ಮಂಗಳವಾರ, ನವೆಂಬರ್ 28, 2017

ನಿಮ್ಮ ದೇಹದ ಒಳಗಡೆ

ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ?
ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?
ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?
ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿ, ಉಜ್ಜಿ ಉಜ್ಜುತ್ತೀರಾ. ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡುತ್ತೀರ, ದೇಹದ ಹೊರಗೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ, ಅಲ್ಲವೇ? ಹಾಗೆಯೇ ನಿಮ್ಮ ದೇಹದ ಒಳಗೂ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಲ್ಲವೇ? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಬರೆಯುತ್ತೇನೆ ಹಾಗು ನಿಮ್ಮ ದೊಡ್ಡ ಕರುಳಿನ ಒಳಗೆ ಎಷ್ಟೆಲ್ಲಾ ಪಾಚಿ ಕಟ್ಟಿಕೊಂಡಿದೆ ಎಂಬ ಚಿತ್ರಗಳನ್ನೂ ಇಲ್ಲಿ ಅಂಟಿಸುತ್ತೇನೆ.
ನೀವು ನಿಮ್ಮ ದೇಹವನ್ನು ಯಾವುದೇ ರೋಗ ಬರದಂತೆ ನೋಡಿಕೊಳ್ಳಬೇಕಾದರೆ ಅಥವಾ ರೋಗ ಬಂದಮೇಲೆ ಸರಿಪಡಿಸಿಕೊಳ್ಳಬೇಕಾದರೆ ಈ ಕೆಳಕಂಡ ಬ್ರಾನ್ ಗಳನ್ನು ನಿಮ್ಮ ನಿತ್ಯ ಊಟಗಳಲ್ಲಿ ಉಪಯೋಗಿಸುತ್ತಲೇ ಇದ್ದರೆ ಎಲ್ಲ ತರಹ ರೋಗಗಳು ಮಂಗಮಾಯವಾಗುತ್ತವೆ.
ಓಟ್ ಬ್ರಾನ್, ಗೋಧಿ ಬ್ರಾನ್, ರೈಸ್ ಬ್ರಾನ್, ಓಟ್ ಮೀಲ್ಸ್, ಬಾರ್ಲಿ ಬ್ರಾನ್, ಇತ್ಯಾದಿ ಉಪಯೋಗಿಸುತ್ತಲೇ ಇರಬೇಕು. ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ತಿನ್ನುವವರು, ಜಂಕ್ ತಿಂಡಿಗಳನ್ನು ತಿನ್ನುವವರು, ಮೈದಾದಲ್ಲಿ ಮಾಡಿರುವ ತಿಂಡಿಗಳನ್ನು ತಿನ್ನುವವರು, ಕುರುಕು ತಿಂಡಿಗಳನ್ನು ತಿನ್ನುವವರು ಈ ಮೇಲೆ ಹೇಳಿದ ಬ್ರಾನ್ ಗಳನ್ನು ದಿನ ನಿತ್ಯ ಉಪಯೋಗಿಸುತ್ತಿದ್ದರೆ ಅನುಕೂಲವಾಗುತ್ತದೆ. ಆದರೆ ಪ್ರತಿದಿನವೂ ಈ ಮೇಲಿನ ತಿಂಡಿಗಳನ್ನು ತಿಂದು ಬ್ರಾನ್ ಉಪಯೋಗಿಸುತ್ತಿದ್ದರೂ ಸಹಾ ಏನೂ ಪ್ರಯೋಜನ ಆಗುವುದಿಲ್ಲ. ಇದಲ್ಲದೆ ವಾತಾವರಣದಿಂದ, ಹೊರಗಿನ ಕೆಮಿಕಲ್ ಹೊಗೆಗಳಿಂದಲೂ ಈ ಕೆಟ್ಟ ಪಾಚಿಗಳೂ ನಮ್ಮ ಕರುಳಿನಲ್ಲಿ ಶೇಖರವಾಗಿ ತುಂಬಾ ತೊಂದರೆ ಅನುಭವಿಸಬೇಕಾಗಿ ಬರುತ್ತದೆ..

ಆಹಾರ: ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯನ್ನು ತ್ವರಿತವಾಗಿ ಪಡೆಯಬಹುದು. ವಿಟಮಿನ್’ಗಳು, ಮಿನರಲ್ಸ್’ಗಳು ತೆಗೆದುಕೊಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಿನರಲ್ಸ್ ಅಧಿಕವಾಗಿರುವ ಮೀನು, ಕೊಬ್ಬಿನಾಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳು, ಕಾಳುಗಳು, ಬಿಟಾರೋಟಿನ್ ಇರುವ ಲೆಟಿಸ್, ಸಿಹಿ ಆಲೂಗಡ್ಡೆ, ಕ್ಯಾರೆಟ್, ನಂತಹವುಗಳನ್ನು ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು.
 ರೋಗ ನಿರೋಧಕ ಶಕ್ತಿ
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಏಕೆಂದರೆ, ಅವರ ದೇಹವಿನ್ನೂ ಹೊರಗಿನಿಂದ ದಾಳಿ ಇಡುವ ವೈರಾಣುಗಳನ್ನು ನಿಗ್ರಹಿಸುವ, ಹೋರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿರುವುದಿಲ್ಲ. ಹಾಗಾಗಿಯೇ ಮಕ್ಕಳು ಬೇಗ ರೋಗಗಳಿಗೆ ತುತ್ತಾಗುತ್ತಾರೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಮೂಗಿಗೆ ಸಂಬಂಧಿಸಿದ ಸಮಸ್ಯೆ, ಜ್ವರ ಹಾಗೂ ಎಳೆವೆಯಲ್ಲಿ ಸಾಮಾನ್ಯವಾಗಿ ಕಾಡುವ ಅನಾರೋಗ್ಯ ಮೊದಲಾದವು ಬಾರದಂತೆ ಮುಂಚಿತವಾಗಿಯೇ ತಡೆಯೊಡ್ಡಬೇಕಿದೆ.
ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ಪ್ರಾಯದ ಮಕ್ಕಳು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವುದರಿಂದ ಅಂತಹ ಕಂದಮ್ಮಗಳ ಆರೋಗ್ಯ ಕಾಪಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಮಕ್ಕಳ ವೈದ್ಯರಲ್ಲಿಗೆ ಮಗುವನ್ನು ಕಾಲಕಾಲಕ್ಕೆ ಕರೆದೊಯ್ದು ಅತ್ಯಗತ್ಯ ಚುಚ್ಚುಮದ್ದುಗಳನ್ನು ಕೊಡಿಸುವ ಮೂಲಕ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚಿಸಬೇಕು.
ಶ್ವಾಸಕೋಶದ ಉರಿಯೂತ(ನ್ಯುಮೋನಿಯ), ಅತಿಸಾರ(ಡಯೇರಿಯ), ಟೈಫಾಯ್ಡ್(ವಿಷಮಶೀತ ಜ್ವರ), ಜರ್ಮನ್ ಮೀಸಲ್ಸ್(ದಡಾರ), ಮೆನೆಂಜೈಟಿಸ್, ಚಿಕನ್‌ಪಾಕ್ಸ್, ಟೆಟನಸ್(ಧನುರ್ವಾಯು), ಮಂಪ್ಸ್, ಪೋಲಿಯೋ, ಡಿಪ್ತೀರಿಯ, ರೊಟವೈರಸ್, ಹೆಪಟೈಟಿಸ್, ರುಬೆಲ್ಲಾ, ಇನ್‌ಫ್ಲುಯೆಂಜಾ ಮೊದಲಾದ ರೋಗಗಳು ಬಾರದಂತೆ ಅಗತ್ಯವಾದ ಚುಚ್ಚುಮದ್ದು ಹಾಕಿಸುವುದು ಅತ್ಯಗತ್ಯ.
(ಬೆಣ್ಣೆ ಹಣ್ಣಿನ ಜೂಸ್)....
ವಿಧಾನ ಮತ್ತು ಉಪಯೋಗಗಳು...ಏನಪ್ಪಾ ಎಷ್ಟು ಚಿಕ್ಕು ರೆಸಿಪಿ ನ ಎಲ್ಕೊಡ್ತಿದಳೇ ಅಂಕೊಳ್ಬೇಡಿ,, ರೆಸಿಪಿಗಿಂತ ಇದರ ಉಪಯೋಗಗಳನ್ನು ತಿಳ್ಕೊಲ್ಲಿ ಅಂತ ಅಷ್ಟೇ...
ಈ ಹಣ್ಣು ತುಂಬಾನೇ ಉಪಯುಕ್ತವಾಗಿದೆ..
ಇದನ್ನು ಮಾಡುವ ವಿಧಾನ.....
ಒಂದು ಹಣ್ಣಿನಲ್ಲಿ 4 ಗ್ಲಾಸ್ ಜೂಸ್ ಮಾಡಬಹುದು... ಹಣ್ಣನ್ನು ಕೆಳಗಿನ ಫೋಟೋನಲ್ಲಿ ತೋರಿಸಿರುವ ಹಾಗೆ ಅರ್ಧಕ್ಕೆ ಕಟ್ ಮಾಡಿ, ಒಂದು ಸ್ಪೂನಿಂದ ಹಣ್ಣನ್ನು ಎರೆಯಬೇಕು ನಂತರ ಜೂಸ್ ಜಾರ್ಗೆ ಹಣ್ಣು, 5 ರಿಂದ 6 tsp ಸಕ್ಕರೆ, 1 ಗ್ಲಾಸ್ ಹಾಲು ಹಾಕಿ ಮಿಕ್ಸಿ ಮಾಡಿದರೆ ಬಟ್ಟರ್ ಫ್ರೂಟ್ ಜೂಸ್ ರೆಡಿ...
ಈ ಜೂಸ್ ಐಸ್ ಕ್ರೀಮ್ನ ಹಾಗೆ ಇರುವುದರಿಂದ ಇ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ....
# ಇದರ ಅನುಕೂಲಗಳು....
1.    ಚರ್ಮದ ಡಿಸೀಜಸ್ಗಳನ್ನು ಕಡಿಮೆ ಮಾಡಿ ಚರ್ಮದ ಕಾಂತಿ ಮೂಡಿಸುತ್ತದೆ..
2.   ದೇಹದಲ್ಲಿರುವ ಅತಿಯಾದ ಕೊಬ್ಬಿನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆದು ಕೊಬ್ಬಿನಂಶವನ್ನು ಬ್ಯಾಲೆನ್ಸ್ ಮಾಡುತ್ತದೆ....
3.   ರಕ್ತದ ಒತ್ತಡ ಏರು ಪೇರು ಆಗದಂತೆ ತಡೆಯುತ್ತದೆ..
4.   Breast cancer ತಡೆಗಟ್ಟುತದೆ..
5.   ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ..
6.   ತುಂಬಾ ಜನರಲ್ಲಿ ಕಾಡುವ ಸಮಸ್ಯೆ ಬಾಲಿಯಲ್ಲಿ ಉಣ್ಣು ಆಗುವುದು ಈ ಹಣ್ಣಿನ ಜೂಸ್ ಕುಡಿಯುತ್ತಿದ್ದರೆ ಬಾಯಿಯ ಅಲ್ಸರ್ ಕಡಿಮೆಯಾಗುತ್ತದೆ..
7.  ಬಾಯಿಯಿಂದ ಬರುವ ಯಾವುದೇ ಕೆಟ್ಟ ವಾಸನೆಯನ್ನು ತಡೆಗಟ್ಟುತದೆ....
ಎಷ್ಟೆಲ್ಲ ಉಪಯೋಗಗಳಿರುವ ಹಣ್ಣಿನ ಜೂಸನ್ನು ಅಂಗಡಿಯಲ್ಲಿ ಒಂದು ಗ್ಲಾಸ್ ಗೆ 40 ರಿಂದ 50 ರೂಪಾಯಿ ಕೊಟ್ಟು ಕುಡಿಯುವುದಕ್ಕಿಂತ ಮನೆಯಲ್ಲಿಯೇ ಮಾಡುವುದು ಉತ್ತಮ...  
8.  ದಪ್ಪ ಆಗಲು ಸಹಾಯ ಮಾಡುತ್ತದೆ

ಮನೆಮದ್ದು
ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಕೊಳ್ಳಲು ವಿಧಾನಗಳನ್ನು ಹೇಳಲಾಗಿದೆ. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವಿಧಾನಗಳನ್ನು ಮನೆಮದ್ದು ಎಂದು ಕರೆಯಬಹುದು. ನಮಗೆ ಸುಲಭವಾಗಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಗಳೆಂದರೆ – ಅಮೃತಬಳ್ಳಿ, ತುಳಸಿ, ಒಂದೆಲಗ, ಲೋಳೆಸರ, ಕರಿಬೇವು, ದೊಡ್ಡಪತ್ರೆ, ಬಸಳೆ ಸೊಪ್ಪು, ಹೊನಗೊನೆ ಸೊಪ್ಪು ಮುಂತಾದವುಗಳು. ಕೆಲವು ಔಷಧಿ ಸಸ್ಯಗಳನ್ನು ಮನೆಮದ್ದಾಗಿ ಬಳಸಬಹುದಾದ ಸುಲಭ ವಿಧಾನಗಳು ಕೆಳಕಂಡಂತಿವೆ:
1. ಅಮೃತಬಳ್ಳಿ
ಹೆಸರೇ ಹೇಳುವ ಹಾಗೆ ಈ ಔಷಧಿ ಸಸ್ಯ ಅಮೃತಕ್ಕೆ ಸಮನಾದ ಗುಣಗಳನ್ನು ಹೊಂದಿದೆ. ಇದನ್ನು ರೋಗಿಗಳಲ್ಲದೆ ಆರೋಗ್ಯವಂತರೂ ಕೂಡ ಬಳಸಬಹುದು.
ಚಹರೆ: ಇದೊಂದು ಬಳ್ಳಿ, ಕಾಂಡ ಕತ್ತರಿಸಿದರೆ ಚಕ್ರಾಕಾರವಿರುತ್ತದೆ, ಹೃದಯಾಕಾರದ ಎಲೆಗಳು, ಬಳ್ಳಿಯಿಂದ ಅಲ್ಲಲ್ಲಿ ದಾರ ಜೋತಾಡುತ್ತಿರುತ್ತದೆ.
ಅಮೃತಬಳ್ಳಿ
ಉಪಯೋಗ
ಜ್ವರ: ಎಲ್ಲಾ ರೀತಿಯ ಜ್ವರಗಳಲ್ಲಿ ಈ ಔಷಧ ಪರಿಣಾಮಕಾರಿಯಾಗಿದೆ. 4 ಚಮಚ ಕಾಂಡದ ರಸವನ್ನು 1 ಚಮಚ ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಬಳಸಬೇಕು. ಅಲ್ಲದೇ, ಒಣಗಿದ ಕಾಂಡದ ಕಷಾಯ ತಯಾರಿಸಿ ಕೂಡ ಸೇವಿಸಬಹುದು. 1 ಭಾಗ ಕಾಂಡವನ್ನು 4 ಭಾಗ ನೀರಿನಲ್ಲಿ ಸಣ್ಣ ಉರಿಯ ಮೇಲೆ 1/4 ಭಾಗಕ್ಕೆ ಇಳಿಸಿ, ಶೋಧಿಸಿ, 30 ಮಿ. ಲೀ. ಜೇನಿನ ಜೊತೆ 3 ಬಾರಿ ಸೇವಿಸಬೇಕು.
ಚರ್ಮರೋಗ: ಎಲೆಗಳನ್ನು ಸ್ವಚ್ಛಮಾಡಿ, ಅರಿಶಿನದ ಜೊತೆ ಅರೆದು ಲೇಪಮಾಡಬೇಕು. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಸಕ್ಕರೆ ಕಾಯಿಲೆ: 1 ಇಂಚು ಬಲಿತ ಕಾಂಡವನ್ನು ಜಗಿದು ರಸವನ್ನು ದಿನಕ್ಕೆ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
2. ತುಳಸಿ
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ತುಳಸಿ
ಉಪಯೋಗ
ಕೆಮ್ಮು, ನೆಗಡಿ: 10 ಎಲೆಗಳನ್ನು ಜೇನುತುಪ್ಪದ ಜೊತೆ ದಿನದಲ್ಲಿ 3 ಬಾರಿ ಊಟದ ನಂತರ ಸೇವಿಸಬೇಕು
ಚರ್ಮರೋಗ: ಎಲೆಗಳನ್ನು ಅರಿಶಿನದ ಜೊತೆಗೆ ಅರೆದು ಲೇಪಿಸಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಜಂತುಹುಳು: ತುಳಸಿ ಬೀಜ (1/2 ಚಮಚ) ವನ್ನು ಬೆಲ್ಲದೊಂದಿಗೆ ಊಟದ ನಂತರ ದಿನದಲ್ಲಿ 2 ಬಾರಿ ಸೇವಿಸಬೇಕು.
ನೀರು ಶುದ್ಧೀಕರಣ: 8 ರಿಂದ 10 ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ, ನೀರಿನಿಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.
ಸೊಳ್ಳೆಗಳ ನಿಯಂತ್ರಣ: ಮನೆಯ ಸುತ್ತ ಹೆಚ್ಚಾಗಿ ತುಳಸಿ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಶುದ್ಧ ಗಾಳಿ ಪಡೆಯಬಹುದು. ಒಣಗಿದ ಎಲೆಗಳನ್ನು (ಒಂದು ಹಿಡಿ) ಕೆಂಡದಲ್ಲಿ ಧೂಪ ಹಾಕಿದರೆ ಸೊಳ್ಳೆಗಳು ಇಲ್ಲವಾಗುತ್ತವೆ.
3. ಒಂದೆಲಗ
ಚಹರೆ: ಇದೊಂದು ನೆಲದ ಮೆಲೆ ಹರಡುವ ಬಳ್ಳಿಯಾಗಿದೆ, ಎಲೆಗಳು ಮೆದುಳಿನ ಆಕಾರದಲ್ಲಿರುತ್ತವೆ; ಹೆಚ್ಚು ನೀರಿರುವ ಜಾಗದಲ್ಲಿ ಬೆಳೆಯುತ್ತದೆ.
ಒಂದೆಲಗ
ಉಪಯೋಗ
ಜ್ಞಾಪಕಶಕ್ತಿ ವರ್ಧನೆ: ಪ್ರತಿನಿತ್ಯ ಬೆಳಿಗ್ಗೆ 4 ರಿಂದ 6 ಎಲೆಗಳನ್ನು ಜಗಿದು ನುಂಗಬೇಕು.
ರಕ್ತದೊತ್ತಡ: ಒಂದೆಲಗದ ಎಣ್ಣೆ ತಯಾರಿಸಿ ನೆತ್ತಿಗೆ ಹಚ್ಚಿಕೊಳ್ಳಬೇಕು.
ನಿದ್ರಾಹೀನತೆ: ಎಣ್ಣೆಯನ್ನು ಬೆಚ್ಚಗೆ ಮಾಡಿ ಮಲಗುವ ಮುನ್ನ ನೆತ್ತಿಗೆ ಹಾಗೂ ಪಾದಗಳಿಗೆ ಹಚ್ಚಿ ಮೃದುವಾಗಿ ಅಭ್ಯಂಗ ಮಾಡಿಕೊಳ್ಳಬೇಕು.
ತೊದಲು: ಒಂದೆಲಗ ಎಲೆಯ ರಸವನ್ನು (3 ಟೀ ಚಮಚ) 3 ಬಾರಿ ಊಟದ ನಂತರ ಜೇನಿನ ಜೊತೆ ಸೇವಿಸಬೇಕು.
4. ಲೋಳೆಸರ
ಚಹರೆ: ಇದೊಂದು ಸಣ್ಣ ಗಿಡ, ದಪ್ಪನೆಯ ಎಲೆಗಳು, ಎಲೆಗಳ ಅಂಚಿನುದ್ದಕ್ಕೂ ಮುಳ್ಳುಗಳಿರುತ್ತವೆ ಹಾಗೂ ಎಲೆ ಒಳಗಿನ ತಿರುಳು ಲೋಳೆಯಾಗಿರುತ್ತದೆ.
ಲೋಳೆಸರ
ಉಪಯೋಗ
ಕೂದಲ ಆರೈಕೆ: ಲೋಳೆಸರದ ರಸವನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಂತು, ಬೆಳವಣಿಗೆ ಹೆಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.
ಮುಖದ ಕಾಂತಿ: ಲೋಳೆಸರದ ರಸವನ್ನು ಮುಖಕ್ಕೆ ವಾರಕ್ಕೊಂದು ಬಾರಿ ಹಚ್ಚಿ 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
ಚರ್ಮರೋಗ: ಒಣ ಚರ್ಮ ಇದ್ದವರು ಲೋಳೆಸರದ ರಸವನ್ನು ಅರಿಶಿನದ ಜೊತೆ ಸೇರಿಸಿ ದಿನಕ್ಕೆರಡು ಬಾರಿ ಹಚ್ಚಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಸುಟ್ಟ ಗಾಯ: ಸುಟ್ಟಗಾಯಕ್ಕೆ ತಕ್ಷಣ ಲೋಳೆಸರವನ್ನು ಹಚ್ಚುವುದರಿಂದ ಉರಿ ಬೇಗ ಕಡಿಮೆಯಾಗುತ್ತದೆ.
ಕೈಕಾಲು ಉರಿ: ಮಧುಮೇಹ ರೋಗಿಗಳಲ್ಲಿ ಲೋಳೆಸರದ ರಸವನ್ನು ಪಾದಗಳಿಗೆ ಹಾಗೂ ಅಂಗೈಗೆ ಹಚ್ಚಿಕೊಂಡಲ್ಲಿ ಉರಿ ನಿವಾರಣೆಯಾಗುತ್ತದೆ. ಶೀತ ಉಂಟಾಗುವ ಸಂಭವವಿರುವುದರಿಂದ, ಇದನ್ನು ರಾತ್ರಿಯ ಬದಲು ಮಧ್ಯಾಹ್ನದ ವೇಳೆ ಹಚ್ಚುವುದು ಸೂಕ್ತ.5. ಕರಿಬೇವು
ಚಹರೆ: ಇದೊಂದು ಚಿರಪರಿಚಿತ ಸಸ್ಯ.
ಕರಿಬೇವು
ಉಪಯೋಗ
ದೇಹದ ತೂಕ ಕುಗ್ಗಿಸಲು: 10 ರಿಂದ 15 ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನಬೇಕು; ಮೂರು ತಿಂಗಳು ಸೇವಿಸುವುದರಿಂದ ದೇಹದ ಕೊಬ್ಬು ಕರಗಿ, ತೂಕ ಕಡಿಮೆಯಾಗುತ್ತದೆ.
ರಕ್ತಹೀನತೆ: ಅರ್ಧ ಚಮಚ ಕರಿಬೇವಿನ ಸೊಪ್ಪಿನ ಪುಡಿಯನ್ನು ಸಮಪ್ರಮಾಣ ಜೇನಿನ ಜೊತೆ ಸೇವಿಸಬೇಕು. ಕರಿಬೇವಿನಲ್ಲಿರುವ ಕಬ್ಬಿಣಾಂಶ ರಕ್ತಹೀನತೆ ನಿವಾರಿಸುತ್ತದೆ.
ಹುಳಿತೇಗು: ಅರ್ಧ ಚಮಚ ಕರಿಬೇವಿನ ಸೊಪ್ಪನ್ನು ಒಂದು ಲೋಟ ಮಜ್ಜಿಗೆಯ ಜೊತೆ ಊಟಕ್ಕೆ ಅರ್ಧ ಗಂಟೆ ಮುಂಚೆ ದಿನದಲ್ಲಿ 3 ಬಾರಿ, 7 ದಿನ ಸೇವಿಸಬೇಕು.
ಕೇಶಚ್ಯುತಿ: ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೀರಿನ ಜೊತೆ ಅರೆದುಕೊಳ್ಳಬೇಕು. 250 ಗ್ರಾಂ. ಕೊಬ್ಬರಿ / ಎಳ್ಳೆಣ್ಣೆ ಕಾಯಿಸಿ, ಅರೆದ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ನೀರಿನ ಅಂಶ ಹೋಗುವವರೆಗೆ ಕಾಯಿಸಿ, ತಣ್ಣಗಾದ ನಂತರ ಶೋಧಿಸಿ ಶೇಖರಿಸಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಹೊಟ್ಟು ನಿವಾರಣೆಯಾಗಿ, ಕೇಶ ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.
ಈ ಔಷಧಿ ಸಸ್ಯಗಳನ್ನು ನಾವು ನಮ್ಮ ಮನೆಯಲ್ಲಿಯೇ ಹೂವಿನ ಕುಂಡಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಿಕೊಳ್ಳಬಹುದು. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಪರಿಸರವೂ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.
[26/11 1:36 PM] ‪+91 94498 28225‬: ಮನೆಮದ್ದು
ಮನೆ ಮದ್ದು
ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.
ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.
ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.
ವಸ್ತು : ಈರುಳ್ಳಿ
ಶಮನ : ರಕ್ತಹೀನತೆ, ಗಾಯದ ನೋವು, ರಕ್ತಸ್ರಾವ.
ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು.
ವಸ್ತು : ಕಡಲೆಕಾಳು
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ವಸ್ತು : ಹಲಸಿನ ಹಣ್ಣು
ಶಮನ : ತಲೆನೋವು, ನಿತ್ರಾಣ
ಸಾಮಾನ್ಯ ತಲೆನೋವು ಇರುವಾಗ, ಸ್ವಲ್ಪ ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಮತ್ತು ಇತರರಿಗೆ ಆಗಾಗ್ಗೆ ನಿತ್ರಾಣವೆನಿಸಿದಾಗ ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದರಿಂದ ಚೈತನ್ಯ ಮೂಡುವುದು.
ವಸ್ತು : ಶುಂಠಿ
ಶಮನ : ಗಂಟಲು ಕಟ್ಟುವಿಕೆ, ಬಾಯಿ ವಾಸನೆ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.
ವಸ್ತು : ಮೆಂತ್ಯಸೊಪ್ಪು
ಶಮನ : ಸಕ್ಕರೆ ಕಾಯಿಲೆ
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿವಸ ಬೆಳಿಗ್ಗೆ ಮೆಣ್ತ್ಯಸೊಪ್ಪಿನ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು. ಮೆಂತ್ಯಸೊಪ್ಪಿನಂತೆಯೇ ಮೆಂತ್ಯ ಕೂಡ ಔಷಧೀಯ ಗುಣಗಳನ್ನು ಹೊಂದಿದೆ.
ವಸ್ತು : ಎಳ್ಳು
ಶಮನ : ಸುಟ್ಟ ಗಾಯ, ಉರಿಮೂತ್ರ
ಸುಟ್ಟಗಾಯಕ್ಕೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಎಳ್ಳು ಮತ್ತು ಸೌತೆಬೀಜವನ್ನು ಅರೆದು ಹಾಲು, ತುಪ್ಪದೊಡನೆ ಸೇರಿಸಿ ಕುಡಿಯುವುದರಿಂದ ಎಲ್ಲ ರೀತಿಯ ಕಟ್ಟು ಮೂತ್ರ ಮತ್ತು ಉರಿಮೂತ್ರ ಗುಣವಾಗುತ್ತದೆ.
ಸಾಸಿವೆ(ಮಸ್ಟರ್ಡ್)
ಶಮನ : ಹಲ್ಲು ನೋವು, ಉಪ್ಪಿನಕಾಯಿ ಶಿಲೀಂದ್ರ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.
ವಸ್ತು : ಗೋಧಿ
ಶಮನ : ಹೊಟ್ಟೆ ಹುಣ್ಣು, ಕೀಲುನೋವು
ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯಹುಣ್ಣು ನಿವಾರಣೆಯಾಗುವುದು. ಜತೆಗೆ ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.
ವಸ್ತು : ಶುಂಠಿ
ಶಮನ : ಅಜೀರ್ಣ, ನೆಗಡಿ, ಹಲ್ಲುನೋವು.
ಊಟ ಮಾಡುವುದಕ್ಕೆ ಮೊದಲು ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ಇಲ್ಲವಾಗುವುದು. ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುವುದು. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು.ವಸ್ತು : ಜೇನುತುಪ್ಪ
ಶಮನ : ಸುಟ್ಟ ಗಾಯ, ಚರ್ಮರೋಗ.
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.
ವಸ್ತು : ಕಡಲೇ ಕಾಳು
ಶಮನ : ನಿಶ್ಯಕ್ತಿ, ನೆಗಡಿ
ನಿಶ್ಯಕ್ತಿಯಿಂದ ಬಳಲುವವರು, ಹೆಚ್ಚು ವ್ಯಾಯಾಮ ಮಾಡುವವರು ಎರಡು ಮೂರು ಚಮಚದಷ್ಟು ಕಡಲೇ ಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಒಣದ್ರಾಕ್ಷಿಯ ಜತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು. ನೆಗಡಿಯಿರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ.
ವಸ್ತು : ಹಲಸಿನ ಹಣ್ಣು
(ಜ್ಯಾಕ್ ಫ್ರೂಟ್)
ಶಮನ : ಪಿತ್ತ ವಿಕಾರ, ನರಗಳ ದೌರ್ಬಲ್ಯ.
ಹಲಸಿನ ಹಣ್ಣನ್ನು ಜೇನುತುಪ್ಪದೊಡನೆ ತಿನ್ನುತ್ತಾ ಬಂದರೆ ಪಿತ್ತವಿಕಾರಗಳು ಶಮನಗೊಳ್ಳುವುದು. ತೊಳೆಗಳನ್ನು ಸಣ್ಣದಾಗಿ ತುಂಡುಮಾಡಿ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚುವುದಲ್ಲದೇ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಹಲಸಿನ ಸೇವನೆಯಿಂದ ವೀರ್ಯ್ ವೃದ್ಧಿಯೂ ಆಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ.
ವಸ್ತು : ಸೀತಾಫಲ (ಕಸ್ಟರ್ಡ್ ಆಪಲ್)
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು.
ವಸ್ತು : ಹಾಗಲಕಾಯಿ
(ಬಿಟ್ಟರ್ ಗೌರ್ಡ್)
ಶಮನ : ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು.
ವಸ್ತು : ಅಂಜೂರ (ಫಿಗ್)
ಶಮನ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ.
ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.
ವಸ್ತು ಸೇಬು (ಆಪಲ್)
ಶಮನ : ತಲೆನೋವು, ಮರೆವು, ಮೊಡವೆ.
ಸೇಬಿನ ಹಣ್ಣನ್ನು ತುಂಡುಮಾಡಿಕೊಂಡು ಉಪ್ಪು ಸಹಿತ ನಿರಂತರ ಸೇವಿಸಿದರೆ ತಲೆನೋವು ಕಡಿಮೆಯಾಗುವುದು. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುವುದು. ಊಟವಾದ ಬಳಿಕ ಸೇಬನ್ನು ತಿಂದರೆ ಜ್ನಾಪಕ ಶಕ್ತಿ ಹೆಚ್ಚುವುದು.
ವಸ್ತು : ಪರಂಗಿ ಹಣ್ಣು
(ಪಪಾಯ)
ಶಮನ : ಹೃದಯ ದೌರ್ಬಲ್ಯ
ಪರಂಗಿಹಣ್ಣಿನ ಜತೆ ಹಾಲು ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಹೃದಯ ದೌರ್ಬಲ್ಯ ನಿವಾರಣೆಯಾಗಿ ಹೊಸ ಚೈತನ್ಯ ಮೂಡುವುದು. ಹಾಲುಣಿಸುವ ತಾಯಂದಿರು ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಶಕ್ತಿ ಹೆಚ್ಚುವುದು. ಊಟದ ನಂತರ ಹಣ್ಣನ್ನು ಸೇವಿಸುತ್ತಾ ಬಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.
ವಸ್ತು : ಕಡಲೇಕಾಯಿ
ಉಪಯೋಗ : ಮುಖದ ಕಾಂತಿ ಹೆಚ್ಚಳ, ಮಧುಮೇಹಿಗಳಿಗೆ ಅನುಕೂಲ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.ಮಾವು (ಮ್ಯಾಂಗೊ)
ಶಮನ : ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ.
ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. ಹಣ್ಣನ್ನು ಹಿತಮಿತವಾಗಿ ತಿಂದರೆ ವಾಯು ಶಮನಗೊಳ್ಳುವುದು. ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಹಿತವಾಗುವುದು. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು.
ವಸ್ತು : ಅಡುಗೆ ಉಪ್ಪು
ಶಮನ : ಬಾಯಿ ಹುಣ್ನು
ಒಂದು ಬಟ್ಟಲು ಬಿಸಿನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸುವುದು. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು.
ವಸ್ತು : ಮೆಣಸು
ಶಮನ : ಹಲ್ಲುನೋವು
ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು. ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುವುದು.
ವಸ್ತು : ಕಿತ್ತಳೆ
ಶಮನ : ಮುಖದಲ್ಲಿ ಕಲೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖದಲ್ಲಿ ಕಲೆಯಿರುವ ಭಾಗದಲ್ಲಿ ಮೃದುವಾಗಿ ತಿಕ್ಕಬೇಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮುಖದಲ್ಲಿನ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಗುವುವು.
ವಸ್ತು : ಕೊತ್ತಂಬರಿ
ಶಮನ : ತಲೆನೋವು, ಬಾಯಿಯ ದುರ್ಗಂಧ.
ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ. ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.
ವಸ್ತು : ಉದ್ದು
ಶಮನ : ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ.
ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು.
ವಸ್ತು : ನಿಂಬೆ
ಶಮನ : ಸೊಳ್ಳೆಗಳ ಕಾಟ, ಬಾಯಿಯ ದುರ್ವಾಸನೆ.
ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವ ಜನರು ಮೈಕೈಗೆ ನಿಂಬೆರಸ ಸವರಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನಿವಾರಣೆಯಾಗುವುದು.
ವಸ್ತು : ಲವಂಗ
ಶಮನ : ಹಲ್ಲು ನೋವು, ಕೆಮ್ಮು.
ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಸಾಧಾರಣ ಕೆಮ್ಮು ಕಾಣಿಸಿಕೊಂಡಾಗ ಕಲ್ಲುಸಕ್ಕರೆ ಮತ್ತು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಶಮನವಾಗುವುದು.
ವಸ್ತು : ತುಳಸಿ
ಶಮನ : ಮೈಕೈನೋವು
ಒಂದು ಲೋಟ ನೀರಿನಲ್ಲಿ ಹತ್ತು ತುಲಸಿ ಎಲೆಗಳನ್ನು ಚೆನ್ನಾಗಿ ಕುದಿಸುವುದು. ನೀರು ಚೆನ್ನಾಗಿ ಕುದಿದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳುವುದು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವುದು. ಮೈಕೈನೋವು ನಿಲ್ಲುವವರೆಗೂ ಪ್ರತಿದಿನ ಈ ಕಷಾಯ ಬಳಸುವುದು. ಜತೆಗೆ, ಅರ್ಧ ಗ್ರಾಂ ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಬೇಗ ಶಮನವಾಗುವುದು.
ವಸ್ತು : ಮಾವಿನ ಎಲೆಗಳು
ಶಮನ : ಕಿವಿ ಸೋಂಕು
ಕೆಲವು ತಾಜಾ ಮಾವಿನ ಎಲೆಗಳನ್ನು ಚೆನ್ನಾಗಿ ಅರೆದು ಅವುಗಳಿಂದ ಒಂದು ಟೀ ಚಮಚ ರಸವನ್ನು ತಯಾರಿಸಿಕೊಳ್ಳುವುದು. ಈ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೋಂಕಿಗೆ ಒಳಗಾಗಿರುವ ಕಿವಿಗೆ ಔಷಧವಾಗಿ ಬಳಸಬಹುದು. ದಿನಕ್ಕೆರಡು ಬಾರಿ ಪ್ರತಿಸಲವೂ ಒಂದೆರಡು ಹನಿ ಬಳಸಿದರೆ ಸೋಂಕು ನಿವಾರಣೆಯಾಗುವುದು.
ವಸ್ತು : ಖರ್ಜೂರ
ಶಮನ : ಜಂತುಹುಳು, ಭೇದಿ.
ಜಂತುಹುಳುಗಳಿಂದ ಬಳಲುತ್ತಿರುವವರು ಐದು ಖರ್ಜೂರ ತಿಂದು ನಿಂಬೆಹಣ್ಣಿನ ಪಾನೀಯ ಕುಡಿದರೆ ಶಮನವಾಗುವುದು. ಪರಿಣಾಮ ಬೀರುವವರೆಗೂ ಮುಂದುವರಿಸುವುದು ಒಳ್ಳೆಯದು. ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು.ಉದ್ದು
ಶಮನ : ಸ್ತ್ರೀಯರ ಬಿಳುಪು ರೋಗ.
ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಸ್ತ್ರೀಯರ ಬಿಳುಪುರೋಗ ವಾಸಿಯಾಗುತ್ತದೆ.
ವಸ್ತು : ಬಿಲ್ವ
ಶಮನ : ಕಫ, ಊತ.
ಕಫ ಕಟ್ಟಿಕೊಂಡು ಎದೆ ನೋವು ಬರುತ್ತಿದ್ದರೆ ಬಿಲ್ವದ ಎಲೆಗಳ ರಸವನ್ನು ಕುಡಿದರೆ ಶಮನವಾಗುವುದು. ಊತವಿರುವಾಗ ಎಲೆಗಳನ್ನು ಬಿಸಿ ಮಾಡಿ ಪಟ್ಟು ಹಾಕಿದರೆ ಪರಿಣಾಮ ಬೀರುವುದು.
ವಸ್ತು : ವೀಳ್ಯದೆಲೆ
ಶಮನ : ಕೆಮ್ಮು, ನೋವು.
ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.
ವಸ್ತು : ಅರಿಶಿನ
ಶಮನ : ರಕ್ತ ಸ್ರಾವ, ಮೊಡವೆ.
ದೇಹದ ಯಾವುದೇ ಭಾಗ ಕೊಯ್ದುಕೊಂಡು ರಕ್ತ ಒಸರುತ್ತಿದ್ದರೆ, ಆ ಗಾಯದ ಮೇಲೆ ಅರಿಶಿನ ಹುಡಿಯನ್ನು ಉದುರಿಸಿದರೆ ರಕ್ತ ಬರುವುದು ನಿಲ್ಲುವುದು. ಮೊಡವೆಗಳಿಗೆ ಅರಿಶಿನದ ಕೊರಡನ್ನು ತೇಯ್ದು ಲೇಪಿಸುವುದರಿಂದ ಅವುಗಳು ಕ್ರಮೇಣ ಕಡಿಮೆಯಾಗುತ್ತವೆ.
ವಸ್ತು : ತುಳಸಿ
ಶಮನ : ಹುಳುಕಡ್ಡಿ.
ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಶೀಘ್ರ ಗುಣ ಕಂಡುಬರುವುದು.
ವಸ್ತು : ಶ್ರೀಗಂಧ
ಶಮನ : ಚರ್ಮದ ಅಲರ್ಜಿ.
ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರ್‍ಈಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರ್‍ಈಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.
ವಸ್ತು : ಪರಂಗಿಹಣ್ಣು
ಉಪಯೋಗ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ.
ಪ್ರತಿದಿನ ಪರಂಗಿಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಹಣ್ಣು ಸೇವಿಸಿದರೆ ಪರಿಣಾಮ ಬೀರುವುದು. ಬಾಣಂತಿಯರು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುವುದು.
 ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!
ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!
Posted by: Reena
ಇಂದು ವಿಶ್ವ ಸಸ್ಯಾಹಾರಿ ದಿನ. ಕೆಲವರು ಹುಟ್ಟಿದಾಗಿನಿಂದ ಸಸ್ಯಾಹಾರಿಗಳಾಗಿರುತ್ತಾರೆ, ಮತ್ತೆ ಕೆಲವರು ಮಾಂಸಾಹಾರವನ್ನು ತಿನ್ನುತ್ತಿದ್ದು ಯಾವುದೋ ಒಂದು ಕಾರಣಕ್ಕೆ ಶುದ್ಧ ಸಸ್ಯಾಹಾರಿಗಳಾಗುತ್ತಾರೆ. ಸಸ್ಯಾಹಾರ ಮಾತ್ರ ತಿಂದರೆ ಸೌಂದರ್ಯ ಹೆಚ್ಚಾಗುತ್ತದೆ ಎಂದು ಅನೇಕ ಸೆಲೆಬ್ರಿಟಿಗಳು ಹೇಳುವುದನ್ನು ಕೇಳಿರಬಹುದು. ಹೌದು, ಮಾಂಸಾಹಾರಕ್ಕಿಂತ ಸಸ್ಯಾಹಾರ ಆರೋಗ್ಯಕ್ಕೆ ಮತ್ತು ದೇಹದ ಸೌಂದರ್ಯಕ್ಕೆ ಒಳ್ಳೆಯದು. ಯಾವ ರೀತಿಯಲ್ಲಿ ಒಳ್ಳೆಯದು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.
1. ಹಣ್ಣುಗಳು, ನಾರಿನಂಶವಿರುವ ಪದಾರ್ಥಗಳು ಹಾಗೂ ತರಕಾರಿಗಳು ಕೊಲೆಸ್ಟ್ರಾಲ್ ನ ಹಾಗೂ  ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
2. ಒಬೆಸಿಟಿ ಹೆಚ್ಚಾದರೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಒಬೆಸಿಟಿಗೆ ಕೊಬ್ಬಿನಂಶವಿರುವ ಪದಾರ್ಥಗಳು ಕಾರಣವಾಗಿದೆ. ತರಕಾರಿಗಳಿಗೆ ಹೋಲಿಕೆ ಮಾಡಿದರೆ ಮಾಂಸಾಹಾರದಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಅಲ್ಲದೆ ನಾರಿನಂಶವಿರುವ ತರಕಾರಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರದಲ್ಲಿಡಲು ಸಹಕಾರಿಯಾಗಿದೆ.
3. ತರಕಾರಿಯಲ್ಲಿ antioxidants ಅಂಶವಿರುವುದರಿಂದ ತ್ವಚೆಯಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ನೀರಿನಂಶವಿರುವ ಹಣ್ಣುಗಳು ತ್ವಚೆ ಸೌಂದರ್ಯಕ್ಕೆ ತುಂಬಾ ಒಳ್ಳೆಯದು.
4. ಹಣ್ಣು, ತರಕಾರಿಗಳಲ್ಲಿ ಹಾರ್ಮೋನ್ ಗಳನ್ನು ಚುಚ್ಚುವುದಿಲ್ಲ, ಆದರೆ ಕೆಲವು ಪ್ರಾಣಿಗಳಿಗೆ ಬೇಗನೆ ಬೆಳೆಯಲು ಹಾರ್ಮೋನ್ ಗಳನ್ನು ಇಂಜೆಕ್ಟ್ ಮಾಡಲಾಗುವುದು. ಆದ್ದರಿಂದ ಹಾರ್ಮೋನ್ ಫ್ರೀ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು.
5. ತರಕಾರಿಗಳನ್ನು ತಿಂದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಾಯ ಮಾಡಿ ರಕ್ತದೊತ್ತಡ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
6. ತರಕಾರಿಗಳಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ.
7. ತರಕಾರಿಗಳಲ್ಲಿ  ಆರೋಗ್ಯಕ್ಕೆ ಅಗತ್ಯವಾದ ಅಮೈನೊ ಅಂಶ ಅಧಿಕವಿರುತ್ತದೆ.
8. ತರಕಾರಿಯಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.
9. ತರಕಾರಿ, ಹಣ್ಣುಗಳು ಇವುಗಳಿಂದ ಸೂಪ್, ಸಲಾಡ್ ಇಂತಹ ಪದಾರ್ಥಗಳನ್ನು ಮಾಡಿ ಸೇವಿಸುವುದರಿಂದ ಬೊಜ್ಜು ಬರುವ ಸಾಧ್ಯತೆ ಕಡಿಮೆಯಾಗುವುದು.
10. ಮಾಂಸಾಹಾರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕೂಡ ಕಡಿಮೆ.
ಆರೋಗ್ಯವೇ ಬಹಳ ಮುಖ್ಯ
ಆಸಿಡಿಟಿ : ಇದು ಬರುವುದು ಬಹಳ ಸುಲಭ. ಇದು ಯಾವುದರಿಂದ ಬರುತ್ತದೆ? ಈ ಆಸಿಡಿಟಿ ಬಂದರೆ ಸಾಕು, ಎಲ್ಲಾ ಖಾಯಿಲೆಗಳಿಗೂ ಆಹ್ವಾನ ಕೊಟ್ಟಂತೆ. ಈ ಆಸಿಡಿಟಿ ಬಹಳ ಅಪಾಯಕಾರಿ ಖಾಯಿಲೆ. ಇದು ಬಂದಾಗ ಜನರೇನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು ಡೈಜೀನ್ ಎಂಬ ಮಾತ್ರೆಯನ್ನು. ಅದನ್ನು ತೆಗೆದುಕೊಂಡ ತಕ್ಷಣ ಇದು ಮಾಯ. ಆದರೆ ಇದು ಪುನಹ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು.
ಈ ಆಸಿಡಿಟಿ ಬರಲು ಕಾರಣ ಏನೆಂದರೆ ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು, ಐಸ್ ಕ್ರೀಮ್, ಅತಿಯಾದ ಕಾಫೀ ಸೇವನೆ, ಅತಿ ಎಣ್ಣೆಯ ಸೇವನೆ, ಇತ್ಯಾದಿ ಗಳಿಂದ ಬರುತ್ತದೆ

ಆರೋಗ್ಯವೇ ಭಾಗ್ಯ
“ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಮಾತು ಅಕ್ಷರಶಃ ಸತ್ಯವಾದದ್ದು. ಆರೋಗ್ಯವೇ ಇಲ್ಲದ ಮೇಲೆ ಲೌಕಿಕ ಸುಖಗಳು ಸುಖ, ನೆಮ್ಮದಿಯನ್ನು ಕೊಡುವುದಿಲ್ಲ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ, ವ್ಯಾಯಾಮ, ಯೋಗಾಭ್ಯಾಸ ನಿಗದಿತ ಪ್ರಮಾಣದ ಆಹಾರ, ಇವುಗಳ ಕಡೆಗೆ ಬಹುಮುಖ್ಯ ಗಮನವನ್ನು ಕೊಡಬೇಕು. ಮನುಷ್ಯ ಸಂಘಜೀವಿ, ಕೇವಲ ವೈಯಕ್ತಿಕ ಆರೋಗ್ಯದ ಕಡೆಗೆ ಮಾತ್ರ ಗಮನ ಹರಿಸಿದರೆ ಸಾಲದು. ಸಾರ್ವತ್ರಿಕ, ಸಾಮಾಜಿಕ, ಆರೋಗ್ಯದ ಕಡೆಗೂ ಗಮನ ಹರಿಸಬೇಕು.
ದೈಹಿಕ ಆರೋಗ್ಯಕ್ಕೆ ಊಟ ಉಪಚಾರದ ನಿಯಮಗಳನ್ನು ಹಾಕಿಕೊಂಡರೆ ಬೌದ್ಧಿಕ ಆರೋಗ್ಯಕ್ಕೆ ಓದುವ ಹವ್ಯಾಸ, ಗ್ರಂಥಾಲಯದ ಬಳಕೆ, ಪಾಠ ಪ್ರವಚನಗಳು, ವಿದ್ವತ್ ಗೋಷ್ಠಿಗಳಲ್ಲಿ ಭಾಗವಹಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಾನಸಿಕ ಆರೋಗ್ಯಕ್ಕೆ ಬೇಕಾದ ಶಾಂತಿ, ನೆಮ್ಮದಿಗಳನ್ನು ಪಡೆಯಲು, ಧ್ಯಾನ, ಪೂಜೆ ಜಪಗಳನ್ನು ಮಾಡುವ ಪ್ರಯತ್ನವನ್ನು ರೂಢಿಸಿಕೊಳ್ಳಬೇಕು. ಕೇವಲ ದೈಹಿಕ ಅರೋಗ್ಯ ಮಾತ್ರ ಆರೋಗ್ಯವೆಂದು ಭಾವಿಸುವುದು ತಪ್ಪುಗ್ರಹಿಕೆ. ದೈಹಿಕವಾಗಿ ಸದೃಢವಾಗಬೇಕಾದರೆ ಮಾನಸಿಕವಾಗಿ, ಮತ್ತು ಬೌದ್ಧಿಕವಾಗಿ ಆರೋಗ್ಯದಿಂದ ಇರುವುದೂ ಕೂಡ ಅಷ್ಟೇ ಮುಖ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ