*ವಿಷ್ಣುಸರ್ವೋತ್ತಮತ್ತ್ವದ ಅರ್ಥ*
ಶ್ರೀಹರಿಯು ಸರ್ವೋತ್ತಮ ಎಂಬುದು ಸಕಲ ಶಾಸ್ತ್ರಗಳ ಸಾರ ಎಂಬುದು ಮಧ್ವಸಿದ್ದಾಂತದ ಮಹಾ ಪ್ರಮೇಯ; ಈ ಮಾತಿಗೆ ಶ್ರೀಹರಿಯು ಸಕಲ ದೇವತೆಗಳಲ್ಲಿ ಯೂ ಉತ್ತಮನಾದವನು ಎಂಬುದು ಸಾಮಾನ್ಯವಾದ ಅರ್ಥ, ಶ್ರೀಮದಾಚಾರ್ಯರು ಕಾಠಕೋಪ ನಿಷದ್ಭಾಷ್ಯದಲ್ಲಿ ಉಲ್ಲೇಖಿಸಿರುವ ಈ ಕೆಳಗಿನ ಪ್ರಮಾಣವಚನದಿಂದ ಇದರ ಅರ್ಥ ಮತ್ತಷ್ಟು ವಿಶಾಲವಾಗಿ ತೆರೆದುಕೊಳ್ಳುತ್ತದೆ.
*ತಾರತಮ್ಯಪರಿಜ್ಞಾನಪೂರ್ವಕಂ ಸರ್ವತೋ ಹರೇಃ|*
*ಆಧಿಕ್ಯೇ ಸರ್ವವಾಕ್ಯಾನಾಂ ತಾತ್ಪರ್ಯಂ ಮಹದಿಷ್ಯತೇ||*
*ಆಧಿಕ್ಯೇ ಸರ್ವವಾಕ್ಯಾನಾಂ ತಾತ್ಪರ್ಯಂ ಮಹದಿಷ್ಯತೇ||*
ಇದರಿಂದ ಸರ್ವೋತ್ತಮ ಎಂಬುದಕ್ಕೆ ಉತ್ತಮಃ ಸರ್ವೇಷಾಂ ಉತ್ತಮಃ ಎಂಬ ಅರ್ಥಗಳೊಂದಿಗೆ ಸರ್ವತ್ರ ಉತ್ತಮಃ {ಸರ್ವದೇಶೇಷು ಉತ್ತಮಃ} ಸರ್ವದಾ ಉತ್ತಮಃ {ಸರ್ವಕಾಲೇಷು ಉತ್ತಮಃ} ಸರ್ವಥಾ ಉತ್ತಮಃ { ಸರ್ವಪ್ರಕಾರೇಷು ಉತ್ತಮಃ} ಮೊದಲಾದ ಮತ್ತಷ್ಟು ಅರ್ಥಗಳು ಸ್ಪುರಿಸುತ್ತವೆ,: *ಸರ್ವದೇಶೇಷು ಕಾಲೇಷು ಸ ಏಕಃ ಪರಮೇಶ್ವರಃ* ಎಂಬ ಅಣುಭಾಷ್ಯದ ಮಾತಿನಲ್ಲಿ ಸರ್ವತ್ರ ಸರ್ವದಾ ಎಂಬ ಅರ್ಥಗಳು ನಿರೂಪಿತವಾಗಿವೆ. ಅದರಂತೆ ಸರ್ವವತಾರೇಷು ಉತ್ತಮಃ ಸರ್ವಾವಯವೇಷು ಉತ್ತಮಃ ಸರ್ವಗುಣೇಷು ಉತ್ತಮಃ ಸರ್ವಕ್ರಿಯಾಸು ಉತ್ತಮಃ ಮೊದಲಾದ ಮತ್ತಷ್ಟು ಅರ್ಥಗಳು ಸಹ ಇದಕ್ಕೆ ಸೇರಿಕೊಂಡು ಶ್ರೀಹರಿಯು ಸರ್ವೋತ್ತಮತ್ತ್ವದ ಚಿಂತನೆ ಮತ್ತಷ್ಟು ಆಳವಾಗಿ ಮನಸ್ಸಿಗೆ ಮುಟ್ಟುವಂತಾಗುವುದು ಸರ್ವಶಾಸ್ತ್ರಗಳಲ್ಲೂ ಉತ್ತಮ ಎಂಬುದಾಗಿಯೇ ಪ್ರತಿಪಾದಿತನಾ ದವನು ಎಂಬುದು ಮತ್ತೊಂದು ಅರ್ಥ: *ಆಲೋಡ್ಯ ಸರ್ವಶಾಸ್ತ್ರಾಣಿ ವಿಚಾರ್ಯ ಚ ಪುನಃ ಪುನಃ| ಇದಮೇಕಂ ಸುನಿಷ್ಪನ್ನಂ ಧ್ಯೇಯೋ ನಾರಾಯಣಃ ಸದಾ||*
ವಿಷ್ಣುಸರ್ವೋತ್ತಮತ್ತ್ವವನ್ನು ಮಾತ್ರ ಒಪ್ಪವ ವಿಶಿಷ್ಟಾದ್ವೈತಮತ ಮೊದಲಾದವುಗಳಲ್ಲಿ ಈ ಬಗೆಯ ಸರ್ವೋತ್ತಮತ್ತ್ವದ ವಿವೇಚನೆ ಕಂಡುಬರುವುದಿಲ್ಲವಾದ್ದರಿಂದ ಅವರು ನಿಜ ಅರ್ಥದಲ್ಲಿ ವೈಷ್ಣವರು ಎನ್ನಲಾಗುವುದಿಲ್ಲ ಎಂಬ ತತ್ತ್ವವೂ ಸೂಚಿತವಾಗುವುದು.
ವಿಷ್ಣುಸರ್ವೋತ್ತಮತ್ತ್ವವನ್ನು ಮಾತ್ರ ಒಪ್ಪವ ವಿಶಿಷ್ಟಾದ್ವೈತಮತ ಮೊದಲಾದವುಗಳಲ್ಲಿ ಈ ಬಗೆಯ ಸರ್ವೋತ್ತಮತ್ತ್ವದ ವಿವೇಚನೆ ಕಂಡುಬರುವುದಿಲ್ಲವಾದ್ದರಿಂದ ಅವರು ನಿಜ ಅರ್ಥದಲ್ಲಿ ವೈಷ್ಣವರು ಎನ್ನಲಾಗುವುದಿಲ್ಲ ಎಂಬ ತತ್ತ್ವವೂ ಸೂಚಿತವಾಗುವುದು.
ಸರ್ವೋತ್ತಮ ಎಂಬುದಕ್ಕೆ ಸರ್ವಶ್ವಸೌ ಉತ್ತಮಶ್ಚ ಎಂಬ ಅರ್ಥವೂ ವಿವಕ್ಷಿತ ಸರ್ವ ಹಾಗೂ ಉತ್ತಮ ಎಂಬ ಎರಡು ಪದಗಳು ಸಹ ವಿಷ್ಣುಸಹಸ್ರನಾಮ ದಲ್ಲಿ ಬಂದಿದೆ: *ಸರ್ವ ಶರ್ವಃ... ಧರ್ಮೋ ಧರ್ಮವಿತ್ ಉತ್ತಮಃ* ಇದರಿಂದ ಶ್ರೀಹರಿಯು ಸರ್ವ ಎಂದರೆ ಪೂರ್ಣ - ಆದುರಿಂದಾಗಿವಯೇ ಉತ್ತಮ ಎಂಬ ವಿಶೇಷಾರ್ಥವು ಲಭಿಸುವುದು. ಈ ರೀತಿಯಾಗಿ ಇನ್ನು ಅನೇಕಬಗೆಯಲ್ಲಿ ವಿಶೇಷವಾದ ಅರ್ಥಗಳನ್ನು ಹೊಂದಿರುವ ಅಪೂರ್ವವಾದ ಪದ *ಸರ್ವೋತ್ತಮ* ಎಂಬ ಪದ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ