*ದುರ್ಗಾ ಸಪ್ತಶತಿಯ ಅಂಗ ಹಾಗೂ ಶ್ಲೋಕ ಸಂಖ್ಯೆ*
ಪರಾಶಕ್ತಿಯ ೩-೩ ವಿಭಾಗವಾಯಿತು. ಅವ್ಯಕ್ತದ ನಂತರ ಮಹಾಕಾಲೀ ಪ್ರಥಮ ರೂಪವಾಗಿದೆ. ಆ ಚರಿತ್ರೆಯಲ್ಲಿ ಕೇವಲ ಒಂದು ಅಧ್ಯಾಯವಿದೆ.
ಮಹಾಲಕ್ಷ್ಮಿಯಲ್ಲಿ ೩ ಹಾಗೂ ಮಹಾಸರಸ್ವತೀ ಚರಿತ್ರೆಯಲ್ಲಿ ೩x೩=೯ ಅಧ್ಯಾಯಗಳಿವೆ. ಇದೇ ರೀತಿ ಮೂಲ ವೇದವು ವಿಭಜನೆಗೊಂಡು ಋಗ್ಯಜುಸ್ಸಾಮ ಎಂಬ ಶಾಖೆ ಮೂರಾಯಿತು.
ಮೂಲವೂ ಅಥರ್ವದಲ್ಲಿ ಉಳಿದಿದೆ, ವೇದತ್ರಯೀ ಎಂದರೆ ೪ ವೇದಗಳು ಎಂದು. ಅಂದರೆ ೧ ಮೂಲ + ೩ ಶಾಖೆ. (ಮುಂಡಕ ಉಪನಿಷತ್ತು, ೧/೧/೧-೫)
ಇದರ ಪ್ರತೀಕವಾಗಿ ಉಪನಯನದ ಸಮಯದಲ್ಲಿ ವೇದಾರಂಭದ ದ್ಯೋತಕವಾಗಿ ಪಲಾಶ ದಂಡದ ಪ್ರಯೋಗವಿದೆ. ಪಲಾಶದಲ್ಲೂ ಒಂದು ಶಾಖೆಯಿಂದ ೩ ಎಲೆಗಳು ಹೊರಡುತ್ತವೆ.
ಇದು ಬ್ರಹ್ಮದ ಪ್ರತೀಕವಾಗಿದೆ.
ಸಪ್ತಶತಿಯ ೩ ಚರಿತ್ರೆ ೩ ವೇದ ಶಾಖೆಗಳಾದ ಋಕ್, ಯಜು, ಸಾಮ ಸ್ವರೂಪದಲ್ಲಿದೆ. ಮೂಲ ಅಥರ್ವವೇದದ ಸ್ವರೂಪವು ದೇವೀ ಅಥರ್ವಶೀರ್ಷ.
ದೇವೀ ಅಥರ್ವಶೀರ್ಷದ ವಿವಿಧ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆಯನ್ನು ಎಣಿಸಿರಿ. ತದನಂತರ ಪ್ರಥಮ ಚರಿತ್ರೆಯ ಒಂದು ನಿರ್ದಿಷ್ಟ ಛಂದಸ್ಸು ಗಾಯತ್ರೀ,
ದ್ವಿತೀಯ ಚರಿತ್ರೆಯ ಉಷ್ಣಿಕ್ ಹಾಗೂ ತೃತೀಯ ಚರಿತ್ರೆಯ ಅನುಷ್ಟುಪ್ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆ ಎಣಿಸಿರಿ. ಇವುಗಳಲ್ಲಿ ೩ ಏಕಾಕ್ಷರೀ ಮಂತ್ರಗಳಾದ ಐಂ, ಹ್ರೀಂ, ಕ್ಲೀಂ ಎಂಬ ೩ ಅಂಕಿಯನ್ನು ಕೂಡಿರಿ. ಸರಿಯಾಗಿ ೭೦೦ ಸಂಖ್ಯೆಯಾಗುತ್ತದೆ. ಇನ್ನು ೨೦ ಮಂತ್ರಗಳು ಉವಾಚಗಳಲ್ಲಿ ಸೇರಿದೆ. ಒಟ್ಟು ೭೨೦ ಆಗುತ್ತದೆ. ಇದು ವೃತ್ತದ ಪೂರ್ಣ ಪರಿಕಲ್ಪನೆ.
೩೬೦ ಅಲ್ಲ, ೭೨೦ ಆದರೆ ವೃತ್ತಕ್ಕೆ ಸರಿಯಾದ ಅರ್ಥ ಬರುತ್ತದೆ. ಅದಕ್ಕೆ ಉನ್ನತ ಆಯಾಮ ಗಣಿತ ತಿಳಿದಿರಬೇಕು.
ಇದರ ಪೂರ್ವದಲ್ಲಿ ಅರ್ಗಲಾ, ಕೀಲಕಗಳ ಪಾಠವಿದೆ. ಉದಾ:- ಮನೆಗೆ ಗೋಡೆಗಳೇ ಕವಚ, ಬಾಗಿಲೇ ಅರ್ಗಲಾ, ಬೀಗವೇ ಕೀಲಕ. ಈ ಕೀಲಕ ಶಬ್ದದಿಂದಲೇ ಆಂಗ್ಲದಲ್ಲಿ key-lock ಆಗಿದೆ.
ಇದರ ಪೂರ್ವದಲ್ಲಿ ಅರ್ಗಲಾ, ಕೀಲಕಗಳ ಪಾಠವಿದೆ. ಉದಾ:- ಮನೆಗೆ ಗೋಡೆಗಳೇ ಕವಚ, ಬಾಗಿಲೇ ಅರ್ಗಲಾ, ಬೀಗವೇ ಕೀಲಕ. ಈ ಕೀಲಕ ಶಬ್ದದಿಂದಲೇ ಆಂಗ್ಲದಲ್ಲಿ key-lock ಆಗಿದೆ.
ಮನುಷ್ಯನಿಗೆ ಶರೀರವೇ ಕವಚ. ಇದನ್ನು ಪಂಜರ ಎಂದೂ ಕರೆಯುತ್ತಾರೆ. ದೇಹದಲ್ಲಿ ನವರಂಧ್ರಗಳೆಂಬ ದ್ವಾರಗಳಿವೆ. ಹತ್ತನೇಯ ದ್ವಾರವೇ ಬ್ರಹ್ಮರಂಧ್ರ.
ಸಪ್ತಶತಿಯ ೩ ಚರೆತ್ರೆಗಳು ದೇಹದ ೩ ಗ್ರಂಥಿಗಳನ್ನು ಭೇದಿಸುತ್ತದೆ -
೧. ಮಣಿಪೂರದವರೆಗೆ (ಸೂರ್ಯ ದ್ವಾರ, ವಿರಜಾ) ಬ್ರಹ್ಮಗ್ರಂಥಿ,
೨. ಅನಾಹತದಿಂದ ವಿಶುದ್ಧಿಯವರೆಗೆ ವ್ಯಾಪ್ತ ವಿಷ್ಣು ಗ್ರಂಥಿ,
೩. ಆಜ್ಞಾದಿಂದ ಸಹಸ್ರಾರದರ ಬ್ರಹ್ಮರಂಧ್ರದವರೆಗೆ ವ್ಯಾಪ್ತ ರುದ್ರಗ್ರಂಥಿ.
೨. ಅನಾಹತದಿಂದ ವಿಶುದ್ಧಿಯವರೆಗೆ ವ್ಯಾಪ್ತ ವಿಷ್ಣು ಗ್ರಂಥಿ,
೩. ಆಜ್ಞಾದಿಂದ ಸಹಸ್ರಾರದರ ಬ್ರಹ್ಮರಂಧ್ರದವರೆಗೆ ವ್ಯಾಪ್ತ ರುದ್ರಗ್ರಂಥಿ.
ಈ ಗ್ರಂಥಿಗಳನ್ನು ಭೇದಿಸುವ ಉಲ್ಲೇಖವು ಮುಂಡಕೋಪನಿಷತ್ತಿನಲ್ಲಿ ೩ ಮುಂಡಕಗಳಲ್ಲಿದೆ. ಇದನ್ನು ಯಾವುದೇ ಜಿಜ್ಞಾಸುವು ಹುಡುಕಿ ನೋಡಬಹುದು.
ಗ್ರಂಥಿ ಭೇದವೇ ಕೀಲಕ!! ಈ ಸಂದರ್ಭದಲ್ಲಿ ಕವಚ, ಅರ್ಗಲಾ, ಕೀಲಕದ ವರ್ಣನೆ ಹಾಗೂ ದುರ್ಗಾ ನಾಮಾವಳಿಗಳ ಮೇಲೆ ಚಿಂತನೆ ಮಾಡಿರಿ.
ಗ್ರಂಥಿ ಭೇದವೇ ಕೀಲಕ!! ಈ ಸಂದರ್ಭದಲ್ಲಿ ಕವಚ, ಅರ್ಗಲಾ, ಕೀಲಕದ ವರ್ಣನೆ ಹಾಗೂ ದುರ್ಗಾ ನಾಮಾವಳಿಗಳ ಮೇಲೆ ಚಿಂತನೆ ಮಾಡಿರಿ.
ಬೀಗಗಳು ೩ ಇವೆ. ಎಲ್ಲವಕ್ಕೂ ಕುಂಜಿ ಅಥವಾ ಕೀಲಿಕೈ ಮಾತ್ರ ಒಂದೇ. ಅದನ್ನೇ ಕುಂಜಿಕಾ ಸ್ತೋತ್ರ ಎಂದದ್ದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ