ಸೋಮವಾರ, ಸೆಪ್ಟೆಂಬರ್ 18, 2017

ಷಟ್ ಪ್ರಯಾಗ -

ಷಟ್ ಪ್ರಯಾಗ -

ಪ್ರಯಾಗವೆಂದರೆ ಎರಡು ನದಿಗಳು ಕೂಡುವ ಪವಿತ್ರ ಸಂಗಮ ಕ್ಷೇತ್ರ. 
ಹೃಷಿಕೇಶದಿಂದ ಬದರಿಗೆ ಹೋಗುವ ಮಾರ್ಗದಲ್ಲಿ ಇಂತಹಾ ಆರು ಪ್ರಯಾಗಗಳು ಕಂಡುಬರುತ್ತವೆ. 

1. ದೇವ ಪ್ರಯಾಗ : ಅಲಕನಂದಾ ಮತ್ತು ಭಾಗೀರಥೀ ನದಿಗಳ ಸಂಗಮ.
2. ರುದ್ರ ಪ್ರಯಾಗ : ಅಲಕನಂದಾ ಮತ್ತು ಮಂದಾಕಿನಿ ಸಂಗಮ.
3. ಕರ್ಣ ಪ್ರಯಾಗ : ಅಲಕನಂದಾ ಮತ್ತು ಪಿಂಡಾರ ಸಂಗಮ.
4. ನಂದ ಪ್ರಯಾಗ : ಅಲಕನಂದಾ ಮತ್ತು ನಂದಾಕಿನಿ ಸಂಗಮ.
5. ವಿಷ್ಣು ಪ್ರಯಾಗ : ಅಲಕನಂದಾ ಮತ್ತು ವಿಷ್ಣುಗಂಗಾ ಸಂಗಮ.
6. ಕೇಶವ ಪ್ರಯಾಗ : ಅಲಕನಂದಾ ಮತ್ತು ಸರಸ್ವತೀ ಸಂಗಮ.

ಷಟ್ ಪ್ರಯಾಗಗಳನ್ನು ರಾಜರು ಒಂದು ಶ್ಲೋಕದಿಂದ ವರ್ಣಿಸುತ್ತಾರೆ.

ಷಟ್ ಪ್ರಯಾಗಾಃ ಸ್ವವೇಗೇನ ಕಾಮಾದ್ಯರಿಮಹೀರುಹಃ|
ಉನ್ಮೂಲಯಂತು ಪಾಪಾಖ್ಯಂ ಪಂಕಂ ಪ್ರಕ್ಷಾಲಯಂತು ನಃ||೪೦||

ಆರು ಪ್ರಯಾಗಗಳು ತಮ್ಮ ಪ್ರವಾಹವೇಗದಿಂದ ನಮ್ಮ ಕಾಮಾದಿ ಆರು ಶತ್ರುಗಳೆಂಬ ವೃಕ್ಷಗಳನ್ನು ಬುಡಸಮೇತ ಕೀಳಲಿ, ಪಾಪವೆಂಬ ಕೆಸರನ್ನು ತೊಡೆಯಲಿ.

ದೇವ, ರುದ್ರ, ಕರ್ಣ, ಬಂದ, ವಿಷ್ಣು, ಕೇಶವ ಈ ಆರು ಕ್ಷೇತ್ರಗಳಲ್ಲಿ ಅತಿವೇಗದಿಂದ ಚಲಿಸುತ್ತಿರುವ ನದಿಗಳು ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಷಡ್ವೈರಿಗಳೆಂಬ ವೃಕ್ಷಗಳನ್ನು ಬೇರು ಸಮೇತ ಕಿತ್ತು ಬಿಸುಡಲಿ. ಪಾಪವೆಂಬ ಕೆಸರನ್ನು ತೊಳೆಯಲಿ ಎಂದು ಭಾವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ