ಸೋಮವಾರ, ಅಕ್ಟೋಬರ್ 16, 2017

*ಬ್ರಹ್ಮದೇವರು ಸೃಷ್ಟಿಸಿದ ನಾಲ್ಕು ಆಶ್ರಮಗಳು*

*ಬ್ರಹ್ಮದೇವರು ಸೃಷ್ಟಿಸಿದ ನಾಲ್ಕು ಆಶ್ರಮಗಳು*
ಶ್ರೀಮದ್ಭಾಗವತದ ಮೂರನೇ ಸ್ಕಂಧದಲ್ಲಿ ಬ್ರಹ್ಮದೇವರು ಮಾಡಿದ ಅನೇಕವಿಧವಾದ ಸೃಷ್ಟಿಯನ್ನು ಮೈತ್ರೇಯರು ವಿದುರನಿಗೆ ವಿವರಿಸುವರು‌. ಚತುರ್ಮುಖ ಬ್ರಹ್ಮದೇವರು ನಾಲ್ಕುವೇದಗಳು ಉಪವೇದಗಳು ಇತಿಹಾಸ ಪುರಾಣಾದಿಗಳು ಧರ್ಮದ ನಾಲ್ಕುಪಾದಗಳು ಮುಂತಾದವುಗಳನ್ನು ಸೃಷ್ಟಿಸಿದರು,ಅನಂತರ ನಾಲ್ಕು ಆಶ್ರಮಗಳನ್ನು ಸೃಷ್ಟಿಸಿದರೆಂದು ಶ್ಲೋಕದಲ್ಲಿ ಹೇಳಿದ್ದಾರೆ
*ಸಾವಿತ್ರಂ ಪ್ರಜಾಪತ್ಯಂ ಚ ಬ್ರಾಹ್ಮಂ ಚಾಥ ಬೃಹತ್ ತಥಾ|*
*ವಾರ್ತಾಸಂಚಯಶಾಲೀನಂ ಶಿಲೋಂಚ್ಛ ಇತಿ ವೈ ಗೃಹೇ||*
ಸಾವಿತ್ರ, ಪ್ರಜಾಪತ್ಯ , ಬ್ರಾಹ್ಮ ಮತ್ತು ಬೃಹತ್ ಎಂಬ ನಾಲ್ಕುವಿಧವಾದ ಬ್ರಹ್ಮಚರ್ಯವನ್ನು ಬ್ರಹ್ಮದೇವರು ಸೃಷ್ಟಿಸಿದರು. ಈ ನಾಲ್ಕು ವಿಧವಾದ ಬ್ರಹ್ಮಚರ್ಯವನ್ನು ತಿಳಿಸುವ ಪದಗಳ ಅರ್ಥವನ್ನು ಶ್ರೀಯಾದವಾರ್ಯರು ಹೀಗೆ ವ್ಯಾಖ್ಯಾನಿಸಿರುವರು.
೧  *ಉಪನಯನವಾದ ಕಾಲದಿಂದ ಆರಂಭಿಸಿ
ವೇದಾಧ್ಯಯನ  ಆರಂಭವಾಗುವವರೆಗೂ ಗಾಯತ್ರಿಯ ಅಧ್ಯಯನ ಮಾಡುವ ವ್ರತಕ್ಕೆ ಸಾವಿತ್ರ ಎಂದು ಕರೆಯುವರು*
೨. ಗುರುಕುಲದಲ್ಲಿ ಹನ್ನೆರಡು ವರ್ಷಗಳವರೆಗೆ ವೇದಾಧ್ಯಾಯನವನ್ನು ಮಾಡುವಾಗ ಆಚರಿಸುವ  ವ್ರತಕ್ಕೆ ಬ್ರಾಹ್ಮ ಎಂದು ಹೆಸರು.
೩. ಜೀವನ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುವುದು ಬೃಹತ್ ಅಥವಾ ನೈಷ್ಠಿಕ ಎಂದು ಕರೆಯಲ್ಪಡುತ್ತದೆ.
೪. ಪ್ರಾಜಾಪತ್ಯ ಬ್ರಹ್ಮಚರ್ಯವೆಂದರೆ ಯಾವುದು? ಎಂಬುದನ್ನು ಶ್ರೀಮದಾಚಾರ್ಯರು ತಮ್ಮ ಭಾಗವತತಾತ್ಪರ್ಯನಿರ್ಣಯದಲ್ಲಿ ವ್ಯಾಸಸ್ಮೃತಿ ಎಂಬ ಗ್ರಂಥವನ್ನು ಉದಾಹರಿಸಿ ವ್ಯಾಖ್ಯಾನಿಸಿರುವರು-
*"ಪ್ರಾಜಾಪತ್ಯಂ ಬ್ರಹ್ಮಚರ್ಯಮೇಕಭಾರ್ಯರ್ತುಗಾಮಿತಾ|"*
ಗೃಹಸ್ಥನಾದ ವ್ಯಕ್ಯಿಗೆ ಒಬ್ಬಳೇ ಹೆಂಡತಿ ಇದ್ದು ಅವಳನ್ನು ಋತುಕಾಲದಲ್ಲಿ ಮಾತ್ರ ಸ್ವೀಕರಿಸಿದರೆ ಅದಕ್ಕೆ ಪ್ರಾಜಾಪತ್ಯ ಬ್ರಹ್ಮಚರ್ಯ ಎಂದು ಕರೆಯುವರು. ಭಾಗವತದ ಮೇಲಿನ ಮಾತನ್ನು ಕಾಣುವಾಗ ಗೃಹಸ್ಥರೂ ಸಹ ಮೇಲೆ ಹೇಳಿದ ನಿಯಮದಂತೆ ಜೀವನ ನಡೆಸಿದರೆ ಅವರೂ ಸಹ ಬ್ರಹ್ಮಚಾರಿಗಳೆಂದು ಕರೆಯಲ್ಪಡುವರು. ಆದ್ದರಿಂದಲೇ ಪ್ರಥಮಸ್ಕಂಧದಲ್ಲಿ ಅರ್ಜುನನನ್ನು ವಿವಾಹವಾಗಿದ್ದರೂ ಸಹ ಬ್ರಹ್ಮಚಾರಿಯೆಂದು ಕರೆದಿರುವರು. ಹೀಗೆ ನಾಲ್ಕುವಿಧವಾದ ಬ್ರಹ್ಮಚರ್ಯವನ್ನು ವಿವರಸಿದ ನಂತರ ನಾಲ್ಕು ವಿಧವಾದ ಗೃಹಸ್ಥಾಶ್ರಮವನ್ನು ನಿರೂಪಿಸುವರು ..
೧. *ವಾರ್ತ*
೨. *ಅಸಂಚಯ*
೩. *ಶಾಲೀನ*
೪. *ಶಿಲೋಂಚ್ಛ*
ಎಂದು ಗ್ರಹಸ್ಥಾಶ್ರಮವೂ ಸಹ ನಾಲ್ಕು ವಿಧವಾಗಿದೆ‌.
ವಿವರ ಮುಂದೆ ಪ್ರಯತ್ನ ಮಾಡುತ್ತೇನೆ‌..
*ಶ್ರೀಹರಿ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ*🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ