ಮಂಗಳವಾರ, ಏಪ್ರಿಲ್ 17, 2018

*ವೈಷ್ಣವಾನಾಂ ಯಥಾ ಶಂಭುಃ*

ತಾರತಮ್ಯದಲ್ಲಿ 5ನೇ ಕಕ್ಷೆಯಲ್ಲಿ ಬರುವ ದೇವನು ರುದ್ರ ದೇವನು. ಎಲ್ಲಾ ವೈಷ್ಣವರು ಅವಶ್ಯವಾಗಿ ಪೂಜಿಸಲೇ ಬೇಕಾದ ವೈಷ್ಣವೋತ್ತಮ ದೇವನೀತನು.
*ವೈಷ್ಣವಾನಾಂ ಯಥಾ ಶಂಭುಃ* 
ಎಂದು ಹೇಳಿದಂತೆ ವೈಷ್ಣವರಲ್ಲಿ ಭಗವಂತನ ವಿಭೂತಿರೂಪವು ರುದ್ರನಲ್ಲಿ ಅತಿಶಯವಾಗಿದೆ.
ಆದ್ದರಿಂದ ರುದ್ರನು ಅತ್ಯಂತ ಪ್ರಸನ್ನನಾಗಿರುವ ಶಿವರಾತ್ರಿಯಂದು ರುದ್ರನ ವಿಶೇಷ ಪೂಜೆಯನ್ನು ನಾವೆಲ್ಲರೂ ಮಾಡಬೇಕು.
ರಾತ್ರಿ ಶಬ್ದವು ಅಜ್ಞಾನಕ್ಕೆ ದ್ಯೋತಕ. ಯಾಕೆಂದರೆ ಕತ್ತಲಿನಲ್ಲಿ ಯಾವುದೇ ವಸ್ತುವಿನ ಜ್ಞಾನ ಬರಲಾರದು.
ಆದ್ದರಿಂದ ಅಜ್ಞಾನವೆಂಬ ಕತ್ತಲನ್ನು ಓಡಿಸಿ ಭಗವಜ್ಜ್ಞಾನವೆಂಬ ಬೆಳಕನ್ನು ನೀಡುವ ದೇವತೆ ಶಿವ.
ಆದ್ದರಿಂದ ಈ ದಿನವು #ಶಿವರಾತ್ರಿ ಎಂದು ಪ್ರಸಿದ್ಧ.
ಭಗವಾನ್ ಶಿವನು ಲಿಂಗರೂಪಿಯಾಗಿ ಉದಿಸಿದ
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ರುದ್ರನು ಲಿಂಗರೂಪಿಯಾಗಿ ಉದಿಸಿದನು ಎಂದರೆ ಏನರ್ಥ?
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
ಆದ್ದರಿಂದ ರುದ್ರನು ಈ ರೂಪದಿಂದ ಉದಿಸಿ ಅಜ್ಞರಿಗೆ   ಮೋಹವನ್ನು ಕೊಟ್ಟು ಮುಮುಕ್ಷುಗಳಿಗೆ ಭಗವಂತನನ್ನು ತೋರಿಸಿ ಕೊಟ್ಟ ದಿನ ಶಿವರಾತ್ರಿ.
ಈ ದಿನ ರುದ್ರನು ವಿಷಪಾನವನ್ನು ಮಾಡಿದ ದಿನವೆಂದೂ ಹೇಳುತ್ತಾರೆ.
ಅಂದು ರುದ್ರನು ವಿಷಪಾನವನ್ನು ಮಾಡಿ ಅದರ ನಂಜು ಏರದಿರಲು ಉಪವಾಸವಿದ್ದು ರಾತ್ರಿ ಎಲ್ಲಾ ಜಾಗರಣೆ ಮಾಡಿದನು.
ಆದ್ದರಿಂದ ಎಲ್ಲಾ ಭಕ್ತರು ಅಂದು ಉಪವಾಸ ಇದ್ದು ಜಾಗರಣೆ ಮಾಡಬೇಕು ಎಂದು ಹೇಳುತ್ತಾರೆ.
ರುದ್ರನು ಸ್ವತಃ ಎಲ್ಲರ ನಂಜನ್ನು ಪರಿಹರಿಸುವವನಾದ್ದರಿಂದ ಅವನಿಗೆ ನಂಜು ಏರಲು ಸಾಧ್ಯವಿಲ್ಲ. ಅಲ್ಲದೆ ಪದ್ಮಪುರಾಣದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ಎಲ್ಲಾ ದೇವತೆಗಳೂ ಹಾಲಾಹಲವಿಷ ಬಂದಾಗ ಅದರ ಉರಿ ತಾಳಲಾರದೆ ಓಡಲು ಶುರುಮಾಡುತ್ತಾರೆ.
ಆಗ ರುದ್ರ ದೇವರು ದೇವತೆಗಳಿಗೆ ಹೀಗೆ ಹೇಳುತ್ತಾರೆ.
*ಅಹಮಾಹಾರಯಿಷ್ಯಾಮಿ ಕಾಲಕೂಟಂ
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಎಂದು ನಾನು ಈ ವಿಷವನ್ನು ಪಾನಮಾಡುತ್ತೇನೆ.
ನನಗೆ ಈ ವಿಷವು ಏನೂ ಮಾಡಲಾರದು.
ಯಾಕೆಂದರೆ ನಾನು ಹೃದಯದಲ್ಲಿ ನಾರಾಯಣನನ್ನು ಧ್ಯಾನ ಮಾಡುತ್ತಾ *ಅಚ್ಯುತಾನಂತಗೋವಿಂದ* ಎಂಬ ನಾಮತ್ರಯ ಮಂತ್ರವನ್ನು ಉಚ್ಚರಿಸುತ್ತಾ ಈ ವಿಷವನ್ನು ಪಾನಮಾಡುತ್ತೇನೆ.
ಆದ್ದರಿಂದ ನನಗೆ ಈ ವಿಷವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
*ಧ್ಯಾತ್ವಾ ನಾರಾಯಣಂ ದೇವಂ ಹೃದಯೇ ಗರುಡಧ್ವಜಂ।ಉದಯಾದಿತ್ಯಸಂಕಾಶಂ ಶಂಖಚಕ್ರಗದಾಧರಮ್॥ಏಕಾಗ್ರಮನಸಾ ಧ್ಯಾತ್ವಾ ಸರ್ವದುಃಖಹರಂ ಪ್ರಭುಮ್।ನಾಮತ್ರಯಂ ಮಹಾಮಂತ್ರಂ ಜಪನ್ ಭಕ್ತ್ಯಾ ಸಮನ್ವಿತಃ॥ತದ್ವಿಷಂ ಪೀತವಾನ್ ಘೋರಂ ಆದ್ಯಂ ಸರ್ವಭಯಂಕರಮ್।ನಾಮತ್ರಯಪ್ರಭಾವಾಚ್ಚ ವಿಷ್ಣೋಃ ಸರ್ವಗತಸ್ಯ ವೈ।ವಿಷಂ ತದಭವಚ್ಚೀರ್ಣಂ ಲೋಕಸಂಹಾರಕಾರಕಂ ॥*
ಎಂದು. ಹೀಗೆ ರುದ್ರ ದೇವರು ತಮ್ಮ ವಿಷದ ನಂಜು ಪರಿಹಾರವಾಗಲು ರಾತ್ರಿಯಿಡೀ ಜಾಗರಣೆ ಮಾಡಿ ನಾಮತ್ರಯ ಮಂತ್ರವನ್ನು ಜಪ ಮಾಡಿದರು.
ಅದರಿಂದ ತಮ್ಮ ಸಕಲ ವಿಪಪಾನದ ತೊಂದರೆಯನ್ನು ಪರಿಹರಿಸಿಕೊಂಡರು.
ಇದನ್ನು ಅವರೇ ಪಾರ್ವತೀ ದೇವಿಯಲ್ಲಿ ಹೇಳಿಕೊಂಡಿದ್ದಾರೆ.
*ಅಚ್ಯುತಾನಂತಗೋವಿಂದ ಇತಿ ನಾಮತ್ರಯಂ ಹರೇಃ।ಯೋ ಜಪೇತ್ ಪ್ರಯತೋ ಭಕ್ತ್ಯಾ ಪ್ರಣವಾದ್ಯಂ ನಮೋಂತಕಮ್॥ತಸ್ಯಮೃತ್ಯು ಭಯಂ ನಾಸ್ತಿ ವಿಷರೋಗಾಗ್ನಿಗಂ ಮಹತ್॥ನಾಮತ್ರಯಂ ಮಹಾಮಂತ್ರಂ ಜಪೇದ್ಯಃಪ್ರಯತಾತ್ಮವಾನ್।ಕಾಲಮೃತ್ಯುಭಯಂ ಚಾಪಿ ತಸ್ಯ ನಾಸ್ತಿ ಕಿಮನ್ಯತಃ॥ಇತಿ ನಾಮತ್ರಯೇಣೈವ ಪೀತಂ ದೇವಿ ಮಯಾ ವಿಷಮ್॥*
ಎಂದು. ಆದ್ದರಿಂದ ಶಿವರಾತ್ರಿಯಂದು ಮಹಾಪ್ರದೋಷಸಮಯವಾಗಿರುವುದರಿಂದ ಅಂದು ಶಿವನ ಅನುಗ್ರಹಕ್ಕಾಗಿ ರುದ್ರ ಪಾರಾಯಣ, ಶಿವಸ್ತುತಿ ಪಾರಾಯಣ ಮಾಡುವುದರ ಜೊತೆಗೆ ವಿಶೇಷವಾಗಿ ನಾಮತ್ರಯ ಮಂತ್ರದ ಜಪವನ್ನೂ ಮಾಡಬೇಕು.
ಪ್ರತಿನಿತ್ಯ ರುದ್ರನು ಪ್ರದೋಷಸಮಯವಾದ ಮುಸ್ಸಂಜೆಯಂದು ತನ್ನ ಗಣಗಳೊಂದಿಗೆ ಸ್ಮಶಾನದಿಂದ ಹೊರಗೆ ಬಂದು ಎಲ್ಲಾ ಭಕ್ತರ ಸಂಕಟವನ್ನು ಪರಿಹರಿಸಿದರೆ ಶಿವರಾತ್ರಿಯೆಂಬ ಮಹಾಪ್ರದೋಷದಂದು ವಿಶೇಷವಾಗಿ ನಮ್ಮ ಸಂಕಟಪರಿಹರಿಸಿ ಅನುಗ್ರಹಿಸುವನು

ಭಸ್ಮದ ಅರ್ಥ ಮತ್ತು ಮಹತ್ವ:

 ಭಸ್ಮದ ಅರ್ಥ ಮತ್ತು ಮಹತ್ವ: ಭಸ್ಮ ಶಬ್ದದಲ್ಲಿನ ‘ಭ’ ಎಂದರೆ ‘ಭರ್ತ್ಸನಮ್’ ಅಂದರೆ ‘ನಾಶವಾಗಲಿ.’ ಭಸ್ಮ ಶಬ್ದದಲ್ಲಿನ ‘ಸ್ಮ’ ಎಂದರೆ ಸ್ಮರಣೆ. ಭಸ್ಮದಿಂದ ಪಾಪವು ನಾಶವಾಗಿ ಈಶ್ವರನ ಸ್ಮರಣೆಯಾಗುತ್ತದೆ.
ಭಸ್ಮದ ಸಮಾನಾರ್ಥಕ ಶಬ್ದ: ವಿಭೂತಿ, ರಕ್ಷೆ, ಬೂದಿ.
ಭಸ್ಮದ ಬೋಧನೆ
೧. ಮನುಷ್ಯನು ತನ್ನ ಆಹುತಿಯನ್ನು ನೀಡಿ ಭಸ್ಮವಾಗಬೇಕು, ಅಂದರೆ ತನ್ನ ಇಚ್ಛೆ - ಆಕಾಂಕ್ಷೆ, ದೋಷ, ಅಜ್ಞಾನ ಮತ್ತು ಅಹಂಗಳನ್ನು ತ್ಯಾಗ ಮಾಡಿ ಮನಸ್ಸಿನ ಶುದ್ಧತೆಯನ್ನು ಪಡೆದುಕೊಳ್ಳಬೇಕು.
೨. ಮಾನವೀ ದೇಹವು ನಶ್ವರವಾಗಿರುವುದರಿಂದ ಮರಣದ ನಂತರ ಈ ದೇಹವು ಸುಟ್ಟು ಬೂದಿಯಾಗುತ್ತದೆ. ಆದುದರಿಂದ ಯಾರೂ ದೇಹಾಸಕ್ತಿಯನ್ನು ಇಟ್ಟುಕೊಳ್ಳಬಾರದು. ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.
೩. ಭಸ್ಮವು ವೈರಾಗ್ಯವನ್ನು ಕಲಿಸುತ್ತದೆ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ ಆದರೆ ನೀವುಗಳು ಮರೆತಿದ್ದೀರಿ ಅನಿಸುತ್ತೆ!!
1.
ಕಾಮಪಿಶಾಚಿ *ಅಲ್ಲಾವುದ್ದಿನ್ ಖಿಲ್ಜಿ* ಎಂಬ ರಾಕ್ಷಸನ ಕಾರಣ ತಮ್ಮ ಶೀಲ ಕಾಪಾಡಿಕೊಳ್ಳಲು *14,000 ಹಿಂದೂ ಹೆಣ್ಣುಮಕ್ಕಳು* ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡದ್ದು ನಾನು ಮರೆತಿಲ್ಲ
2. ಇಸ್ಲಾಂ ಸ್ವೀಕರಿಸಲಿಲ್ಲ ಅನ್ನೋ ಕಾರಣಕ್ಕೆ ಶಿವಾಜಿ ಮಹಾರಾಜರ ಮಗ *ಸಂಭಾಜೀ ಮಹಾರಾಜ*ರನ್ನ ನಾಲಿಗೆ ಕತ್ತರಿಸಿ, ಕಾದ ಕಬ್ಬಿಣ ಸಲಾಕೆಯಿಂದ ಕಣ್ಣು ಕೀಳಿಸಿದ ದರಿದ್ರ
*ಔರಂಗಜೇಬ*ನನ್ನ ನಾ ಮರೆತಿಲ್ಲ
3. ಒಂದೇ ದಿನದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನ ಕೊಂದ ಕ್ರೂರ *ಟಿಪ್ಪು ಸುಲ್ತಾನ್* ಎಂಬ 'ಮೈಸೂರು ಹುಲಿಯಲ್ಲ *ಮೈಸೂರು ಇಲಿ*ಯನ್ನ ನಾ ಮರೆತಿಲ್ಲ
4. 14 ವರ್ಷದ ಬ್ರಾಹ್ಮಣ ಬಾಲಕಿಯನ್ನ ತನ್ನ ಮಹಲಿನಲ್ಲಿ ಬಲವಂತವಾಗಿ ಬಲಾತ್ಕಾರ ಮಾಡಿದ ಆ *ಶಹಜಹಾನ್*ನ್ನ ನಾ ಮರೆತಿಲ್ಲ
5. ಬರ್ಬರವಾಗಿ *ಶ್ರೀರಾಮನ ಮಂದಿರ*ವನ್ನು ಆಯೋಧ್ಯೆಯಲ್ಲಿ ಕೆಡವಿ ಮಸೀದಿ ನಿರ್ಮಿಸಿದ ಆ *ಬಾಬರ್*ನ್ನ ನಾ ಮರೆತಿಲ್ಲ
6. ಜ್ವಾಲಾಮುಖಿ ಮಂದಿರದಲ್ಲಿನ *ದುರ್ಗಾಮಾತೆ*ಯ ಮೂರ್ತಿ ಭಗ್ನಗೊಳಿಸಿ ದೇವಸ್ಥಾನದಲ್ಲೇ ಗೋವನ್ನ ಕತ್ತರಿಸಿ ಅದನ್ನ ಕಟುಕರಿಗೆ ಕೊಟ್ಟ ಹರಾಮಿ *ಸಿಕಂದರ್ ಲೋದಿ*ಯನ್ನ ನಾ ಮರೆತಿಲ್ಲ
7. ಇಡೀ ಪ್ರಪಂಚದಲ್ಲೇ ವೈಭವಯುತವಾದ ಸಾಮ್ರಾಜ್ಯ ಎಂದು ಕರೆಸಿಕೊಳ್ಳುತ್ತ ಬೀದಿ ಬೀದಿಗಳಲ್ಲಿ ಮುತ್ತು ರತ್ನ ಮಾರಾಟ ಮಾಡುತ್ತಿದ್ದಂತಹ *ವಿಜಯನಗರ ಸಾಮ್ರಾಜ್ಯ*ವನ್ನು ಮೋಸದಿಂದ ಬೆಂಕಿ ಹಚ್ಚಿ ವೈಭವಯುತ ಹಂಪಿಯನ್ನ ಹಾಳು ಹಂಪೆ ಮಾಡಿದ *ಬಿಜಾಪುರದ ಸುಲ್ತಾನ*ನ್ನ ನಾ ಮರೆತಿಲ್ಲ
8.  ಸೂಫಿ ಅಂತ ಹೇಳಿಕೊಂಡು ಪ್ರಥ್ವಿರಾಜನ ಪಿತೋರಗಢ್ ಸೇರಿಕೊಂಡು ಮೋಸದಿಂದ *ಪ್ರಥ್ವಿರಾಜ*ನನ್ನ ಸೋಲಿಸಿ ನಂತರ ಆತನ ಪತ್ನಿ *ಸಂಯೋಗಿತಾ*ಳನ್ನ ತನ್ನ ಸೈನಿಕರೆದುರು ನಗ್ನಗೊಳಿಸಿ ರೇಪ್ ಮಾಡಿ ಕೊಂದ ಕ್ರೂರಿ, ಕಾಮಿ *ಮೋಯಿನುದ್ದಿನ್ ಚಿಶ್ತಿ*ಯ ಕ್ರೌರ್ಯ ನಾ ಮರೆತಿಲ್ಲ
9. ಗುರುಗೋವಿಂದ ಸಿಂಗರ 7 ವರ್ಷದ ಹಾಗು 5 ವರ್ಷದ ಚಿಕ್ಕ ಮಕ್ಕಳಾದ *ಫತೆಹ್ ಸಿಂಗ್, ಜೋರಾವರ್ ಸಿಂಗ್* ರನ್ನ ಗೋಡೆ ಕಟ್ಟಿ ಜೀವಂತ ಸಮಾಧಿ ಮಾಡಿದ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
10. ಕಾದ ಕಬ್ಬಿಣದಿಂದ ಮೈ ಸುಟ್ಟು ದೇಹದ ಮಾಂಸ ಖಂಡ ಕಾಣೋ ಹಾಗೆ ಸುಟ್ಟರೂ ಇಸ್ಲಾಂ ಒಪ್ಪದಿದ್ದ *ಬಂದಾ ಬೈರಾಗಿ*ಯನ್ನ ಚಿತ್ರಹಿಂಸೆ ಕೊಟ್ಟ ಜಿಹಾದಿ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
11. ಕಾದ ಕಬ್ಬಿಣದಿಂದ ಮೈ ಚರ್ಮ ಸುಲಿದು ಸಂಭಾಜಿಮಹಾರಾಜರನ್ನ ಜೀವಂತವಾಗಿ ಬೆಂಕಿಗೆ ದೂಡಿದ *ಔರಂಗಜೇಬ*ನನ್ನ ನಾ ಮರೆತಿಲ್ಲ
12. 72 ವರ್ಷದ ವೃದ್ಧ *ಹೇಮು*ವಿನ ತಂದೆ ಇಸ್ಲಾಂ ಒಪ್ಪಿಕೊಳ್ಳದ ಕಾರಣ ಆತನ ತಲೆಯನ್ನ ನಿರ್ದಯವಾಗಿ ಕಡಿದು ಹಾಕಿದ ಬೇವರ್ಸಿ *ಅಕ್ಬರ್*ನ್ನ ನಾ ಮರೆತಿಲ್ಲ
13. *ಧರ್ಮವೀರ ಮತಿದಾಸ್ ಭಾಯಿ*ಯನ್ನ ಇಸ್ಲಾಂ ಒಪ್ಪಿಕೊಳ್ಳದ ಕಾರಣ ನಡು ಬೀದಿಯಲ್ಲಿ ನಿಲ್ಲಿಸಿ ಕೊಂದ ಜಿಹಾದಿ *ಔರಂಗಜೇಬ*ನ ಕುಕೃತ್ಯ ನಾ ಮರೆತಿಲ್ಲ
14. ಸ್ವರ್ಗದಂತಿದ್ದ  ಕಾಶ್ಮೀರವನ್ನ ಇಸ್ಲಾಮೀಕರಣ ಮಾಡಿದ *ಸೂಫಿ ಸೈಯ್ಯದ್ ಶರಾಫುದ್ದಿನ್ ಬುಲ್ಬುಲ್*ನ ಕುತಂತ್ರವನ್ನ ನಾ ಮರೆತಿಲ್ಲ.
15. ಅಧಿಕಾರದ ಆಸೆಗಾಗಿ ಧರ್ಮಾಧಾರಿತ ಆಧಾರದ ಮೇಲೆ ದೇಶವನ್ನ ವಿಭಜಿಸಿ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾದ *ಮೊಹಮ್ಮದ್ ಅಲಿ ಜಿನ್ನಾ*ನನ್ನ ನಾ ಮರೆತಿಲ್ಲ
16. ತನ್ನ ಒಣಪ್ರತಿಷ್ಟೆಗಾಗಿ, ಅಧಿಕಾರದ ಆಸೆಗಾಗಿ ದೇಶವನ್ನೇ ಅಡಕ್ಕಿಟ್ಟು ಚೀನಾದ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಆ *ನೆಹರೂ*ವನ್ನ ನಾ ಮರೆತಿಲ್ಲ
17. ರೋಮ್, ಇಟಲಿಯಿಂದ ಅರಬೋಗಟ್ಟಲೆ ದುಡ್ಡು ತರಿಸಿಕೊಂಡು ಇಲ್ಲಿನ ಹಿಂದುಗಳನ್ನ ಕ್ರಿಶ್ಚಿಯನ್ನರಾಗಿ ಮತಾಂತರಿಸೋಕೆ 10 ವರ್ಷಗಳ ಕಾಲ ಅಧಿಕಾರ ತನ್ನ ಕೈಲಿಟ್ಟುಕೊಂಡಿದ್ದವಳ ಬಗ್ಗೆ ನಾ ಮರೆತಿಲ್ಲ
18. *ಹಿಂದೂ ಕೋಡ್ ಬಿಲ್* ಜಾರಿಗೊಳಿಸಿ ಹಿಂದುಗಳ ನಾಗರಿಕ ಹಕ್ಕುಗಳನ್ನು ಕಸಿದು ಮುಸಲ್ಮಾನರನ್ನ ಎತ್ತಿಹಿಡಿಯಲು ಪ್ರಯತ್ನಿಸಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
19. ಹಿಂದುಗಳ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿರುವ ರಾಮಾಯಣ ಕಾಲದಿಂದ ಈಗಲೂ ಪ್ರಸ್ತುತವಿರುವ ರಾಮಸೇತುವನ್ನ ಒಡೆದು ಹಾಕ್ತೇವೆ ಅಂತ ಕಮಿಟಿ ರಚನೆ ಮಾಡಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
20. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಹಿಷ್ಣುಗಳಾಗಿ ಬೇಡಿ ಬಂದವರಿಗೆ ಆಶ್ರಯ ನೀಡಿದ ಹಿಂದೂಗಳನ್ನ *ಕೇಸರಿ ಭಯೋತ್ಪಾದಕರು* ಅಂತ ಕಾಂಗ್ರೆಸ್ ಕರೆದದ್ದನ್ನ ನಾ ಮರೆತಿಲ್ಲ
21. ರಾಮ, ಸೀತೆ, ರಾಮಾಯಣ, ಮಹಾಭಾರತ ಇವೆಲ್ಲ ಕಟ್ಟುಕಥೆಗಳಂತ ಹಿಂದೂ ಧರ್ಮವನ್ನ ಲೇವಡಿ ಮಾಡಿದ್ದ ಕಾಂಗ್ರೆಸ್'ನ್ನ ನಸ ಮರೆತಿಲ್ಲ
22. ರಾಮ ಷಂಡ ಅಂತ ಹೇಳಿಕೆ ಕೊಟ್ಟರೂ ಆತನನ್ನ ಬಂಧಿಸದೆ, ಭಯೋತ್ಪಾದಕ ಚಟುವಟಿಕೆ ನಡೆಸುವ PFI, KFD ಕೊಲೆಗಡುಕರ ಮೇಲಿದ್ದ 150 ಕೇಸ್ಗಳನ್ನ ವಜಾ ಮಾಡಿ ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಕಾರಣವಾದ *ಸಿದ್ದರಾಮಯ್ಯ*ನನ್ನ ನಾ ಮರೆತಿಲ್ಲ
23. ಹಿಂದುಗಳು ಪೂಜಿಸುವ ಗೋಮಾತೆಯನ್ನ ನಡು ಬೀದಿಯಲ್ಲಿ ಕತ್ತರಿಸಿ ತಿಂದ *ಕೇರಳದ ಕಾಂಗ್ರೆಸ್ ಕಾರ್ಯಕರ್ತರ* ಆ ಹೇಸಿಗೆಯ ಕೆಲಸವನ್ನ ನಾ ಮರೆತಿಲ್ಲ
24. 'ಇಸ್ಲಾಮಿಕ್ ಇತಿಹಾಸ'ದ ವಿಷಯದ ಮೇಲೆ ಪೋಸ್ಟ್ ಗ್ರ್ಯಾಜ್ಯೂಯೇಷನ್ ಮಾಡಿಕೊಂಡು, ವೋಟಬ್ಯಾಂಕಿಗಾಗಿ ಬಾಂಗ್ಲಾದೇಶದ ಮುಸಲ್ಮಾನರನ್ನ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಅವರಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ತನ್ನ ರಾಜ್ಯದಲ್ಲಿನ ಹಿಂದುಗಳ ಮೇಲೆ ದಾಳಿ ಮಾಡಿಸುತ್ತಿರೋ *ಮಮತಾ ಬ್ಯಾನರ್ಜಿ*ಯನ್ನ ನಾ ಮರೆತಿಲ್ಲ
25. ದೇವರನಾಡಾಗಿದ್ದ ಕೇರಳವನ್ನ ಐಸಿಸ್ ಉಗ್ರರ ಸ್ವರ್ಗವಾಗಿ ಬದಲಿಸಿದ, ಹಿಂದುಗಳನ್ನ ಕಂಡ ಕಂಡಲ್ಲಿ ಕತ್ತರಿಸಿ ಹಾಕುವಂತೆ ಮಾಡುತ್ತಿರೋ ಕೇರಳದ *ಪಿಣರಾಯಿ ವಿಜಯನ್*ನ್ನ ನಾ ಮರೆತಿಲ್ಲ
ಬರೆಯುತ್ತಾ ಹೋದರೆ ಇನ್ನೂ ಸಾವಿರಾರು ಘಟನೆಗಳಿವೆ, ಇವುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವವರು ಯಾರಿದ್ದಾರೆ ಈ ದೇಶದಲ್ಲಿ? ಹಿಂದುಗಳ ಹಿತ ಕಾಪಾಡುವವರು ಯಾರಿದ್ದಾರೆ ಈ ದೇಶದಲ್ಲಿ? *ನರೇಂದ್ರ ಮೋದಿ*ಯೆಂಬ *ಹಿಂದೂ ರಾಷ್ಟ್ರವಾದಿ* ಈ ದೇಶಕ್ಕೆ ಹಿಂದುತ್ವ ಉಳಿಸುವ ರಾಜನಾಗಿ 900 ವರ್ಷಗಳ ನಂತರ ದೆಹಲಿಯ ಗದ್ದುಗೆ ಮೇಲೆ ಕೂತಿದ್ದಾನೆ.
65 ವರ್ಷಗಳ ಕಾಲ ದೇಶವನ್ನ ಒಂದು ಕುಟುಂಬಕ್ಕೆ ಭ್ರಷ್ಟಾಚಾರ ಮಾಡಲು ಲೀಸ್ ಮೇಲೆ ಕೊಟ್ಟು ಸುಮ್ಮನಿದ್ದ ಜನಗಳು ಇಂದು ಮೋದಿಯನ್ನ ದೂಷಿಸುತ್ತಿರೋದನ್ನ ನೋಡಿದರೆ ನಗು ಬರುತ್ತೆ ಅಷ್ಟೇ ಕೋಪವೂ ಬರುತ್ತೆ
ಸತತ 900 ವರ್ಷಗಳ ದೌರ್ಜನ್ಯದ ನಂತರ ಭಾರತಕ್ಕೆ ಆಶಾಕಿರಣವಾಗಿ ಹಿಂದೂ ರಾಜನೊಬ್ಬ ಸಿಕ್ಕಿದ್ದಾನೆ. ಆತನಿಗೆ ಕೆಲಸ ಮಾಡೋಕೆ ಸ್ವಲ್ಪ ಸಮಯ ಕೊಡಿ, ಇಲ್ಲವಾದರೆ ಇತಿಹಾಸ ಮರುಕಳಿಸುತ್ತೆ ನಾವೆಲ್ಲ ಒಂದೋ ಸಾಯಬೇಕು ಇಲ್ಲವಾದರೆ ಮತಾಂತರವಾಗಬೇಕು!

*ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*

 *ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*
* ಮಠಕ್ಕೆ ಬರುವಾಗ- ಹೋಗುವಾಗ ಬರಿಗೈಯಿಲ್ಲ. ಬರುವಾಗ ಫಲವಸ್ತುವನ್ನು ತರುವುದು, ಮಠದಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು
ಮಂತ್ರಾಕ್ಷತೆ ಸಿಗದೇ ಮಠಕ್ಕೆ ಬಂದ ಕಾರ್ಯ ಪೂರ್ಣವಾಗುವುದಿಲ್ಲ.
*ಮಂತ್ರಾಕ್ಷತೆ ನಮ್ಮನ್ನು ರಕ್ಷಿಸುತ್ತದೆ*
ಮಂತ್ರಾಕ್ಷತೆ - ಮಂತ್ರ ಮತ್ತು ಅಕ್ಷತ ಎಂಬ ಎರಡು ಪದಗಳು.
ಅಕ್ಷತ ಅಂದ್ರೆ ಅಖಂಡ, ತುಂಡು ಇಲ್ಲದಂತದ್ದು, ಪೂರ್ಣದ ಸಂ
ಮನುಷ್ಯನಿಗೆ ಜೀವನದಲ್ಲಿ ಪೂರ್ಣತೆ ಬೇಕು, ಆರೋಗ್ಯ, ರೂಪ, ಆಯುಷ್ಯ ಬೇಕು.. ಆಗಲೇ ಪೂರ್ಣ. ಅಕ್ಷತೆ ಅಂದ್ರೆ ಅದು.
; ಅಕ್ಷತೆ ನಮ್ಮ ಜೀವನದಲ್ಲಿ ಪೂರ್ಣತೆಯನ್ನು ಒದಗಿಸುತ್ತದೆ.
ಕ್ಷತ ಅಂದ್ರೆ ಘಾತ, ಪೆಟ್ಟು, ಆಘಾತ.. ಇವೆಲ್ಲ ಜೀವನದಲ್ಲಿ ಬಂದಾಗ ಅಕ್ಷತೆ ನಮ್ಮನ್ನು ರಕ್ಷಿಸುತ್ತದೆ.
ಮಂತ್ರ ಶಬ್ದಕ್ಕೆ ಅರ್ಥ ಯಾವುದನ್ನು ಮನನ ಮಾಡುವುದರಿಂದ ನಮ್ಮನ್ನು ರಕ್ಷಿಸುತ್ತದೋ ಅದು ಮಂತ್ರ.
; ಗುರುವಿನ ಮನಸ್ಸಿನಲ್ಲಿ ಶಿಷ್ಯನ ಕ್ಷೇಮಕ್ಕಾಗಿ, ಶ್ರೇಯಸ್ಸಿಗಾಗಿ ಮನನ ಮಾಡಿ ಅನುಗ್ರಹಿಸುವುದು. 
**ನಮ್ಮಲ್ಲಿ ಭಾವ ಎಷ್ಟಿದೆಯೋ ಅಷ್ಟು ಫಲವನ್ನು ಮಂತ್ರಾಕ್ಷತೆ ಕೊಡುತ್ತದೆ*
* ಗುರು ಶಿಷ್ಯನ ಉನ್ನತಿಗಾಗಿ ಭಾವಿಸಿ ಕೊಡಬೇಕು, ಹಾಗೆಯೇ ಶಿಷ್ಯ ತನ್ನ ಶ್ರೇಯಸ್ಸಿಗೆ ಬೇಕು ಎಂದು ಭಾವಿಸಿ ಪಡೆಯಬೇಕು
ಮಂತ್ರಾಕ್ಷತೆಯನ್ನು ನೆಚ್ಚಿದವರಿಗೆ ಸೋಲಿಲ್ಲ*
ಮಂತ್ರಾಕ್ಷತೆ ಗುರುಪ್ರೀತಿಯ ಪ್ರತೀಕ, *ಜೊತೆಗಿರುವ ಗುರು*
*ಚರುವನ್ನು ದೇವರಿಗೆ ಅರ್ಪಿಸುತ್ತೇವೆ, ಮಂತ್ರಾಕ್ಷತೆ ನಮ್ಮೊಳಗಿನ ದೇವನಿಗೆ ಅರ್ಪಿಸೋಣ.
ಬದುಕಿನ ಅವಿಭಾಜ್ಯ ಅಂಗವಾಗಲಿ ಮಂತ್ರಾಕ್ಷತೆ, ಭಾವ ಇರಲಿ, ಭಕ್ತಿ ಇರಲಿ.
ಜೀವನದಲ್ಲಿ ಎರಡೇ ಔಷಧಿಗಳು. ಒಂದು ಮಂತ್ರಾಕ್ಷತೆ, ಅದರ ಜೊತೆ ಭಾವ.
*ಬದುಕಿನ ಎಲ್ಲ ಕ್ಲೇಶಗಳನ್ನು, ಪ್ರಶ್ನೆಗಳನ್ನು ಉತ್ತರಿಸುತ್ತದೆ, ಭವಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ*
*ಮಂತ್ರಾಕ್ಷತೆ ಎಂದಿಗೂ ನಿಮ್ಮ ತಲೆಯ ಮೇಲೆ ಇರಲಿ
ಎಲ್ಲರಿಗೂ ಒಳಿತಾಗಲಿ

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?
ಪ್ರತಿಯೊಂದು ಧರ್ಮವೂ ಮನುಷ್ಯನಲ್ಲಿ ಒಂದು ಸಂಸ್ಕಾರವನ್ನು, ಒಂದು ಅರಿವನ್ನು ಮೂಡಿಸುತ್ತದೆ. ಆ ಸಂಸ್ಕಾರವಾದರೋ ನಮ್ಮ ನಿತ್ಯದ ಬದುಕಿಗೆ ದಾರಿದೀಪ. ಬೆಳಕಿನ ದಾರಿಗೆ ಸೂರ್ಯನಂತೆಯೇ ಬದುಕಿನ ದಾರಿಗೆ ಧರ್ಮ ಬೆಳಕಾಗುತ್ತದೆ. ನನ್ನದು ಸನಾತನ ಧರ್ಮ. ಜೀವ-ಜಡದಂಗಳದಲ್ಲಿರುವ ನಂಟನ್ನು ಹೊಸೆದು ಬೆಸೆದು ಸುಂದರ ತತ್ವವೊಂದನ್ನು ಕಟ್ಟಿಕೊಟ್ಟ ಧರ್ಮ. ವೇದವ್ಯಾಸರು, ಸನಕಾದಿ ಮುನಿಗಳು, ದೂರ್ವಾಸರು, ಅತ್ರಿ, ಅಗಸ್ತ್ಯರು, ವಸಿಷ್ಟ, ವಿಶ್ವಾಮಿತ್ರರು, ಜನಕ ಮಹಾರಾಜರು ಪ್ರೀತಿಸಿದ ಧರ್ಮವನ್ನು ರಮಣರು, ರಾಮಕೃಷ್ಣರು, ವಿವೇಕಾನಂದರು ಪೋಷಿಸಿದರು. ಇಲ್ಲಿನ ಬಗೆ ಆಚರಣೆ ಸರಳ ಸುಂದರ.
ದಿನ ನಿತ್ಯ ಮುಂಜಾವಿಗೆ ಕಣ್ತೆರೆದಾಗ ದೇವರ ದರ್ಶನವನ್ನು ಮಾಡಬೇಕು. 'ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ' ಎನ್ನುವ ಮಾತಿದೆ. ದರ್ಶನಕ್ಕೆ ನಿತ್ಯ ತಿರುಪತಿಯನ್ನು ತಲುಪಲು ಕಷ್ಟ ಸಾಧ್ಯವಲ್ಲವೇ?
"ಕರಾಗ್ರೆ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ|
ಕರಮೂಲೇ ತು ಗೋವಿಂದ ಪ್ರಭಾತೆ ಕರ ದರ್ಶನಂ||"
ಭಗವಂತ ಇಲ್ಲಿಯೇ ನನ್ನೊಟ್ಟಿಗೇ ಇದ್ದಾನೆ ಎನ್ನುವ ಧೈರ್ಯವನ್ನು ನಿತ್ಯ ಎದ್ದೇಳುವಾಗ ನನ್ನ ಧರ್ಮ ತುಂಬಿಕೊಡುತ್ತದೆ.
ಬ್ರಹ್ಮಾಂಡದಲ್ಲಿ ಜೀವ ಕೋಟಿ ಸಂಕುಲಗಳನ್ನು ಭಗವಂತ ಭೂಮಿಯಲ್ಲಿ ಸೃಷ್ಟಿಸಿದ. ಅದನ್ನು ಅವನೇ ಪಾಲಿಸುವ ಹೊಣೆಹೊತ್ತನು. ಭಗವಂತ ತಂದೆಯಾದ ಮೇಲೆ ಧರಿತ್ರಿ ನಮ್ಮ ತಾಯಿಯಲ್ಲವೇ? ಅರೆ! ಈ ಭೂಮಿಯನ್ನು ನಾವು ತುಳಿಯುತ್ತೇವೆ, ಅಗೆದು ಬಗೆಯುತ್ತೇವೆ. ವಿಧಿಯಿಲ್ಲವೇ. ಆದರೆ ಸ್ಪರ್ಶಿಸುವ ಮುನ್ನ ಒಮ್ಮೆ ಅವಳಲ್ಲಿ ಶರಣಾಗಬಹುದಲ್ಲವೇ?
"ಸಮುದ್ರವಸನೆ ದೇವಿ ಪರ್ವತ ಸ್ತನ ಮಂಡಲೆ,
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ"
ಈ ಶ್ಲೋಕವನ್ನು ಹೇಳುವಾಗ ಅವಳಲ್ಲಿನ ವಾತ್ಸಲ್ಯ ನೂರ್ಮಡಿಯಾಗುತ್ತದೆ.
ಅಂತರಂಗ ಶುದ್ಧಿ ಮಾನವನ ಜೀವನದ ಪ್ರಮುಖ ಸಾಧನ. ಅಂತೆಯೇ ಬಹಿರಂಗ ಶುದ್ಧಿಯೂ ಕೂಡ. 'ಗಂಗಾಪಾನ ತುಂಗಾಪಾನ' ಎನ್ನುವ ಮಾತಿದೆ. ಹಾಗಾದರೆ ನಿತ್ಯ ಗಂಗೆಯನ್ನು ಹುಡುಕಿ ಮಿಂದು ಬರುವುದೇ?
"ಗಂಗೇಚ ಯಮುನೇಚ ಗೋದಾವರಿ ಸರಸ್ವತಿ,
ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು."
ಬಾತ್ ರೂಮಿನ ಶವರ್ ನ ಅಡಿಯಲ್ಲಿ ನಿಂತರೂ ಈ ಶ್ಲೋಕದಿಂದ ಸರ್ವರೋಗಗಳನ್ನು ಕಳೆಯುವ ಪಾಪವಿನಾಶಿನಿಯಾದ ಗಂಗಾ-ಕಾವೇರಿಯರ ಕರುಣೆಯನ್ನು ಬೇಡಬಹುದು.
ಒಂದಷ್ಟು ಹೊತ್ತು ದೇವರ ಸ್ಮರಣೆ ಕಣ್ಮುಚ್ಚಿ ತದೇಕಚಿತ್ತದಿಂದ "ಕೃಷ್ಣ, ರಾಮ" ಎಂದರೆ ಸಾಕಲ್ಲವೆ. "ಕರ್ಷತಿ ಇತಿ ಕೃಷ್ಣಃ", " ರಮಂತೇ ಇತಿ ರಾಮಃ"‌ ಭಗವಂತ ನಮ್ಮೊಳಗಿನ ನಕಾರಾತ್ಮಕ ತರಂಗಗಳನ್ನು ಕರ್ಷಿಸಿ ಅವನ ಕರುಣೆಯಿಂದ ಸಕಾರಾತ್ಮಕ ಶಕ್ತಿಯನ್ನು ತುಂಬುವುದಿಲ್ಲವೆ.
ಬಹಿರಂಗ ಶುದ್ಧಿಯಾಯಿತು ಅಂತರಂಗ ಶುದ್ಧಿ?
"ಅಪವಿತ್ರಃ ಪವಿತ್ರೋವ ಸರ್ವಾವಸ್ಥಂ ಗತೋಪಿವ
ಯಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಬ್ಯಂತರಂ ಶುಚಿಃ". 
ರಾತ್ರಿ ಮಲಗುತ್ತೇವೆ. ಕತ್ತಲಿನದ್ದು ತಮೋಗುಣ. ಇರುಳಿನಲ್ಲಿ ಸೂರ್ಯನಾರಾಯಣನ ಪ್ರಭೆ ಇರುವುದಿಲ್ಲ. ವಿಜ್ಞಾನದ ದೃಷ್ಟಿ ಹರಿಸಿ ಕಾಣುವುದಾದರೆ, ಸಕಲ ಜೀವರಾಶಿಗಳ ಆಧಾರಸ್ಥಾಯಿಯಾಗಿ ಸೂರ್ಯನಿದ್ದಾನೆ. ಅವನ ಕಿರಣಗಳು ಸೋಕದ ಹೊರತು ಪುಷ್ಪಗಳೂ ಅರಳಲೊಲ್ಲವು. ಸಸ್ಯಗಳು ಅವನ ಗೈರಿನಲ್ಲಿ ಇಂಗಾಲದ ಆಮ್ಲವನ್ನು ಹೊರಹಾಕುತ್ತವೆ. ಇನ್ನು ಅವನ ಬೆಳಕನ್ನು ಬಿಂಬಿಸುವ ಚಂದಿರ ತಿಂಗಳಿನಲ್ಲಿ ಕ್ಷೀಣಿಸುತ್ತಾ ಬರುತ್ತಾನೆ. ಇದರ ಪರಿಣಾಮ ಇಡ ಮತ್ತು ಪಿಂಗಳದ ಮೂಲಕ ನಮ್ಮ ದೇಹವನ್ನು ಹೊಕ್ಕು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗಿರುವಾಗ ನಮ್ಮಲ್ಲಿನ‌ ಜೀವಕೋಶಗಳಲ್ಲಿನ ಜೀವ ಕ್ರಿಯ ನಿಧಾನವಾಗಿರುತ್ತದೆ. ಆ ಕಾರಣ ಮನಸ್ಸಿನ ಮೇಲೆ ತಮೋಗುಣ ಪ್ರಭಾವಿತವಾಗಿ ದುಸ್ವಪ್ನಗಳು ಬರುವ ಸಧ್ಯತೆ ಹೆಚ್ಚು. ಅದಕ್ಕೆಂದೆ ಪ್ರತಿ ಮುಂಜಾವಿಗೆ ಯೋಗ ಸೂರ್ಯ ನಮಸ್ಕಾರಗಳಿಂದ ಭಗವಂತ ನೀಡಿದ ಮತ್ತೊಂದು‌ ದಿನಕ್ಕೆ ಅವನನ್ನು ವಂದಿಸುತ್ತಾ ಇರುಳಿನ ತಮೋಗುಣವನ್ನೆಲ್ಲಾ ಕಳೆದು ನಮ್ಮನ್ನು ಪವಿತ್ರಗೊಳಿಸು ಎಂದು ಬೇಡುತ್ತೇವೆ.
ಸೃಷ್ಟಿಸಿದವನಿಗೆ ಭೂಮಿ‌ ಭಾಮೆಯಾದರೆ ಅಂತೆಯೇ ತುಳಸಿಯೂ ಕೂಡ. ಭೂಮಿ ಸಕಲ ಜೀವಗಳಿಗೆ ಆಸರೆ ನೀಡಿದರೆ ತುಳಸಿ ಜೀವ ವಾಯುವನ್ನು ನೀಡುತ್ತಾಳೆ. ಹಾಗಾಗಿ ಈ ತುಳಸಿಗೆ ಭಗವಂತನೇ ಆಸರೆ. ನಿತ್ಯ ತುಳಿಸಿಗೆ ಒಂದು ನಮಸ್ಕಾರ.
" ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೆ,
ನಮೋ ಮೋಕ್ಷ ಪ್ರದೇ ದೇವಿ ನಮಃ ಸಂಪತ್ಪ್ರದಾಯಿನಿ||".
ಭಗವಂತನನ್ನು ಸ್ಮರಿಸಲು ಕಾಲವೇ ಆದರೂ ಮುಂಜಾವಿಗೆ ಅವನನ್ನು ನೆನೆಯದಿದ್ದರೆ ನರಜನ್ಮದ ಭಾರವೆಲ್ಲಿ‌ ಹಿಂಗೀತು?
"ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೆ,
ಸರ್ವಾಂತರಾತ್ಮನೆ ಶ್ರೀಮದ್ವೇಂಕಟೇಶಾಯ ಮಂಗಳಂ||"
ಎಂದು ಆರತಿ ಬೆಳಗುವಾಗ ನನ್ನಲ್ಲಿನ ಪ್ರಸ್ತುತ ದಿನ ಸರ್ವರಲ್ಲಿಯೂ ಭಗವಂತನನ್ನು ಕಾಣುವ ಮನಸ್ಸು ಪುಟಿದೇಳುತ್ತದೆ.
"ಮಾತೃದೇವೋಭವ, ಪಿತೃದೇವೋಭವ" ಎನ್ನುವ ಸದ್ಭಾವನೆಯನ್ನು ಎಳೆಯ‌‌ ಮನಸ್ಸಿನಿಂದ ಬಿತ್ತಿಬೆಳೆಸಿದ ಧರ್ಮ ನನ್ನದು.
ಗಂಡು-ಹೆಣ್ಣು ಪ್ರಕೃತಿ - ಪುರುಷರ ಸಾಂಕೇತಿಕ ರೂಪ. ಗಂಡು ಒಂದು ಜೀವಿಯನ್ನು ತನ್ನಿಂದ ಹೊರಗೆ ಸೃಷ್ಟಿಸಿದಲ್ಲಿ, ಹೆಣ್ಣು ಅದೇ ಜೀವವನ್ನು ತನ್ನೊಳಗೆ ಸೃಷ್ಟಿಸುತ್ತಾಳೆ. ನವಮಾಸ ಗರ್ಭದಲ್ಲಿ ಹೊತ್ತು ಪೋಷಿಸುತ್ತಾಳೆ. ಈ ನಿಟ್ಟಿನಲ್ಲಿ ನನ್ನ ಧರ್ಮ ಹೇಳುವ ನುಡಿಗಳು ಐತರೇಯ ಉಪನಿಷತ್ತಿನಲ್ಲಿ ಹೀಗೆ ದಾಖಲಾಗಿದೆ.
"ಸಾ ಭಾವಯತ್ರೀ ಭಾವಯಿತವ್ಯಾಭವತಿ,
ತಂ ಸ್ತ್ರೀ ಗರ್ಭಂ ಬಿರ್ಭತಿ|
ಸೋಗ್ರ ಏವ ಕುಮಾರಂ ಜನ್ಮನೋಗ್ರೇಧಿ ಭಾವಯತಿ||"
ಅವಳು ನಿನ್ನ ಗರ್ಭವನ್ನು ದೇಹದಲ್ಲಿ ಧರಿಸಿ ನಿನ್ನ ಮರುಜನ್ಮಕ್ಕೆ ಕಾರಣಳಾಗಿರುವಳು. ಅವಳನ್ನು ಪೋಷಿಸುವುದು ನಿನ್ನ ಧರ್ಮ ಎನ್ನುವುದು ಇದರರ್ಥ.
ಉಪನಿಷತ್ ಗಳಲ್ಲಿ ಬರುವ ಶಾಂತಿ ಮಂತ್ರಗಳಾದರೋ ಅದು ಮನಸ್ಸನ್ನು ಮೀರಿದ ಬುದ್ಧಿ ಚೈತನ್ಯಕ್ಕೆ ಆಂತರ್ಯಕ್ಕೆ.
"ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋಮ ಅಮೃದಂಗಮಯ
ಓಂ ಶಾಂತಿ, ಶಾಂತಿ, ಶಾಂತಿಃ"
ಅಸತ್ಯವಾದ ಈ ದೇಹ ಮನಸ್ಸಿಗೆ ಸದ್ಗತಿ ದೊರೆಯಲಿ,
ಕತ್ತಲ್ಲಿಂದ ಕೂಡಿದ ನನ್ನ ಮನೋಬುದ್ಧಿಗೆ ಬೆಳಕು ಒದಗಲಿ, ಮರ್ತ್ಯದೇಹವಾದರೂ ಅಮರ್ತ್ಯ ಆತ್ಮವಿದೆ ಮುಕ್ತಿಯ ಮೂಲಕ ಆ ಆತ್ಮಕ್ಕೆ ಅಮೃತತ್ವ ಒದಗಲಿ. ಓ, ಅಧಿಭೌತಿಕ, ಅಧ್ಯಾತ್ಮಿಕ, ಅಧಿದೈವಿಕ ಶಕ್ತಿಗಳೇ ಶಾಂತರಾಗಿ.
ಧರ್ಮ ಪುಸ್ತಕದ ಪುಟಗಳಲ್ಲಿ ವಿಜೃಂಭಿಸುವಂತದ್ದಲ್ಲ. ಅದು ನಿತ್ಯ ನಿರಂತರ ಆಚರಣೆಗೆ ಒದಗುವಂತದ್ದು. ನನ್ನ ಧರ್ಮ ಹೀಗೆ ದಿನ ನಿತ್ಯ ಆಚರಣೆಗೆ ನನ್ನನ್ನು ಒದಗಿಸಿ ನನ್ನೊಳಗೊಂದು ಸಂಸ್ಕಾರವನ್ನು ಸೃಷ್ಟಿಸಿದೆ. ನಮ್ಮ ಧರ್ಮ ನಮ್ಮ ಹೆಮ್ಮೆಯಲ್ಲವೇ?
            - ಭಾಸ್ಕರ ಮಾಳ್ವ

ಪ್ರತಿ ತಿಂಗಳು ಆಚರಿಸುವ ವ್ರತ :

ಪ್ರತಿ ತಿಂಗಳು ಆಚರಿಸುವ ವ್ರತ :
1.ಸತ್ಯನಾರಾಯಣ ವ್ರತ (ಮಾಸ ಪೂರ್ಣಿಮೆ /ಹುಣ್ಣಿಮೆ)
2.ಸಂಕಷ್ಟ ಹರ ಗಣಪತಿ ವ್ರತ(ಮಾಸ ಕೃಷ್ಣ ಪಕ್ಷ ಚತುರ್ಥಿ)
ಚೈತ್ರ ಮಾಸದ ವಿಶೇಷ ದಿನಗಳು
1.ಯುಗಾದಿ ( ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ್/ಪಾಡ್ಯ)
2.ಗೌರೀತದಿಗೆ ( ಚೈತ್ರ ಮಾಸ ಶುಕ್ಲ ಪಕ್ಷದ ತದಿಗೆ)
3.ರಾಮನವಮಿ ( ಚೈತ್ರ ಮಾಸ ಶುಕ್ಲ ಪಕ್ಷದ ನವಮಿ) 
ವೈಶಾಖ ಮಾಸದ ವಿಶೇಷ ದಿನಗಳು
1.ಅಕ್ಷಯ ತೃತೀಯಾ (ವೈಶಾಖ ಮಾಸ ಶುಕ್ಲ ಪಕ್ಷದ ತದಿಗೆ)
2.ಶಂಕರಾಚಾರ್ಯ ಜಯಂತಿ (ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ)
3.ಶ್ರೀ ನೃಸಿಂಹ ಜಯಂತೀ (ವೈಶಾಖ ಮಾಸ ಶುಕ್ಲ ಪಕ್ಷದ ಚತುರ್ದಶಿ)
ಜ್ಯೇಷ್ಠಮಾಸದ ವಿಶೇಷ ವಿಶೇಷ ದಿನಗಳು
1.ವಟ ಸಾವಿತ್ರಿ ವ್ರತ (ಜ್ಯೇಷ್ಠ ಮಾಸದ ಪೂರ್ಣಿಮೆ /ಹುಣ್ಣಿಮೆ )
ಆಷಾಢ ಮಾಸದ ವಿಶೇಷ ದಿನಗಳು
1.ಆಷಾಡ ಶುಕ್ರವಾರ (ಆಷಾಢ ಮಾಸದ ಶುಕ್ರವಾರಗಳು )
2.ಗುರು ಪೂರ್ಣಿಮಾ (ಆಷಾಢ ಮಾಸ ಪೂರ್ಣಿಮೆ /ಹುಣ್ಣಿಮೆ )
3.ಭೀಮನ ಅಮಾವಸ್ಯೆ (ಆಷಾಡ ಮಾಸ ಅಮಾವಸ್ಯೆ)
ಶ್ರಾವಣ ಮಾಸದ ವಿಶೇಷ ದಿನಗಳು
1.ಮಂಗಳಗೌರೀ ವ್ರತ (ಶ್ರಾವಣಮಾಸದ ನಾಲ್ಕು ಮಂಗಳವಾರ)
2.ಸಂಪತ್ತು ಶುಕ್ರವಾರ (ಶ್ರಾವಣ ಮಾಸದ ಶುಕ್ರವಾರಗಳು)
3.ಶ್ರಾವಣ ಶನಿವಾರ (ಶ್ರಾವಣ ಮಾಸದ ಶನಿವಾರಗಳು)
4.ನಾಗಚತುರ್ಥಿ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ಥಿ)
5.ನಾಗಪಂಚಮೀ (ಶ್ರಾವಣ ಮಾಸ ಶುಕ್ಲ ಪಕ್ಷದ ಪಂಚಮೀ)
6.ವರಮಹಾಲಕ್ಷ್ಮೀ ವ್ರತ (ಶ್ರಾವಣ ಮಾಸದ ಶುಕ್ಲ ಪಕ್ಷದ 2 ನೇ ಶುಕ್ರವಾರ )
7.ಉಪಾಕರ್ಮ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ದಶಿ)
8.ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ (ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯಾ)
9.ಕೃಷ್ಣಾಷ್ಟಮೀ (ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ)
ಭಾದ್ರಪದ ಮಾಸದ ವಿಶೇಷ ದಿನಗಳು
1.ಸ್ವರ್ಣಗೌರೀ (ಭಾದ್ರಪದ ಶುಕ್ಲ ಪಕ್ಷದ ತೃತೀಯಾ )
2.ಗಣೇಶಚತುರ್ಥೀ (ಭಾದ್ರಪದ ಶುಕ್ಲ ಪಕ್ಷದ ಚೌತಿ )
3.ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಪಕ್ಷದ ಚತುರ್ದಶೀ )
4.ಪಿತೃಪಕ್ಷ - ಮಹಾಲಯ (ಭಾದ್ರಪದ ಕೃಷ್ಣಪಕ್ಷ )
ಆಶ್ವಯುಜ ಮಾಸದ ವಿಶೇಷ ದಿನಗಳು
1.ನವರಾತ್ರಿ (ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿ ಯವರೆಗೆ)
2.ಸರಸ್ವತಿ ಪೂಜೆ (ಆಶ್ವಯುಜ ಶುಕ್ಲ ಪಕ್ಷದ ಸಪ್ತಮಿ)
3.ದುರ್ಗಾಷ್ಟಮಿ (ಆಶ್ವಯುಜ ಶುಕ್ಲ ಪಕ್ಷದ ಅಷ್ಟಮಿ)
4.ಆಯುಧ ಪೂಜಾ / ಮಹಾ ನವಮಿ (ಆಶ್ವಯುಜ ಶುಕ್ಲ ಪಕ್ಷದ ನವಮಿ)
5.ವಿಜಯದಶಮಿ (ಆಶ್ವಯುಜ ಶುಕ್ಲ ಪಕ್ಷದ ದಶಮಿ)
6.ಮಧ್ವಜಯಂತೀ (ಆಶ್ವಯುಜ ಶುಕ್ಲ ಪಕ್ಷದ ದಶಮಿ)
7.ನರಕಚತುರ್ದಶೀ (ಆಶ್ವಯುಜ ಕೃಷ್ಣ ಪಕ್ಷದ ಚತುರ್ದಶೀ )
8.ದೀಪಾವಳೀ ಅಮಾವಾಸ್ಯೆ ಲಕ್ಷ್ಮೀ ಪೂಜೆ (ಆಶ್ವಯುಜ ಅಮಾವಸ್ಯೆ )
ಕಾರ್ತೀಕ ಮಾಸದ ವಿಶೇಷ ದಿನಗಳು
1.ಬಲಿಪಾಡ್ಯಮೀ (ಕಾರ್ತೀಕ ಶುಕ್ಲ ಪಕ್ಷದ ಪಾಡ್ಯ )
2.ಉತ್ತಾನದ್ವಾದಶೀ (ಕಾರ್ತೀಕ ಶುಕ್ಲ ಪಕ್ಷದ ದ್ವಾದಶೀ )
3.ಕಾರ್ತೀಕ ಸೋಮವಾರ (ಕಾರ್ತೀಕ ಮಾಸದ ಸೋಮವಾರಗಳು)
ಮಾರ್ಗಶಿರ ಮಾಸದ ವಿಶೇಷ ದಿನಗಳು
1.ಸುಬ್ರಹ್ಮಣ್ಯ ಷಷ್ಠೀ (ಮಾರ್ಗಶಿರ ಶುಕ್ಲ ಪಕ್ಷದ ಷಷ್ಠಿ )
2.ಗೀತಾ ಜಯಂತಿ(ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ)
3.ದತ್ತಾತ್ರೇಯ ಜಯಂತಿ (ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ)
4.ಎಳ್ಳಮಾವಸ್ಯೆ (ಮಾರ್ಗಶಿರ ಮಾಸದ ಅಮಾವಸ್ಯೆ)
5.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
6.ಮಾರ್ಗಶಿರ ಮಹಾಲಕ್ಷ್ಮಿ ವ್ರತ (ಮಾರ್ಗಶಿರ ಮಾಸದ ಗುರುವಾರಗಳು)
ಪುಷ್ಯ ಮಾಸದ ವಿಶೇಷ ದಿನಗಳು
1.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
2.ಮಕರ ಸಂಕ್ರಮಣ/ಸಂಕ್ರಾಂತಿ
ಮಾಘ ಮಾಸದ ವಿಶೇಷ ದಿನಗಳು
1.ವಸಂತ ಪಂಚಮೀ(ಮಾಘ ಮಾಸದ ಶುಕ್ಲ ಪಕ್ಷದ ಪಂಚಮೀ)
2.ರಥಸಪ್ತಮಿ (ಮಾಘ ಶುಕ್ಲ ಪಕ್ಷದ ಸಪ್ತಮಿ)
3.ಮಧ್ವನವಮೀ (ಮಾಘ ಶುಕ್ಲ ಪಕ್ಷದ ನವಮಿ)
4.ಶಿವರಾತ್ರಿ (ಮಾಘ ಕೃಷ್ಣ ಪಕ್ಷದ ಚತುರ್ದಶಿ)
ಫಾಲ್ಗುಣ ಮಾಸದ ವಿಶೇಷ ದಿನಗಳು
1.ಹೋಲೀ ಹುಣ್ಣಿಮೆ (ಫಾಲ್ಗುಣ ಮಾಸದ ಪೂರ್ಣಿಮೆ /ಹುಣ್ಣಿಮೆ)

*ದುರ್ಗಾ ಸಪ್ತಶತಿಯ ಅಂಗ ಹಾಗೂ ಶ್ಲೋಕ ಸಂಖ್ಯೆ*

 *ದುರ್ಗಾ ಸಪ್ತಶತಿಯ ಅಂಗ ಹಾಗೂ ಶ್ಲೋಕ ಸಂಖ್ಯೆ*
ಪರಾಶಕ್ತಿಯ ೩-೩ ವಿಭಾಗವಾಯಿತು. ಅವ್ಯಕ್ತದ ನಂತರ ಮಹಾಕಾಲೀ ಪ್ರಥಮ ರೂಪವಾಗಿದೆ. ಆ ಚರಿತ್ರೆಯಲ್ಲಿ ಕೇವಲ ಒಂದು ಅಧ್ಯಾಯವಿದೆ.
ಮಹಾಲಕ್ಷ್ಮಿಯಲ್ಲಿ ೩ ಹಾಗೂ ಮಹಾಸರಸ್ವತೀ ಚರಿತ್ರೆಯಲ್ಲಿ ೩x೩=೯ ಅಧ್ಯಾಯಗಳಿವೆ. ಇದೇ ರೀತಿ ಮೂಲ ವೇದವು ವಿಭಜನೆಗೊಂಡು ಋಗ್ಯಜುಸ್ಸಾಮ ಎಂಬ ಶಾಖೆ ಮೂರಾಯಿತು.
ಮೂಲವೂ ಅಥರ್ವದಲ್ಲಿ ಉಳಿದಿದೆ, ವೇದತ್ರಯೀ ಎಂದರೆ ೪ ವೇದಗಳು ಎಂದು. ಅಂದರೆ ೧ ಮೂಲ + ೩ ಶಾಖೆ. (ಮುಂಡಕ ಉಪನಿಷತ್ತು, ೧/೧/೧-೫)
ಇದರ ಪ್ರತೀಕವಾಗಿ ಉಪನಯನದ ಸಮಯದಲ್ಲಿ ವೇದಾರಂಭದ ದ್ಯೋತಕವಾಗಿ ಪಲಾಶ ದಂಡದ ಪ್ರಯೋಗವಿದೆ. ಪಲಾಶದಲ್ಲೂ ಒಂದು ಶಾಖೆಯಿಂದ ೩ ಎಲೆಗಳು ಹೊರಡುತ್ತವೆ.
ಇದು ಬ್ರಹ್ಮದ ಪ್ರತೀಕವಾಗಿದೆ.
ಸಪ್ತಶತಿಯ ೩ ಚರಿತ್ರೆ ೩ ವೇದ ಶಾಖೆಗಳಾದ ಋಕ್, ಯಜು, ಸಾಮ ಸ್ವರೂಪದಲ್ಲಿದೆ. ಮೂಲ ಅಥರ್ವವೇದದ ಸ್ವರೂಪವು ದೇವೀ ಅಥರ್ವಶೀರ್ಷ.
ದೇವೀ ಅಥರ್ವಶೀರ್ಷದ ವಿವಿಧ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆಯನ್ನು ಎಣಿಸಿರಿ. ತದನಂತರ ಪ್ರಥಮ ಚರಿತ್ರೆಯ ಒಂದು ನಿರ್ದಿಷ್ಟ ಛಂದಸ್ಸು ಗಾಯತ್ರೀ,
ದ್ವಿತೀಯ ಚರಿತ್ರೆಯ ಉಷ್ಣಿಕ್ ಹಾಗೂ ತೃತೀಯ ಚರಿತ್ರೆಯ ಅನುಷ್ಟುಪ್ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆ ಎಣಿಸಿರಿ. ಇವುಗಳಲ್ಲಿ ೩ ಏಕಾಕ್ಷರೀ ಮಂತ್ರಗಳಾದ ಐಂ, ಹ್ರೀಂ, ಕ್ಲೀಂ ಎಂಬ ೩ ಅಂಕಿಯನ್ನು ಕೂಡಿರಿ. ಸರಿಯಾಗಿ ೭೦೦ ಸಂಖ್ಯೆಯಾಗುತ್ತದೆ. ಇನ್ನು ೨೦ ಮಂತ್ರಗಳು ಉವಾಚಗಳಲ್ಲಿ ಸೇರಿದೆ. ಒಟ್ಟು ೭೨೦ ಆಗುತ್ತದೆ. ಇದು ವೃತ್ತದ ಪೂರ್ಣ ಪರಿಕಲ್ಪನೆ.
೩೬೦ ಅಲ್ಲ, ೭೨೦ ಆದರೆ ವೃತ್ತಕ್ಕೆ ಸರಿಯಾದ ಅರ್ಥ ಬರುತ್ತದೆ. ಅದಕ್ಕೆ ಉನ್ನತ ಆಯಾಮ ಗಣಿತ ತಿಳಿದಿರಬೇಕು.
ಇದರ ಪೂರ್ವದಲ್ಲಿ ಅರ್ಗಲಾ, ಕೀಲಕಗಳ ಪಾಠವಿದೆ. ಉದಾ:- ಮನೆಗೆ ಗೋಡೆಗಳೇ ಕವಚ, ಬಾಗಿಲೇ ಅರ್ಗಲಾ, ಬೀಗವೇ ಕೀಲಕ. ಈ ಕೀಲಕ ಶಬ್ದದಿಂದಲೇ ಆಂಗ್ಲದಲ್ಲಿ key-lock ಆಗಿದೆ.
ಮನುಷ್ಯನಿಗೆ ಶರೀರವೇ ಕವಚ. ಇದನ್ನು ಪಂಜರ ಎಂದೂ ಕರೆಯುತ್ತಾರೆ. ದೇಹದಲ್ಲಿ ನವರಂಧ್ರಗಳೆಂಬ ದ್ವಾರಗಳಿವೆ. ಹತ್ತನೇಯ ದ್ವಾರವೇ ಬ್ರಹ್ಮರಂಧ್ರ.
ಸಪ್ತಶತಿಯ ೩ ಚರೆತ್ರೆಗಳು ದೇಹದ ೩ ಗ್ರಂಥಿಗಳನ್ನು ಭೇದಿಸುತ್ತದೆ -
೧. ಮಣಿಪೂರದವರೆಗೆ (ಸೂರ್ಯ ದ್ವಾರ, ವಿರಜಾ) ಬ್ರಹ್ಮಗ್ರಂಥಿ,
೨. ಅನಾಹತದಿಂದ ವಿಶುದ್ಧಿಯವರೆಗೆ ವ್ಯಾಪ್ತ ವಿಷ್ಣು ಗ್ರಂಥಿ,
೩. ಆಜ್ಞಾದಿಂದ ಸಹಸ್ರಾರದರ ಬ್ರಹ್ಮರಂಧ್ರದವರೆಗೆ ವ್ಯಾಪ್ತ ರುದ್ರಗ್ರಂಥಿ.
ಈ ಗ್ರಂಥಿಗಳನ್ನು ಭೇದಿಸುವ ಉಲ್ಲೇಖವು ಮುಂಡಕೋಪನಿಷತ್ತಿನಲ್ಲಿ ೩ ಮುಂಡಕಗಳಲ್ಲಿದೆ. ಇದನ್ನು ಯಾವುದೇ ಜಿಜ್ಞಾಸುವು ಹುಡುಕಿ ನೋಡಬಹುದು.
ಗ್ರಂಥಿ ಭೇದವೇ ಕೀಲಕ!! ಈ ಸಂದರ್ಭದಲ್ಲಿ ಕವಚ, ಅರ್ಗಲಾ, ಕೀಲಕದ ವರ್ಣನೆ ಹಾಗೂ ದುರ್ಗಾ ನಾಮಾವಳಿಗಳ ಮೇಲೆ ಚಿಂತನೆ ಮಾಡಿರಿ.
ಬೀಗಗಳು ೩ ಇವೆ. ಎಲ್ಲವಕ್ಕೂ ಕುಂಜಿ ಅಥವಾ ಕೀಲಿಕೈ ಮಾತ್ರ ಒಂದೇ. ಅದನ್ನೇ ಕುಂಜಿಕಾ ಸ್ತೋತ್ರ ಎಂದದ್ದು