ಸೋಮವಾರ, ಮಾರ್ಚ್ 19, 2018

*ಗೋತ್ರ ಎಂದರೇನು

 *ಗೋತ್ರ ಎಂದರೇನು? ಸಮಾನ ಗೋತ್ರ ಇರುವವರು ವಿವಾಹವಾದರೆ ಏನಾಗುವುದು ಗೊತ್ತಾ?!!*
ಪ್ರತಿಯೊಬ್ಬ ಹಿಂದುವಿಗೂ ಗೋತ್ರ ಇರುತ್ತದೆ. ಗೋತ್ರ ಇಲ್ಲದವರು ಇರುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿ ಕುಲದವರಿಗೂ ಅವರದ್ದೇ ಆದ ಗೋತ್ರ ಇರುತ್ತದೆ. ಆದರೆ ಗೋತ್ರ ಎಂದರೇನು, ಗೋತ್ರ ನಾಮವು ಎಲ್ಲಿಂದ ಬಂದಿದೆ ಎಂಬುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಪುರಾತನ ಕಾಲದಲ್ಲಿ ಒಂದು ಕುಟುಂಬದವರಿಗೆ ವಿದ್ಯೆ ಕಲಿಸಲು ಗುರುಗಳು ಇರುತ್ತಿದ್ದರು. ಹಾಗೆ ಅವರ ಕುಟುಂಬದ ಗುರುಗಳ ಹೆಸರನ್ನು ಗೋತ್ರವಾಗಿ ಬದಲಿಸಿಕೊಂಡರು. ಕೆಲವರು ಅವರ ಪೂರ್ವಜರ ಹೆಸರು ಅಥವಾ ಅವರ ವಂಶದ ಮೂಲ ಪುರುಷನ ಹೆಸರನ್ನು ಗೋತ್ರವಾಗಿಟ್ಟುಕೊಂಡರು. ಹೀಗೆ ಗೋತ್ರಗಳು ಸಾಗುತ್ತಾ ಬರುತ್ತಿವೆ. ಹಿಂದೂ ಧರ್ಮ ಹೇಳುವಂತೆ ಸಮಾನ ಗೋತ್ರ ಇರುವವರು ಸೋದರ-ಸೋದರಿಯರಾಗುತ್ತಾರೆ. ಆದ್ದರಿಂದ ಸಮಾನ ಗೋತ್ರದವರು ವಿವಾಹವಾಗಲು ಅರ್ಹರಲ್ಲ. ಪರಿಚಯವಿಲ್ಲದಿದ್ದರೂ ರಕ್ತಸಂಬಂಧ ಉಳ್ಳವರಿಗೆ ಎಲ್ಲೋ ಒಂದು ಕಡೆ ಸಂಬಂಧ ಇರುತ್ತದೆ. ಆದ್ದರಿಂದ ಅಂತಹವರು ವಿವಾಹವಾಗಬಾರದು.
ಪ್ರಪಂಚದಲ್ಲಿರುವ ಯಾವುದೇ ಹಿಂದುಗಳಿಗೆ ಸಂಬಂಧವಿಲ್ಲದೆ ಗೋತ್ರ ಇರುವುದಿಲ್ಲ. ಹಲವು ವರ್ಷಗಳ ಹಿಂದೆ ಎಲ್ಲೋ ಒಂದು ಕಡೆ ಅವರಿಗೆ ರಕ್ತ ಸಂಬಂಧ ಇದ್ದೇ ಇರುತ್ತದೆ. ಆದ್ದರಿಂದಲೇ ಸಮಾನ ಗೋತ್ರ ಇರುವವರಿಗೆ ವಿವಾಹ ಮಾಡಬಾರದು ಎನ್ನುತ್ತಾರೆ. ಹಾಗೇನಾದರೂ ವಿವಾಹವಾದಲ್ಲಿ ಕ್ರೋಮೋಜೋಮ್ ಗಳ ಹೊಂದಿಕೆಯಾಗದೆ ಜನ್ಯಪರವಾದ ಖಾಯಿಲೆಗಳು ಬರುತ್ತವೆ. ಇದು ಕೇವಲ ಪುರಾತನ ಕಾಲದ ಆಚಾರವಲ್ಲ. ರಕ್ತಸಂಬಂಧದಲ್ಲಿ ಒಂದೇ ರೀತಿಯ ಜೀನ್ಸ್ ಅಂದರೆ ಅವರ ಡಿ.ಎನ್.ಎ. ಒಂದೇ ಆಗಿರುತ್ತದೆ. ಅವರಲ್ಲಿ ಒಂದೇ ವಿಧವಾದ ಲಕ್ಷಣಗಳಿರುತ್ತವೆ. ನಮಗೆ ತಿಳಿದಂತೆ ಇಂತಹ ವಿವಾಹವಾದವರ…ಮಕ್ಕಳಲ್ಲಿ ಅಂಗವಿಕಲತೆ, ಬುದ್ಧಿಮಾಂಧ್ಯ ಹೆಚ್ಚಾಗಿ ಕಾಣಬಹುದು. ಇದನ್ನು ನೋಡಿದಾಗ ನಮ್ಮ ಪೂರ್ವಜರ ನಿಬಂಧನೆ ಶೇ.100 ರಷ್ಟು ಸತ್ಯವಾದದ್ದೆ ಎನಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ