ಸ್ತೋತ್ರ
ಪೃಷ್ಟೇ ಬ್ರಹ್ಮಾ ಕಂಠೇ ವಿಷ್ಣು: ಮುಖೇ ರುದ್ರ: ಪ್ರತಿಷ್ಠಿತ: |ಮಧ್ಯೇ ದೇವಗಣಾ: ಸರ್ವೇ ರೋಮಕೂಪೇ ಮಹರ್ಷಯ: ||1||
ತಾತ್ಪರ್ಯ:-ಗೋವುಗಳ ಬೆನ್ನಿನಲ್ಲಿ ಬ್ರಹ್ಮನೂ, ಕುತ್ತಿಗೆಯಲ್ಲಿ ವಿಷ್ಣುವೂ, ಮುಖದಲ್ಲಿ ಮಹೇಶ್ವರನೂ ಪ್ರತಿಷ್ಠಾಪನೆಯಾಗಿದ್ದಾರೆ. ಮಧ್ಯದಲ್ಲಿ ಸಮಸ್ತ ದೇವಾನು ದೇವತೆಗಳೂ, ರೋಮಕೂಪದಲ್ಲಿ ಮಹರ್ಷಿಗಳೂ ನೆಲೆಯಾಗಿದ್ದಾರೆ.

ನಾಗಾ: ಪುಚ್ಛೇ ಖರಾಗ್ರೇಷು ಯೇಚಾಷ್ಟೌ ಕುಲಪರ್ವತಾ: | ಮೂತ್ರೇ ಗಂಗಾದಯೋ ನದ್ಯ: ನೇತ್ರಯೋ: ಶಶಿಭಾಸ್ಕರೌ ||2||
ತಾತ್ಪರ್ಯ :-ಗೋವುಗಳ ಬಾಲದಲ್ಲಿ ನಾಗದೇವತೆಗಳೂ, ಗೊರಸುಗಳ ತುದಿಯಲ್ಲಿ ಅಷ್ಟ ಕುಲಪರ್ವತಗಳೂ, ಮೂತ್ರದಲ್ಲಿ ಗಂಗಾದಿ ಸಕಲ ಪವಿತ್ರ ನದಿಗಳೂ, ಕಣ್ಣುಗಳಲ್ಲಿ ಸೂರ್ಯಚಂದ್ರರೂ ನೆಲೆಸಿರುತ್ತಾರೆ.

ಕರ್ಣಯೋರಶ್ವಿನೌ ವಾಯು: ಘ್ರಾಣೇ ಲಕ್ಷ್ಮೀಶ್ಚ ಗೋಮಯೇ |ಯಸ್ಯಾ ಸ್ತನೇಷು ವೇದಾ: ಸ್ಯು: ಸಾ ಧೇನುರ್ವರದಾಸ್ತುಮೇ ||3||
ತಾತ್ಪರ್ಯ :-ಹಸುಗಳ ಕಿವಿಗಳಲ್ಲಿ ಅಶ್ವಿನಿ ದೇವತೆಗಳೂ, ಮೂಗಿನಲ್ಲಿ ವಾಯು ದೇವತೆಯೂ, ಸೆಗಣಿಯಲ್ಲಿ ಲಕ್ಷ್ಮಿಯೂ, ಕೆಚ್ಚಲಿನಲ್ಲಿ ಚತುರ್ವೇದಗಳೂ ವಾಸವಾಗಿದ್ದು ಅಂತಹ ಕಾಮಧೇನುವು ನನಗೆ ವರವನ್ನು ಕರುಣಿಸಲಿ.

ಸರ್ವದೇವ ಮಯೇ ದೇವಿ ಸರ್ವದೇವೈರಲಂಕೃತೇ |ಮತರ್ಮಮಾಭಿಲಷಿತಂ ಸಫಲಂ ಕುರು ನಂದಿನಿ ||4||
ತಾತ್ಪರ್ಯ :- ಈ ರೀತಿಯಾಗಿ ಸರ್ವದೇವಮಯಿಯಾಗಿರುವ ದೇವಿಯೇ; ಎಲ್ಲಾ ದೇವತೆಗಳಿಂದ ನೀನು ಸನ್ನಿಧಾನ ಭೂಷಿತಳಾಗಿರುವೆ. ಗೋಮಾತೆ ನಂದಿನಿಯೇ ನನ್ನ ಅಭಿಲಾಷೆಗಳನ್ನು ಈಡೇರಿಸು.

ಗಾವೋ ಮಮಾಗ್ರತ: ಸಂತು ಗಾವೋ ಮೇ ಸಂತು ಪಾರ್ಶ್ವತ: |ಗಾವೋ ಮೇ ಪೃಷ್ಠತ: ಸಂತು ಗವಾಂ ಮಧ್ಯೇ ವಸಾಮ್ಯಹಮ್ ||3||
ತಾತ್ಪರ್ಯ :-ಹಸುಗಳು ನನ್ನ ಮುಂದೆ ಹಾಗೂ ಪಕ್ಕದಲ್ಲಿ ಮತ್ತು ಹಿಂಬದಿಯಲ್ಲಿ ಸದಾ ನೆಲೆಸಿರಲಿ. ಹಸುಗಳ ಮಧ್ಯೆ ನನ್ನ ವಾಸವಾಗಿರಲಿ.

ಗಾಂ ದೃಷ್ಟ್ವಾ ಚ ನಮಸ್ಕೃತ್ವಾ ಚೈವ ಪ್ರದಕ್ಷಿಣಾಮ್ |ಪ್ರದಕ್ಷಣೀಕೃತಾ ತೇನ ಸಪ್ತ ದ್ವೀಪಾ ವಸುಂಧರಾ ||6||
ತಾತ್ಪರ್ಯ :-ಗೋಮಾತೆಯನ್ನು ಸಂದರ್ಶಿಸಿ ನಮಸ್ಕರಿಸುತ್ತಾ ಪ್ರದಕ್ಷಿಣೆ ಮಾಡಿದರೆ ಸಮಸ್ತ ಬ್ರಹ್ಮಾಂಡವನ್ನು ಸುತ್ತಿದ ಫಲವು ಲಭಿಸುತ್ತದೆ.

ಸರ್ವ ಕಾಮದುಘೇ ದೇವಿ ಸರ್ವ ತೀರ್ಥಾಭಿಷೇಚನೀ |ಪಾವನೀ ಸುರಭಿ: ಶ್ರೇಷ್ಠೇ ದೇವಿ ತುಭ್ಯಂ ನಮೋಸ್ತುತೇ ||7||
ತಾತ್ಪರ್ಯ :-ಸಮಸ್ತ ಇಷ್ಟಾರ್ಥಗಳನ್ನು ಕರುಣಿಸುವ, ಸರ್ವತೀರ್ಥಸ್ನಾನದ ಫಲದೊರಕಿಸುವ, ಪಾವನೆಯಾಗಿರುವ ಸುರಭಿ ದೇವಿಯೇ ನಿನಗೆ ನನ್ನ ನಮಸ್ಕಾರಗಳು.

ಸುರಭಿರ್ವೈಷ್ಣವೀ ಮಾತಾ ಸುರಲೋಕೇ ಪ್ರತಿಷ್ಠಿತಾ |ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗ್ರಹ್ಯತಾಮ್ ||8||
ತಾತ್ಪರ್ಯ :- ತಾಯಿ ವೈಷ್ಣವಿಯಾಗಿರುವ ಕಾಮಧೇನುವು ಸುರಲೋಕದಲ್ಲಿ ವಾಸವಾಗಿರುವಳು. ಗೋಮಾತೆ ಕಾಮಧೇನುವೇ! ನಾನು ಕೊಡುತ್ತಿರುವ ಒಂದು ಹಿಡಿ ಆಹಾರವನ್ನು ಸ್ವೀಕರಿರಿಸಿ ಅನುಗ್ರಹಿಸು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ