*ಪುರಾಣ ಅಮೂಲ್ಯ*
ನಮ್ಮ ಪುರಾಣಗಳು ಅಮೂಲ್ಯ ಜ್ಞಾನದ ಭಂಡಾರ. ಒಂದು ನೆಲೆಯಲ್ಲಿ ನೋಡಿದರೆ ಅದ್ಭುತ ವಿಶ್ವಕೋಶಗಳು. ‘ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್’ ಇತಿಹಾಸ ಪುರಾಣಗಳಿಂದ ವೇದಜ್ಞಾನವನ್ನು ಸಮರ್ಥವಾಗಿ ಬಲವತ್ತರವಾಗಿ ಅರ್ಥೈಸಬೇಕು ಎಂಬ ಮಾತನ್ನು ಲಕ್ಷಿಸಿದರೆ ಪುರಾಣಪ್ರತಿಪಾದಿತ ಜ್ಞಾನದ ಮಹತ್ತ್ವ ಅರಿವಾದೀತು!
ಭೂಗೋಳ, ಖಗೋಳ, ಜ್ಯೋತಿಷ, ಸಾಮುದ್ರಿಕ, ಉತ್ಪಾತಗಳು, ವೈದ್ಯಕೀಯ, ತಂತ್ರಶಾಸ್ತ್ರ, ದನ-ಕುದುರೆ-ಆನೆ ಮುಂತಾದ ಪ್ರಾಣಿಗಳ ಲಕ್ಷಣ, ಚಿಕಿತ್ಸೆ, ಸರ್ಪಜ್ಞಾನ, ರತ್ನಪರೀಕ್ಷಣ, ರಾಜನೀತಿ, ಯುದ್ಧವಿಜ್ಞಾನ, ಆಯುರ್ವೇದ, ಧನುರ್ವೇದ, ಕೃಷಿ-ತೋಟಗಾರಿಕೆ, ಛಂದಸ್ಸು, ವ್ಯಾಕರಣ, ನಾಟ್ಯಶಾಸ್ತ್ರ, ಅಲಂಕಾರಶಾಸ್ತ್ರ, ಸಂಗೀತ – ನೃತ್ಯಪ್ರಕಾರಗಳು, ವಾಸ್ತು – ಶಿಲ್ಪವಿದ್ಯೆ ಹೀಗೆ ಪುರಾಣಗಳ ವಸ್ತುವೈವಿದ್ಯ ಅಗಾಧವಾದುದು.
ಸಪ್ತದ್ವೀಪಗಳಿಂದ ಕೂಡಿದ ಭೂಮಿಯ ವಿವರಣೆ ಅದ್ಭುತವಾದುದು. ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ ಎಂದು ಆ ದ್ವೀಪಗಳ ಹೆಸರು. ಪ್ರತಿ ದ್ವೀಪಗಳಲ್ಲೂ ಹಲವು ‘ವರ್ಷ’ಗಳು ಇರುತ್ತವೆ. (ವರ್ಷ ಎಂದರೆ ‘ದೇಶ’ ಎಂದರ್ಥ ಇಲ್ಲಿ) ಈ ಏಳು ದ್ವೀಪಗಳ ಸುತ್ತಲೂ ಕ್ರಮವಾಗಿ ಏಳು ಸಾಗರಗಳು. ಅವುಗಳ ನೀರಿನ ರುಚಿಯು ಕ್ರಮವಾಗಿ ಉಪ್ಪು, ಕಬ್ಬಿನರಸ, ಮದ್ಯ, ತುಪ್ಪ, ಮೊಸರು, ಹಾಲು ಮತ್ತು ಕುಡಿಯುವ ನೀರು (ಶುದ್ಧ ನೀರು) ಈ ತೆರನಾಗಿ ಇತ್ತು ಎಂಬ ಮಾಹಿತಿ ಕೊಡುವುದು ತುಂಬಾ ವಿಶೇಷ ಎನ್ನಿಸುತ್ತದೆ.
ಸಪ್ತದ್ವೀಪಗಳಲ್ಲಿ ಜಂಬೂದ್ವೀಪ ಕೇಂದ್ರಸ್ಥಾನದಲ್ಲಿ ಇರುವುದು. ಇಲ್ಲಿ ಮೇರು ಪರ್ವತವಿದ್ದು ಅದರದು ಚಿನ್ನದ ಬಣ್ಣ (ಇಂದೂ ಕಾಂಚನಗಂಗಾ ಎಂಬ ಪರ್ವತಶ್ರೇಣಿ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಪ್ರಮುಖ ಪರ್ವತ ಶಿಖರ!) ಹಿಮಾಲಯ ಸೇರಿದಂತೆ ಏಳು ಪರ್ವತಗಳು ಕಮಲದಳದಂತೆ ಹರಡಿ ನಯನಮನೋಹರವಾಗಿದ್ದವು ಎಂಬ ವರ್ಣನೆಯು ಕೇವಲ ವರ್ಣನೆಯಲ್ಲ ಅಕ್ಷರಶಃ ಸತ್ಯ!
ನದಿ – ನದಗಳು, ಅರಣ್ಯ ಕಾನನಗಳು, ಪುಣ್ಯಕ್ಷೇತ್ರಗಳು, ಕಾಡುಗಳಲ್ಲಿರುವ ವಿವಿಧ ವನಸ್ಪತಿಗಳು, ಅವುಗಳ ಭೇಷಜ್ಯಗುಣಗಳು ಹೀಗೆ ಹಲವು ಸಂಗತಿಗಳ ಚಿತ್ರವತ್ತಾದ ವರ್ಣನೆಗಳು ಪುರಾಣಗಳಲ್ಲಿ ದೊರೆಯುತ್ತವೆ.
ಪುರಾಣಗಳಲ್ಲಿ ಎರಡುಬಾರಿ ವರಾಹ ಅವತಾರದ ಕಥೆ ದೊರೆಯುತ್ತದೆ. ರಕ್ಕಸರು ಭೂಮಿಯನ್ನು (ಆಕೆ ಭೂದೇವಿ) ಕದ್ದು ಒಯ್ದಾಗ (ಭೂದೇವಿಯನ್ನು ಹಿಂಸಿಸುವುದು) ಶ್ರೀವಿಷ್ಣು ವರಾಹರೂಪ ಧರಿಸಿ ಭೂದೇವಿಯನ್ನು ರಕ್ಷಿಸುತ್ತಾನೆ ಎಂಬುದು ಪುರಾಣ ಕಥೆ. ಭೂಮಿಯು ತನ್ನ ಕಕ್ಷೆಯಿಂದ ಎರಡುಬಾರಿ ಕಳಚಿದ್ದು ಪುನಃ ತನ್ನ ಕಕ್ಷೆಗೆ ಬಂದದ್ದು ಹೌದೆಂದು ಆಧುನಿಕ ವಿಜ್ಞಾನ ಸಮರ್ಥಿಸುತ್ತದೆ. ಭೂಮಿಯನ್ನು ‘ಸಂಕರ್ಷಣ’ ಎಂಬ ಮಹಾಶೇಷ ಹೊತ್ತಿದ್ದಾನೆ ಎನ್ನುತ್ತದೆ ಪುರಾಣ. ಇದು ಇಂದಿನ ವಿಜ್ಞಾನಿಗಳು ಹೇಳುವ ಗುರುತ್ವಬಲ (ಸಂಕರ್ಷಣ ಎಂಬ ಪದದ ಅರ್ಥವೇ ಗುರುತ್ವಬಲ) ದಿಂದ ಭೂಮಿ ನಿಂತಿದೆ ಎಂಬ ವಾದದ ಪ್ರತಿಮಾರೂಪ ಪುರಾಣದಲ್ಲಿದೆ. ಪುರಾಣ ಕಥೆಗಳು ನಿರೂಪಿಸುವ ಸಂಗತಿಗಳನ್ನು ಆಧುನಿಕ ಜ್ಞಾನದ ಪರಿಭಾಷೆಯಲ್ಲಿ ಅರ್ಥೈಸುವ ಸಾರ್ಥಕ ಪ್ರಯತ್ನ ವಿಶ್ವದ ಪ್ರಾಚೀನ ಇತಿಹಾಸ ಪುನಃ ಸಂಕಲಿಸಲು ಕಾರಣವಾದೀತು ಎಂಬುದು ಅತಿಶಯೋಕ್ತಿ ಖಂಡಿತ ಅಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ