ಬಿಳಿಕೂದಲಿಗೆ ಪರಿಹಾರ...
ಹಿಂದೆ ಕೇವಲ ವಯಸ್ಸಾದರವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಳಿಕೂದಲು ಇತ್ತೀಚೆಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ. ದೇಹದಲ್ಲಿ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಬರುತ್ತದೆ. ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭಾವ್ಯತೆಯನ್ನು ನಿಮ್ಮ ಜೀನ್ಗಳು ನಿರ್ಧರಿಸುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಕೂದಲು ಬಿಳಿಯಾಗಲು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ನಿಮಗೆ ವಯಸ್ಸಾಗುತ್ತಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಬಿಳಿಯಾಗುತ್ತದೆ. ಮನೆಯಲ್ಲಿಯೇ ಕೆಲವು ವಸ್ತುಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ತಡೆಗಟ್ಟಬಹುದು. ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ.
ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ. ಒಣಗಿದ ಎಲೆಗಳನ್ನು ಸರಿಯಾಗಿ ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ. ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲಿ. ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ.
ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗುತ್ತದೆ.
ಶೀತ ಕೆಮ್ಮು ಎಂದು ನೀವ್ ಹೆದರಬೇಡಿ...ಗೆಣಮೆಣಸು ಶುಂಠಿ ಗಳ ಕಶಾಯವ ಮಾಡಿ....ಜೇನು ಬೆರಸಿಕೊಂಡು ಕುಡಿದೊಮ್ಮೆ ನೋಡಿ..ಶೀತ ಕೆಮ್ಮುಗಳೆಲ್ಲ ಹೋಗುವವು
ಮಕ್ಕಳ ಮೂಗಲ್ಲಿ ಸೋರುತಿದೆ ನೋಡಿ ..ಸುಲಭದಲಿ ಈ ಒಂದು ಮನೆ ಮದ್ದು ಮಾಡಿ...ಕೊಬ್ಬರಿ
ಎಣ್ಣೆಯನು ಬಿಸಿಯಾಗಲಿಟ್ಟು ಸಾಸಿವೆಯ ಪುಡಿ ಹಾಕಿ ಅದ ಕುದಿಸಿ ಬಿಟ್ಟು ..ಮಕ್ಕಳ ನೆತ್ತಿಗೆ ಹಾಕಿದರೆ ನಿತ್ಯ.. ನೆಗಡಿ ಪೂರಾ ಆರಿ ಹೋಗುವುದು ಸತ್ಯ..
ಗರಗದ( ಭೃಂಗರಾಜ) ರಸವನ್ನು ತಲೆ ಗೆ ಹಚ್ಚಿ ೧೦_೧೫ ನಿಮಿಷ ಮಸಾಜ್ ಮಾಡಿ ರಾತ್ರಿ ಹಾಗೇ ಬಿಟ್ಟು ಮರುದಿನ ತೊಳೆಯಿರಿ, ಎಳ್ಳು ಜೀರಿಗೆ ಪುಡಿ ಹಾಲಿಗೆ ಹಾಕಿ ಕುಡಿಯಿರಿ, ೩ ತಿಂಗ ಳು ಮಾಡಿ ನೋಡಿ
ಹಿಮೋಗ್ಲೋಬಿನ್ ಜಾಸ್ತಿ ಆಗಲು ಇರುವ ಮುಖ್ಯ ಆಹಾರ ಯಾವ್ದು ?
ಒಣ ದ್ರಾಕ್ಷಿ ಜಾಸ್ತಿ ತಿನ್ನಿ
ಭೃಂಗರಾಜ ಎಲೆಯ ರಸ ಪ್ರತಿ ದಿನ ೧ ಚಮಚ ಸೇವಿಸಿ
ಬೀಟರೂಟ್ ಸಹ ಒಳ್ಳೆಯದು
ಬಾವಂಚಿ ( ಹರಿತಾಳ) Arsenic sulphide ವನ್ನು ಸಮಾಭಾಗ ತೆಗೆದುಕೊಂಡು ಕುಟ್ಟಿ ಚೂರ್ಣ ಮಾಡಿ ಅದನ್ನು ಗೊಮೂತ್ರದಲ್ಲಿ ಕಲಸಿ ಇದನ್ನು ಬಿಳಿ ಇರುವ ಬಾಗಕ್ಕೆ ಹಚ್ಚಿ ಸ್ವಲ್ಪ ದಿನದೊಳಗೆ ಚರ್ಮ ಬದಲಾಗೊ ಸಾದ್ಯತೆ ಇದೆ
ಬಾವಂಚಿ ಗ್ರಂಥಿಕೆ ಅಂಗಡಿಗಳಲ್ಲಿ ಸಿಗುತ್ತದೆ
ಬಾವಂಚಿ ಬೀಜದ ಎಣ್ಣೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದ
ಬಾವಂಚಿ ಮಾತ್ರೆ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತೆ ಈ ಮಾತ್ರೆಯನ್ನು ಕೂಡ ಗೊಮೂತ್ರದಲ್ಲಿ ಕಲಸಿ ಹಚ್ಚಿದರೂ ಆಗುತ್ತೆ
ಮೂಲಂಗಿ ಬೀಜ ಕುಟ್ಟಿ ಪುಡಿ ಮಾಡಿ ವಿನೆಗರ್ ನಲ್ಲಿ ಕಲಸಿ ಹಚ್ಚಿ ಮೂಲಂಗಿ ಬೀಜ ಹಿಂದಿನ ರಾತ್ರಿ ನೆನೆಸಿಡಬೆಕು ಉತ್ತಮ ಪರಿಣಾಮ ಕಾರಿ ೧- ೨ ತಿಂಗಳು ಮಾಡಿ ನೊಡಿ
ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಬಳಸಿ
೫೦೦ ಗ್ರಾಮ್ ಅರಿಶಿನವನ್ನು ಕುಟ್ಟಿ ಪುಡಿ ಮಾಡಿ ೮ ಲೀಟರ್ ನೀರಿನೊಂದಿಗೆ ರಾತ್ರಿ ನೆನೆಸಿಡಿ ಮರುದಿನ ಬೆಳಿಗ್ಗೆ ಅದನ್ನು ಒಂದು ಲೀಟರ್ ಗೆ ಇಳಿಯುವವರೆಗೂ ಚೆನ್ನಾಗಿ ಕುದಿಸಿ ಬೇಯಿಸ ನಂತರ ಸೊಸಿ ಸಾಸಿವೆ ಎಣ್ಣೆಗೆ ಕಲಸಿ ಈ ಮಿಶ್ರಣವನ್ನು ಎಣ್ಣೆ ಉಳಿಯುವ ತನಕ ಬೇಯಿಸಿ ಬಾಟಲ್ ನಲ್ಲಿ ಹಾಕಿಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಸಂಜೆ ಹಚ್ಚಿ ಒಂದು ತಿಂಗಳ ಕಾಲ.
ಒಣ ಖರ್ಜೂರವನ್ನು ಸುಟ್ ಬೂದಿ ಮಾಡಿ ಇದನ್ನು ಬೇವಿನಣ್ಣೆಯಲ್ಲಿ ಕಲಸಿ ಹಚ್ಚಿ ಒಂದ್ ತಿಂಗಳು
ನೆಲ್ಲಿಕಾಯಿ ತಿನ್ನಿ
ನೆಲ್ಲಿಕಾಯಿ ಜ್ಯೂಸ್ ಮೆಡಿಕಲ್ ನಲ್ಲಿ ಸಿಗುತ್ತೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿನಿರಿಗೆ ಹಾಕಿ ಕುಡಿದು ನೊಡಿ
ನೆಲ್ಲಿಕಾಯಿ ತಿನ್ನಿ
ನೆಲ್ಲಿಕಾಯಿ ಕರಿಬೇವು ಒಂದೆಲಗ ಮೆಂತ್ಯಾ ಎಲ್ಲಾದನ್ನು ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಬೇಕು ಸೊಸಿ ತಣ್ಣಗಾದ ಮೇಲೆ ಬಾಟೆಲ್ ಗೆ ಹಾಕಿಟ್ಟು ಕೊಂಡು ರಾತ್ರಿ ತಲೆಗೆ ಹಚ್ಚಿ ಬೆಳಗ್ಗೆ ತಲೆ ಸ್ನಾನ ಮಾಡಿ
ವಾರಕ್ಕೊಂದು ಸಲ ಮೆಂತೆ ನೆನೆಸಿ ರುಬ್ಬಿ ತಲೆಗೆ ಹಚ್ಚಿ ಅರ್ದಗಂಟೆ ಬಿಟ್ ತಲೆ ಸ್ನಾನ ಮಾಡಿ
ದಾಸವಾಳ ಎಲೆಯನ್ನು ಬಿಸಿನೀರಿಗೆ ಹಾಕಿ ನೆನಸಿ ಅದರ ಲೊಳೆಯನ್ನು ತಲೆಗೆ ಹಚ್ಚಿ ಶಾಂಪುವಿನ ಹಾಗೆ
ಹೊಟ್ಟೆ ಉಬ್ಬರಕ್ಕೆ ಎನ್ ಮಾಡ್ಬೇಕು
ಬೆಳ್ಳುಳ್ಳಿ ಮತ್ತು ಓಮ್ ಕಾಳು ಆಗಾಗ ಜಗಿದು ನುಂಗಿ,ನೀರಿಗೆ ಜೀರಿಗೆ ಹಾಕಿ ಕುದಿಸಿ ಆಗಾಗ ಕುಡಿಯಿರಿ, ಬೇಳೆಕಾಳುಗಳು, ಆಲೂ,ಗೆಣಸು ತಿನ್ನಬೇಡಿ
ಎರೆಡು ಲೊಟ ಬಿಸಿನೀರನ್ನು ಒಂದು ಲೊಟ ಆಗೊವರೆಗೂ ಇಂಗು ಮತ್ತು ಜೀರಿಗೆ ಹಾಕಿ ಕುದಿಸಿ ಸೊಸಿ ಬಿಸಿ ಇರುವಾಗಲೆ ಕುಡಿಯಿರಿ ದಿನಕ್ಕೆ ಎರೆಡು ಮೂರ್ ಲೊಟ ಹೀಟಿನಿಂದ ಆಗಿದ್ದರೆ ಕೂಡ್ಲೆ ಹಗುರ ಆದ ಅನುಭವ ಆಗುತ್ತೆ ಮೊಶನ್ ಕೂಡ ಈಜ಼ಿಯಾಗಲು ಸಹಾಯಕವಾಗುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ