ಶುಗರ್ ಕಾಯಿಲೆಗೆ ಸರಿಯಾದ ಚಿಕಿತ್ಸೆ… ಮೊಣಕಾಲಿನ ಮೇಲೆ ನಡಿಗೆ..!?
ಪ್ರತಿದಿನ ವಾಕಿಂಗ್ ಮಾಡುವುದರಿಂದ ನಮಗೆ ಯಾವುದೇ ರೀತಿಯ ಆರೋಗ್ಯ ಪ್ರಯೋಜಕತೆಗಳು ಸಿಗುತ್ತದೆಯೋ ಎಲ್ಲರಿಗೂ ಗೊತ್ತಿರುವುದೇ. ಇದರಿಂದ ಅಧಿಕವಾಗಿ ಇರುವ ತೂಕವನ್ನು ಇಳಿಸಬಹುದು. ರಕ್ತದಲ್ಲಿನ ಕೆಡು ಕೊಲೆಸ್ಟ್ರಾಲ್ ಇಳಿಯುತ್ತದೆ. ಮಧುಮೇಹ ಇರುವವರಿಗಾದರೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಅನೇಕ ರೀತಿಯ ಪ್ರಯೋಜನಗಳು ಇರುತ್ತವೆ. ಆದರೆ ವಾಕಿಂಗ್ ಯಾರಾದರೂ ಹೇಗೆ ಮಾಡುತ್ತೀರಿ..??
ಹೇಗೆ ಮಾಡುವುದೇನ..?ಎಲ್ಲರೂ ಕಾಲಿನಲ್ಲೇ ಅಲ್ವಾ ಮಾಡೋದು..?ಎನ್ನಬೇಕೆಂದಿದ್ದೀರಾ…!! ಆದರೆ ನೀವು ಹೇಳುತ್ತಿರುವುದು ಕರೆಕ್ಟೇ..! ಆದರೆ ಸಾಧಾರಣ ಕಾಲಿನಲ್ಲಿ ಅಲ್ಲದೇ ಮೊಣಕಾಲಿನಲ್ಲಿ ವಾಕಿಂಗ್ ಮಾಡಿದರೆ ಇನ್ನೂ ಒಳ್ಳೆಯದಂತೆ..ಅದು ಏಕೋ ಈಗ ತಿಳಿದುಕೊಳ್ಳೋಣ.ಚೀನಾ ಸಾಂಪ್ರದಾಯಿಕ ವೈದ್ಯಗಳಲ್ಲಿ ಮೊಣಕಾಲಿನ ಮೂಲಕ ನಡೆಸಿ ವ್ಯಾಧಿಗಳನ್ನು ವಾಸಿಗೊಳಿಸುವ ಪದ್ದತಿ ಒಂದಿದೆ. ಅದು ಹೇಗೆಂದರೆ ವ್ಯಾಧಿಗ್ರಸ್ತರನ್ನು ಪ್ರತಿದಿನ ಮೊಣಕಾಲಿನ ಮೇಲೆ 15ರಿಂದ 20ನಿಮಿಷ ಇಲ್ಲವೇ ಅವರು ನಡೆಯುವಷ್ಟು ಪ್ರತಿದಿನ ನಡೆಸುತ್ತಾರೆ.
ಇದರಿಂದ ಮೊಣಕಾಲಿನಲ್ಲಿ ಇರುವ ಕೆಲವು ಪ್ರತ್ಯೇಕವಾದ ಪಾಯಿಂಟ್’ಗಳು ಶರೀರದಲ್ಲಿನ ಆಯಾ ಅಂಗಗಳನ್ನು ಕನೆಕ್ಟ್ ಆಗುತ್ತದೆ. ಹೀಗೆ ಕನೆಕ್ಟ್ ಆಗುವುದರಿಂದ ಆಯಾ ಅಂಗಗಳನ್ನು ಉತ್ತೇಜನಗೊಳಿಸುತ್ತದೆ. ಇದರೊಂದಿಗೆ ಅವು ಚುರುಕಾಗಿ ಕೆಲಸ ಮಾಡುವುದರ ಜೊತೆಗೆ ಕಾಯಿಲೆಗಳನ್ನು ಕೂಡ ಗುಣಪಡಿಸುತ್ತದೆ. ಮೊಣಕಾಲಿನ ಹತ್ತಿರ ಇರುವ ಪ್ರತ್ಯೇಕವಾದ ಆಕ್ಯುಪ್ರೆಷರ್ ಪಾಯಿಂಟ್’ಗಳು ಶರೀರದಲ್ಲಿನ ಬಹುತೇಕ ಎಲ್ಲಾ ಅಂಗಗಳನ್ನು ಕನೆಕ್ಟ್ ಆಗುತ್ತದೆಯೆಂದು , ಈ ಕ್ರಮದಲ್ಲಿಯೇ ಬಹುತೇಕವಾಗಿ ಎಂತಹುದೇ ಅನಾರೋಗ್ಯವನ್ನಾದರೂ ಈ ಪದ್ಧತಿಯ ಮೂಲಕ ತಗ್ಗಿಸಿಕೊಳ್ಳಬಹುದೆಂದು ಚೈನೀಸ್ ಸಾಂಪ್ರದಾಯಿಕ ವಿದ್ಯೆ ಹೇಳುತ್ತದೆ. ಇದನ್ನೇ ನೀ ವಾಕಿಂಗ್(Knee Walking) ಎಂದು ಕೂಡ ಕರೆಯುತ್ತಾರೆ. ಇದನ್ನು ಯಾರಾದರೂ ಪ್ರಯತ್ನಿಸಬಹುದು. ಆದರೆ ಪ್ರಾರಂಭದಲ್ಲಿ ಮೊಣಕಾಲಿನ ಮೇಲೆ ನಡೆಯುವುದು ಸ್ವಲ್ಪ ಕಷ್ಟವಾಗಿಯೇ ಇರುತ್ತದೆ. ಅಂತಹವರು ಮೊಣಕಾಲಿನ ಕೆಳಗೆ ಎರಡು ಚಿಕ್ಕದಾದ ಪ್ಯಾಡ್’ಗಳನ್ನು ಇಟ್ಟುಕೊಂಡು ಆದಷ್ಟು ದೂರ ಮೊಣಕಾಲಿನ ಮೇಲೆ ನಡೆದರೆ ಸಾಕು, ಅದರೊಂದಿಗೆ ಬರುವ ಬದಲಾವಣೆಗಳೇನೋ ನೀವೆ ಗಮನಿಸುತ್ತೀರ. ಆದರೆ ಮೊಣಕಾಲು, ಕೀಲುನೋವುಗಳು ಇರುವವರು ಈ ಪದ್ದತಿಯನ್ನು ಪಾಲಿಸುವ ಮೊದಲು ಸ್ವಲ್ಪ ಜಾಗ್ರತೆ ವಹಿಸುವುದು ಒಳ್ಳೆಯದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ