ಸೋಮವಾರ, ಅಕ್ಟೋಬರ್ 16, 2017

ಚಾಣಕ್ಯನ ಹದಿನಾರು ಅದ್ಭುತ ವಾಕ್ಯಗಳು

ಚಾಣಕ್ಯನ ಹದಿನಾರು ಅದ್ಭುತ ವಾಕ್ಯಗಳು ಮಿಸ್ ಮಾಡ್ಕೋಬೇಡಿ ಓದಿ..!
೧) ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ, ಎಲ್ಲಾ ತಪ್ಪುಗಳನ್ನು ನೀವೊಬ್ಬರೇ ಮಾಡಲು ನಿಮ್ಮ ಆಯಸ್ಸು ಸಾಲದು
೨) ಅತಿಪ್ರಾಮಾಣಿಕರಾಗದಿರಿ. ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ. ಆ ಬಳಿಕ ಡೊಂಕಮರದ ಸರದಿ
೩) ಒಂದು ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡಬೇಕು
೪) ಅತ್ಯಂತ ದೊಡ್ಡ ಗುರುಮಂತ್ರ : ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ.
೫) ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥರಹಿತ ಸ್ನೇಹವೇ ಇಲ್ಲ. ಇದೊಂದು ಕಹಿಸತ್ಯ
೬) ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿರಿ:
ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ?
ಈ ಕಾರ್ಯದ ಫಲಗಳೇನು ಮತ್ತು
ಈ ಕಾರ್ಯದಲ್ಲಿ ನಾನು ಸಫಲನಾಗುತ್ತೇನೆಯೇ?
ಈ ಮೂರೂ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಆ ಪ್ರಯತ್ನ ವ್ಯರ್ಥ
೭) ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಅಕ್ರಮಣ ಮಾಡಿ ಅದನ್ನು ವಿನಾಶಗೊಳಿಸಿಬಿಡಿ
೮) ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ
೯) ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯದಿಂದ ಮಧ್ಯಕ್ಕೆ ನಿಲ್ಲಿಸಬೇಡಿ. ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೆ ಅತ್ಯಂತ ಸುಖಿಗಳು
೧೦) ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಓರ್ವ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿ ಪಸರಿಸುತ್ತದೆ.
೧೧) ದೇವರು ವಿಗ್ರಹದೊಳಗಿಲ್ಲ. ನಿಮ್ಮ ಭಾವನೆಗಳೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಸ್ಥಾನ
೧೨) ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡಮನುಷ್ಯನಾಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲ
೧೩) ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ
೧೪)ನಿಮ್ಮ ಮಗುವನ್ನು ಮೊದಲ ಐದು ವರ್ಷಗಳವರೆಗೆ ಮುದ್ದಾಗಿ ಸಾಕಿರಿ. ಆ ಬಳಿಕ ಐದು ವರ್ಷಗಳಲ್ಲಿ ಮಗು ಎಸಗುವ ತಪ್ಪುಗಳನ್ನು ಬೆದರಿಸಿ ತಿದ್ದಿರಿ. ಹದಿನಾರಾಯಿತೋ, ಸ್ನೇಹಿತನಂತೆ ಕಾಣಿ. ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗುತ್ತಾರೆ.
೧೫)ಮೂರ್ಖ ವ್ಯಕ್ತಿಗೆ ಪುಸ್ತಕಗಳು ಅಂಧ ವ್ಯಕ್ತಿಗೆ ಕನ್ನಡಿಗಿರುವಷ್ಟೇ ನಿರುಪಯೋಗಿ
೧೬)ವಿದ್ಯೆಯೇ ನಿಜವಾದ ಸ್ನೇಹಿತ. ವಿದ್ಯಾವಂತನಿಗೆ ಎಲ್ಲೂ ಮನ್ನಣೆಯಿದೆ. ವಿದ್ಯೆಯೇ ನಿಜವಾದ ಭೂಷಣ, ವಿದ್ಯೆ ಎಂದಿಗೂ ಯೌವನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ