ಶುಕ್ರವಾರ, ಮಾರ್ಚ್ 23, 2018

#ಮಧುರೈ_ನ_ಮೀನಾಕ್ಷಿ_ದೇವಸ್ಥಾನಕ್ಕಾಯಿತೇ_ಅಗ್ನಿ_ಸ್ಪರ್ಶ?!

#ಮಧುರೈ_ನ_ಮೀನಾಕ್ಷಿ_ದೇವಸ್ಥಾನಕ್ಕಾಯಿತೇ_ಅಗ್ನಿ_ಸ್ಪರ್ಶ?!
ಬಹುಷಃ ಕ್ರೈಸ್ತರಿಗೆ ಬಹಳ ಸುಲಭವಾಗಿ ದಕ್ಕಿಬಿಡುವಂತಹ ಸ್ವರ್ಗವೆಂದರೆ ಅದು ದಕ್ಷಿಣ ಭಾರತ! ಅದರಲ್ಲಿಯೂ, ಕೇರಳ ಮತ್ತು ತಮಿಳುನಾಡು! ತಲೆ ಮೇಲೆ ಎರಡು ತಂಬಿಗೆ ನೀರು ಸುರಿದು, “ನೀ ಇಪ್ಪ ಕ್ರಿಶ್ಚಿಯನ್! ಸ್ತೋತ್ರಮ್” ಎಂದರೆ ಅಲ್ಲಿಗೆ ಮುಗಿಯಿತು! ಆತ ಭಗವದ್ಗೀತೆಯನ್ನು ಬೀಸಿ ಒಗೆದು, ಬೈಬಲ್ ಹಿಡಿದು ನಿಂತಿರುತ್ತಾನೆ!ಹಿಂದುತ್ವವನ್ನು ಶಿಲುಬೆಗೇರಿಸಿ! ಹಾಗೆಯೇ, ಮತಾಂತರಕ್ಕಿಳಿಸಿದ ಕ್ರೈಸ್ತ ಪಾದ್ರಿಗಳು, ನಿನ್ನ ನೆರೆಹೊರೆಯನ್ನೂ ಕ್ರಿಸ್ತನ ಮಕ್ಕಳನ್ನಾಗಿಸು ಎಂದರೆ ಮುಗಿದೇ ಹೋಯಿತು! ಮತಾಂತರಗೊಂಡವನೊಬ್ಬ ಕ್ರೈಸ್ತ ಮತಕ್ಕೆ ಸಿಕ್ಕ ಬಿಟ್ಟಿ ಪ್ರಚಾರಕನಾಗಿ ಹೋಗುತ್ತಾನೆ!
ಕೇವಲ ಅನಕ್ಷರಸ್ಥರು ಮಾತ್ರವೆಂತಲ್ಲ! ತಮಿಳುನಾಡಿನ ಬಹುತೇಕ ಜನ “ಎಲ್ಲಾ ಧರ್ಮವೂ ಒಂದೇ” ಎಂದು ಒಪ್ಪಿಕೊಂಡು, ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿಬಿಡುವಷ್ಟು ಎಡುಕೇಟೆಡ್ ಮೂರ್ಖರೆಂಬುದು ಸರಿಯೇ! ಹಾಸ್ಯಾಸ್ಪದವೆಂದರೆ ಅದೇ! ಮತಾಂತರವಾದ ಹಿಂದೂಗಳು ಕ್ರಿಸ್ತನ ಅದೆಷ್ಟು ಮಟ್ಟದ ಅನುಯಾಯಿಯಾಗಿ ಬಿಡುತ್ತಾರೆಂದರೆ, ನೀವು ಒಬ್ಬ ಕ್ಯಾಥೋಲಿಕ್ ನ ಹತ್ತಿರ ಕ್ರೈಸ್ತ ಮತವನ್ನು ಬೈದರೆ ಆತ ಸುಮ್ಮನಾಗಬಹದು, ಆದರೆ ಮತಾಂತರಗೊಂಡವರಲ್ಲ!! ಅಷ್ಟರ ಮಟ್ಟಿಗೆ ತಮಿಳು ನಾಡಿನ ಕಂಡೂ ಕಾಣದ ನೆರಳೊಂದು ಹಿಂದುತ್ವವನ್ನಾವರಿಸುತ್ತ ಬರುತ್ತದೆ!
ಇದನ್ನೆಲ್ಲ ಯಾಕೆ ಹೇಳುತ್ತಿದ್ದೀನಿ ಗೊತ್ತಾ!? ಇವತ್ತು ಅದೇ ಮತಾಂತರ ಹೆಚ್ಚಿದ ಪರಿಣಾಮ, ಅದೇ ಮತಾಂತರಗೊಂಡ ಕ್ರೈಸ್ತರನ್ನು
ಇಟ್ಟುಕೊಂಡ ಕ್ರೈಸ್ತ ಪಾದ್ರಿಗಳು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ! ಹಿಂದೂಗಳ ಜಾಗವನ್ನೂ ಸಲೀಸಾಗಿ ತಮ್ಮದೆಂದು ಹೇಳಿ ವಶಪಡಿಸಿಕೊಳ್ಳುವಷ್ಟರ ಮಟ್ಟಿಗೆ ಅಲ್ಲಿನ ಕ್ರೈಸ್ತ ಪಾದ್ರಿಗಳು ಮುಂದುವರೆದಿದ್ದಾರೆಂದರೆ ತಮಾಷೆಯ ವಿಷಯವಲ್ಲ! ಇವತ್ತು ಹಿಂದೂವಿನ ಮನೆಗಳಲ್ಲಿ ಕ್ರಿಸ್ತನ ಪಟ ಹಾಕುವ ಪಾದ್ರಿಗಳು, ಮುಂದೊಂದು ದಿನ ದೇವಸ್ಥಾನಗಳಲ್ಲಿರುವ ಹಿಂದೂ ದೇವ ದೇವತೆಗಳ ಮೂರ್ತಿಯನ್ನು ಕಿತ್ತು, ಕ್ರಿಸ್ತನ ಮೂರ್ತಿಯನ್ನೋ, ಮೇರಿಯ ಮೂರ್ತಿಯನ್ನೋ ತಂದಿಡೋಲ್ಲವೆಂಬುದನ್ನು ನಂಬುವುದಾದರೂ ಹೇಗೆ?!
ದುರಾದೃಷ್ಟ ಅದೇ! ತಮಿಳುನಾಡಿನ ಸುಪ್ರಸಿದ್ದ ದೇಗುಲಗಳನ್ನಾಕ್ರಮಿಸಿದ ಕ್ರೈಸ್ತರು!
ಮೊನ್ನೆ ಮೊನ್ನೆಯಷ್ಟೇ ತಮಿಳು ನಾಡಿನ ಸುಪ್ರಸಿದ್ಧ ಹಿಂದೂ ದೇವಾಲಯಗಳಾದ ಕಲಯರ್ ಕೊಯಿಲ್ ಮತ್ತು ಶಿವಗಂಗಾಯ್ ದೇವಸ್ಥಾನವನ್ನು ಆಕ್ರಮಿಸಿದ ಕ್ರೈಸ್ತ ಪಾದ್ರಿಗಳು ಮತ್ತು ಅನುಯಾಯಿಗಳು, ಈ ದೇವಾಲಯದ ಆವರಣ ಕ್ರೈಸ್ತರಿಗೆ ಸೇರಿದ್ದ ಎಂಬುದಾಗಿ ಘೋಷಿಸಿದ್ದಾರೆ!!
ಪ್ರಾತಃ ಕಾಲದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಪ್ರದೇಶದ ನಿವಾಸಿಗಳು ದೇವಸ್ಥಾನದ ಆವರಣದಲ್ಲಿ ಜೀಸಸ್ ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಕ್ರಿಶ್ಚಿಯನ್ ಗುಂಪುಗಳನ್ನು ತಡೆಯಲು ಹೋದಾಗ, ದೇವಸ್ಥಾನದೊಳಗೆ ಹಿಂದುಗಳಿಗೆ ಪ್ರವೇಶವಿಲ್ಲ ಎಂಬುದಾಗಿ ತಡೆಯೊಡ್ಡಿ ನಿಂತಿದ್ದಾರೆ!
ಹಿಂದೂಗಳಿಗೇ ಹಿಂದೂ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ ಪರಿಸ್ಥಿತಿ ಉದ್ಭವವಾದಾಗ, ಪೋಲಿಸರಿಗೆ ಮತ್ತು ಹಿಂದೂ ಧರ್ಮದ ರಕ್ಷಕ ಸಂಘಟನೆಯಾಗಿರುವ ” ಹಿಂದೂ ಮಕ್ಕಳ್ ಕಟ್ಚಿ” ಗೆ ವಿಷಯ ತಿಳಿಸಿದ್ದಾರೆ! ತಕ್ಷಣವೇ ದೇವಾಲಯಕ್ಕೆ ಆಗಮಿಸಿದ ಹಿಂದೂ ಮಕ್ಕಳ್ ಸಂಘಟನೆಯ ಕಾರ್ಯಕರ್ತರು, ಕ್ರೈಸ್ತ ಪಾದ್ರಿಗಳನ್ನು ತರಾಟೆಗೆ ತೆಗೆದುಕೊಂಡು, ದೇವಸ್ಥಾನದ ಆವರಣ ಬಿಟ್ಟು ನಡೆಯುವಂತೆ ಆಗ್ರಹಿಸಿದ್ದಾರೆ!
ಇಷ್ಟಕ್ಕೆ ಮುಗಿಯಲಿಲ್ಲ! ಯಾವಾಗ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಆರಂಭವಾಯಿತೋ, ದೇವಸ್ಥಾನವನ್ನು ಬಿಟ್ಟುಕೊಡದಿದ್ದರೆ ಸಂಘಟನರಯ ಮೇಲೆ ಹತ್ಯೆಗೆ ಪ್ರಯತ್ನ ಮಾಡಿದರೆಂಬ ಮೊಕದ್ದಮೆಯನ್ನು ಹೂಡುತ್ತೇವೆಂದು ಬೆದರಿಕೆ ಒಡ್ಡಿ ಪೋಲಿಸರನ್ನು ಸ್ಥಳಕ್ಕೆ ಕರೆಸಿದ್ದಾರೆ! ಪೋಲಿಸರು, ಕ್ರೈಸ್ತರಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟು, ಹಿಂದೂ ಸಂಘಟನೆಯ ೧೧ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ! ಪೋಲಿಸರು ಹಿಂದೂ ಕಾರ್ಯಕರ್ತರನ್ನು ಥಳಿಸಿದ್ದಲ್ಲದೆ, ಯಾರೊಂದಿಗೂ ಮಾತನಾಡಲೂ ಅವಕಾಶ ಕೊಡುತ್ತಿಲ್ಲ ವೆಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ!
ವ್ಹಾ!! ಎಂತಹ ನ್ಯಾಯಾಂಗ ವ್ಯವಸ್ಥೆ! ದೇವಸ್ಥಾನವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಹೋದ ಕ್ರೈಸ್ತ ಪಾದ್ರಿಯರಿಗೆ ಯಾವ ತಡೆಯೂ ಇಲ್ಲ! ಬದಲಾಗಿ, ತಮ್ಮ ಧಾರ್ಮಿಕ ಹಕ್ಕುಗಳಿಗೆ ಹೋರಾಡಿದವರ ಮೇಲೆ ಸಾಲು ಸಾಲು ಮೊಕದ್ದಮೆಗಳು! ಹಿಂದೂ ಮಕ್ಕಳ್ ಸಂಘಟನೆಯವರು ಹೇಳುವ ಪ್ರಕಾರ, ಕ್ರೈಸ್ತರು ಒಂದೇ ದಿನ ಎರಡೆರಡು ದೇವಸ್ಥಾನಗಳಿಗೆ ನುಗ್ಗಿ ದೇವಸ್ಥಾನದ ಜಾಗ ನಮ್ಮದೆಂದು ಆಕ್ರಮಿಸಲು ನೋಡಿದ್ದಾರೆಂದರೆ, ಇದರ ಹಿಂದೆ ನಿಶ್ಚಿತವಾಗಿ ಮಧುರೈನ ದೇವಸ್ಥಾನಗಳನ್ನು ವಶ ಪಡೆಸಿಕೊಳ್ಳುವ ಹುನ್ನಾರವಡಗಿದೆ!!
ಇವೆಲ್ಲವನ್ನೂ ಬಿಡಿ! ಇದಕ್ಕಿಂತ ಆಘಾತಕರವೆಂದರೆ, ಯಾವ ಮಾಧ್ಯಮಗಳೂ, ಯಾವ ಪತ್ರಿಕೆಯೂ ಕ್ರೈಸ್ತ ಪಾದ್ರಿಗಳ ಈ ಕುತಂತ್ರದ ಬಗ್ಗೆ ತುಟಿಪಿಟಿಕ್ ಎಂದಿಲ್ಲ! ಪ್ರಕರಣದ ಬಗ್ಗೆ ಸುದ್ದಿ ಮಾಡಿಲ್ಲ! ಅದಾವುದೋ ಹಿಂದೂವೊಬ್ಬನೇನಾದರೂ, ಸುಮ್ಮನೇ ಕೇಸರಿ ಧ್ವಜ ಹಿಡಿದು ಚರ್ಚಿನ ಮುಂದೆ ಕುಳಿತಾಕ್ಷಣ ‘ಕೋಮುವಾದ’_ ಕೇಸರೀ ಧ್ವಜ ಹಿಡಿದು ಬೆದರಿಕೆ ಎಂದೆಲ್ಲ ಕಥೆ ಕಟ್ಟಿ, ಲೈವ್ ಆಗಿ ತೋರಿಸುವ ಮಾಧ್ಯಮಗಳು ಇವ್ಯಾವುಯದರ ಬಗ್ಗೆಯೂ ಚರ್ಚಿಸಿಯೇಬ ಇಲ್ಲ ಎಂಬುದೊಂದಿದೆಯಲ್ಲವಾ?! ಮಾಧ್ಯಮಗಳೂ ಸಹ ತಮ್ಮನ್ನು ಜಾತ್ಯಾತೀತತೆ ಎಂಬ ಸೋಗಲಾಡಿ ತುಷ್ಟೀಕರಣದ ಸಿದ್ಧಾಂತಕ್ಕೆ ಮಾರಿಕೊಂಡಿವೆಯೆಂಬರ್ಥ!! ಮಧುರೈನ ನಿವಾಸಿಗಳ ಆರೋಪವದೇ! ಈ ಎರಡೂ ದೇವಸ್ಥಾನಗಳನ್ನು ವಶಪಡಿಸಿಕೊಂಡು, ತದನಂತರ ಚರ್ಚುಗಳನ್ನಾಗಿ ಪರಿವರ್ತಿಸುವ ಹುನ್ನಾರವಡಗಿದೆ! ಬಡಜನರಿಗೆ ದುಡ್ಡನ್ನು ನೀಡಿ ಆಮಿಷವನ್ನೊಡ್ಡುವ ಮೂಲಕ ಮತಾಂತರ ಮಾಡಲಾಗುತ್ತಿದೆ! ಬಲಪ್ರಯೋಗದಿಂದಲೂ ಸಹ ಕೆಲವು ಕಡೆ ಮತಾಂತರಕ್ಕೊಳಪಡಿಸುತ್ತಿದ್ದಾರೆ! ಆದರೂ ಸಹ ಯಾವ ನ್ಯಾಯಾಂಗ ವ್ಯವಸ್ಥೆಯೂ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಿಲ್ಲ! ದಿನ ಬೆಳಗಾದರೆ ಇಂತಹುದೇ ಘಟನೆಗಳು ನಡೆಯುತ್ತಿರುತ್ತವೆ! ಹೀಗೇ ಆದರೆ, ಮುಂದೊಂದು ದಿನ ,ಇಡೀ ಮಧುರೈ ನ
ದೇವಾಲಯಗಳು ಚರ್ಚುಗಳಾಗಿ ಪೊರಿವರ್ತನೆ ಹೊಂದುವ ಎಲ್ಲಾ ಲಕ್ಷಣಗಳಿವೆ!!
ಆದರೂ, ಸಹ ಯಾವೊಬ್ಬ ಪೋಲಿಸನೂ ಮಾತನಾಡುವುದಿಲ್ಲ! ಯಾವ ಮಾಧ್ಯಮವೂ ಹ್ಯಾಷ್ ಟ್ಯಾಗ್ ಹಾಕಿ ನ್ಯಾಯ ಕೇಳುವುದಿಲ್ಲ! ಯಾವೊಬ್ಬ ಸ್ವಾಭಿಮಾನಿ ತಮಿಳನೂ ಸಹ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ! ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ಈ ಎರಡು ದೇವಾಲಯಗಳನ್ನು ವಶಪಡಿಸಿಕೊಳ್ಳುವ ಎರಡು ದಿನಗಳ ಮುಂಚೆ, ಮಧುರೈನ ಸುಪ್ರಸಿದ್ಧ ಮೀನಾಕ್ಷಿ ದೇವಾಲಯಕ್ಕೆ ಅಗ್ನಿಸ್ಪರ್ಶವಾಗಿದೆ! ಅಗ್ನಿಸ್ಪರ್ಶದಿಂದ ದೇವಾಲಯಕ್ಕೆ ಸಾಕಷ್ಟು ಹಾನಿಯಾಗಿದ್ದು, ಪೂರ್ವ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ! ಮಧುರೈನ ೧೦೦೦ ಕಂಬಗಳಿರುವ ಆಲಯ ಕ್ಕೂ ಕೂಡ ಸಾಕಷ್ಟು ಹಾನಿಯಾಗಿದ್ದು, ಭಕ್ತಾದಿಗಳಿಗೆ ಪ್ರವೇಶವನ್ನು ತಡೆಹಿಡಿಯಲಾಗಿದೆ! ಮಧುರೈ ದೇವಸ್ಥಾನವೊಂದು ಅದೆಷ್ಟೋ ಸಾವಿರ ವರ್ಷಗಳಿಂದ ನೆಲೆ ನಿಂತಿದೆ! ಚೋಳರ ಕಾಲದಲ್ಲಿ ಕಟ್ಟಿಸಿದ್ದ ದೇವಸ್ಥಾನದಲ್ಲಿ ಪ್ರಾಚೀನ ಶಾಸನಗಳಿದ್ದು, ಅದಕ್ಕೂ ಕೂಡ ಸಾಕಷ್ಟು ಹಾನಿಗಳಾಗಿದೆ!
ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಫೆಬ್ರುವರಿ ೩ ರಂದು! ಅಷ್ಟಾದರೂ ಕೂಡ, ಅಗ್ನಿಯನ್ನು ನಂದಿಸಲು ಯಾವುದೇ ಕ್ರಮವನ್ನೂ ತಕ್ಷಣಕ್ಕೆ ಸರಕಾರ ತೆಗೆದುಕೊಂಡಿಲ್ಲ! ಅದಲ್ಲದೇ, ಸರಕಾರಿ ಅಧಿಕಾರಿಗಳು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ! ಇವತ್ತಿನವರೆಗೂ, ಅಗ್ನಿಸ್ಪರ್ಶಕ್ಕೆ ಕಾರಣವೇನು ಎಂದು ಪೋಲಿಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ! ಅದರಲ್ಲೂ, ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಬಾಯಿಗೆ ಬೀಗ ಜಡಿದು ಕೂತಿರುವ ಪೋಲಿಸರ ಮೌನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ! ಯಾವುದೇ ಎಮ್ ಎಲ್ ಎ ಆಗಲಿ, ರಾಜಕಾರಣಿಗಳಾಗಲಿ, ಮುಖ್ಯಮಂತ್ರಿಯಾಗಲಿ, ಸ್ಥಳಕ್ಕಾಗಮಿಸುವುದು ಹೋಗಲಿ! ಮಧುರೈ ಮೀನಾಕ್ಷಿ ದೇವಸ್ಥಾನದ ಅಗ್ನಿಸ್ಪರ್ಶದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ!
ದೇವಸ್ಥಾನದ ಆವರಣದಲ್ಲಿರುವ ಶಾಸನಗಳು ಅಗ್ನಿಸ್ಪರ್ಶಕ್ಕೊಳಗಾಗಿ ಹಾನಿಗೀಡಾಗಿವೆ! ಚೋಳರ ಕಾಲದಲ್ಲಿದ್ದ ಶಿಲಾಶಾಸನಗಳೂ ಕೂಡ ಅಗ್ನಿಗಾಹುತಿಯಾಗಿದೆ! ಜೊತೆ ಜೊತೆಗೆ, ಚೋಳರ ಕಾಲದ ಕಲಾಕೃತಿಗಳು ಸಂಪೂರ್ಣ ದಹನವಾಗಿದೆ! ಅಷ್ಟಾದರೂ ಸಹ ತಮಿಳು ನಾಡಿನ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ!! ಅದೇ, ಯಾವುದೇ ಚರ್ಚುಗಳ ಮೇಲೆ ಏನಾದರೂ ಹಲ್ಲೆಯಾಗಿ ಹೋದರೆ, ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಹಾರವನ್ನೂ ನೀಡುವ ಸರಕಾರ, ಮಧುರೈನ ದೇವಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ!
ಎರಡು ಮೂರು ದಿನಗಳೊಳಗೆ ನಡೆದ ಈ ಅನಾಹುತಗಳಿಂದ ಮಧುರೈನ ಹಿಂದೂಗಳು ಆತಂಕಕ್ಕೀಡಾಗಿದ್ದಾರೆ! ಇನ್ನು ಯಾವ ದೇವಸ್ಥಾನವನ್ನು
ಅಗ್ನಿಸ್ಪರ್ಶಕ್ಕೀಡು ಮಾಡುತ್ತಾರೋ ಇನ್ನೇನು ಅನಾಹುತ ಸಂಭವಿಸುತ್ತದೆಯೋ ಎಂದು ಕ್ರೈಸ್ತ ಮಿಷನರಿಗಳ ಬಗ್ಗೆ ಹಗಲು ರಾತ್ರಿ ಯೋಚಿಸುವಂತಾದರೂ ಸಹ… ಧ್ವನಿ ಎತ್ತುತ್ತಿರುವುದು ಹಿಂದು ಮಕ್ಕಳ್ ಸಂಘಟನೆಯ ಕಾರ್ಯಕರ್ತರೇ ವಿನಃ ಬೇರೆಯವರಲ್ಲ! ಅದೆಷ್ಟೋ ವರ್ಷಗಳಿಂದಲೂ ಸಹ ವ್ಯಾಟಿಕನ್ ಸಿಟಿಯ ಕೃಪಾದೃಷ್ಟಿಯಿಂದ ಹಲವಾರು ಏಜೆನ್ಸಿಗಳು ಭಾರತವನ್ನು ಮತಾಂತರಿಸಲು ಮುನ್ನಡಿಯಿಟ್ಟಿವೆ! ವಿದೇಶಗಳಿಂದ ಹರಿದು ಬರುವ ಹಣದಿಂದ ಭಾರತವನ್ನಾಳಲು ಪ್ರಾರಂಭಿಸಿರುವ ಕ್ರೈಸ್ತ ಪಾದ್ರಿಗಳ ಬಗ್ಗೆ ಯಾವ ರಾಜಕಾರಣಿಯೂ ಧ್ವನಿ ಎತ್ತುತ್ತಿಲ್ಲ! ಯಾವ ವ್ಯವಸ್ಥೆಯೂ ಪ್ರತಿಭಟಿಸುತ್ತಿಲ್ಲ! ಅದೇ, ದೇವಸ್ಥಾನದ ಅರ್ಚಕರು ಚರ್ಚುಗಳ ಮುಂದೆ ಘಂಟೆ ಜಾಗಟೆ ಬಾರಿಸಿದ್ದರೆ ಅದೇ ದೊಡ್ಡ ಸುದ್ದಿಯನ್ನಾಗಿ ಬಿತ್ತರಿಸುತ್ತಿದ್ದ ಮಾಧ್ಯಮಕ್ಕೆ ಇವತ್ತು ಏನಾಗಿದೆ!? ಇದ್ಯಾವುದರ ಬಗ್ಗೆಯೂ ತುಟಿಪಿಟಿಕ್ ಎನ್ನದ ಬೇಜವಾಬ್ದಾರಿಗಳಿಗೆ ಏನೆನ್ನಬೇಕೋ ಗೊತ್ತಿಲ್ಲ..!
ಯಾರನ್ನು ಹೊಣೆಗಾರರನ್ನಾಗಿ ಮಾಡಬಹುದಾಗಿದೆ?!
ಮತ್ಯಾರನ್ನೂ ಅಲ್ಲ! ತಮ್ಮ ಧರ್ಮದ ಅಳವನ್ನರಿಯದ ತಮಿಳರಿಂದಲೇ! ನೀವು ಬೇಕಾದರೆ ಗಮನಿಸಿ! ಕ್ರೈಸ್ತ ಮಿಷನರಿಗಳು ತಮಿಳುನಾಡಿನಲ್ಲಿ ಮತಾಂತರ ಮಾಡಿದಷ್ಟು ಬೇರೆ ಯಾವ ರಾಜ್ಯದಲ್ಲಿಯೂ ಮತಾಂತರಕ್ಕಿಳಿದಿಲ್ಲ! ಅದೇ ರೀತಿ, ಬೇರೆ ಯಾವ ರಾಜ್ಯದವರೂ ಕೂಡ, ತಮಿಳರ ಹಾಗೆ ಎಲ್ಲಾ ಧರ್ಮವೂ ಒಂದೇ ಎನ್ನುವುದಿಲ್ಲ! ಇದು, ಹಿಂದುತ್ವದ ದುರಾದೃಷ್ಟವೋ ಅಥವಾ, ಇನ್ನೇನೋ?! ಪ್ರಶ್ನೆಯೇಳುತ್ತದೆ!
ಇನ್ನೂ ತಮಿಳರು ಎಚ್ಚರಾಗದೇ ಹೋದರೆ, ಇಡೀ ತಮಿಳುನಾಡಿನಲ್ಲಿ ಒಂದೇ ಒಂದು ದೇವಸ್ಥಾನಗಳು ಉಳಿಯುವುದೂ ಅನುಮಾನವೇ
ಆಗಿಹೋಗುತ್ತದೆ!
ಮಾಹಿತಿ:– ನಿಹಾರಿಕಾ ಶರ್ಮಾ

ಬದರೀ ಕ್ಷೇತ್ರ ಮಹಾತ್ಮೆ-

ಬದರೀ ಕ್ಷೇತ್ರ ಮಹಾತ್ಮೆ-
ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ. ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ. ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು. ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ. ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ. ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು,  ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
ಬದರಿಯಲ್ಲಿ ಪರಸ್ಪರ  ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ. ಎದುರಿನದು ನರಪರ್ವತ. ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ‌. ದೇವತಾಪರಿವಾರವೂ ಇದೆ.
ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ. ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು. ಶ್ರೀಮದಾಚಾರ್ಯರು ಇಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ. ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ  ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ. ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ. ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ. ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ. ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ  ಬಂದಿದೆ. ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ. ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!!

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!! 
ಏನಂತ ಗೊತ್ತಾ?
ಅದೆಂಥಾ ವಿಚಿತ್ರ ನೋಡಿ, ಭಾರತ ಬಿಟ್ಟು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕಮ್ಯುನಿಸ್ಟರು ಇಸ್ಲಾಂ, ಕ್ರಿಶ್ಚಿಯನ್ ಮತವನ್ನ ಓಲೈಸಿಕೊಂಡು ಅವರ ಪರ ಬ್ಯಾಟಿಂಗ್ ಮಾಡೋದೇ ಇಲ್ಲ ಆದರೆ ಭಾರತದಲ್ಲಿ ಮಾತ್ರ ಕಮ್ಯುನಿಸ್ಟರದ್ದು ತದ್ವಿರುದ್ಧ ನೀತಿ.
ಮುಸಲ್ಮಾನರ, ಕ್ರಿಶ್ಚಿಯನ್ನರ ಹಕ್ಕುಗಳ ಠೇಕಾ ನಾವೇ ತೆಗೆದುಕೊಂಡಿದ್ದೀವಿ ಅನ್ನೋ ರೀತಿಯಲ್ಲಿ ಮುಸಲ್ಮಾನರ ಪರ ಇಲ್ಲಿನ ಕಮ್ಯುನಿಸ್ಟರು ರೋಡಿಗಿಳಿದುಬಿಡುತ್ತಾರೆ. ಆದರೆ ಅದೇ ಕಮ್ಯುನಿಸ್ಟರು ಚೀನಾದಲ್ಲಿರುವ ತಮ್ಮ ಕಮ್ಯುನಿಸ್ಟ್ ವಿಚಾರಧಾರೆಯದ್ದೇ ಸರ್ಕಾರ ಮುಸಲ್ಮಾನರ ವಿರುದ್ಧ ಕೈಗೊಳ್ಳುತ್ತಿರುವ ವಿಚಾರದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ. ಬೇರೆಲ್ಲ ವಿಚಾರಗಳಿಗೆ ಚೀನಾದಿಂದ ಹಿಂಬಾಗಿಲಿನಿಂದ ಫಂಡ್ ಪಡೆಯುವ ನಕ್ಸಲರು ಚೀನಾದ ಮುಸಲ್ಮಾನರ ಬಗ್ಗೆ ಹಾಗು ಚೀನಾ ಸರ್ಕಾರದ ನಡೆಯನ್ನ ವಿರೋಧಿಸುವ ಗೋಜಿಗೆ ಹೋಗೋದೇ ಇಲ್ಲ.
ಅದಿರಲಿ ಬಡಿ ಅವರ ಆಷಾಢಭೂತಿತನ ನಮಗೆಲ್ಲಾ ತಿಳಿದದ್ದೆ. ಈಗ ಚೀನಾ ಮತ್ತೆ ಮುಸಲ್ಮಾನರ ವಿರುದ್ಧ ಏನು ಮಾಡಿದೆ ಅನ್ನೋದನ್ನ ನೋಡೋಣ ಬನ್ನಿ.
ಚೀನಾ ಸರ್ಕಾರ ಅಲ್ಲಿನ ಮುಸಲ್ಮಾನರನ್ನ ಒತ್ತಾಯಪೂರ್ವಕವಾಗಿ ಪತ್ರವೊಂದನ್ನ ಬರೆಸಿಕೊಳ್ಳುತ್ತಿದೆಯಂತೆ, ಆ ಪತ್ರದಲ್ಲಿ ಬರೆದ ವಿಷಯ ಇಸ್ಲಾಮಿಗೆ ವಿರುದ್ಧವಾದರೂ ಅಲ್ಲಿನ ಮುಸಲ್ಮಾನರು ಚೀನಾ ಸರ್ಕಾರಕ್ಕೆ ಹೆದರಿ ಅಂತಹದ್ದೊಂದು ಪತ್ರ ಬರೆದುಕೊಡುತ್ತಿದ್ದಾರಂತೆ.
ಏನು ಆ ಪತ್ರದಲ್ಲಿರುವ ವಿಷಯ ಗೊತ್ತೆ?
ಚೀನಾ ಸರ್ಕಾರ ಮುಸಲ್ಮಾನರಿಗೆ “ನಾವು ನಾಸ್ತಿಕರು ನಾವು ಯಾವ ದೇವರನ್ನೂ ನಂಬುವುದಿಲ್ಲ” ಎಂಬ ಪತ್ರ ಬರೆದು ಸಹಿ ಮಾಡಿಕೊಡಲು ಆದೇಶಿಸಿದೆಯಂತೆ. ಅಲ್ಲಿನ ಮುಸಲ್ಮಾನರೂ ಇದಕ್ಕೆ ಒಪ್ಪಿ ಹಾಗೇ ಬರೆದುಕೊಡುತ್ತಿದ್ದಾರೆಯಂತೆ.
ಅಷ್ಟಕ್ಕೂ ಇಂಥದ್ದೊಂದು ರೂಲ್ಸ್ ಚೀನಾ ತರಲು ಕಾರಣವೇನು?
ಚೀನಾದಿಂದ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಚೀನಾ ಹೇಳಿ ಕೇಳಿ ಕಮ್ಯುನಿಸ್ಟ್ ದೇಶ, ಕಮ್ಯುನಿಸ್ಟರೆಂದರೆ ಅವರು ಒಂಥರಾ ನಾಸ್ತಿಕರಿದ್ದಂತೆ, ಅವರಿಗೆ ದೇವರು ಧರ್ಮ ಆಚರಣೆ ಇವುಗಳ ಬಗ್ಗೆ ನಂಬಿಕೆಯೇ ಇಲ್ಲ. ಅಂತಹ ರಾಷ್ಟ್ರದ ಸರ್ಕಾರ ಈಗ ಅಲ್ಲಿನ ಮುಸಲ್ಮಾನರನ್ನೂ ನಾಸ್ತಿಕತೆಯನ್ನೇ ನಂಬಬೇಕು ಅನ್ನೋ ರೀತಿಯಲ್ಲಿ ಅವರಿಂದ ಪತ್ರ ಬರೆಸಿಕೊಳ್ಳುತ್ತಿದ್ದಾರೆ. ಬರೀ ಪತ್ರ ಬರೆಸಿಕೊಳ್ಳುವುದಷ್ಟೇ ಅಲ್ಲದೆ ಆ ಶಪಥ ಪತ್ರದ ಮೇಲೆ ಮುಸಲ್ಮಾನರ ಸಹಿ‌ ಕೂಡ ಪಡೆಯಲಾಗುತ್ತಿದೆ.
ಏನಿದು ವಿಷ್ಯ?
ಕಮ್ಯುನಿಸ್ಟ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ತಾವು ಯಾವ ಧಾರ್ಮಿಕತೆಯಲ್ಲೂ ನಂಬಿಕೆಯಿಲ್ಲ ಅಂತ ತಮ್ಮ ಪಕ್ಷಕ್ಕೆ ಇಂತಹದ್ದೊಂದು ಮುಚ್ಚಳಿಕೆ ಬರೆದುಕೊಡಲೇಬೇಕಾಗಿದೆ.
“ನಾನು ಮಾರ್ಕ್ಸ್‌ವಾದವನ್ನ ಮಾತ್ರ ಒಪ್ಪುತ್ತೇನೆ, ನನ್ನ ನಿಷ್ಟೆ ಕೇವಲ ಮಾರ್ಕವಾದಕ್ಕೆ ಮಾತ್ರ” ಎಂಬ ಪತ್ರವನ್ನ ಮುಸ್ಲಿಂ ನಾಯಕರೂ ಬರೆದುಕೊಡಲೇಬೇಕು ಎಂಬುದು ಕಮ್ಯುನಿಸ್ಟ್ ಪಕ್ಷದ ಒತ್ತಾಯವಾಗಿದೆ. ಇಂತಹದ್ದೊಂದು ಅಭಿಯಾನ ಚೀನಾದ ಮುಸ್ಲಿಂ ಬಾಹುಳ್ಯವಿರುವ ‘ಗಾನಸೂ’ ಪ್ರಾಂತ್ಯದ ‘ಲಿನಶಿಯಾ’ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ. ಪಕ್ಷದ ಅಧಿಕೃತ ವೆಬಸೈಟನಲ್ಲಿ ಇದರ ಬಗ್ಗೆ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಕಟ ಮಾಡಿದೆ.
ಚೀನಾ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿಡಲು ಇದಷ್ಟೇ ಅಲ್ಲ ಇನ್ನೂ ಹಲವು ಕಾನೂನುಗಳನ್ನ ಜಾರಿಗೆ ತಂದಿದೆ.
ಅವುಗಳ್ಯಾವುವು ಗೊತ್ತಾ?
1) ಪಶ್ಚಿಮ ಚೀನಾದಲ್ಲಿ ಅಲ್ಲಿನ ಸರ್ಕಾರ ಚಳಿಗಾಲದ ನೆಪವೊಡ್ಡಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನ ನಿಷೇಧಿಸಿಬಿಟ್ಟಿದೆ.
ಈ ಪ್ರತಿಬಂಧದ ಅಲ್ಲಿನ ಶಿಕ್ಷಣ ಸಚಿವಾಲಯ ಆನಲೈನ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜಾರಿಗೆ ತಂದಿದೆ. ಈ ಪ್ರತಿಬಂಧದ ಪ್ರಕಾರ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನ ಓದುವುದನ್ನ ನಿಷೇಧ ಮಾಡಿದೆ ಚೀನಾ ಸರ್ಕಾರ.
2) ಚೀನಾ ಸರ್ಕಾರ ಕಳೆದ ತಿಂಗಳುಗಳ ಹಿಂದೆಯಷ್ಟೇ ಮಹತ್ವದ ಆದೇಶ ಹೊರಡಿಸಿತ್ತು. ಅಲ್ಲಿನ ಸ್ಥಳೀಯರು ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‌ಗಳನ್ನು ತೆಗೆದುಹಾಕಿತ್ತು.
ಚೀನಾ ಸರ್ಕಾರ ಬರೀ ಬೋಂಗಾ ಅಷ್ಟೇ ನಿಷೇಧಿಸಿಲ್ಲ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಲಾಗಿದೆ. ಈಗ ಅದರ ಬೆನ್ನಲ್ಲೇ ಚೀನಾ ಸರ್ಕಾರ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
3) ​ಕ್ಸಿನ್ಜಿಯಾಂಗ್ ವಾಯವ್ಯ ಭಾಗದಲ್ಲಿ ಮುಸ್ಲಿಮರ ವಿರುದ್ಧ ಚೀನೀಯ ಅಧಿಕಾರಿಗಳು ಮತ್ತೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾರೆ. ಪ್ರದೇಶದ ಮೂಲಗಳ ಪ್ರಕಾರ, ಜನಾಂಗೀಯ ಅಲ್ಪಸಂಖ್ಯಾತ ಮುಸ್ಲಿಮ್ ಕುಟುಂಬಗಳು ಕುರಾನ್ ಮತ್ತು ನಮಾಜ್ ಮಾಡುವ ಮ್ಯಾಟ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಕಡ್ಡಾಯವಾಗಿ ಹಿಂದಿರುಗಿಸುವಂತೆ ಮುಸ್ಲಿಂ ಕುಟುಂಬಗಳಿಗೆ ಮತ್ತು ಮಸೀದಿಗಳಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
4) ಚೀನಾದಲ್ಲಿ ನಿಷೇಧಿಸಿದಂತೆ ಸ್ವಿಟ್ಜರ್ಲೆಂಡ್‌‌ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ.
5) ಚೀನಾ ಅಷ್ಟೇ ಅಲ್ಲ ಸ್ವಿಟ್ಜರ್ಲೆಂಡ್‌‌ ಕೂಡ ಈ ರೀತಿಯ ನಿರ್ಧಾರ ಕೈಗೊಂಡಿದೆ.
ಸ್ವಿಟ್ಜರ್ಲೆಂಡ್‌‌ ನ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಒಬ್ಬ ಸಂಸದ ಎದ್ದು ನಿಂತು ಹೇಳ್ತಾನೆ.
“ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು. ಯಾಕೆಂದರೆ ಬುರ್ಕಾದ ಒಳಗಡೆ ಪ್ರತಿ ಸಂದರ್ಭದಲ್ಲಿಯೂ ಮಹಿಳೆಯೇ ಇರುತ್ತಾಳೆಂದು ಹೇಳಲಾಗುವುದಿಲ್ಲ. ಹಾಗಾಗಿ ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು”
ಒಟ್ಟಿನಲ್ಲಿ ಚೀನಾ ಸರ್ಕಾರ ತನ್ನ ಅಂತರಿಕ ಭದ್ರತಾ ದೃಷ್ಟಿಯಿಂದ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
ಆದರೆ ಭಾರತ ದೇಶದಲ್ಲಿ ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನ, ಧಾರ್ಮಿಕ ಸ್ವಾತಂತ್ರ್ಯವನ್ನ ಯಥೇಚ್ಚವಾಗಿ ನೀಡಿದರೂ ಭಾರತ ಅಸಹಿಷ್ಣು ರಾಷ್ಟ್ರ ಅಂತ ಬೊಬ್ಬೆಯಿಡುವುದರಲ್ಲಿ ಹಿಂದೆ ಬೀಳಲ್ಲ!!
ಮಾಹಿತಿ: ಯುವ ಭಾರತ

*ನಮಸ್ಕಾರ ಎಂದರೆ ಎನು? ಹೇಗೆ ?*

 *ನಮಸ್ಕಾರ ಎಂದರೆ ಎನು? ಹೇಗೆ ?*
ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯ ಒಂದು ಪದ. ಈ ಪದವನ್ನು ಬಿಡಿಸಿದಾಗ ನಮಸ್ | ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು `ಣಮು ಪ್ರಹ್ವತ್ವೇ ಶಬ್ದೇ ಚ` ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು. 
ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ `ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್` ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ `ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್` ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರ ವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ `ನಾಹಂ ಕರ್ತಾ` ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ. 
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||
ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.
*ನಮಸ್ಕಾರದಲ್ಲಿ ಎಷ್ಟು ವಿಧಗಳು:* 
ನಮಸ್ಕಾರವು `ಕಾಯಿಕ, ವಾಚಿಕ, ಮಾನಸಿಕ` ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು `ಕಾಯಿಕ(ದೈಹಿಕ) ನಮಸ್ಕಾರ` ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು `ವಾಚಿಕ ನಮಸ್ಕಾರ`, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು `ಮಾನಸಿಕ ನಮಸ್ಕಾರ` ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು `ಉತ್ತಮ ನಮಸ್ಕಾರ` ಎಂದೆನಿಸಿಕೊಳ್ಳುತ್ತದೆ. ಇದನ್ನೇ `ತ್ರಿಕರಣ ಪೂರ್ವಕ ನಮಸ್ಕಾರ` ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ `ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ` ಎಂದು ವಿಭಾಗ ಮಾಡಲಾಗಿದೆ 
ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ| 
ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||
ಎಂಬುದಾಗಿ. 
*ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ* `ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ` ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ, ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ | 
ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | 
ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||
ಎಂಬುದಾಗಿ.
ಕಾಯಿಕ ಉತ್ತಮ:
ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ `ಕಾಯಿಕ ಉತ್ತಮ ನಮಸ್ಕಾರ.` ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು. 
ಕಾಯಿಕ ಮಧ್ಯಮ:
ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ `ಕಾಯಿಕ ಮಧ್ಯಮ` ಎಂದೆನಿಸಿಕೊಳ್ಳುತ್ತದೆ. 
ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | 
ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||
ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದೆಂದು ಹೇಳಿ, ಮುಂದೆ ಕಾಯಕ ಅಧಮ ನಮಸ್ಕಾರದ ರೀತಿಯನ್ನು  ಹೇಳುತ್ತಿದ್ದಾರೆ 
ಕಾಯಿಕ ಅಧಮ:
ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ | 
ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||
ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಧಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ. 
ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಎನೆಂದರೆ?  
ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಎಕೆ ಮಾಡಬೇಕು, ಸ್ತ್ರೀಯರು ಎಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರವನ್ನು ಈ ರೀತಿ ಹೇಳುತ್ತಿದ್ದಾರೆ.    
ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ | 
ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||
ಎನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧಭರ್ೆಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.
ಪ್ರಣಾಮ ಎಂದರೇನು? 
`ಸ್ವಾಪಕರ್ಷಬೋಧಕ, ಪರೋತ್ಕರ್ಷಬೋಧಕ ಕಾಯಕವ್ಯಾಪಾರಃ ನಮಸ್ಕಾರಃ` ಎನ್ನುವ ದುರ್ಗಾದಾಸನ ಮಾತಿನಂತೆ ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ ಎಂಬುದಾಗಿ ಕಾಲಿಕಾ ಖಂಡವು ಈ ರೀತಿಯಾಗಿ ತಿಳಿಸುತ್ತಿದೆ 
ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ| 
ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||
ಎಂಬುದಾಗಿ. ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.
ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ ಎಂಬುದಾಗಿ.
ಕೃಪೆ:- ಶ್ರೀ ಅನಂತಾಚಾರ್ಯ ಮುಕುಂದಾಚಾರ್ಯ.ಜೋಶಿ

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!
ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವ ಭಿನ್ನವಾಗಿದೆ. ಕೇವಲ ವ್ಯಕ್ತಿಯ ಚಹರೆ ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ತೋರ್ಪಡಿಸುವುದಿಲ್ಲ. ವಾಸ್ತವವಾಗಿ ನೋಡಲು ಸುಂದರವಾಗಿ ಕಾಣುವ ವ್ಯಕ್ತಿಗಳು ಕೇವಲ ಆಕರ್ಷಣೀಯವಾಗಿರುತ್ತಾರೆಯೇ ವಿನಃ ಅವರ ನಿಜವಾಜ ವ್ಯಕ್ತಿತ್ವವೇ ನೈಜ ಸೌಂದರ್ಯವಾಗಿದೆ. ನೋಡಲು ಸುಂದರರಲ್ಲದ ಗಾಂಧೀಜಿ ಜಗತ್ತಿನ ಆಕರ್ಷಣೆ ಪಡೆದಿರಲು ಅವರ ವ್ಯಕ್ತಿತ್ವವೇ ಕಾರಣ. ಆದರೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅವರ ಬಾಹ್ಯ ರೂಪಕ್ಕಿಂತಲೂ ಅವರ ಆಂತರಿಕ ಲಕ್ಷಣಗಳು ಹೆಚ್ಚು ಸಂಬಂಧಪಟ್ಟಿವೆ.
ಅದರಲ್ಲೂ ಮುಖ್ಯವಾಗಿ ಪ್ರತಿ ವ್ಯಕ್ತಿಯ ರಕ್ತದ ಗುಂಪು ಆ ವ್ಯಕ್ತಿಯ ಮನೋಭಾವ, ಆರೋಗ್ಯ, ಸಹಜಗುಣ ಮತ್ತು ಯಾವ ಕ್ಷೇತ್ರದಲ್ಲಿ ಇವರು ಸಬಲರು ಮತ್ತು ಅಸಮರ್ಥರು ಎಂಬ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ. ಇದನ್ನು ಯಾವುದೇ ಜ್ಯೋತಿಷಿ ಅಥವಾ ಸಾಮಾನ್ಯರು ಹೇಳಿದ್ದಲ್ಲ, ಜಪಾನ್ ನಲ್ಲಿ ನಡೆದ ಒಂದು ಸಂಶೋಧನೆಯ ಮೂಲಕ ಈ ಬಗ್ಗೆ ಅತಿ ಆಳವಾದ ಅಧ್ಯಯನ ನಡೆಸಿದ ತಜ್ಞರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಓರ್ವ ವ್ಯಕ್ತಿಯ ರಕ್ತದ ಗುಂಪು ಮತ್ತು ಇತರ ವಿವರಗಳನ್ನು ಪಡೆದು ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ಇದೇ ಕಾರಣಕ್ಕೆ ಜಪಾನಿನ ಜ್ಯೋತಿಷಿಗಳು (ಹೌದು, ಜಪಾನ್‌ ನಲ್ಲಿಯೂ ಜ್ಯೋತಿಷಿಗಳಿದ್ದಾರೆ) ವ್ಯಕ್ತಿಯ ಕುಂಡಲಿಯ ಬದಲಿಗೆ ರಕ್ತದ ಗುಂಪು ಯಾವುದು ಎಂದು ವಿಚಾರಿಸುತ್ತಾರೆ.
ಅಷ್ಟಕ್ಕೂ ರಕ್ತದ ಗುಂಪಿನಿಂದ ವ್ಯಕ್ತಿತ್ವ ಗೊತ್ತಾದರೇನು ಫಲ? ಇದನ್ನು ಇತರ ವಿಧಾನದಿಂದಲೂ ಪಡೆದುಕೊಳ್ಳಬಹುದಲ್ಲವೇ? ಹೌದು, ವ್ಯಕ್ತಿತ್ವದ ಬಗ್ಗೆ ವಿವರ ಪಡೆದುಕೊಳ್ಳಬಹುದಾದರೂ ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯದ ಅಪಾಯಗಳನ್ನಲ್ಲ. ರಕ್ತದ ಗುಂಪಿನಿಂದ ಈ ಬಗ್ಗೆ ಹಲವು ಮುನ್ನೆಚ್ಚರಿಕೆ ಪಡೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಭಾರೀ ಗಂಡಾಂತರದಿಂದ ಪಾರಾಗಬಹುದು. ಇನ್ನು ಟೀ ಕುಡಿಯುವ ಮೊದಲು 'ರಕ್ತದ ಗುಂಪು' ತಿಳಿದಿರಲಿ!
ಮನುಷ್ಯರ ರಕ್ತವನ್ನು ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ, ಬಿ, ಎಬಿ ಮತ್ತು ಒ ಎಂಬ ಹೆಸರಿನ ಈ ನಾಲ್ಕು ಗುಂಪಿನ ರಕ್ತಗಳು ಪ್ರೇಮ, ಉದ್ಯೋಗ, ಸಾಮಾಜಿಕ ಜೀವನ, ಸಮಾಜದಲ್ಲಿರುವ ವ್ಯಕ್ತಿಗಳೊಂದಿಗೆ ಒಡನಾಟ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ರಕ್ತದ ಗುಂಪು ಯಾವುದು ಎಂದು ತಿಳಿದುಕೊಂಡಿರುವುದು.
ಒಂದು ವೇಳೆ ನಿಮಗೆ ಗೊತ್ತಿದ್ದರೆ ನಿಮ್ಮ ಬಗ್ಗೆ ನಿಮಗೇ ಅರಿವಿರದ ಹಲವು ಕುತೂಹಲಕಾರಿ ವಿಷಯಗಳನ್ನು ಕೆಳಗಿನ ಲೇಖನದಲ್ಲಿ ನೀಡಿರುವ ಮಾಹಿತಿಗಳು ಬಹಿರಂಗಪಡಿಸಿ ನಿಮ್ಮನ್ನು ಚಕಿತಗೊಳಿಸಬಹುದು. ಅಷ್ಟೇ ಅಲ್ಲ, ನಿಮ್ಮ ನಿಕಟವರ್ತಿಗಳ ರಕ್ತದ ಗುಂಪನ್ನು ಅರಿಯುವ ಮೂಲಕ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಎಚ್ಚರ ವಹಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಮ್ಮ ನಡುವಣ ಗೋಮುಖವ್ಯಾಘ್ರಗಳನ್ನು ಅರಿಯಲು ಇದರಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರರು ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪಡೆಯಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ...
ಎ. ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಸಹನಶೀಲರಾಗಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವಲ್ಲಿ ಇತರರಿಗಿಂತ ಹೆಚ್ಚು ಸಮರ್ಥರು. ಇವರು ಸಾಮಾನ್ಯವಾಗಿ ತಮ್ಮ ಕೆಲಸದಲ್ಲಿ ಶ್ರೇಷ್ಠತೆ ಮತ್ತು ಪರಿಪೂರ್ಣತೆಯನ್ನು ಬಯಸುತ್ತಾರೆ ಮತ್ತು ಇವನ್ನು ಸಾಧಿಸಲು ಸಂಪೂರ್ಣ ಜವಾಬ್ದಾರಿ ಹೊತ್ತು ತಮ್ಮ ಸಾಮರ್ಥ್ಯವನ್ನು ಧಾರೆ ಎರೆಯುತ್ತಾರೆ. ಇವರು ತಮ್ಮ ಕರ್ತರ್ವ್ಯದ ಕುರಿತು ಹೆಚ್ಚು ಜವಾಬ್ದಾರಿಯುತ, ವಿಶ್ಲೇಷಕ, ಸೃಜನಶೀಲರೂ ಆಗಿರುತ್ತಾರೆ. ಸಮಾಜದಲ್ಲಿ ಇವರು ಜನರೊಂದಿಗೆ ಉತ್ತಮ ವ್ಯವಹಾರವನ್ನಿಟ್ಟುಕೊಂಡು ಸಂಭಾವಿತರಾಗಿರುತ್ತಾರೆ. ಆದರೆ ಇವರ ವ್ಯಕ್ತಿತ್ವದ ಋಣಾತ್ಮಕ ಅಂಶಗಳೆಂದರೆ ಕೆಲಸದಲ್ಲಿ ಪರಿಪೂರ್ಣತೆಯ ಪಡೆಯುವ ಭರದಲ್ಲಿ ಇತರರನ್ನು ಕಡೆಗಣಿಸುವಿಕೆ, ಅತಿ ಹೆಚ್ಚಿನ ಸಂವೇದನೆ, ಯಾವುದೇ ವಿಷಯದ ಬಗೆಗಿನ ಒಲವನ್ನು ಅತಿರೇಕಕ್ಕೆ ಕೊಂಡೊಯ್ಯುವುದು, ಹೊಸ ವ್ಯಕ್ತಿಗಳೊಂದಿಗೆ ಬೆರೆಯಲು ಮಾತನಾಡಲು ಹಿಂದೇಟು ಹಾಕುವುದು, ತಮ್ಮದೇ ವಲಯದಲ್ಲಿ ಬಂದಿಗಳಾಗಿರುವುದು, ಅತೀವ ಸೂಕ್ಷ್ಮಮತಿಗಳಾಗಿರುವುದು ಮೊದಲಾದವು.
   
ಎ. ಗುಂಪಿನ ರಕ್ತ: ಸಾಮಾಜಿಕ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಚರ್ಚೆ ಮತ್ತು ವಾಸ್ತವಕ್ಕೆ ಮುಖಾಮುಖಿಯಾಗುವುದನ್ನು ಇಷ್ಟಪಡುವುದಿಲ್ಲ. ಇವರು ನಂಬಲರ್ಹ ವ್ಯಕ್ತಿಗಳಾದರೂ ಇವರು ಅತೀವ ಸೂಕ್ಷ್ಮಮತಿಗಳಾಗಿರುವ ಕಾರಣ ಕಾರ್ಯಕ್ರಮ ಅಥವಾ ಉದ್ಯೋಗದಲ್ಲಿ ಅನಿವಾರ್ಯವಾಗಿ ಬಂದ ಕೆಲವು ಬದಲಾವಣೆಗಳನ್ನು ಇವರು ಒಪ್ಪದೇ ಹೋಗುತ್ತಾರೆ. ನಾಲ್ಕು ಜನರು ಸಂಭ್ರಮಿಸಿ ಕೇಕೆ ಹಾಕುವ ಪಾರ್ಟಿಗಳನ್ನು ಇವರು ಸರ್ವಥಾ ಇಷ್ಟಪಡುವುದಿಲ್ಲ. ಇವರಿಗೆ ಕೆಲವೇ ಸ್ನೇಹಿತರಿದ್ದು ಹೊಸ ಸ್ನೇಹಿತರನ್ನು ಪಡೆಯಲು ಅವರು ವಿಪರೀತ ಹಿಂದೆಮುಂದೆ ನೀಡುತ್ತಾರೆ. ಇವರು ಶೀಘ್ರವಾಗಿ ಕೋಪಗೊಳ್ಳುವವರೂ ಚಿಕ್ಕ ಪುಟ್ಟ ತಮಾಷೆಗಳನ್ನೂ
ಅರಗಿಸಿಕೊಳ್ಳದೇ ಸುಲಭವಾಗಿ ನೋವು ಅನುಭವಿಸುವ ವ್ಯಕ್ತಿತ್ವದವರಾಗಿರುತ್ತಾರೆ.
   
ಎ. ಗುಂಪಿನ ರಕ್ತ: ಔದ್ಯೋಗಿಕ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ತಮ್ಮ ಉದ್ಯೋಗದಲ್ಲಿ ಅತ್ಯಂತ ವಿಶ್ವಾಸಾರ್ಹರಾಗಿರುತ್ತಾರೆ. ಇವರಿಗೆ ಕರ್ತವ್ಯವೇ ದೇವರಾಗಿದ್ದು ಇದಕ್ಕಾಗಿ ತಮ್ಮ ಎಲ್ಲಾ ಸಾಮರ್ಥ್ಯವನ್ನು ಧಾರೆ ಎರೆಯುತ್ತಾರೆ. ಸಾಮಾನ್ಯವಾಗಿ ಇವರು ಕೆಲವನ್ನು ಪೂರ್ಣಗೊಳಿಸಲು ತಮ್ಮ ಸಾಮರ್ಥ, ಸಮಯ ಮತ್ತು ಸೌಲಭ್ಯಗಳ ಮಿತಿಯನ್ನು ಮೀರಿ ಹೋಗುವ ಕಾರಣ ಇವರು ಅತೀವ ದಣಿವನ್ನು ಅನುಭವಿಸುತ್ತಾರೆ ಹಾಗೂ ಈ ಕೆಲಸದಲ್ಲಿ ಅತಿ ಹೆಚ್ಚಿನ ಮಗ್ನತೆ ಇತರರಿಗೆ ಕಿರಿಕಿರಿ ತರಿಸಬಹುದು. ಉದಾಹರಣೆಗೆ ಯಾವುದೋ ಪ್ರಕರಣವನ್ನು ತಲೆಯಲ್ಲಿ ತುಂಬಿಕೊಂಡ ಪೋಲೀಸ್ ಅಧಿಕಾರಿ ಮನೆಗೆ ಬಂದ ಬಳಿಕವೂ ಇದರ ಬಗ್ಗೆಯೇ ಯೋಚಿಸುತ್ತಿದ್ದು ಮನೆಯ ಸದಸ್ಯರೊಂದಿಗೆ ಸರಿಯಾಗಿ ಬೆರೆಯದಿರುವುದು ಅವರಿಗೆ ಉದ್ಯೋಗದಲ್ಲಿ ಹೆಚ್ಚಿನ ಉನ್ನತಿ ದೊರೆತರೂ ಕುಟುಂಬದಲ್ಲಿ ಹೆಚ್ಚಿನ ಆತ್ಮೀಯತೆಯನ್ನು ಕಳೆದುಕೊಳ್ಳುತ್ತಾರೆ.
   
ಎ. ಗುಂಪಿನ ರಕ್ತ: ಪ್ರೇಮದ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ಜನಜಂಗುಳಿಯನ್ನು ಇಷ್ಟಪಡದ ಕಾರಣ ಹೊಸ ಸಂಬಂಧವನ್ನು ಅವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇವರು ತಮ್ಮ ಪ್ರೇಮಿಗೂ ತಮ್ಮ ಪ್ರೇಮವನ್ನು ನಿವೇದಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸ್ನೇಹಿತರನ್ನೂ ಇವರು ಅತಿ ಕಾಳಜಿಯಿಂದ ಆಯ್ದುಕೊಂಡು ತಮ್ಮ ಸ್ನೇಹಕ್ಕೆ ಅರ್ಹರು ಎಂದು ಖಚಿತಪಡಿಸಿಕೊಂಡ ಬಳಿಕವೇ ನಿಕಟವರ್ತಿಗಳಾಗುತ್ತಾರೆ. ಆದರೆ ಒಮ್ಮೆ ಇವರು ತಮ್ಮ ಸ್ನೇಹಿತರು ಮತ್ತು ಪ್ರೇಮಿಯನ್ನು ಖಚಿತಪಡಿಸಿಕೊಂಡ ಬಳಿಕ ಪ್ರಾಣಕ್ಕೆ ಪ್ರಾಣ ಕೊಡುವಷ್ಟು ನಿಕಟವರ್ತಿಗಳಾಗುತ್ತಾರೆ.
   
ಬಿ. ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಭಾವಾವೇಶವುಳ್ಳವರಾಗಿದ್ದು, ಸೃಜನಶೀಲರೂ, ತಮಾಷೆಯನ್ನು ಇಷ್ಟಪಡುವವರೂ, ದೂರದೃಷ್ಟಿಯುಳ್ಳವರೂ, ಆಶಾವಾದಿಗಳೂ, ಸಕ್ರಿಯರೂ ಮತ್ತು ತಮ್ಮ ಭಾವನೆಗಳನ್ನು ಸಮರ್ಥವಾಗಿ ಹತ್ತಿಕ್ಕಿಕೊಳ್ಳುವವರೂ ಆಗಿರುತ್ತಾರೆ. ಇನ್ನೊಂದು ಕಡೆ ಇವರು ಅತೀವ ಸ್ವಾರ್ಥಿಗಳೂ, ಹಠಮಾರಿಗಳೂ, ಬಂಡಾಯಕೋರರೂ, ಸೇಡಿನ ಭಾವನೆಯನ್ನು ಜೀವಮಾನವಿಡೀ ಉಳಿಸಿಕೊಂಡು ಬರುವಂಥವರೂ, ತಮ್ಮ ಜವಾಬ್ದಾರಿಯ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದವೂ ಆಗಿರುತ್ತಾರೆ.
   
ಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ಸದಾ ಗುಂಪಿನಲ್ಲಿರುವುದನ್ನು ಇಷ್ಟಪಡುತ್ತಾರೆ. ಅಲ್ಲದೇ ಗುಂಪಿನಿಂದ ಸಾಧ್ಯವಾಗುವ ಕಾರ್ಯದ ಮುಂದಾಳತ್ವ ವಹಿಸಲು ಸಮರ್ಥರಿರುತ್ತಾರೆ. ಇವರು ತಮ್ಮದೇ ನಿರ್ಧಾರಗಳನ್ನು ತಳೆದು ಇತರರ ಸಲಹೆಗಳಿಗೆ ಬೆಲೆಕೊಡದ ಕಾರಣ ಗುಂಪಿನಲ್ಲಿ ಒಡಕು ಮೂಡಲೂ ಕಾರಣರಾಗುತ್ತಾರೆ.
   
ಬಿ ಗುಂಪಿನ ರಕ್ತ: ಔದ್ಯೋಗಿಕ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮದೇ ನಿಯಮಗಳನ್ನು ರೂಪಿಸಿಕೊಳ್ಳುವವರಾಗಿದ್ದು ಇತರರು ಈ ನಿಯಮಕ್ಕೆ ಒಳಪಡಬೇಕೆಂದು ಬಯಸುತ್ತಾರೆ. ಇವರು ಇತರರೊಂದಿಗೆ ಹೊಂದಿಕೊಳ್ಳದ
ಕಾರಣ ಇತರರು ಸಹಾ ಉದ್ಯೋಗದಲ್ಲಿ ಹೆಚ್ಚು ಸಹಕಾರ ನೀಡುವುದಿಲ್ಲ. ಆದರೆ ಇವರು ತಮ್ಮ ಕೆಲಸದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದು ಇದಕ್ಕಾಗಿ ಏನನ್ನೂ ಮಾಡಲು ಸಿದ್ಧರಿರುವ ಕಾರಣ ಜೀಹುಜೂರ್ ಎಂದು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ನಿರ್ವಹಿಸುವ ತಂಡದೊಂದಿಗೆ ಅಸಾಧ್ಯವನ್ನೂ ಸಾಧಿಸಬಲ್ಲರು.
   
ಬಿ ಗುಂಪಿನ ರಕ್ತ: ಪ್ರೇಮದ ಬದುಕು
ಇವರು ತಮ್ಮ ಉದ್ಯೋಗದಂತೆಯೇ ತಮ್ಮ ಜವಾಬ್ದಾರಿ ಮತ್ತು ಪ್ರೇಮದಲ್ಲಿಯೂ ಬೇಜವಾಬ್ದಾರಿ ತೋರುವ ಕಾರಣ ವಿಶೇಷವಾಗಿ ಪ್ರೇಮದ ವಿಷಯದಲ್ಲಿ ಹೆಚ್ಚಿನ ತಾಳ್ಮೆ ತೋರಬೇಕಾಗುತ್ತದೆ. ಸಾಮಾನ್ಯವಾಗಿ ಇವರು ಕೋಪದ ಭರದಲ್ಲಿ ಮನಸ್ಸಿಗೆ ಬಂದದ್ದನ್ನು ತೋರ್ಪಡಿಸಿಕೊಳ್ಳುತ್ತಾರಾದರೂ ತಮ್ಮ ಪ್ರೇಮಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಇವರು ಪ್ರೇಮದ ಜೊತೆಗೆ ತಮಾಷೆಯನ್ನೂ ಇಷ್ಟಪಡುತ್ತಾರೆ.
   
ಎಬಿ. ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಸ್ನೇಹಪರರು, ದೂರದೃಷ್ಟಿಯುಳ್ಳವರು, ಅಪಾರ ಬುದ್ದಿವಂತರು, ಯಾರೊಂದಿಗೂ ಬೆರೆಯಬಲ್ಲವರು, ಕುತೂಹಲಕಾರಿ ವ್ಯಕ್ತಿತ್ವವುಳ್ಳವರು ಮತ್ತು ತತ್ವಜ್ಞಾನಿಗಳೂ ಆಗಿರುತ್ತಾರೆ. ಕೆಲವೊಮ್ಮೆ ಇವರನ್ನು ಅಳೆಯುವುದು ಅಸಂಭವವಾಗುತ್ತದೆ. ಕೆಲವೊಮ್ಮೆ ಇವರು ಅತೀವ ಭಾವಾವೇಶ ಮತ್ತು ಚಿತ್ತವೃತ್ತಿಯನ್ನೂ ತೋರುತ್ತಾರೆ.
   
ಎಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು
ಇವರು ಅತೀವ ಸ್ನೇಹಪರರಾಗಿರುವ ಕಾರಣ ತಮ್ಮ ಸ್ನೇಹಿತರಿಗಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಇವರ ನಡವಳಿಕೆ ಇತರರಿಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಇವರು ತಮಾಷೆಯನ್ನು ಇಷ್ಟಪಡುವವರೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರೂ ಆಗಿದ್ದಾರೆ. ಇವರು ಬುದ್ದಿಜೀವಿಗಳ ನಡುವೆ ಸಂಭಾಷಣೆಯನ್ನು ನಡೆಸಲು ಇಷ್ಟಪಡುತ್ತಾರೆ. ಇವರು ಅತ್ಯುತ್ತಮ ವಾಗ್ಮಿಗಳೂ ಆಗಿರುತ್ತಾರೆ. ಆದರೆ ಇವರ ಥಟ್ಟನೇ ಬದಲಾಗುವ ಮನೋಭಾವ ಮತ್ತು ಭಾವಪರವಶತೆ ಇವರ ಬಗ್ಗೆ ಭಿನ್ನ ನಿರ್ಧಾರ ತಳೆಯುವಂತೆ ಮಾಡುತ್ತದೆ.
   
ಎಬಿ ಗುಂಪಿನ ರಕ್ತ: ಪ್ರೇಮದ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ತಮ್ಮ ಜೀವನಸಂಗಾತಿಯನ್ನು ಅತೀವ ಪ್ರೇತಿಸುವವರಾಗಿದ್ದು ತಮ್ಮ ಪ್ರಾಣಗೆಳೆಯ/ಗೆಳತಿಯಂತೆ ಕಾಣುತ್ತಾರೆ. ಇವರು ಸದಾ ತಮ್ಮ ಜೀವನಸಂಗಾತಿಯೊಂದಿಗೇ ಹೆಚ್ಚಿನ
ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ ಹಾಗೂ ಎಲ್ಲಾ ಕ್ಷಣಗಳನ್ನು ಸಂತೋಷವಾಗಿ ಮತ್ತು ಪ್ರೇಮದಲ್ಲಿ ಕಳೆಯಲು ಇಚ್ಛಿಸುತ್ತಾರೆ. ಆದರೆ ಇವರು ಅತೀವ ಸೂಕ್ಷ್ಮಮತಿಗಳಾಗಿರುವ ಕಾರಣ ತಮ್ಮ ಜೀವನಸಂಗಾತಿ ಮತ್ತು ಸ್ನೇಹಿತರ ಚಿಕ್ಕಪುಟ್ಟ ತಪ್ಪುಗಳನ್ನೂ ಇವರು ಅತೀವವಾಗಿ ಹಚ್ಚಿಕೊಂಡು ವ್ಯಾಕುಲರಾಗುತ್ತಾರೆ. ಇವರೊಂದಿಗೆ ಜೀವನ ಸಾಗಿಸಲು ಇವರನ್ನು ಕೊಂಚ ಅರ್ಥ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
   
ಒ ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು
ಈ ಗುಂಪಿನ ವ್ಯಕ್ತಿಗಳು ಸ್ನೇಹಪರರೂ, ತಮ್ಮ ಕರ್ತ್ಯವ್ಯವನ್ನು ಎಷ್ಟೇ ತೊಡಕುಗಳಿದ್ದರೂ ನಿರ್ವಹಿಸುವವರೂ, ದೃಢಸಂಕಲ್ಪವುಳ್ಳವರೂ, ಅತ್ಯಂತ ಪ್ರಾಮಾಣಿಕರು, ಕುತೂಹಲ ವ್ಯಕ್ತಪಡಿಸುವ ವ್ಯಕ್ತಿತ್ವದವರೂ ದಯಾಪರರೂ ಆಗಿದ್ದಾರೆ. ಆದರೆ ಇವರ ಋಣಾತ್ಮಕ ಅಂಶಗಳೆಂದರೆ ಇವರು ತಮ್ಮ ವಸ್ತುಗಳ ಬಗ್ಗೆ ಅತಿಹೆಚ್ಚಿನ ಒಲವು ಉಳ್ಳವರಾಗಿದ್ದು ಇತರರು ಇದನ್ನು ಉಪಯೋಗಿಸಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಅಹಂಕಾರಿಗಳೂ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೂ ಮತ್ತು ಹೊಸ ಆಕರ್ಷಣೆಗೆ ಸುಲಭವಾಗಿ ಒಳಗಾಗುವವರೂ ಆಗಿರುತ್ತಾರೆ. ತಮ್ಮ ಉದ್ದೇಶಗಳಿಗೆ ವಿರೋಧ ಒಡ್ಡುವವರನ್ನು ಇವರು ಪ್ರತಿರೋಧಿಸಿ ಜಗಳಕಾಯಲೂ ಸಿದ್ಧರಿರುತ್ತಾರೆ.
   
ಒ ಗುಂಪಿನ ರಕ್ತ: ಸಾಮಾಜಿಕ ಬದುಕು
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ವಿಶಾಲ ಮನೋಭಾವವುಳ್ಳವರಾಗಿದ್ದು ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿರುತ್ತಾರೆ. ಇವರು ಹೆಚ್ಚಿನ ಜನರ ಸ್ನೇಹವನ್ನು ಬಯಸುತ್ತಾರೆ ಹಾಗೂ ಸ್ನೇಹಿತರಿಗೆ ಮತ್ತು ಅಗತ್ಯವುಳ್ಳವರಿಗೆ ತಮ್ಮ ಸಾಮರ್ಥ್ಯದ ನೆರವು ನೀಡುವ ಮೂಲಕ ಎಲ್ಲರ ಪ್ರಶಂಸೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇತರರಿಗೆ ನೀಡುವ ನಿಃಸ್ವಾರ್ಥ ಸೇವೆಯ ಕಾರಣ ಇವರು ಎಲ್ಲರಿಗೆ ಬೇಕಾಗುವ ವ್ಯಕ್ತಿಯಾಗಿರುತ್ತಾರೆ.
   
ಒ ಗುಂಪಿನ ರಕ್ತ: ಔದ್ಯೋಗಿಕ ಬದುಕು
ಇವರು ತಮ್ಮ ಕರ್ತ್ಯವ್ಯಕ್ಕೆ ಪ್ರಥಮ ಆದ್ಯತೆ ನೀಡುವವರಾಗಿದ್ದು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಇವರು ತಮ್ಮ ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯಲು ತಮ್ಮ ಸಾಮರ್ಥಕ್ಕೂ ಹೆಚ್ಚಿನದ್ದನ್ನು ನೀಡುವ ಕಾರಣ ಅಸಾಧ್ಯವನ್ನು ಸಾಧಿಸಲು ಅರ್ಹರಾಗಿರುತ್ತಾರೆ. ಆದರೆ ಇತರ ಆಕರ್ಷಣೆಗಳಿಗೆ ಸುಲಭವಾಗಿ ಮಣಿಯುವ ಇವರು ಕೆಲವೊಮ್ಮೆ ತಮ್ಮ ಉದ್ದೇಶದಿಂದಲೇ ವಿಮುಖರಾಗುತ್ತಾರೆ. ಆದರೆ ಸೂಕ್ತ ಮಾರ್ಗದರ್ಶನದ ಮೂಲಕ ಇವರಿಂದ ಅಸಾಧ್ಯವನ್ನು ಮಾಡಿಸಬಹುದು.
   
ಒ ಗುಂಪಿನ ರಕ್ತ: ಪ್ರೇಮದ ಬದುಕು
ಇವರು ಸಾಮಾನ್ಯವಾಗಿ ಬೇರೆಯವರಿಗೆ ಸಮಯ ನೀಡುವ ಪರಿಯನ್ನು ಇವರ ಜೀವನಸಂಗಾತಿಗಳು ಇಷ್ಟಪಡುವುದಿಲ್ಲ. ಇವರು ತಮ್ಮ ಜೀವನಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರಾದರೂ ಇದನ್ನು ಸುಲಭವಾಗಿ ತೋರ್ಪಡಿಸಿಕೊಳ್ಳುವುದಿಲ್ಲ. ಇವರು ತಮ್ಮ ಪ್ರೇಮದ ಬಗ್ಗೆ ಕೊಂಚ ನಿರ್ಲಕ್ಷ ತೋರುತ್ತಾರೆ. ಆದರೆ ತಮ್ಮ ಜವಾಬ್ದಾರಿ, ಕರ್ತವ್ಯದ ಕುರಿತು ಇವರು ಸದಾ ಹೆಚ್ಚಿನ ಕಾಳಜಿ ವಹಿಸುವ ಕಾರಣ ಇವರ ಜೀವನಸಂಗಾತಿಗಳು ನಿರಾಳರಾಗಿರುತ್ತಾರೆ. ಆದ್ದರಿಂದ ಇವರನ್ನು ಇವರ ಜೀವನಸಂಗಾತಿಗಳು ಅರ್ಥಮಾಡಿಕೊಳ್ಳುವುದು ಅಗತ್ಯ

ತುಳುನಾಡಿನ_ಸಂಪ್ರದಾಯದಲ್ಲಿ_ನೇಪತ್ಯಕ್ಕೆ_ಸರಿಯುತ್ತಿರುವ_ಮಡಿವಾಳ_ಸಮುದಾಯದ_ಆಚಾರ_ವಿಧಿಗಳು*

#ತುಳುನಾಡಿನ_ಸಂಪ್ರದಾಯದಲ್ಲಿ_ನೇಪತ್ಯಕ್ಕೆ_ಸರಿಯುತ್ತಿರುವ_ಮಡಿವಾಳ_ಸಮುದಾಯದ_ಆಚಾರ_ವಿಧಿಗಳು*

ಲೇಖನ: #ಶೈಲು_ಬಿರ್ವ_ಅಗತ್ತಾಡಿ_ದೋಲ_ಬಾರಿಕೆ
ತುಳುನಾಡಿನ ಸಂಪ್ರದಾಯ ಅನನ್ಯ ಮತ್ತು ಅದ್ವಿತೀಯ. ಸಂಪ್ರದಾಯಗಳ ಮಹಾ ಪೂರವೇ ಈ ತುಳುನಾಡ ಧರ್ಮ.
ಇಲ್ಲಿ ಎಲ್ಲಾ ಜಾತಿಗಳು ತನ್ನದೇ ಆದ ಜಾತಿ ಚೌಕಟ್ಟಿನಲ್ಲಿ ಹಾದಿ ಸವೆಸಿದವರು. ಎಲ್ಲರು ಕೂಡ ನಿಶ್ಚಿತ ಮಾನದಂಡದೊಂದಿಗೆ ಬದುಕು ಕಟ್ಟಿಕೊಂಡವರು. ಎಲ್ಲಾ ಜಾತಿಗಳ ಸಂಪ್ರದಾಯಗಳಿಗೆ ರೀತಿ ರಿವಾಜುಗಳಿಗೆ ಕೊಂಡಿಯಾಗಿದ್ದವರು ದೈವಗಳಿಂದ ಹರಸಲ್ಪಟ್ಟ ಇದೇ ಮಡಿವಾಳ ಸಮುದಾಯ. ಅರ್ತಥ್ ನಮ ತುಳುವೆರ್ ನಲ್ಲಿ ಒಂದು ಸಮೂದಾಯ.
ದೈವಗಳ ಪ್ರತಿಷ್ಟೆಗಳಿಗೆ ಶುದ್ಧದ ಮಡಿವಾಳರಾಗಿ, ನೇಮ ಕೋಲಗಳಿಗೆ ದೀವಟಿಗೆ ಹಿಡಿಯುವವರಾಗಿ, ಅಳಿಯ ಕಟ್ಟಿನ ಸಂಪ್ರದಾಯದ ಮದುವೆಗಳ ಭಟ್ರು ಗಳಾಗಿ, ಎಲ್ಲಾ ವರ್ಗದ ಮನೆಗಳ  ಅಮೆ ಸೂತಿಕ ಕಳೆಯುವ ಶುದ್ಧದ ಮಡಿವಾಳರಾಗಿ ಇಡೀ ತುಳುನಾಡಿನಲ್ಲಿ ಇವರಷ್ಟು ಸಮಾಜವನ್ನು ವ್ಯಾಪಿಸಿಕೊಂಡವರು ಯಾರು ಇಲ್ಲ ಅದೇ ರೀತಿ ಮೇಲು ಕೀಳೆಂಬ ಭಾವನೆ ಇವರನ್ನು ಆವರಿಸಿಕೊಂಡಿದ್ದು ತೀರಾ ಕಡಿಮೆ.
ಯಾಕೆಂದರೆ ಇವರ ಇರುವಿಕೆ ಮತ್ತು ಸೇವೆ ಕಡ್ಡಾಯವಾಗಿ ಆಗಿರುವುದರಿಂದ ಬಹುಷ ಇವರಿಗೆ ವಿನಾಯಿತಿ ಸಿಕ್ಕಿರಬಹುದು. ಯಾಕೆಂದರೆ ಕ್ರಮಗಳನ್ನು ಮಾಡಿದ್ದು ಮನುಷ್ಯನೆ ಆಗಿರುವುದರಿಂದ ಈ ರೀತಿಯ ವಿನಾಯಿತಿ.
ಯಾವುದೇ ದೈವಗಳ ಪ್ರತಿಷ್ಟೆ ಇರಬಹುದು ಅದರಲ್ಲಿ ಮಡಿವಾಳರ ಉಪಸ್ಥಿತಿ ಹೆಚ್ಚಿನದ್ದು. ಅವರು ಕಟ್ಟುವ ಕೊಡಿನಾಡುಗಳಾಗಿರಲಿ, ಬಾಳೋಲಿಗಳಾಗಿರಲಿ, ತಯಾರು ಮಾಡುವ ಸಿಂಗಸ್ಥಾನಗಳಾಗಿರಲಿ, ಅವರು ಹಾಕುವ ಮಡಿಯ ದಲ್ಯಗಳಾಗಲಿ( ಬಟ್ಟೆ), ಬಿಡಿಸುವ ಮಂಡಳಗಳಾಗಲಿ ಅತೀ ಹೆಚ್ಚಿನ ಪ್ರಾಶಸ್ತ್ಯ ಪಡೆದಿರುವಂತಹುದು. ಭೂತಾಲಯದ ಕಟ್ಟಿನಲ್ಲಿ ಮಡಿವಾಳರ ಉಪಸ್ಥಿತಿ ಅತೀ ಹೆಚ್ಚಿನದ್ದು. ಇವರನ್ನು ದೈವವು ತನ್ನ ಭಾಷೆಯಲ್ಲಿ ದಲ್ಯಂತ ಮಾನಿಯೆರ್ ಎಂದು ಕರೆಯುವುದು ವಾಡಿಕೆ. 
ಕೆಲವೊಮ್ಮೆ ದೈವಗಳ ಕೈ ಸನ್ನೆ ಬಾಯಿ ಸನ್ನೆ ಯಾರಿಗು ಅರ್ಥವಾಗದಾಗ ಅದನ್ನು ತಿಳಿಸುವವರು ಇದೇ ಮಡಿವಾಳರು. ಪುತ್ತೂರು ಸುಳ್ಯ ಬೆಳ್ತಂಗಡಿ ಕಡೆಗಳಲ್ಲಿ ಬೆರ್ಮೆರ ಗುಂಡದ ಪ್ರವೇಶದ ಅಧಿಕಾರ ಮಡಿವಾಳರಿಗೆ ಮಾತ್ರ ಇತ್ತು.   ಯಾವುದೇ ಮನೆಯಲ್ಲಿ ಸಾವುಗಳಾದರು ಕೂಡ ಮನೆ ಶುದ್ಧಿ ಮಾಡುವ ಅಧಿಕಾರವನ್ನು ಪಡೆದವರು ಇದೇ ಮಡಿವಾಳರು.
ಹಿಂದಿನ ಕಾಲದಲ್ಲಿ ತುಳು ಸಂಪ್ರದಾಯದ ಪ್ರಕಾರ ಅಳಿಯ ಕಟ್ಟಿನಲ್ಲಿ( ಅಪ್ಪೆ ಕಟ್ಟ್) ಮೃತ ದೇಹಕ್ಕೆ ಬೆಂಕಿ ನೀಡುವ ಕ್ರಮ ಇರಲಿಲ್ಲ ಬದಲಾಗಿ ದಫನ ಮಾಡಿ ವಿಧಿಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ದಫನ ಮಾಡಿದ ಜಾಗದಲ್ಲಿ ನೀರ್ನೆರಲು ಮಾಡಿ ವಿಧಿಗಳನ್ನು ಮಾಡುವವರು ಇದೇ ಮಡಿವಾಳರು.
ತುಳುನಾಡಿನ ಮದುವೆಗಳಲ್ಲಿ ಪೌರೋಹಿತ್ಯ ವಹಿಸುತ್ತಿದ್ದವರು ಇದೇ ಮಡಿವಾಳರು. ಮುಹೂರ್ತ ಕಂಬಗಳಿರಲಿ, ಮದುವೆ ಮಂಟಪಗಳಿರಲಿ, ಹೆಣ್ಣು ಋತುಮತಿಯಾದಗ ಮಾಡುವ ಶಾಸ್ರ್ತಗಳಿರಲಿ, ಸೀಮಂತಗಳಿರಲಿ, ಮೋನೆ ಕಲಿ ( ಪ್ರಥಮ ಬಾರಿಗೆ ಮುಖ ಮತ್ತು ತಲೆ ಕೂದಲಿಗೆ ಬಾಳು ತಾಗಿಸುವ ಕ್ರಮ)ತೆಗೆಯುವ ಕ್ರಮಗಳಿರಲಿ ಎಲ್ಲವು ಇವರ ಮುಖಾಂತರ ನಡೆಯುತ್ತಿತ್ತು.
ಅಂದರೆ ತುಳುನಾಡಿನ ಎಲ್ಲಾ ಸಂಪ್ರದಾಯಗಳಿಗೆ ಒಂದು ರೀತಿಯಲ್ಲಿ ಇವರದ್ದೇ ಪೌರೋಹಿತ್ಯ ಆದರೆ ಅದನ್ನು ಇಂದಿನ ಕಾಲಮಾನದಲ್ಲಿ ನಾವು ಉಳಿಸಿಕೊಂಡಿದ್ದು ಶೂನ್ಯ. ವೈದಿಕ ಸಂಪ್ರದಾಯಗಳಿಗೆ ಮಾರು ಹೋದ ನಾವು ಇವರ ಇರುವಿಕೆ, ಉಪಸ್ಥಿತಿ ಮತ್ತು ಕ್ರಮಗಳು ನಮಗೆ ಬೇಡವಾಯಿತು. ಹೊಸತೊಂದು ಹಿತವಾದಾಗ ಹಳತೊಂದರ ಬಗ್ಗೆ ಉದಾಸೀನ ಭಾವ ಬೆಳೆಯಿತು. ತುಳುನಾಡಿನಲ್ಲಿ ಯಾವುದೇ ವರ್ಗದ  ಹೆಣ್ಣು ಋತುಮತಿಯಾದಾಗ ಮಡಿವಾಳ ಸಮುದಾಯದ ಹೆಂಗಸರ ಉಪಸ್ಥಿತಿ ಕಡ್ಡಾಯ. ಹೆಣ್ಣು ಕುಳಿತುಕೊಳ್ಳಲು ಮೆತ್ತೆಯನ್ನು ಮತ್ತು ಕಳಶದ ನೀರನ್ನು  ಇದೇ ಹೆಂಗಸರು ಸಿದ್ಧ ಮಾಡಬೇಕಿತ್ತು. ಅಂದರೆ ಮಡಿವಾಳ ಸಮುದಾಯದ ಹೆಂಗಸರ ಉಪಸ್ಥಿತಿ ಕಡ್ಡಾಯ ಎನ್ನುವುದು ಇವೆಲ್ಲವುಗಳಿಂದ ತೀರ್ಮಾನವಾಗುತ್ತದೆ. ಇವರಲ್ಲಿ ಎರಡು ಪಂಗಡವಿದೆ ಶುದ್ದದ ಮಡಿವಾಳ ಮತ್ತು ಪರೇಲ ಮಡಿವಾಳ ಎಂಬುದಾಗಿ. ಕೆಲವು ಕಡೆಗಳಲ್ಲಿ ಮಹಿಷಂದಾಯ ದೈವದ ಮುಗ ಇವರೇ ಹಿಡಿಯಬೇಕೆನ್ನುವ ಕ್ರಮವು ಇದೆ. ಒಟ್ಟಿನಲ್ಲಿ ಮಡಿವಾಳ ಸಮುದಾಯದ ಉಪಸ್ಥಿತಿ ತುಳುನಾಡಲ್ಲಿ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ ನೀರು ಮತ್ತು ರಕ್ತ ಬೆರೆತ ರೀತಿಯಲ್ಲಿ, ಆದರೆ ಕಾಲಕ್ರಮೇಣ ಹೊಸ ಹೊಸ ಕ್ರಮಗಳ ಮನ್ವಂತರ ಪ್ರಾರಂಭವಾಯಿತು ಹಳತರ ಬಗ್ಗೆ ತಾತ್ಸಾರ ಬೆಳೆಯಿತು ಹಿರಿಯರ ನಂಬಿಕೆಗಳ ಬೇರು ಗೆದ್ದಲು ಹಿಡಿಯಿತು ಮಡಿವಾಳ ಸಮುದಾಯದ ಸೇವೆ ನೇಪಥ್ಯಕ್ಕೆ ಸರಿಯಿತು. ಆ ಜಾಗವನ್ನು ಹೊಸ ಕ್ರಮಗಳು ಆವರಿಸಿಕೊಂಡಿತು ಕ್ಷಣ ಮಾತ್ರದಲ್ಲಿ ಕಮ್ಮಿ ಖರ್ಚಿನಲ್ಲಿ ಆಗುತ್ತಿದ್ದ ಎಲ್ಲಾ ಕ್ರಮಗಳಿಗೆ ಲಕ್ಷ ಲಕ್ಷ ಸುರಿಯುವಂತಾಯಿತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎನ್ನುವಂತೆ ನಾವು ಹೊಸತರ ಕಡೆಗೆ ಮುಖ ಮಾಡಿ ತುಳುನಾಡಿನ ಒಂದು ಜನಾಂಗದ ಸೇವೆಗೆ ನಾವಿಂದು ತಿಲಾಂಜಲಿ ಇಟ್ಟಿದ್ದೇವೆ. ಇವತ್ತಿಗೂ ತುಳುನಾಡು ಕಾಯುತ್ತಿದೆ ಶಬರಿ ರಾಮನಿಗೆ ಕಾದ ರೀತಿಯಲ್ಲಿ ಯಾರಾದರು ತನ್ನ ಹಳೆಯ ನೆನಪಿನ ಬುತ್ತಿಯನ್ನು ತೆಗೆಯುತ್ತಾರೆ ಎಂದು

ಸೋಮವಾರ, ಮಾರ್ಚ್ 19, 2018

ಶ್ರೀ ರಾಯರ ಪಾದಧೂಳು

" ಶ್ರೀ ರಾಯರ ಪಾದಧೂಳು ಅತ್ಯಂತ ಮಹತ್ವವಾದದ್ದು "
( ಶ್ರೀ ರಾಯರ ಪಟ್ಟಾಭಿಷೇಕ - ವರ್ಧಂತಿ ವಿಶೇಷ )
ಶ್ರೀ ಆಹ್ಲಾದಾಂಶ ಶ್ರೀ ಅಪ್ಪಣ್ಣಾಚಾರ್ಯರ ಮಾತಲ್ಲಿ....
ಯತ್ಪಾದಕಂಜರಜಸಾ ಪರಿಭೂಷಿತಾಂಗ
ಯತ್ಪಾದಪದ್ಮಮಧುಪಾಯಿತಮಾನಸಾ ಯೇ ।
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ-
ಸ್ತದ್ದರ್ಶನಂ ದುರಿತಕಾನನದಾವಭೂತಮ್ ।। ೯ ।।
ಯೇ = ಯಾವ ಭಕ್ತರು
ಯತ್ಪಾದಕಂಜರಜಸಾ = ಯಾರ ಕಮಲಗಳಂತೆ ಸುಂದರವಾದ ಪಾದಗಳ ಧೂಳಿನಿಂದ
ಪರಿಭೂಷಿತಾಂಗಾ: = ಸುತ್ತಲೂ ಅಲಂಕೃತವಾದ ಅವಯವಗಳುಳ್ಳವರೋ
ಯತ್ಪಾದಪದ್ಮಮಧುಪಾಯಿತ ಮಾನಸಾ: = ಯಾರ ಕಮಲಗಳಲ್ಲಿ ದುಂಬಿಗೆ ಸಮವಾದ
ಮನಸ್ಸುಳ್ಳವರೋ
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ: = ಯಾರ ಪಾದ  ನಿರಂತರ ಸಂಕೀರ್ತನೆಯಿಂದ ಜೀರ್ಣವಾದ ಮಾತುಗಳುಳ್ಳವರೋ
ತದ್ದರ್ಶನಮ್ = ಅವರ ದರ್ಶನವು
ದುರಿತಕಾನನದಾವಭೂತಂ = ಪಾಪಗಳೆಂಬ ಕಾಡುಗಳಿಗೆ ಕಾಡ್ಗಿಚ್ಚಿನಂತೆ ಆಗಿರುತ್ತದೆ.
ಅಥವಾ
ಯೇ = ಯಾವ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಯತ್ = " ಯತ್ " ಶಬ್ದವಾಚ್ಯನಾದ ಭಗವಂತನ
ಪಾದಕಂಜರಜಸಾ = ಪಾದ ಪದುಮಗಳ ಧೂಳಿನಿಂದ
ಪರಿಭೂಷಿತಾಂಗ = ಸುತ್ತಲೂ ಅಲಂಕೃತವಾದ ಅವಯವಗಳುಳ್ಳವರೋ
ಯತ್ಪಾದಪದ್ಮಮಧುಪಾಯಿತ ಮಾನಸಾ: = ಭಗವಂತನ ಪಾದ ಪದ್ಮಗಳಲ್ಲಿ ದುಂಬಿಗೆ ಸಮಾನವಾದ ಮನಸ್ಸುಳ್ಳವರಾಗಿರುವರೋ
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ: = ಭಗವಂತನ ಪಾದ ಕಮಲಗಳ ನಿರಂತರ ಸಂಕೀರ್ತನದಿಂದ ಜೀರ್ಣವಾದ ಮಾತುಗಳುಳ್ಳವರೋ
ತದ್ದರ್ಶನಮ್ = ಅಂಥಹ ಶ್ರೀ ರಾಘವೇಂದ್ರತೀರ್ಥ ಗುರುಗಳ ದರ್ಶನವು
ದುರಿತಕಾನನದಾವಭೂತಮ್ = ಪಾಪಗಳೆಂಬ ಕಾಡುಗಳಿಗೆ ಕಾಡ್ಗಿಚ್ಚಿನಂತೆ ಆಗಿರುತ್ತದೆ.
ಶ್ರೀಮದ್ಭಾಗವತದಲ್ಲಿ...
ನೈಷಾ೦ ಮತಿಸ್ಥಾನದುರುಕ್ರಮಾಂಘ್ರಿ೦ ಸ್ಪೃಶತ್ಯನರ್ಥಾಪಗಮೋಯದುತ್ಥ: ।
ಮಹೀಯಸಾಂ ಪಾದರಜೋಭಿಷೇಕಂ ನಿಷ್ಕಿಂಚನಾನಾಂ ನ ವೃಣೀತ ಯಾವತ್ ।। ೭-೫-೩೨ ।।
ಎಂಬ ಶ್ಲೋಕದಲ್ಲಿ ಶ್ರೀ ಪ್ರಹ್ಲಾದರಾಯರು ಜ್ಞಾನಿಗಳ ಪಾದಧೂಳಿಯನ್ನು ಸರ್ವಾಂಗಗಳಲ್ಲಿ ಅಭಿಷೇಕವನ್ನು ಮಾಡಿಕೊಳ್ಳಬೇಕೆಂತಲೂ, ಅದರಿಂದಲೇ ಗುರೂಪದೇಶ ಕ್ರಮದಿಂದ ಜ್ಞಾನ, ಭಕ್ತಿ, ಮುಕ್ತಿಗಳು ಸಿಗುತ್ತದೆಂದೂ ಹೇಳಿದ್ದಾರೆ.
ಶ್ರೀ ಕೃಷ್ಣಾವಧೂತರು " ಶ್ರೀ ರಾಘವೇಂದ್ರ ತಂತ್ರ " ದಲ್ಲಿ....
" ಮಹಾಪದ್ವಿನಾಶಾಯ ತೇ ಪಾದರೇಣು: "
ಮಹತ್ತರ ಆಪತ್ತುಗಳನ್ನು ನಾಶ ಮಾಡುವ ಪಾದ ಧೂಳು ಶ್ರೀ ರಾಯರದ್ದು ಎಂದು ವರ್ಣಿಸಿದ್ದಾರೆ.
ಶ್ರೀ ಪ್ರಹ್ಲಾದಾಂಶ ಸಂಭೂತರಾದ ಶ್ರೀ ರಾಘವೇಂದ್ರ ಗುರುಗಳ ಪಾದ ಧೂಳಿಯನ್ನೂ ಅಥವಾ ಬೃಂದಾವನ ಮೃತ್ತಿಕೆಯನ್ನು ದೇಹದಲ್ಲಿ ಅಭಿಷೇಕ ಮಾಡಿಕೊಂಡು ಅದರಿಂದ ದೇಹವನ್ನು ಅಲಂಕರಿಸಿಕೊಳ್ಳಬೇಕು.
ಸುವರ್ಣಾದಿಗಳಿಂದ ನಿರ್ಮಿತವಾದ ಆಭರಣಗಳನ್ನು ದೇಹದಲ್ಲಿ ಆಸೆಯಿಂದ ಧರಿಸುತ್ತಿರುವಂತೆ ಶ್ರೀ ರಾಘವೇಂದ್ರ ಗುರುಗಳ ಪಾದ ಧೂಳಿಯನ್ನು ದೇಹದಲ್ಲಿ ಆಸೆಯಿಂದ ಲೇಪನ ಮಾಡಿಕೊಳ್ಳಬೇಕು. ಆ ಧೂಳಿಯೇ ದೇಹಕ್ಕೆ ಅಲಂಕಾರವೆಂದು ತಿಳಿಯಬೇಕು. ಅದನ್ನು ಒರೆಸಿಕೊಳ್ಳಬಾರದು.
ದುಂಬಿಯು ಜೇನಿಗಾಗಿ ಕಮಲದಲ್ಲಿ ಆಸಕ್ತವಾದಂತೆ  ಶ್ರೀ ಗುರುಸಾರ್ವಭೌಮರ ಕಮಲದಂತೆ ಸುಂದರವೂ, ಮಧುರವೂ ಆದ ಎರಡು ಪಾದಗಳಲ್ಲಿ ಮನಸ್ಸು ಸ್ಥಿರವಾಗಿ ನಿಲ್ಲಬೇಕು. ಶ್ರೀ ರಾಘವೇಂದ್ರ ಗುರುಗಳ ಪಾದಗಳನ್ನು ಎಡಬಿಡದೇ ಸ್ಮರಿಸುತ್ತಿರಬೇಕು.
ಶ್ರೀ ರಾಘವೇಂದ್ರ ಗುರುಗಳ ಪಾದಗಳನ್ನು ಹೊಗಳಿ ಹೊಗಳಿ ಮಾತುಗಳು ಜೀರ್ಣವಾಗಬೇಕು. ಅಂದರೆ ಶ್ರೀ ಗುರುರಾಘವೇಂದ್ರತೀರ್ಥರ ಪಾದಗಳನ್ನು ಎಡಬಿಡದೇ ಹೊಗಳುತ್ತಿರಬೇಕು. ಅವುಗಳ ಹೊಗಳಿಕೆಯಲ್ಲಿಯೇ ಸರ್ವ ಕಾಲವನ್ನೂ ಕಳೆಯಬೇಕು.
ಹೀಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಸೇವೆಯಿಂದ ತಮ್ಮ ಆಯುಷ್ಯವನ್ನು ಕಳೆಯುತ್ತಿತುವ ಶ್ರೀ ಗುರುರಾಯರ ಭಕ್ತರನ್ನು ನೋಡಿದ ಜನರ ಸಕಲ ಪಾಪಗಳೂ ಕಾಡ್ಗಿಚ್ಚಿನಿಂದ ಕಾಡು ಭಸ್ಮವಾದಂತೆ ಶ್ರೀ ರಾಯರ ಭಕ್ತರ ದರ್ಶನಕ್ಕೆ ಇಷ್ಟು ಮಹಿಮೆಯಿದ್ದರೆ ಆ ಭಕ್ತರಿಗೂ ಅವರಿಂದ ಸೇವ್ಯರಾದ ಶ್ರೀ ಗುರುಸಾರ್ವಭೌಮರಿಗೂ, ಅವರಿಂದ ಸೇವಿಸಲ್ಪಡುತ್ತಿರುವ ಶ್ರೀ ನರಹರಿಗೂ ಎಷ್ಟು ಮಹಿಮೆಯಿದೆ ಇದೆಯೆಂದು ಊಹಿಸಲೂ ಸಾಧ್ಯವಿಲ್ಲ!!
ಯತ್ = ಭಗವಂತ
ಏತಿ ಜಾನಾತೀತಿ ಯತ್ ಜಾತೃ ಸ್ವರೂಪಿ.
ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕೆಂದು ಪ್ರಶ್ನಿಸಿದ ಶ್ರೀ ರಮಾದೇವಿಯರಿಗೆ ಶ್ರೀ ಮಹೀದಾಸ ರೂಪಿ ಭಗವಂತನು ಉತ್ತರ ರೂಪವಾಗಿ ತನ್ನ ಬೇರೆ ಬೇರೆ ನಾಮವನ್ನು ಸೂಚಿಸುತ್ತಾ ತಾನು ಜಾತೃ ಸ್ವರೂಪಿಯಾದುದರಿಂದ " ಯತ್ " ಶಬ್ದ ವಾಚ್ಯವೆಂದು ಸಂದೇಶಿಸಿರುವನು.
" ಬೃಹದಾರಣ್ಯಕೋಪನಿಷತ್ " ನಲ್ಲಿ....
ಭಗವಂತನು ಹೊರಗೆ ಇರುವಂತೆ ಒಳಗೂ ಇರುವ ಪ್ರಯುಕ್ತ ಅವನನ್ನು " ಯತ್ " ಎಂದು...
" .... ತದ್ ಯದೇತದಿದಂ ಮಯಃ "
" ಏತಿ ಗಚ್ಛತಿ ಸರ್ವತ್ರೇತಿ ಯತ್ " ಎಲ್ಲೆಡೆ ಇರುವವನು ಎಂಬರ್ಥದಲ್ಲಿ " ಯತ್ " ಶಬ್ದ ವಾಚ್ಯನಾಗಿರುವನು.
ಹೀಗೆ " ಯತ್ " ಶಬ್ದ ವಾಚನಾದ ಭಗವಂತನ ಪಾದ ಧೂಳಿಯನ್ನು ಧರಿಸಿರುವವರು ಶ್ರೀ ರಾಯರು. ಶ್ರೀ ಹರಿಯ ಪಾದ ಪದುಮಗಳಲ್ಲಿ ದುಂಬಿಯಂತೆ ಆಸಕ್ತರಾದವರು ಶ್ರೀ ರಾಯರು.
ಶ್ರೀ ರಾಯರ ಪಾದವೇ ಗತಿಯು ಸಜ್ಜನರಿಗೆಲ್ಲಾ