ಬುಧವಾರ, ಫೆಬ್ರವರಿ 11, 2015

ಆಪ್ಆದ್ಮಿ ಪಕ್ಷದ  ಪ್ರಚಂಡ ಬಹುಮತ !!!

ನಮ್ಮದೇಶದ ರಾಜಕಾರಣಿಗಳಿಗೆ ಒಂದು ಸಂದೇಶವಿದೆ.

ದೇಶದಲ್ಲಿ  ಕಾಂಗ್ರೆಸ್ಸ ಪಕ್ಷ ಹಾಗೂ ಅದರ ಅರ್ಥವಿಲ್ಲದ ಆಡಳಿತದ  ವಿರುದ್ದ ಹಾಗೂ ಬಿ.ಜೆ.ಪಿಗೆ ಒಂದು ಪ್ರಬಲ ಪ್ರತಿಪಕ್ಷವಾಗಿ ಬೆಳೆಯ ಬಹುದಾದ ಯೋಗ್ಯತೆಯನ್ನು ಬೆಳೆಸಿಕೊಳ್ಲ ಬುದಾದ ಒಂದು ಬೆಳವಣಿಗೆ ಈ ಸಂಧರ್ಬದಲ್ಲಿ ಕಾಣಬಹುದು. ಆಪ್ಆದ್ಮಿ ಪಕ್ಷ ಮೊದಲ ಬಾರಿಗೆ ಆಡಳಿತದಲ್ಲಿದ್ದರೂ ಆಡಳಿತದ ಅನುಭವ ವಿಲ್ಲದೆಯೋ ಸರಕಾರದ ವಿರುದ್ಧ ಸರಕಾರವೆ ಪ್ರತಿಭಟನೆಗಿಳಿದುದು ಒಂದು ದುರಂತ. ಈ ಬಾರಿ ಆ ರೀತಿಯಲ್ಲಿ ಅದು ಯಾವುದೆ ಕಾರ್ಯವನ್ನು ರೂಪಿಸದೇ ಸಂವಿಧಾನಾತ್ಮಕ ಮತ್ತು ತನ್ನ ಅಧಿಕಾರ ಬಲದಿಂದ ಸಮಯ ಸಂದರ್ಭಗಳಲ್ಲಿ ಪರಿಣತರಿಂದ ಸಲಹೆ ಪಡೆದು ಆಡಳಿತವನ್ನು ನಡೆಸುವ ಅಗತ್ಯವಿದೆ.

ಅಧಿಕಾರ ಇದ್ದಲ್ಲಿ ಭ್ರಷ್ಟಚಾರ ವಿದೆ. ಅದನ್ನು ಒಂದೇ ಏಟಿಗೆ ಕೊನೆಗೊಳಿಸುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಭ್ರಷ್ಟಾಚಾರಕ್ಕೆ ಕಾರಣವಾಗುವ ಸಂವಿಧಾನದ ಸಡಿಲು ನೀತಿಗಳನ್ನು ಗಮನದಲ್ಲಿರಿಸಿಕೊಂಡು ತನ್ನ ಕಾರ್ಯ ತಂತ್ರವನ್ನು ರೂಪಿಸಲಿ.  ಬಡವರಿಗಾಗಿಯೇ ಹುಟ್ಟಿದ  ಪಕ್ಷವಾದ ಆಪ್ ಆದ್ಮಿ ಬಡವರಿಗಾಗಿ  ಉಚಿತ ನೀರು, ಉಚಿತ ವಿದ್ಯುತ್ ಈ ಮೊದಲಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರುವುದೇ ಉತ್ತಮ.  ಉಚಿತ ವಾದ ಯಾವುದೇ ಸವಲತ್ತು ಮನುಷ್ಯನನ್ನು ಸೋಮಾರಿಯನ್ನಾಗಿಯೇ ಮಾಡುತ್ತದೆ.

ಹೊಸ ಅನನುಭವಿಗಳ ಪಕ್ಷ ಆಪ್ಆದ್ಮಿ.  ಆದರೆ ಉತ್ಸಾಹ ಭರಪೂರ ಚಿಲುಮೆಯೇ ಅವರ ಹೋರಾಟದ ಆಡಳಿತದ ಪ್ರಮುಖ ಅಂಗ.  ಇವುಗಳೊಂದಿಗೆ  ತಾರತಮ್ಯವಿಲ್ಲದ ರಚನಾತ್ಮಕ ಕೆಲಸಗಳಿಂದ ದೇಶದ ಜನರ ಮನವನ್ನು ಗೆದ್ದು ದೇಶದಲ್ಲಿ   ಉತ್ತಮ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿ .  ದೇಶದಲ್ಲಿ ಸ್ವಾರ್ಥ ರಾಜಕಾರಣದ ಪರವಾಗಿ ಕ್ರಿಯಾಶೀಲವಾಗಿ  ಅಲ್ಲಲ್ಲಿ ನಾಯಿ ಕೊಡೆಯಂತೆ ಹುಟ್ಟು ಸಾವುಗಳ ನಡುವೆ ಬದುಕುತ್ತಿರುವ ಇತರ ಪಕ್ಷಗಳೆಲ್ಲವೂ  ತಮ್ಮನ್ನು ತಾವು ವಿಮರ್ಶಿಸಿಕೊಳ್ಳವ ಅಗತ್ಯವೂ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ