಲಿ ಆಸಕ್ತಿ ಇರಬೇಕು.
ತನ್ನ ಪತ್ನಿಯಲ್ಲಿ ಸುಖ:
ಇದು ಒಬ್ಬ ಸದ್ಗೃಹಸ್ತನಿಗೆ ಇರಲೇಬೇಕಾದ ಗುಣ. ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಯುವಜನತೆಯ ಕಣ್ ತೆರೆಸುವ ಉಕ್ತಿ ಇದಾಗಿದೆ. ಶ್ರೀ ರಾಮಚಂದ್ರನಿಗೆ ಏಕ ಪತ್ನೀವ್ರತಸ್ಥನೆಂಬುದೇ ಹೆಗ್ಗಳಿಕೆ. ಇಂದಿನ ಸಮಾಜವು ಸ್ವಾಸ್ಥ್ಯಪೂರ್ಣವಾಗಿರಬೇಕಾದರೆ ಈ ವ್ರತವನ್ನು ಎಲ್ಲರೂ ಆಚರಿಸುವುದು ಅನಿವಾರ್ಯ. ಈ ವ್ರತಬಂಗದ ಕಾರಣದಿಂದಲೇ    ಸಮಾಜದಲ್ಲಿ ಹರಡುತ್ತಿರುವ ಗುಪ್ತರೋಗಗಳು ಮತ್ತು ಮಾನಸಿಕ ಅಸ್ವಾಸ್ಥ್ಯ! ಅಪರಾಧಗಳು! ಆತ್ಮಹತ್ಯೆಗಳು!! ಕಾಯ ವಾಚಾ ಮನಸಾ ಈ ವ್ರತವನ್ನು ಪಾಲಿಸಿದ್ದೇ ಆದರೆ ಆ ಕುಟುಂಬವೇ ಸುಖೀ ಕುಟುಂಬ.
ಲೋಕಾಪವಾದದದೆಸೆಯಿಂದ ಹೆದರಿಕೆ:
ಲೋಕಕ್ಕೆ ಅಂಜಿ ನಡೆಯುವ ಬುದ್ಧಿ. ಇದು ಒಬ್ಬ ಸಜ್ಜನನಿಗೆ ಇರಲೇ ಬೇಕಾದ ಒಂದು ಗುಣ.ತಾನು ಏನು ಕೆಲಸ ಮಾಡುತ್ತಿದ್ದರೂ ಸಹ ತಾನು ಮಾಡುವ ಕೆಲಸವನ್ನು ಈ ಸಮಾಜವು ಗಮನಿಸುತ್ತಿದೆ! ಎಂಬ ಭಯ ಇರಬೇಕು. ಆಗ ತನ್ನಿಂದ ಕೆಟ್ಟ   ಕೆಲಸ ಆಗುವ ಅವಕಾಶವೇ ಇಲ್ಲ. ಮನುಷ್ಯನ ಸಹಜ ಗುಣವೆಂದರೆ ಆಸೆ. ಈ ಆಸೆ ಎಂಬುದು ಹಲವು ವೇಳೆ ವ್ಯಕ್ತಿಯನ್ನು ಅಂಧನನ್ನಾಗಿ ಮಾಡಿರುತ್ತದೆ. ನಮ್ಮ ಪಂಚೇಂದ್ರಿಯಗಳೆಲ್ಲವೂ ಹೊರಮುಖವಾಗಿಯೇ ಇವೆ. ಯಾವಾಗಲೂ ಹೊರಗಿನ ಆಕರ್ಷಣೆಗಳು ನಮ್ಮನ್ನು ಸಹಜವಾಗಿ ಸೆಳೆಯುತ್ತವೆ. ಆಗ ಸಮಾಜವೆಂಬುದು ಸಾಕ್ಷಿಯಾಗಲಿದೆ ಎಂಬ ಭಯವಿದ್ದರೆ ತನ್ನಿಂದ ಕೆಟ್ಟ  ಕೆಲಸಗಳಾಗಲಾರವು.
ದೇವರಲ್ಲಿ ಭಕ್ತಿ:
ಮನುಷ್ಯನು ಎಷ್ಟೇ ಬುದ್ಧಿವಂತನಾದರೂ ಅವನ ಕಲ್ಪನೆಗೆ ನಿಲುಕದ ಹಲವು ಸಂಗತಿಗಳ ನಿತ್ಯ ಅನುಭವ ಮನುಷ್ಯನಿಗೆ ಆಗುತ್ತದೆ. ಆದ್ದರಿಂದ ಮನುಷ್ಯನು ತಾನು ಏನೇ ಪ್ರಯತ್ನ ಮಾಡಿದರೂ, ಎಷ್ಟೇ ಶ್ರಮವನ್ನು ಹಾಕಿದರೂ ಸಹ ತನ್ನ ಕಲ್ಪನೆಯನ್ನು ಮೀರಿದ ಒಂದು ಶಕ್ತಿ ಇದೆಯಾದ್ದರಿಂದ ಆ ಭಗವಚ್ಚಕ್ತಿಗೆ ತಲೆಬಾಗಿ ತಾನು ಮಾಡುವ ಎಲ್ಲಾ ಕರ್ತವ್ಯವನ್ನೂ ನಿರ್ವಹಿಸಿ ಪರಿಣಾಮವನ್ನು ಭಗವಚ್ಚಕ್ತಿಗೆ ಬಿಟ್ಟುಬಿಟ್ಟರೆ ಮನುಷ್ಯನು ನಿರಾಳವಾಗಿರಬಹುದು. ಆದ್ದರಿಂದ  ದೇವರಲ್ಲಿ ಭಕ್ತಿಯಿಟ್ಟು ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡಿ ಇನ್ನು  “ ಎಲ್ಲವೂ ಅವನದೇ ಎಂದು” ನಂಬುವವನು ನಮಸ್ಕಾರಕ್ಕೆ ಯೋಗ್ಯನಾಗಿರುತ್ತಾನೆ.
ಮನೋನಿಗ್ರಹ: ಮನೋನಿಗ್ರಹ ವೆಂಬುದು ಅತಿ ಕಷ್ಟಕರ ಸಂಗತಿ. ಮನುಷ್ಯನಿಗೆ ಅದು ಬೇಕು, ಇದು ಬೇಕು, ಎಲ್ಲವೂ ಬೇಕೆಂಬುದು ಅತ್ಯಂತ ಸಹಜವಾದ ಗುಣ. ಬಾಯಲ್ಲಿ ನೀರೂರಿದಾಗ ಬೇಡವೆಂದು ಕಡಿವಾಣ ಹಾಕುವುದು ನಿಗ್ರಹ.ಇದು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೆ ತಪಸ್ಸು ಬೇಕು, ಸಾಧನೆ ಬೇಕು.  ಈ ಒಂದು ಸಾಧನೆ ಮಾಡಿದ್ದೇ ಆದರೆ ಮನುಷ್ಯನು ಅತ್ಯಂತ ಸುಖಿ. ಇವನೇ ಮಹಾತ್ಮ.
ದುರ್ಜನರ ಸಂಗ ತ್ಯಜಿಸುವುದು:
ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ.ಎಂಬುದನ್ನು ಈಗಾಗಲೇ ನೆನಪು ಮಾಡಿದ್ದಾಗಿದೆ. ಇವನು ದುರ್ಜನನೆಂದು ಅರಿಯುವುದು ಹೇಗೆ? ಅದಕ್ಕೆ ಹಿರಿಯರು ಹೇಳುತ್ತಾರೆ….
“ಮನಸ್ಸನ್ಯತ್, ವಚಸ್ಸನ್ಯತ್,ಕರ್ಮಣ್ಯನ್ಯತ್ ದುರಾತ್ಮನಾಮ್” ಅಂದರೆ ಮನಸ್ಸಿನಲ್ಲಿ ಒಂದು,ಮಾತಿನಲ್ಲಿ ಒಂದು ಮತ್ತು  ಕ್ರಿಯೆಯಲ್ಲಿ ಮತ್ತೊಂದು ಮಾಡುವವನು ದುರಾತ್ಮನು. ಅವನ ಸಹವಾಸ ಮಾಡಬೇಡ. ಅಂತವರ ಸಂಗವನ್ನು ತ್ಯಜಿಸುವವನು ನಮಸ್ಕಾರಕ್ಕೆ    ಯೋಗ್ಯನು.

ಯಜ್ಞೋಪವೀತ

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.
"ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.
ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.
ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.
ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.
ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.
ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.
ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.
ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:-
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ
ಯಜ್ಞೋಪವೀತದ ನಿಯಮಗಳು:-
* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.
* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.
ಯಜ್ಞೋಪವೀತದ ವೈಜ್ಞಾನಿಕ ಮಹತ್ವ:-
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.
* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ
ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.
* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.
* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.
* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.
* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.
* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.
ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ

ರಾಮ ಹುಟ್ಟಿದು ಅಯೋದ್ಯೆಯಲ್ಲಿ.

"ಜಗತ್ತಿನ ದೊಡ್ಡಣ್ಣ ಅಮೆರಿಕಾದ ವಯಸ್ಸು ಅಷ್ಟೇ, ಆ ದೇಶದಲ್ಲಿ ಇರೋ ಮಹಾಪುರುಷರ ಸಂಖ್ಯೆಯೂ ಅಷ್ಟೇ, ಅಬ್ರಾಮ್ ಲಿಂಕನ್, ಜಾರ್ಜ್ ವಾಷಿಗ್ಟನ್, ಅಬ್ಬಬ್ಬಾ ಅಂದ್ರೆ ಕೆನಾಡಿಯನ್ನು ಹೇಳಬಹುದು. ಆದರೆ ಅಲ್ಲಿ ನಾಲ್ಕನೇ  ಮಹಾಪುರುಷರಿಲ್ಲ. ಅದೇರೀತಿ ನಮ್ಮನ್ನು 183ವರ್ಷ ಆಳಿದ ಇಂಗ್ಲೆಂಡ್ನಲ್ಲಿ ಇರೋದು ಒಂದು ಐದಾರು ಜನ ವಿಕ್ಟೊರಿಯಾಗಳು ಇನ್ನು ನಾಲ್ಕೈದು ಜನ ಜಾರ್ಜ್ಗಳು ಇನ್ನೊಬ್ಬ ಚರ್ಚಿಲ್ ಇರಬಹುದು ಒಟ್ಟು 15ಜನ ಮಹಾಪುರುಷರೀರಬಹುದು. ಆದರೆ ಭಾರತ ಹಾಗಲ್ಲ. ನಮಿಗೆ ಸಾವಿರಾರು ವರ್ಷಗಳ ಇತಿಹಾಸವೂ ಇದೆ. ಸಾವಿರಾರು ಮಹಾಪುರುಷರೂ ಇದ್ದಾರೆ ಅದು ಅಂದಿನ ರಾಮನಿಂದ ಹಿಡಿದು ಇಂದಿನ ರಾಮಭಕ್ತ ಮೋದಿಯ ವರೆಗೆ."
"ಅಂತಹ ಮಹಾಪುರುಷರಲ್ಲಿ ಭಾರಿ ದೊಡ್ಡ ಹೆಸರು ಇರುವಂತದ್ದು ಪ್ರಭು ಶ್ರೀರಾಮ ಚಂದ್ರನದ್ದು. ಆತ ಒಬ್ಬ ಮಾದರಿ ರಾಜ, ಮಾದರಿ ಪತಿ, ಮಾದರಿ ಮಗ, ಮಾದರಿ ಅಣ್ಣ ಅಲ್ಲದೆ ಮಾದರಿ ವೈರಿ ಕೂಡ. ಆತ ಜೀವನದ ಎಲ್ಲಾಘಟ್ಟದಲ್ಲೂ ಎಲ್ಲರಿಗೂ ಆದರ್ಶ. ಆತ ಎಲ್ಲರಿಗೂ ಎಲ್ಲಾ ವಿಷಯದಲ್ಲೂ ಮಾದರಿ. ಆದರಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಅಂದರೆ ಪುರುಷರಲ್ಲಿ ಉತ್ತಮ ಎಂದು ಕರೆಯಲಾಗುತ್ತದೆ. ರಾಮನ ಜನ್ಮಕ್ಕೆ ಸಂಬಂದಿಸಿದಂತೆ ಇತ್ತೀಚಿಗೆ ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದನ್ನು ನಾನು ಸ್ವಲ್ಪ ಓದಿದ್ದೆ. ಅಮೆರಿಕಾದ ನಾಸಾ ಸಂಸ್ಥೆ ಇತ್ತೀಚಿಗೆ ಉಪಗ್ರಹವೊಂದನ್ನು ಉಡಾಯಿಸಿತ್ತು. ಸಮುದ್ರದ ಒಳಗಿರುವ ರಚನೆಗಳ ಬಗ್ಗೆ ಅಧ್ಯಯನ ಮಾಡುವುದು ಆ ಉಪಗ್ರಹದ ಕೆಲಸ. ಹಾಗೆ ಅಧ್ಯಯನದಲ್ಲಿ ತೊಡಗಿದ್ದಾಗ ತಮಿಳುನಾಡಿನ ಧನುಷ್ಕೊಡಿಯಿಂದ ಶ್ರೀಲಂಕಾದ ವರೆಗೆ ಮಾನವ ನಿರ್ಮಿತ ಸೇತುವೆಯೊಂದನ್ನು ಪತ್ತೆಹಚ್ಚಿದ್ದಾರೆ. ನಾವೇ ಮೊದಲು ಕಂಡುಹಿಡಿದದ್ದು ಎಂದು ಜಂಬಕೊಚ್ಚಿಕೊಂಡು ಕ್ರೈಸ್ತರ ಮೂಲ ಪುರುಷ ಆಡಮಿನ ಹೆಸರನ್ನು ಆ ಸೇತುವೆಗೆ ಇಟ್ಟರು. ಅದರ ಇತಿಹಾಸ ಗಮನಿಸಿದಾಗ ಅದು ಒಂದುಮುಕ್ಕಾಲು ಲಕ್ಷ ವರ್ಷಗಳ ಹಿಂದಿನ ಸೇತುವೆ ಎಂದು ತಿಳಿಯಿತು. ಅಂದರೆ ರಾಮ ಜೀವಿಸಿದ್ದು ಸರಿಸುಮಾರು ಒಂದೂವರೆ ವರ್ಷಗಳ ಹಿಂದೆ."
"ಇಂತಹ ರಾಮ ಹುಟ್ಟಿದು ಅಯೋದ್ಯೆಯಲ್ಲಿ. ಆತ ರಾಮರಾಜ್ಯವೊಂದನ್ನು ಕಟ್ಟಿಬೆಳಿಸಿ ಕಾಲವಾದ. ಅವನ ನೆನಪಿಗೊಸ್ಕರ ಆತನ ಮಗ ಅಯೋದ್ಯೆಯಲ್ಲಿ ದೇವಸ್ಥಾನವೊಂದನ್ನು ಕಟ್ಟಿದ. ಹಲವಾರು ಭಕ್ತರ ಅಗಮನದೊಂದಿಗೆ ಏಳೆಂಟುಭಾರಿ ಜೀರ್ಣೋದ್ದಾರಗೊಂಡಿತು. ಅದೇ ರೀತಿ ಎರಡು ಸಾವಿರ ವರ್ಷಗ ಹಿಂದೆ ಅದನ್ನು ಜೀರ್ಣೋದ್ದಾರ ಮಾಡಿದ ಕೀರ್ತಿ ರಾಜ ವಿಕ್ರಮಾಧಿತ್ಯನಿಗೆ ಸಲ್ಲುತ್ತದೆ. ಪುನರ್ನಿರ್ಮಾಣವಾದ ಆ ದೇವಸ್ಥಾನ ಒಂಬತ್ತು ಅಂತಸ್ತಿನಿಂದ ಕೂಡಿತ್ತು. ಅಲ್ಲಿದ್ದ 64 ಬೃಹತ್ ಕಂಬಗಳು ಕೂಡಾ ಮುತ್ತು ರತ್ನ ವಜ್ರಗಳಿಂದ ಅಲಂಕೃತಗೊಂಡಿದ್ದವು. ಇಂತಹ ಒಂದು ಭವ್ಯವಾದ ರಾಮನ ಮಂದಿರ ಅದಾಗಿತ್ತು."
"ಆದರೆ 1526ನೇ ಇಸವಿಯಲ್ಲಿ ಒಬ್ಬ ಕ್ರೂರಿ, ಅನಾಗರಿಕ ಬಾಬಾರ ಭಾರತದ ಮೇಲೆ ಆಕ್ರಮಣ ಮಾಡಿ ದಿಲ್ಲಿಯ ಗದ್ದುಗೆಯೇರಿದ. ಅಲ್ಲಿಂದ ನೇರವಾಗಿ ಅವನ ಕಣ್ಣುಬಿದ್ದದ್ದು  ಅಯೋದ್ಯೆಯ ಈ ಭವ್ಯ ಮಂದಿರದ ಮೇಲೆ. ಆತನ ದಂಡನಾಯಕ ಮಿರ್ಭಾಕಿಯನ್ನು ಕಳುಹಿಸಿ ಮಂದಿರವನ್ನು ನಾಶಗೊಳಿಸಲು ಅದೇಶ ನೀಡುತ್ತಾನೆ. ಮುಸ್ಲಿಮರ ಮೂಲ ಚಿಂತನೆ ಹಾಗೆ ಚೆನ್ನಾಗಿರುದನ್ನು ಹಾಳು ಮಾಡುವುದು. ದಂಡೆತ್ತಿ ಬಂದ ಮೀರ್ಬಾಕಿ ಸುಮಾರು ಮೂರುಕಾಲು ಲಕ್ಷ ಹಿಂದುಗಳ ಜೀವಹಿಂಡಿ ಮಂದಿರವನ್ನು ವಶಪಡಿಸಿಕೊಂಡು ಅದನ್ನು ದೋಚಿ ನಾಶಪಡಿಸಿದ. ಅಲ್ಲಿ ಮೂರು ಗುಂಬಜ್ ಇರುವ ಕಟ್ಟಡ ನಿರ್ಮಿಸಲು ಶುರು ಮಾಡಿದರು. ಮೊದಲದಿನ ಕಟ್ಟಿದ ಗೋಡೆ ಮರುದಿನ ನೋಡಿದಾಗ ಮಾಯವಾಗಿತ್ತು. ಮತ್ತೆ ಕಟ್ಟಿದ ಗೋಡೆ ಇದ್ದಕಿದ್ದಂತೆ ಮತ್ತೆ ಮಾಯ ಆಯ್ತು. ಅದೇನು ಹೀಗೆ ಅಂತ ಕಾದು ಕುಳಿತರು ಆದರೂ ಗೋಡೆ ಮಾಯ ಆಯ್ತು. ಕಟ್ಟಿದ ಗೋಡೆ ಮರುದಿನ ಕಣ್ಮರೆಯಾಗುತ್ತಿತ್ತು. ಮುಸ್ಲಿಮರು ಎಲ್ಲಾ ಸೇರಿಕೊಂಡು ಹಿಂದೂ ಪುರೋಹಿತನ ಬಳಿ ಪ್ರಶ್ನೆ ಕೇಳಲು ಹೋದರು. ಪುರೋಹಿತರು ರಾಮನ ಪರಮ ಭಕ್ತನಾದ ಹನುಮಂತ ಅದೃಶ್ಯ ರೂಪದಲ್ಲಿ ಬಂದು ಕಟ್ಟಿದ ಗೋಡೆ ಕೆಡವುತ್ತಿದ್ದಾನೆ. ಅಧಿಕೊಸ್ಕರ ರಾಮನ ಅಥವಾ ಸೀತೆಗೆ ಸಂಬಂದಿಸಿದ ಏನಾದರೂ ಕಟ್ಟಿ ಎಂದು ಪರಿಹಾರವನ್ನೂ ಹೇಳಿದ. ಅದರಂತೆ ಈ ಗುಂಬಜಿನ ಪಕ್ಕ ಸೀತಾ ರಾಸೋಯಿ (ಸೀತೆಯ ಅಡುಗೆಮನೆ)ಎಂಬ ಕಟ್ಟಡ ಕಟ್ಟಲಾಯಿತು. ನಂತರ ಬಾಬರ್ ತನ್ನ ಹೆಸರಿನಲ್ಲಿ ಮಸೀದಿಯೊಂದನ್ನು ಕಟ್ಟಿದ."
"ಆದರೆ ಇದರ ವಿರುದ್ಧ 1973ರ ವರೆಗೆ ಸುಮಾರು 73ಭಾರಿ ಹೋರಾಟಗಳಾಗಿವೆ. ಒಂದುಭಾರಿ ಮಾತ್ರ ನಾವು ಗೆದ್ದಿದ್ದೆವು. ಆದರೆ ದುರ್ದೈವ ಆಗ ನಮ್ಮನ್ನು ಬ್ರಿಟಿಷರು ಆಳುತ್ತಿದ್ದರು. ಅವರು ನಮ್ಮ ಕೈಯಿಂದ ಮತ್ತೆ ಜಾಗವನ್ನು ಕಿತ್ತು ಮುಸ್ಲಿಮರ ಕೈಗೆ ಕೊಟ್ಟರು. 1947ಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುದು ಎಂದು ಹಿಂದೂಗಳು ಆಸೆಯಿಂದ ಕುಳಿತಿದ್ದರು. ಆದರೆ ಸ್ವಾತಂತ್ರ್ಯ ದ ನಂತ್ರ ಅಲ್ಲಿ ಮಂದಿರ ನಿರ್ಮಾಣದ ಕನಸು ನುಚ್ಚುನೂರಾಯಿತು."
"ಆದರೆ 1948ರಲ್ಲಿ ಒಂದು ಮಜವಾದ ಘಟನೆ ನಡೆಯಿತು. ಬಾಬರ್ಮಸೀದಿ ಕಟ್ಟಡವನ್ನು ಕಾಯುತ್ತಿದ್ದ ಮಹಮದ್ ಎಂಬ ಮುಸ್ಲಿಂ ಪೊಲೀಸನಿಗೆ ಅದೇ ಜಾಗದಲ್ಲಿ ರಾತ್ರಿ ಇದ್ದಕಿದ್ದಂತೆ ರಾಮ ಸೀತೆ ಹಾಗೂ ಹನುಮಂತನ ಮೂರ್ತಿ ಪ್ರತ್ಯಕ್ಷವಾಗಿ ಪ್ರಕಾಶಮಾನವಾಗಿ ಹೊಳೆಯಲು ಪ್ರಾರಂಭವಾಗಿದೆ. ಕಣ್ಣು ಮಂಜಾಗಿ ಕಣ್ಣು ಮುಚ್ಚಿ ಮತ್ತೆ ತೆರೆದು ನೋಡುವಾಗ ಅಲ್ಲಿ ಈ ಮೂರು ಮೂರ್ತಿಗಳನ್ನು ಆತ ಕಂಡ. ಮರುದಿನ ಇದು ದೇಶಪೂರ್ತಿ ಸುದ್ದಿಯಾಯಿತು. ಉತ್ತರಪ್ರದೇಶದ ಮುಖ್ಯಮಂತ್ರಿ ತಿವಾರಿ ಹಾಗೂ ಆಗಿನ ಪ್ರಧಾನಿ ನೆಹರು ಈ ವಿಗ್ರಹಗಳಿಗೆ ಪೂಜೆ ನಡೆಯಬೇಕು ಎಂದು ತೀರ್ಮಾನಿಸಿದರು. ಅದರಂತೆ ಒಂದು ಬೆಳಕೇ ಬೀಳದ ಕೊನೆಯಲ್ಲಿ ಮುಚ್ಚಿದ ಬಾಗಿಲಿನ ಒಳಗಡೆ ಪೂಜೆ ನಡೆಯುತ್ತಿತ್ತು. ಅಲ್ಲಿಗೆ ಭಕ್ತರಿಗೆ, ಜನರಿಗೆ ಪ್ರವೇಶ ಇರಲಿಲ್ಲ. ಹೀಗೆ ಹಲವಾರು ವರ್ಷಗಳು ಕಳೆದವು. 1983ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಬಾಲಸಾಹೇಬ್ ದೇವರಸ್ ರಾಮಜನ್ಮಭೂಮಿಗೆ ಸಂಬಂಧ ಪಟ್ಟಂತೆ *ರಾಮಜಾನಕಿ ರಥಯಾತ್ರೆಯನ್ನು* ಆರಂಭಿಸಿದರು. ದೇಶದ ಜನರಿಗೆ ಅಯೋದ್ಯೆಯ ಪ್ರಸುತ ವಿಷಯದ ಬಗ್ಗೆ ಹಾಗೂ ಮಂದಿರ ನಿರ್ಮಾಣದ ಬಗ್ಗೆ ಮಾಹಿತಿ ನೀಡುವುದು ಈ ರಥಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು. ದೇಶಪೂರ್ತಿ ಸುತ್ತಿದ ಈ ರಥಯಾತ್ರೆಯ ಎರಡು ರಥಗಳು ನಮ್ಮ ಜಿಲ್ಲೆಗೂ ಬಂದಿತ್ತು. ಇದರಿಂದ ರಾಮಜನ್ಮ ಭೂಮಿಯ ಬಗ್ಗೆ ಜನರಲ್ಲಿ ಸ್ವಲ್ಪ ಅರಿವು ಮೂಡಿತು. ಆದರೆ ಅದು ಸಾಕಾಗಲಿಲ್ಲ. ಮತ್ತೆ ಮೂರು ವರ್ಷ ಕಳೆದು *ರಾಮಶಿಲಾ* ಎಂಬ  ಆಂದೋಲನವನ್ನು ಆರಂಭಿಸಲಾಯಿತು. ಇದರ ಪ್ರಕಾರ ರಾಮನ ಮೂರ್ತಿಯ ಜೊತೆಗೆ ಪ್ರತೀ ಹಿಂದುವಿನ ಮನೆಗೆ ಭೇಟಿಕೊಡಬೇಕಿತ್ತು. ಭೇಟಿಕೊಡುವ ಮೊದಲು ಆ ಮನೆಯವರಿಗೆ ನಾವು ಬರುವಿಕೆಯ ಮಾಹಿತಿ ಕೊಡಬೇಕಿತ್ತು. ಅಂದು ಆ ಮನೆಯವರು ಇಡೀ ದಿನ ಉಪವಾಸವಿದ್ದು ಬಂದ ಮುರ್ತಿಗೆ ಆರತಿಮಾಡಿ ಒಂದುಕಾಲು ರೂಪಾಯಿ ದಕ್ಷಿಣೆಯಾಗಿ ನೀಡಬೇಕಿತ್ತು. ಮನೆಯಲ್ಲೊಂದು ಭಜನೆ ನಡೆದು ಪ್ರಸಾದ ವಿತರಣೆ ನಡೆಯಬೇಕಿತ್ತು. ಮುಂದಿನ ಮನೆಗೆ ಆ ಮನೆಯವರೇ ರಾಮನ ವಿಗ್ರಹವನ್ನು ಹೊತ್ತುಕೊಂಡು ಹೋಗಬೇಕಿತ್ತು. ಇದೊಂದು ಸಾಮರಸ್ಯದ ಸಮನ್ವಯದ ಆಂದೋಲನವಾಗಿತ್ತು. ಹೀಗೆ ಅಯೋದ್ಯೆಯಿಂದ ರಾಮನ ಶಿಲೆ ಬರುತ್ತದೆ ಎಂದು ನಾವೆಲ್ಲಾ ಭಾರಿ ತೇಜಸ್ಸಿನಿಂದ ಕೆಲಸ ಮಾಡಿದೆವು. ಆದರೆ ಎರಡು ದಿನದ ಮೊದಲು ರಾಮನ ಶಿಲೆ ಅಯೋದ್ಯೆಯಿಂದ ಬರುದಿಲ್ಲ. ಅದು ಮಂಗಳೂರಿನಲ್ಲಿರುವ ಒಂದು ಇಟ್ಟಿಗೆ ಖಾರ್ಕಾನೆಯಿಂದ ಬರುತ್ತದೆ ಅದೂ ಕೂಡ ಬರೀ ಇಟ್ಟಿಗೆ ತುಂಡು ಎಂದಾಗ ನಮ್ಮ ಉತ್ಸಹ ಪೂರ್ತಿ ಕುಂದಿಹೋಯಿತು. ಈ ಇಟ್ಟಿಗೆಯನ್ನು ಯಾರು ರಾಮ ಅಂತಾ ಪೂಜೆ ಮಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಹಿರಿಯರ ಆದೇಶದಂತೆ ಅದೇ ಇಟ್ಟೆಗೆಯನ್ನು ಹೊತ್ತು ನಾವು ಹೊರಟಾಗ ಕುಂದಿದ್ದ ನಮ್ಮ ಆತ್ಮಸ್ಥೈರ್ಯ ಜನರ ಪ್ರಚಂಡ ಜನ ಬೆಂಬಂಬಲದೊಂದಿಗೆ ಕೊನೆಗೊಂಡಿತು. ಕಾರ್ಯಕ್ರಮ ಸಂಜೆ 4ರಿಂದ 8ರ ತನಕ ಎಂದು ಯೋಜನೆ ಮಾಡಿದ್ರೆ ಜನರ ಬೆಂಬಲದೊಂದಿಗೆ ಮದ್ಯರಾತ್ರಿ ಮೂರುಗಂಟೆಯವರೆಗೂ ಕಾರ್ಯಕ್ರಮ ನಡೆಯುತ್ತಿತ್ತು. ಇಟ್ಟಿಗೆಯನ್ನು ಸ್ವತಃ ರಾಮನೇ ಬಂದಂತೆ ಜನರು ಪೂಜೆ ಮಾಡುತಿದ್ದರು. ಮತ್ತೆ ಆ ಎಲ್ಲಾ ಇಟ್ಟಿಗೆಗಳನ್ನು ಲಾರಿಯಲ್ಲಿ ತುಂಬಿಸಿ ಬೃಹತ್ ಮೆರವಣಿಗೆಯ ಮೂಲಕ ಅಯೋದ್ಯೆ ಕಳುಹಿಸಿಕೊಡಲಾಯಿತು."
"ಈ ಸಂದರ್ಭದಲ್ಲಿ ಮಂದಿರದ ಕಾವು ಇನ್ನೂ ಹೆಚ್ಚಾಯಿತು. ಆ ಕಾಲದಲ್ಲಿ ಮುಂದೆ ನಿರ್ಮಾಣವಾಗಬೇಕಾದ ಮಂದಿರದ ನೀಲನಕ್ಷೆಯೊಂದನ್ನು ನಮ್ಮ ಹಿರಿಯರು ರಚಿಸಿದರು. ಅದು ಸರಿಸುಮಾರು 170ಅಡಿ ಉದ್ದ 120 ಅಡಿ ಅಗಲವಿದ್ದ ಒಂದು ಬೃಹತ್ ಕಟ್ಟಡವಾಗಿತ್ತು. ಅದರ ಚಿತ್ರವನ್ನು ಮನೆಮನೆಗೆ ಹಂಚಲಾಯಿತು. ಅದರಂತೆ ದೇವಸ್ಥಾನದ ಶಂಕುಸ್ಥಾಪನೆಗೆ 1989ರಲ್ಲಿ ದೇವೋತ್ತಾನ ಏಕಾದಶಿಯ ದಿನವೊಂದನ್ನು ನಿರ್ಧಾರ ಮಾಡಲಾಯಿತು. ಆದರೆ ಸರ್ಕಾರ ಇದ್ದನ್ನು ವಿರೋಧಿಸಿತು. ಕ್ರಮೇಣ ಅಲ್ಲಿ ಸೇರಿದ 25ಸಾವಿರಕ್ಕೂ ಅಧಿಕ ಜನರನ್ನು ನೋಡಿ ರಾಜೀವ್ ಗಾಂಧಿಯ ಸರ್ಕಾರ ಬೆಚ್ಚಿಬಿದ್ದು ಹೆದರಿ ಶಂಕುಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತು. ಅದರಂತೆ ಮಸೀದಿಯ ಎದುರು ಜಾಗದಲ್ಲಿ ಮೊದಲಿಗೆ ಹೊಂಡವೊಂದನ್ನು ತೆಗೆದು ಒಬ್ಬ ದಲಿತನ ಕೈಯಲ್ಲಿ ಮೊದಲ ಇಟ್ಟಿಗೆಯನ್ನು ಹಾಕುವ ಮೂಲಕ ಶಂಕುಸ್ಥಾಪನೆ ಮಾಡಲಾಯಿತು. ಆದರೆ ಮುಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲು ಸರ್ಕಾರ ಬಿಡಲಿಲ್ಲ. ಅಧಿಕೊಸ್ಕರ ಮುಂದಿನ ವರ್ಷ 1990ರಲ್ಲಿ ಬರುವ ದೇವೋತ್ತಾನ ಏಕಾದಶಿಯ ದಿನ ಒಂದು ದೊಡ್ಡ ಹೋರಾಟವನ್ನು ನಡೆಸುದಾಗಿ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಆಕ್ಟೊಬರ್ 30ರಂದು ಸಿಖ್ಖರು ಅವರ ಗುರುದ್ವಾರವನ್ನು ಅವರೇ ಸ್ವತಃ ನಿರ್ಮಿಸುವ ರೀತಿಯಲ್ಲಿ *ಕರಸೇವಾ* ಎಂಬ ಆಂದೋಲನವನ್ನು ಅಯೋಜಿಸಲಾಯಿತು. ನಮ್ಮ ಮಂದಿರ ನಾವೇ ನಿರ್ಮಿಸುದೆಂದು ತೀರ್ಮಾನಿಸಲಾಯಿತು. ಹಾಗೆ *ನಿರ್ಮಾಣಕ್ಕಾಗಿ ನಿರ್ನಾಮ,* ಮಂದಿರದ ರಚನೆಗೆ ಮಸೀದಿ ಒಡೆಯುವ ಕೆಲಸಕ್ಕೆ ಕರೆಕೊಡಲಾಯಿತು."
"ಆದರೆ ಅಲ್ಲಿಯ ಸ್ಥಳೀಯ ಮುಲಾಯಂ ಸಿಂಗಿನ ಸರ್ಕಾರ ಇದನ್ನು ವಿರೋಧಿಸಿ ಮುಸ್ಲಿಮರ ಪರವಾಗಿ ನಿಂತಿತು. ಆರು ವಿವಿಧ ಹಂತಗಳಲ್ಲಿ ಮಸೀದಿಗೆ ಭದ್ರತೆ ಒದಗಿಸಲಾಯಿತು. ಇಡೀ ಉತ್ತರಪ್ರದೇಶ ಪೊಲೀಸ್ಮಯವಾಗಿತ್ತು. ನೀವು ಮಸೀದಿ ಒಡೆಯುದು ಬಿಡಿ ಅದರ ಮೇಲೆ ಒಂದು ಹಕ್ಕಿಯೂ ಹಾರಲು ನಾನು ಬಿಡುದಿಲ್ಲ ಎಂದು ಮುಲಾಯಂ  ಸಿಂಗ್ ಹಿಂದೂಗಳಿಗೆ ಸವಾಲು ಹಾಕಿದರು. ಅಯೋದ್ಯೆಯ ಎಲ್ಲಾ ರಸ್ತೆಗಳನ್ನು ಕತ್ತರಿಸಲಾಯಿತು. ಉತ್ತರ ಪ್ರದೇಶ ಮಧ್ಯಪ್ರದೇಶದ ನಡುವೆ ಹರಿಯುವ ನದಿಯೊಂದಕ್ಕೆ ಕರಸೇವಕರು ಈಜಿ ಬರಬಾರದು ಎಂದು ಕ್ರೂರ ಮೊಸಲೆಗಳನ್ನು ಹಾಕಿಸಿದರು. ಹೀಗೆ ಏನಾದರೂ ಆಗಲಿ ಆದರೆ ಕರಸೇವೆಯಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘ ನಿರ್ಣಯ ಮಾಡಿತ್ತು."
"ಅದರಂತೆ ಸುಮಾರು ಒಂಬತ್ತು ದಿನ ಮೊದಲು ಸರಿಸುಮಾರು ಹತ್ತು ಗಂಟೆ ರಾತ್ರಿಗೆ ಮಂಗಳೂರಿನಲ್ಲಿ ಸುಮಾರು 137ಜನರಿರುವ ಮೊದಲ ಕರಸೇವಕರ ಬೈಠಕ್ ನಡೆಯಿತು. ಅಲ್ಲಿ ನಾಳೆ ರೈಲಿನಲ್ಲಿ ಹೊರಡುವ ಕರಸೇವಕರಿಗೆ ಬೇರೆಬೇರೆ ಸೂಚನೆಗಳನ್ನು ನೀಡಲಾಯಿತು. ಈಗಾಗಲೇ ಹಲವಾರು ರೈಲುಗಳನ್ನು ನಿಲ್ಲಿಸಲಾಗಿದೆ, ಆದ್ದರಿಂದ ನೀವು ಸಿಕ್ಕಿದ ರೈಲಿನಲ್ಲಿ ಹತ್ತಿಕೊಳ್ಳಬೇಕು, ಯಾರೂ ಕೂಡಾ ಕೇಸರಿ ಬಟ್ಟೆ ಧರಿಸಬಾರದು. ಪರಸ್ಪರ ಒಟ್ಟಿಗೆ ಹೋಗುವುದು, ಮಾತಾಡುದು ಮಾಡಬಾರದು, ರೈಲಿನಲ್ಲಿ ಒಟ್ಟಿಗೆ ಕುಳಿತು ಭಜನೆ ಮಾಡಬಾರದು ಮಾಡಿದರೆ ನಿಮ್ಮನ್ನು ಬಂಧಿಸಿ ಜೈಲಿಗೆ ಅಟ್ಟುತ್ತಾರೆ ಎಂಬ ಸೂಚನೆಯನ್ನು ನಾವು ಆ ಕರಸೇವಕರಿಗೆ ನೀಡಿದೆವು. ಅಲ್ಲದೆ ನೀವು ಯಾರಾದರೂ ನಿಮ್ಮ ಮನೆಯಲ್ಲಿ ತಂದೆ ತಾಯಿ ಹೆಂಡತಿಗೆ ಮಕ್ಕಳಿಗೆ ಅಯೋದ್ಯೆಗೆ ಹೋಗಿ ಹತ್ತಿಪ್ಪತ್ತು ದಿನದಲ್ಲಿ ವಾಪಸ್  ಬರುತ್ತೇವೆ ಎಂದು ಮಾತು ಕೊಟ್ಟಿದ್ದರೆ ಬರುವುದು ಬೇಡ ವಾಪಸ್ ಮನೆಗೆ ಹೋಗಿ ಯಾಕೆಂದರೆ ಹೋದವರು ಬದುಕಿ ಬರುವುದು ಅಷ್ಟು ಕಷ್ಟ ಎಂದು ಕರಸೇವಕರಿಗೆ ಮನವರಿಕೆ ಮಾಡಲಾಯಿತು. ಆಗ ಯಾವೊಬ್ಬನೂ ಹೆದರಿ ಜೀವ ಭಯದಿಂದ ಮನೆಗೆ ಹೋಗಲಿಲ್ಲ."
"ಮಾತು ಮುಂದುವರಿಸುತ್ತಾ ನೀವು ಒಂದುವೇಳೆ ಬಂಧನವಾದರೆ ಸುಮ್ಮನೆ ಕೂರಬಾರದು. ನಾನು ರಾಮನಿಗೋಸ್ಕರ ಮಹಾರಾಷ್ಟ್ರದವರೆಗೆ ಬಂದೆನಲ್ಲಾ ಎಂದು ವಾಪಸ್ ಬರುವಂತಿಲ್ಲ. ಸಾಧ್ಯವಾದ್ರೆ ಆವರಣ ಗೋಡೆ ಹಾರಿ ಹೋಗಿ, ಇಲ್ಲ ಬೇಲಿ ಮುರಿದು ಹೋಗಿ. ಒಟ್ಟಾರೆ ಅಯೋದ್ಯೆಗೆ ತಲುಪುವುದು ನಿಮ್ಮ ಗುರಿಯಾಗಿರಬೇಕು ಎಂದೆವು. ಆದರೂ ಮರುದಿನ ನಮಗೆ ಸುದ್ದಿಬಂತು, ದೇಶದ ವಿವಿಧ ಕಡೆ ಕರಸೇವಕರನ್ನು ತಡೆದು ನಿಲ್ಲಿಸಿದ್ದಾರೆ. ನವೆಂಬರ್ 30 ರಂದು ಹನ್ನೊಂದು ಗಂಟೆಗೆ ಅಲ್ಲಿ ಕರಸೇವೆ ನಡೆಯುದು ಎಂದು ಘೋಷಿಸಲಾಯಿತು. ಆದರೆ ನಮ್ಮ ದಕ್ಷಿಣಕನ್ನಡದವ್ರು ಕರಸೇವೆಯಲ್ಲಿ ಒಬ್ಬರಾದ್ರು ಭಾಗವಹಿಸಬೇಕಿತ್ತು ಇದು ನಮ್ಮ ಮರ್ಯಾದಿಯ ಪ್ರಶ್ನೆಯಾಗಿತ್ತು. ಆ ಕಾರಣದಿಂದ ಮರುದಿನ ನಮ್ಮ ಹಿರಿಯರು ನೀವು ಆರು ಜನ ಅಯೋದ್ಯೆಗೆ ಹೊರಡಬೇಕೆಂದು ಸೂಚನೆ ನೀಡಿದರು. ಅದರಂತೆ ನಾನು ಹಾಗೂ ಇನ್ನೊಂದು ಐದು ಜನ ಅಲ್ಲೇ ಪಕ್ಕದ ಶ್ರೀಮಂತರೊಬ್ಬರ  ಅಂಬಾಸೆಟರ್ ಕಾರಲ್ಲಿ ಹೊರಟು ಬೆಂಗಳೂರಿಗೆ ಸುಮಾರು 10ಗಂಟೆ ರಾತ್ರಿಗೆ ತಲುಪಿದೆವು. ಅಲ್ಲಿರುವವರೊಬ್ಬರು "ನೀವು ಹೇಗೆ ಹೋಗುತ್ತಿರಿ? ಎಲ್ಲಾ ಕಡೆ ಬಂದ್ ಮಾಡಿದ್ದಾರೆ ಮರಗಳನ್ನು ಕಡಿದು ರಸ್ತೆಗೆ ಹಾಕಿದ್ದಾರೆ, ಬಿದಿರಿನ ಕಟ್ಟಕಟ್ಟೆ ಮಾಡಿದ್ದಾರೆ , ನೀವು ಅಯೋದ್ಯೆಗೆ ಬಿಡಿ ಮಹಾರಾಷ್ಟ್ರಕ್ಕೆ ತಲುಪುವುದೇ ಕಷ್ಟ ಅಂದರು" ಆದರೆ ನಮ್ಮ ಮೇಲೆ ನಮ್ಮ ಹಿರಿಯರು ಇಟ್ಟ ಭರವಸೆಯನ್ನು ನಾವು ಉಳಿಸಬೇಕಿತ್ತು. ನವೆಂಬರ್ ಮೂವತ್ತಕ್ಕೆ ಅಲ್ಲಿ ನಮ್ಮ ದಕ್ಷಿಣಕನ್ನಡದ ಒಂದು ತಂಡ ಇರುತ್ತದೆ ಮತ್ತು ಇರಲೇಬೇಕು ಎಂಬುದು ಹಿರಿಯರ ಆಸೆಯಾಗಿತ್ತು. ಆ ದಿನ ರಾತ್ರಿ ಅಲ್ಲೇ ಕಳೆದು ಮರುದಿನ ಬೆಳಗ್ಗೆ ಬೇಗ ಕಾರಲ್ಲಿ ಹೊರಟೆವು."
"ಹೊರಡುವ ಮೊದಲೇ ಪೊಲೀಸರು ಸಿಕ್ಕಾಗ ಏನಾದ್ರು ಪ್ರಶ್ನೆ ಕೇಳಿದ್ರೆ ನಮ್ಮಲ್ಲಿ ಒಬ್ಬನೆ ಉತ್ತರಿಸಬೇಕು ಎಂದು ತೀರ್ಮಾನಿಸಿದ್ದೆವು. ಹೀಗೆ ಹೋಗುತ್ತಿರುವಾಗ ಮಹಾರಾಷ್ಟ್ರದ ಗಡಿಯಲ್ಲಿ ಪೋಲಿಸರು ನಮ್ಮನ್ನು ತಡೆದು ನಿಲ್ಲಿಸಿ "ಎಲ್ಲಿಗೆ ಹೋಗುತ್ತಿದ್ದೀರಾ?" ಎಂದ ಆಗ ನಮ್ಮಲ್ಲಿ ಮೊದಲೇ ತೀರ್ಮಾನ ಆದಂತೆ ಒಬ್ಬ ಮಾತಾಡಿದ. "ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಸ್ವಾಮಿ" ಅಂದರು.  ಮತ್ತೆ ಪೊಲೀಸ್ "ಪ್ರಯಾಗಕ್ಕೊ ಅಯೋದ್ಯೆಗೋ" ಏಂದು ಗದರಿಸಿ ಮರು ಪ್ರಶ್ನೆ ಮಾಡಿದ. ಆಗ  "ಅಯೋದ್ಯೆಗೆ ಯಾಕೆ  ಪ್ರಯಾಗಕ್ಕೆ ಹೋಗೋದು" ನನ್ನ ತೊಡೆಯ ಮೇಲಿದ್ದ ಸಣ್ಣ ಮಡಕೆಯನ್ನು  ತೋರಿಸಿ "ಅವರ ತಂದೆ ತೀರಿಕೊಂಡಿದ್ದಾರೆ ಅದರ ಅಸ್ತಿಯನ್ನು ತ್ರಿವೇಣಿ ಸಂಗಮದಲ್ಲಿ ಬಿಡಲು ಹೋಗುತ್ತಿದ್ದೇವೆ" ಅಂದರು. ಅಷ್ಟಾಗುವಾಗ ಪೊಲೀಸ್ "ಚಲ್" ಅಂದ, ಅಮ್ಮಬ್ಬಾ! ಎಂದು ಅಲ್ಲಿಂದ ನನ್ನ ಕೈಯಲ್ಲಿದ್ದ ಭೂದಿ ಮತ್ತು ಆಸ್ತಿಯನ್ನು ತೋರಿಸಿ ತೋರಿಸಿ ಅಯೋದ್ಯೆಗಿಂತ ಸರಿಸುಮಾರು 60ಕಿಲೋಮೀಟರ್ ದೂರದಲ್ಲಿರುವ ಸುಲ್ತಾನ್ಪುರಿಗೆ ತಲುಪಿದೇವು. ಅಲ್ಲಿಂದ ಮುಂದೆ ಯಾವ ಎಲುಬು ಭೂದಿ ಕೆಲಸ ಮಾಡಲಿಲ್ಲ."
"ನವೆಂಬರ್ 27ರಂದು ನಾವು ನಾವು ಸುಲ್ತಾನ್ ಪುರಿಯ ಮಾಜಿಸ್ಟ್ರೇಟ್ ಒಬ್ಬರ ಮನೆಯಲ್ಲಿ ಉಳಿದೆವು. ಅವರು ನಮ್ಮ ಪರವಾಗಿದ್ದರು. ಅಲ್ಲಿಂದ ಅಯೋದ್ಯೆಗೆ ತಲುಪುದು ಭಾರಿ ಕಷ್ಟದ ಕೆಲಸವಾಗಿತ್ತು. ಇಡೀ ಊರಿಗೆ ಊರೇ ಪೊಲೀಸ್ ಮಿಲಿಟರಿಯ ಸರ್ಪಗಾವಲಿತ್ತು. ಹಾಗೆ ನವೆಂಬರ್ 27 ಕಳೆಯಿತು. 28 ಕೂಡ ಪೂರ್ತಿ ಕಳೆಯಿತು.  ಮಾಜಿಸ್ಟ್ರೇಟ್ ಅವರು ನೀವು ಕಾರಿನಲ್ಲಿ ಹೋಗುವುದು ಕಷ್ಟ ನಡೆದು ಹೋಗಿ ಅಂದರು. ಆದರೆ ನಮ್ಮ ಜತೆಗಿದ್ದ ಇತರರಲ್ಲಿ ಮೂವರು ಹಿರಿಯ ವಯಸ್ಸಿನವರು. ಒಬ್ಬರು ಕಿರಿಯರಾದರೂ ಸ್ವಲ್ಪ ದಪ್ಪಗಿದ್ದರು. ಅವರು ಅಷ್ಟು ದೂರ ನಡೆಯುದು ಅಸಾಧ್ಯ ಎಂದರು. ಅದ್ದರಿಂದ ಅವರನ್ನು ಅಲ್ಲೇ ಬಿಟ್ಟು ನಾನು ಹಾಗೂ ಇನ್ನೊಬ್ಬರು ಅಲ್ಲಿಂದ ಅಯೋದ್ಯೆಯ ಕಡೆಗೆ ಹೊರಟೆವು. ಹೋಗುವಾಗ ಒಂದು ಪ್ಯಾಂಟ್, ಒಂದು ಶರ್ಟ್ ಹಾಗೂ ಒಂದು ಶ್ವೇಟರ್ ಹಿಡಿದುಕೊಳ್ಳಬಹುದಿತ್ತು. ಒಂದು ವೇಳೆ ಚೀಲ ಹಿಡಿಕೊಂಡರೆ ನಮ್ಮನ್ನು ಕರಸೇವಕರು ಎಂದು ತಿಳಿದು ಬಂದಿಸುವ ಭಯವೂ ಇತ್ತು. ಹಲ್ಲು ಉಜ್ಜಲು ಟೋತ್ ಬ್ರೆಶ್ , ಶೇವಿಂಗ್ ಇರಲಿಲ್ಲ, ಸ್ನಾನ ಮಾಡಲು ಟವೆಲ್ ಕೂಡ ಇಲ್ಲ ಹಾಗೆಯೇ ಹೊಗಬೇಕಿತ್ತು. ನಡೆಯುತ್ತಾ ನಡೆಯುತ್ತಾ ರಾತ್ರಿಯಾಗುತ್ತಾ ಬಂತು ಒಂದು ನದಿ ಸಿಕ್ಕಿತು. ಒಬ್ಬ ಮಧ್ಯರಾತ್ರಿ ದೋಣಿಯಲ್ಲಿ ನದಿದಾಟಿಸಿ ರಾಮ್ ರಾಮ್ ಅಂದ. ಸ್ವಲ್ಪ ಸಮಯದ ನಂತರ ಇನ್ನೊಬ್ಬ ಬಂದು ದಾರಿ ತೋರಿಸಿದ ಹೀಗೆ ರಾತ್ರಿ ಪೂರಾ ನಡೆಯಿತು."
"ಹೀಗೆ ಹೋಗ್ತಾ ಹೋಗ್ತಾ ಬೆಳಗಾಯಿತು. ಅಲ್ಲಿರುವ ಎಲ್ಲಾ ಅಂಗಡಿ ಹಾಗೂ ಮನೆಯವರು ರಾಮನ ಭಕ್ತರು. ನಿಮಿಗೇನು ಬೇಕು? ಎನ್ ಬೇಕು? ಎಂದು ನಮ್ಮನ್ನು ಉಪಚರಿಸತೊಡಗಿದರು. ತಿಂಡಿಬೇಕಾ? ಸ್ನಾನ ಮಾಡುತ್ತೀರಾ ಎಂದು ಕೇಳಿದರು. ನಮಗೆ ಸ್ನಾನಕ್ಕೆ ಪುರುಸೊತ್ತು ಎಲ್ಲಿದೆ? ತಿಂಡಿ ಬೇಕಿತ್ತು. ತಿಂಡಿ ತಿಂದು ಪ್ರಯಾಣ ಮುಂದುವರೆಸಿದೆವು. ನಾವು ರಸ್ತೆಯ ದಾರಿಯಲ್ಲಿ ಹೋಗದೆ ಗದ್ದೆಯಿಂದ ಗದ್ದೆಗೆ ಆಗಿಯೇ ನಡೆಯುತ್ತಿದ್ದೆವು.  ಹಾಗೆ ನಾವು 29ನೇ ದಿನದಂದು ರಾತ್ರಿ ಒಂದು ಕಡೆ ತಲುಪಿದೆವು. ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೋಗಬೇಕಾಗಿದ್ದವನು ಬರಲಿಲ್ಲ. ಕಾರಣ ಆತ ದಾರಿ ತೋರಿಸಲು ಹೋದ ಒಂದು ತಂಡದವರ ಜತೆಗೆ ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಹಾಗೆ ಕಾಯುತ್ತಿದ್ದಾಗ ನಮ್ಮ ಅದೃಷ್ಟದಿಂದ ಒಬ್ಬ ಕರೆದುಕೊಂಡು ಹೋಗಲು ಬಂದ. ಹೀಗೆ ಮೈ ಕೊರೆಯುವ ಚಳಿಯಲ್ಲಿ ಹೋಗುತ್ತಿದ್ದಾಗ ಮತ್ತೆ ಒಂದು ನದಿಸಿಕ್ಕಿತು. ನದಿಯಲ್ಲಿ ಎದೆ ಮುಳುಗುವಷ್ಟು ನೀರು ಇತ್ತು. ನೀರಿನೊಳಗೆ ಮುಂದಿನವನ ಹಿಂದೆಯೇ ಹೆಜ್ಜೆ ಇಡುತ್ತಾ ಸುಮಾರು 3ಗಂಟೆ ರಾತ್ರಿಗೆ ನಡೆದೆವು ತುಂಬಾ ನಡೆದೆವು. ಹೀಗೆ ಮೂರೂವರೆ ಗಂಟೆಗೆ ಆಗುವಾಗ ಒಂದು ಕಿರಿದಾದ ಟಾರ್ ರಸ್ತೆ ಸಿಕ್ಕಿದು. ರಸ್ತೆ ಸಿಕ್ಕಿದ ಕೂಡಲೇ ಅಮ್ಮಬ್ಭಾ ಅನಿಸಿತು. ಇನ್ನು ನಾವು ತಲುಪುದು  ನಿಶ್ಚಿತ ಅಂತ ಅನಿಸಿತು. ಹಾಗೆ ನಡೆಯುತ್ತಾ ಹೋಗುತ್ತಿದ್ದಂತೆ ಬೆಳಗಾಗುತ್ತಾ ಬಂತು. ಬೆಳಗಾಗುತ್ತಿದ್ದಂತೆ ಅಲ್ಲಿ ಪಕ್ಕದ ಗದ್ದೆಯಲ್ಲಿ, ಕಬ್ಬಿನ ಪೊದೆಯೊಳಗೆ ಮರದ ಎಡೆಯಿಂದ ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆ ಮೊಳಗಿತು. ಹಾಗಿಯೇ ಹೋಗುತ್ತಾ ಅಯೋದ್ಯೆಯ ಬಾಬ್ರಿ ಕಟ್ಟಡದ ಸಮೀಪಕ್ಕೆ ಬಂದೆವು. ಅಲ್ಲಿ ಸಾವಿರಾರು ಜನರು ಸೇರಿದ್ದರು. ಸೇರಿದ ಜನರನ್ನು ಪೊಲೀಸರು ಬಸ್ಸಿನಲ್ಲಿ ತುಂಬಿಸಿ ತುಂಬಿಸಿ ಬಂಧಿಸಿ ಕಳುಹಿಸುತ್ತಿದ್ದರು.  ಹಾಗೆ ಮಾಡುತ್ತಿರುವಾಗ ಒಬ್ಬ ತರುಣ ಗಟ್ಟಿಮುಟ್ಟಾದ ಸನ್ಯಾಸಿ ಬಸ್ಸಿನ ಚಾಲಕನನ್ನು ಎತ್ತಿ ಬಿಸಾಡಿ, ಸ್ವತಃ ತಾನು ಕುಳಿತು ಬಸ್ಸು ಬಾಬ್ರಿ ಮಸೀದಿಯೊಳಗೆ ನುಗ್ಗಿಸಿದ. ಇದರಿಂದ ಕೆಲವು ಆವರಣಗಳು ಪುಡಿಪುಡಿಯಾದವು. ನಾವು ಹತ್ತಿರ ಹೋಗುತ್ತಾ ಹೋಗುತ್ತಾ ಮಸೀದಿಯ ಗುಂಬಜಿನ ಮೇಲೆ ಹತ್ತಿ ಪರಮ ಪವಿತ್ರ ಭಾಗವದ್  ಧ್ವಜವನ್ನು ಹಾರಿಸಿದೆವು. ಹಕ್ಕಿಯೂ ಹಾರಡಲು ಬಿಡುದಿಲ್ಲ ಎಂದಿದ್ದ ಮುಲಾಯಮ್ ಸಿಂಗ್ ಈಗ ಗುಂಬಜಿನ ಮೇಲೆ ಹಿಂದುಗಳ ಧ್ವಜವನ್ನು ನೋಡಬೇಕಾಯಿತು. ಇಷ್ಟಾಗುವಾಗ ಮುಲಾಯಂ ಸಿಂಗ್ ಪೊಲೀಸರಿಗೆ ಗುಂಡು ಚಲಾಯಿಸಲು ಹೇಳಿದ. ಪರಿಣಾಮವಾಗಿ ಸಾವಿರಾರು ಜನ ಕರಸೇವಕರು ತನ್ನ ಪ್ರಾಣ ಕಳೆದುಕೊಂಡರು. ನಾವು ಹೇಗೋ ಗುಂಡಿನಿಂದ ತಪ್ಪಿಸಿಕೊಂಡೆವು."
"ಅಲ್ಲಿಂದ ಮದ್ಯಾಹ್ನ ನಾವಿದ್ದ ಛತ್ರಕ್ಕೆ ವಾಪಸ್ ಬಂದೆವು. ಅಲ್ಲಿ 35 ಜನರನ್ನು ಒಳಗೊಂಡ ಪ್ರಾಂತ ಬೈಠಕ್ ನಡೆಯಲಿತ್ತು. ಆ ಛತ್ರದಲ್ಲಿ ಗುಂಡಿಗೆ ಪ್ರಾಣ ಕೊಟ್ಟ ಸಾವಿರಾರು ಕರಸೇವಕರ ಹೆಣವನ್ನು ಸಾಲಾಗಿ ಇಡಲಾಗಿತ್ತು. ಕೋಣೆ ಪೂರ್ತಿ ರಕ್ತ ಹರಿಯುತ್ತಿತ್ತು. ಕೆಲವು ಹೆಣದ ರುಂಡ ಮುಂಡಗಳು ಭಾಗವಾಗಿತ್ತು. ಕೈ ಕಾಲುಗಳು ತುಂಡಾಗಿತ್ತು. ಅದನ್ನು ನೋಡಿದ ನಮ್ಮ ಪ್ರಮುಕರಿಗೆ ಸಿಟ್ಟು ನೆತ್ತಿಗೇರಿತ್ತು. ಸಭೆಯಲ್ಲಿ  "ನಾವು ಜೈ ಶ್ರೀರಾಮ್ ಹೇಳುವುದು ಅವರು ಗುಂಡು ಹಾರಿಸುವುದು ಇದು ಸಾಧ್ಯವೇ ಇಲ್ಲ ಎಂದು ಕೆಲವು ನಾಯಕರು ಗುಡುಗಿದರು". ಆಗ ವಿನಯ್ ಕಟಿಯಾರ್ ಎಂಬವರೊಬ್ಬರು ಎದ್ದುನಿಂತು ಮಾತಾಡುತ್ತಾ "ನೀವು ಹೇಳುವುದು ಸತ್ಯ ನನಗೂ ಹಾಗೆಯೇ ಅನಿಸಿತು, ಆದರೆ ಇದು ಎರಡನೇ ಸ್ವಾತಂತ್ರ್ಯ ಹೋರಾಟ ತಾಯಿ ಭಾರತಿ ಇನ್ನೂ ರಕ್ತದ ಅಭಿಷೇಕ ಆಗಬೇಕು, ಇನ್ನೂ ರಕ್ತದ ತರ್ಪಣವನ್ನು ಬಯಸುತ್ತಿದ್ದಾಳೆ, ಅವಳ ಇಚ್ಛೆ ಪೂರೈಸುವವರು ನಾವೇ ತಾನೇ" ಎಂದರು ಅಷ್ಟಾಗುವಾಗ ಕಾರ್ಯಕರ್ತರ ಉತ್ಸಹಾ ಮತ್ತೂ ಹೆಚ್ಚಿತು."
"ಡಿಸೆಂಬರ್ ಎರಡನೇ ತಾರೀಕು ಮತ್ತೆ ಆಂದೋಲನ ನಡೆಸುದು ಎಂದು ಅಲ್ಲಿ ತೀರ್ಮಾನಿಸಲಾಯಿತು. ಆ ಪ್ರಕಾರ ಎರಡು ಗುಂಪುಗಳಾಗಿ ಹೋಗಬೇಕು ಎಂದು ತೀರ್ಮಾನಿಸಲಾಯಿತು. ಪೊಲೀಸರು ಟಿಯರ್ ಗ್ಯಾಸ್ ಹಾಕುವುದರಿಂದ ಹೋಗೆಯಲ್ಲಿ ಕಣ್ಣು ಉರಿಯುತ್ತದೆ ಹಾಗಾಗಿ ನೀವು ಕಣ್ಣಿನ ಸುತ್ತಲೂ ಸುಣ್ಣ ಹಚ್ಚಿಕೊಳ್ಳಬೇಕು ಮತ್ತು ಈರುಳ್ಳಿಯ ರಸವನ್ನು ಹಚ್ಚಿಕೊಳ್ಳಬೇಕು ಎಂದು ತೀರ್ಮಾನಿಸಿ ಹೋರಟೆವು. 8ಸಾವಿರ ಜನರಿರುವ ಒಂದು ಗುಂಪಿನ ನೇತೃತ್ವ ಉಮಾಭಾರಥಿಯವರು ವಹಿಸಿಕೊಂಡಿದ್ದರು. ಇನ್ನೊನ್ನು ಗುಂಪಿನ ನಾಯಕತ್ವ ಆಂಧ್ರದವರೊಬ್ಬರು ವಹಿಸಿಕೊಂಡಿದ್ದರು. ಆ ಗುಂಪಿನಲ್ಲಿ ನಾನಿದ್ದೆ. ಬಾಬ್ರಿ ಕಟ್ಟಡದ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸತೊಡಗಿದರು.  ನಮ್ಮ ಗುಂಪು ಎರಡು ತುಂಡುಗಳಾಗಿ ಹಂಚಿ ಹೋಯಿತು. ಎಲ್ಲರೂ ಕಕ್ಕಾಬಿಕ್ಕಿಯಾಗಿ ಓಡತೊಡಗಿದರು. ಇದು ನನಿಗೆ ಯಾಕೋ ಸರಿ ಕಾಣಲಿಲ್ಲ. ನಾನು ಎದ್ದುನಿಂತು ಓಡುವುದು ಬೇಡ ಕುಳಿತುಕೊಳ್ಳುವಂತೆ ಜೋರು ಬೊಬ್ಬೆ ಹಾಕಿದೆ. ಅದೃಷ್ಟದಿಂದ ಅದರಲ್ಲಿದ್ದವರು ಹೆಚ್ಚಿನವರು ಕರ್ನಾಟಕದವರಾದ ಕಾರಣ ನನ್ನ ಮಾತು ಕೇಳಿ ಅಲ್ಲೇ ಕುಳಿತುಕೊಂಡರು. ಆದರೆ ಪೊಲೀಸರು ಬಂದು ಕುಳಿತಲ್ಲಿಗೆ ದಪ್ಪದ ದೊಣ್ಣೆಯಲ್ಲಿ ಹೋಡೆದರು. ನಾವು ಪೆಟ್ಟು ತಿನ್ನುತ್ತಾ ನೋವಿನಲ್ಲಿ ಜೈ ಜೈ ರಾಮ್ ಎಂದು ಜಪಿಸತೊಡಗಿದೆವು. ಹೊಡೆದು ಹೊಡೆದು ಸುಸ್ತಾದ ಪೊಲೀಸರು ನಮ್ಮನ್ನು ಅಲ್ಲೇ ಬಿಟ್ಟು ಹೋದರು. ಅಷ್ಟುಹೊತ್ತಿಗೆ ಇವತ್ತಿನ ಆಂದೋಲನ ಮುಗಿಯಿತು ಎಂದು ಹಿರಿಯರಿಂದ ಸೂಚನೆಯೊಂದು ಬಂತು. ಕಾರಣ ಉಮಾಭಾರಥಿಯಾರಿದ್ದ ಗುಂಪಿನ ಮೇಲೆ ಪೊಲೀಸರು ವಿಪರೀತ ಗುಂಡಿನ ದಾಳಿ ಮಾಡಿದ್ದರು. ಬಂಗಾಳದ ಒಬ್ಬ ಸಹೋದರ ತನ್ನ ಸಹೋದರಿನಿಗೆ ಗುಂಡು ತಾಗಿದೆ ಎಂದು ಜೀವ ಹೋಗುವ ಸಮಯದಲ್ಲಿ ಆತನನ್ನು ಅಪ್ಪಿಕೊಂಡಿದ್ದಾಗ ಅವನಿಗೂ ಗುಂಡು ಹಾರಿಸಿಬಿಟ್ಟಿದ್ದರು.ಇಂತಹ ಹಲವಾರು ಘಟನೆಗಳಿಗೆ ಆ ದಿನ ಸಾಕ್ಷಿಯಾಯಿತು. ಅಲ್ಲಿಗೆ ನಮ್ಮ ಆವತ್ತಿನ ಆಂದೋಲನ ಮುಗಿಯಿತು. ಅಲ್ಲಿಂದ ವಾಪಾಸ್ ಬಂದೆವು."
"ಅದಾದ ಸ್ವಲ್ಪ ದಿನದ ನಂತ್ರ ಅಲ್ಲಿ ಚುನಾವಣೆ ನಡೆದು ಬಿಜೆಪಿಯ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾದರು. 1992 ಡಿಸೆಂಬರ್ 6ರಂದು ಮತ್ತೆ ಆಂದೋಲನ ನಡೆಸುದು ಎಂದು ತೀರ್ಮಾನ ಮಾಡಿ ಬಾಬ್ರಿ ಕಟ್ಟಡವನ್ನು ದ್ವಂಸ ಮಾಡಿ ಅದೇ ಜಾಗದಲ್ಲಿ ಸಣ್ಣ ರಾಮ್ ಲಾಲನ ಗುಡಿಯೊಂದನ್ನು ಕಟ್ಟಿದೆವು. ಇಂದು ಆ ಭೂಮಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದು ಸುಮಾರು 2019ಕ್ಕೆ ಆಗುವಾಗ ರಾಮನ ಭವ್ಯ ಮಂದಿರ ಅಲ್ಲಿ ನಿರ್ಮಾಣ ಆಗಲಿದೆ ಎಂಬುದು ನಿಶ್ಚಿತ"
ಮಕರ ಸಂಕ್ರಮಣ
ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಸಂಕ್ರಾಂತಿ. ಪ್ರತ್ಯಕ್ಷ ಭಗವಾನ್ ಸೂರ್ಯದೇವೇ ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭಗಳಿಗೆ.ಇದರಿಂದ ಹಗಲು ಹೆಚ್ಚಾಗಿ ಕತ್ತಲಿನ ಸಮಯ ಕಡಿಮೆ. ಕಾಡುವ ಹೇಮಂತ ಶಿಶಿರವ ಹಿಂದಿಕ್ಕಲು ಪ್ರಬಲವಾಗುತ್ತ ವಸುಂಧರೆಗೆ ಪ್ರಿಯನಾದ ಚೈತ್ರನನ್ನು ಕರೆತರಲು ಉದ್ಯುಕ್ತನಾಗುತ್ತಾನೆ ಸೂರ್ಯ. ಕೊಯ್ಲಿಗೆ ಸಿದ್ಧವಾದ ಪೈರಿನ ಕೆಲವು ತೆನೆಗಳನ್ನು ಸಾಂಕೇತಿಕವಾಗಿ ಕೊಯ್ದು ತಂದು ಕೆಲವು ಕಾಳುಗಳನ್ನು ಹಾಕಿ ಪಾಯಸ ಮಾಡಿದರೆ ಉಪಯೋಗಿಸುವ ಮುನ್ನ ಧಾನ್ಯ ಪೂಜೆ ನಡೆದಂತೆ ಎನ್ನುವ ನಂಬಿಕೆ.
ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶೇಷಗಳನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ.ಮಕರ ಸಂಕ್ರಾಂತಿ ಸೌರಮಾನದ ಹಬ್ಬ. ಧಾರ್ಮಿಕ ಮಹತ್ವದ ಉತ್ತರಾಯಣ ಪ್ರಾರಂಭ ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲ. ಮಂಗಳ ಕಾರ್ಯಗಳನ್ನು ಮಾಡಲು ಪ್ರಶಸ್ತ. ಪವಿತ್ರ ನದಿಗಳಲ್ಲಿ ಸ್ನಾನ ಅತಿ ಪುಣ್ಯಕರ. ಮುಂದಿನ ಆರು ಮಾಸಗಳು ಸ್ವರ್ಗದ ಬಾಗಿಲು ತೆರೆದಿರುವುದೆಂಬ ಅಮೋಘ ನಂಬಿಕೆ. ಈ ಕಾಲದಲ್ಲಿ ದೇಹತ್ಯಾಗ ಮಾಡಿದವರಿಗೆ ಮೋಕ್ಷಪ್ರಾಪ್ತಿ ಎನ್ನುವ ಅಚಲ ವಿಶ್ವಾಸ ಹಲವರದು. ದೈಹಿಕ ದೋಷಗಳೊಡನೆ ಮಾನಸಿಕ ದೋಷ ನಿವಾರಿಸುವ ಪರ್ವಸಮಯ. ರೈತರಿಗೆ ಶ್ರೇಷ್ಠವಾದ ದಿನ, ಗೋವುಗಳನ್ನು ಸಿಂಗರಿಸಿ ಪೂಜಿಸುತ್ತಾರೆ. ಕೊಂಬುಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಸಂಕೇತ. ಅಯನ ದೇವತೆಗಳ ವಾಸಸ್ಥಾನ. ಅವೆರಡರ ಸಂಧಿ ಕಾಲದ ಸೂಚನೆಯ ಪ್ರತೀಕ.
ಸಂಕ್ರಾಂತಿ ಸುಗ್ಗಿ ಹಬ್ಬ. ಸೂರ್ಯನ ಪಥ ಬದಲಾವಣೆಯಷ್ಟೇ ಅಲ್ಲ. ವರ್ಷಪೂರ್ತಿ ಮೈಮುರಿದು ದುಡಿದ ರೈತನ ಮೊಗದಲ್ಲಿ ಮಂದಹಾಸ ಮೂಡುವ ಸಡಗರದ ಸಂದರ್ಭ. ಆದರೆ ಹಿಂದಿನಂತೆ ಸಂಭ್ರಮದ ಬದಲಾಗಿ ಇಳಿಮುಖವಾಗಿರುವ ಇಳುವರಿ ವಿಷಾದ ಉಣಿಸುತ್ತಿದೆ. ಇದಕ್ಕೆ ಕಾರಣ ಅತಿವೃಷ್ಠಿ ಅನಾವೃಷ್ಠಿ ಒಂದು ಕಾರಣವಾದರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲು ಸರ್ಕಾರಗಳು ಹೆಚ್ಚು ಆಸಕ್ತಿ ವಹಿಸಿದ್ದರಿಂದ ಸಂಕ್ರಾಂತಿ ಸವಕಲಾಗುತ್ತಿದೆ ; ಅರ್ಥಹೀನವಾಗುತ್ತಿದೆ. ಸಂಕ್ರಾಂತಿ ಸಂಸ್ಕೃತಿ ಮಕರ ಸಂಕ್ರಾಂತಿ ದಿನದಿಂದ ಉತ್ತರಾಯಣವು ಆರಂಭವಾಗುವುದರಿಂದ ದಕ್ಷಿಣಾಯಣದಲ್ಲಿ ಹೆಚ್ಚಿಗೆ ವಿಸರ್ಜಿಸಲ್ಪಟ್ಟಿರುವ ಶರೀರದ ಉಷ್ಣದ ಕೊರತೆಯನ್ನು ನಿವಾರಿಸಲು ಉಷ್ಣ ಪದಾರ್ಥಗಳನ್ನು ತೆಗೆದುಕೊಳ್ಳಬೇಕಾದುದರಿಂದ ಎಳ್ಳು ಸೇವಿಸೆಂದು ಹಿರಿಯರು ಹೇಳಿದರು. ವೈದ್ಯ ಶಾಸ್ತ್ರ ಮತ್ತು ಆಹಾರ ಶಾಸ್ತ್ರ ಪ್ರಕಾರ ಚರ್ಮ, ನೇತ್ರ ಮತ್ತು ಎಲುಬು ಇವುಗಳ ಬೆಳವಣಿಗೆಗೆ ಮತ್ತು ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ "ಎ" ಮತ್ತು "ಬಿ" ಅನ್ನಾಂಗಗಳು ಅತ್ಯವಶ್ಯಕ. ತೈಲ ಧಾನ್ಯವಾದ ಎಳ್ಳಿನಲ್ಲಿ ಈ ಅನ್ನಾಂಗಗಳು ಬೇಜಾನ್ ಇವೆ.
ಸಾಮಾನ್ಯವಾಗಿ ಎಳ್ಳನ್ನು ಅಶುಭ ಕಾರ್ಯಗಳಲ್ಲಿ ಮಾತ್ರ ಉಪಯೋಗಿಸುವ ವಾಡಿಕೆಯಿದೆ. ಆರೋಗ್ಯ ದೃಷ್ಠಿಯಿಂದಲೂ ಇದನ್ನು ನೇರವಾಗಿ ಉಪಯೋಗಿಸಕೂಡದು. ನಾವು ಸೇವನೆ ಮಾಡುವ ಆಹಾರ ಮತ್ತು ತಿಂಡಿಗಳಲ್ಲಿ ಇದನ್ನು ಸೇರಿಸಿ ತಯಾರು ಮಾಡಲಾಗುತ್ತದೆ. "ತಿಲ"ದಿಂದ "ತೈಲ" ಅಡಿಗೆಗೆ, ದೇವರ ದೀಪಕ್ಕೆ ಬಳಸುವುದುತ್ತಮವೆಂದರು. ನವಗ್ರಹಗಳಿಗೆ ಹೇಳಿದ ನವಧಾನ್ಯಗಳಲ್ಲಿ ಎಳ್ಳು ಒಂದು. ಶನಿಗ್ರಹಕ್ಕೆ ಹೇಳಿರುವುದು ಎಳ್ಳು. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲ ಧಾನ್ಯ. ಉಳಿದ ಎಂಟು ಧಾನ್ಯಗಳಲ್ಲಿ ಯಾವುವೂ ತೈಲ ಧಾನ್ಯಗಳಲ್ಲ. ಕೇವಲ ಎಳ್ಳನ್ನು ತಿಂದರೆ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಪಿತ್ತ ಹೆಚ್ಚಾಗುತ್ತದೆ.
ಆದ್ದರಿಂದ ಪಿತ್ತಹರವಾದ ಬೆಲ್ಲವನ್ನು ಜೊತೆಯಲ್ಲಿ ತೆಗೆದುಕೊಂಡರೆ ಶರೀರದಲ್ಲಿ ಕೊರತೆ ಉಂಟಾಗಿರುವ ಕೊಬ್ಬಿನ ಅಂಶವು ಸರಿದೂಗಿಸಲ್ಪಡುತ್ತದೆ. ಬೆಲ್ಲವೂ ಪಿತ್ತಗುಣವುಳ್ಳದ್ದಾದರೂ ಎಳ್ಳಿನ ಜೊತೆ ಸೇರಿದಾಗ ಪಿತ್ತ ಶಮನವಾಗಿ ಸ್ಥಿಮಿತಕ್ಕೆ ಸಹಾಯವಾಗುತ್ತದೆ. "ಉಷ್ಣೇನ ಉಷ್ಣಂ ಶೀತಲಂ" ಎನ್ನುವಂತೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳು ಬೆಲ್ಲ. ಹಸಿ ಎಳ್ಳಿನಲ್ಲಿರುವ ದೋಷಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಹುರಿದ ಎಳ್ಳನ್ನು ಸೇವಿಸಬೇಕು. ಇದರ ಜೊತೆಗೆ ರುಚಿಗೋಸ್ಕರ ಮತ್ತು ಕೊಬ್ಬಿನ ಅಂಶವಿರುವ ಕಡಲೆಕಾಯಿ ಬೀಜ, ಕೊಬ್ಬರಿ ಇತ್ಯಾದಿಗಳನ್ನು ಬೆರೆಸಿ ತಿನ್ನುವಂತೆ ಏರ್ಪಾಡು ಮಾಡಿದ್ದಾರೆ. ಆಗಲಿ ಎಳ್ಳು ಬೆಲ್ಲದ ಹಬ್ಬ.
ಮಕರ ಸಂಕ್ರಾಂತಿ:
ಏನಿದರ ಮಹತ್ವ?
ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.
ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.
ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.
ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.
ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ.
ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ