ಭಾನುವಾರ, ಸೆಪ್ಟೆಂಬರ್ 10, 2017

ಶ್ರೀ ಗುರುಭ್ಯೋ ನಮಃ

ತಂ ನಾರಸಿಂಹಂ ನಮಾಮಿ ! 

ಶ್ರೀ ಗುರುಭ್ಯೋ ನಮಃ ! 
ಬೆಳಗ್ಗೆಯಿಂದ ರಾತ್ರಿ ಮಲಗೋವರೆಗೂ ಸ್ತ್ರೀಯರು ಏನು ಮಾಡಬೇಕು? 
೪) ದೇವರದೀಪ ಹಚ್ಚಿ ದೇವರದರ್ಶನ ಮಾಡಬೇಕು.

ದೇವರ ಯಾವ ಯಾವ ಅವಯವವನ್ನು ದರ್ಶನ ಮಾಡಿದರೆ ಏನೇನು ಫಲ? 

೧) ದೇವರ ಪಾದದ ಧೂಳಿ (ದೇವರ ಮನೆಯಲ್ಲಿ ಇದ್ದ ಧೂಳು) ಅದನ್ನು ದರ್ಶನ ಮಾಡಿದರೆ ದುಃಖನಾಶ.
೨) ದೇವರ ಪಾದದರ್ಶನ ಮಾಡಿದರೆ ಪಾಪನಾಶ.
೩) ಕಟಿದರ್ಶನ ಮಾಡಿದರೆ ಕಾಮ (ದುಷ್ಟ ಇಚ್ಛೆಗಳ) ನಾಶ.
೪) ನಾಭಿದರ್ಶನ ಮಾಡಿದರೆ ನರಕ & ನರಕಭಯದ ನಾಶ.
೫) ಹೃದಯದ ದರ್ಶನ ಮಾಡಿದರೆ ಹೃದ್ರೋಗನಾಶ.
೬) ಕಂಠದರ್ಶನ ಮಾಡಿದರೆ ವೈಕುಂಠಸಾಧನ.
೭) ಮುಖದರ್ಶನ ಮಾಡಿದರೆ ಮೋಕ್ಷಸಾಧನ.
೮) ಶಿರೋದರ್ಶನ ಅಮೃತಪ್ರಾಶನ.
೯) ಕಿರೀಟದರ್ಶನ ಪುನರ್ಜನ್ಮನಾಶನ.
೧೦) ಸರ್ವಾಂಗದರ್ಶನ ಪರಲೋಕಸಾಧನ. 
ಹೀಗೆ ದೇವರದರ್ಶನಕ್ಕೆ ಇಷ್ಟು ಫಲವಿದೆ. ಇದನ್ನು ಚಿಂತಿಸಿ ಭಕ್ತಿಯಿಂದ ದೇವರ ಸರ್ವಾಂಗವನ್ನು ದರ್ಶನ ಮಾಡಿ ನಮಸ್ಕಾರ ಮಾಡಬೇಕು.
ಆಗ ಈ ಮಂತ್ರ ಹೇಳಬೇಕು.

ಮಾತಾ ಚ ಕಮಲಾದೇವೀ
ಪಿತಾ ದೇವೋ ಜನಾರ್ದನಃ !
ಬಾಂಧವಾಃ ವಿಷ್ಣುಭಕ್ತಾಃ ಚ
ಸ್ವದೇಶೋ ಭುವನತ್ರಯಂ !!

ಅರ್ಥ :- ನನ್ನ ನಿಜವಾದ ತಾಯಿ ಲಕ್ಷ್ಮೀದೇವಿ, ನಿಜವಾದ ತಂದೆ ನಾರಾಯಣ, ವಿಷ್ಣುಭಕ್ತರೇ ನನ್ನ ಬಂಧುಬಳಗ, ಈ  ಭೂಮಂಡಲವೇ ನನ್ನ ಮನೆ. ದೇವರ ಮುಂದೆ ನಾನು ಅಸ್ವತಂತ್ರ ಅವನು ಕೊಟ್ಟರೆ ಎಲ್ಲಾ. ಇಲ್ಲಾಂದ್ರೆ ಏನೂ ಇಲ್ಲ.  ಅಂತ ಚಿಂತನೆ ಮಾಡಿ ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡಬೇಕು. 

ಅಂದರೆ ಸ್ತ್ರೀಯರು ತಮ್ಮ ಎದೆಭಾಗವನ್ನು ಭೂಮಿಗೆ ಸ್ಪರ್ಶ ಮಾಡದೇ ನಮಸ್ಕಾರ ಮಾಡಬೇಕು. ಯಾಕೆಂದರೆ :- 

ಬ್ರಾಹ್ಮಣಸ್ಯ ಗುದಂ ಶಂಖಂ
ಯೋಷಿತಃ ಸ್ತನಮಂಡಲಂ ! 
ರೇತಃ ಪವಿತ್ರಗ್ರಂಥಿಂ ಚ 
ನ ಭೂಃ ಧಾರಯಿತುಂ ಕ್ಷಮಾ !! 

ಅಂತ 👆🏾ಈ ರೀತಿ ಶ್ಲೋಕವಿದೆ 

ಅರ್ಥ :- ಬ್ರಾಹ್ಮಣನ ಗುದಭಾಗವನ್ನು, ಶಂಖದ ಪೃಷ್ಠಭಾಗವನ್ನು ಹಾಗೆ ಸ್ತ್ರೀಯರ ಎದೆಭಾಗವನ್ನು ಭೂದೇವಿ ತನ್ನ ಮೇಲೆ ಸಹಿಸೋದಿಲ್ಲ ಅಂತ ಶ್ಲೋಕವಿದೆ.
ಅದಕ್ಕೋಸ್ಕರ ಸ್ತ್ರೀಯರು ಎದೆಭಾಗವನ್ನು ಭೂಮಿಗೆ ಸ್ಪರ್ಶ ಮಾಡದೇ ನಮಸ್ಕಾರ ಮಾಡಬೇಕು.  ಅದಕ್ಕೆ ಪಂಚಾಂಗ ನಮಸ್ಕಾರ ಅಂತ ಕರಿತಾರೆ.
ಪುರುಷರು ಮಾಡುವಂಥ ನಮಸ್ಕಾರಕ್ಕೆ ಸಾಷ್ಟಾಂಗ ನಮಸ್ಕಾರ ಅಂತ ಕರಿತಾರೆ. ಪುರುಷರಂತೆ ಸ್ತ್ರೀಯರು ಮಾಡಬಾರದು. 
ನಮಸ್ಕಾರ ಮಾಡುವಾಗ ಕನಿಷ್ಠ ೫ ನಮಸ್ಕಾರ ಆದ್ರೂ ಮಾಡಬೇಕು. 
*ಆವಾಗ (ನಮಸ್ಕಾರ ಮಾಡುವಾಗ) ಏನು ಮಂತ್ರ ಹೇಳಬೇಕು? 
ಬೆಳಗ್ಗೆದ್ದು ದೇವರ ಮುಂದೆ ದೀಪ ಹಚ್ಚಿ ನಮಸ್ಕಾರ ಮಾಡುವಾಗ ಈ ದೇವರ ೫ ರೂಪಗಳನ್ನು ಸ್ಮರಣೆ ಮಾಡ್ತಾ ನಮಸ್ಕಾರ ಮಾಡಬೇಕು
೧) ಮಾಯಾಪತಿ ವಾಸುದೇವಾಯ ನಮಃ
೨) ಜಯಾಪತಿ ಸಂಕರ್ಷಣಾಯ ನಮಃ 
೩) ಕೃತಿಪತಿ ಪ್ರದ್ಯುಮ್ನಾಯ ನಮಃ 
೪) ಶಾಂತಿಪತಿ ಅನಿರುದ್ಧಾಯ ನಮಃ 
೫) ಲಕ್ಷ್ಮೀಪತಿ ನಾರಾಯಣಾಯ ನಮಃ   ಅಂತ ಹೇಳ್ತಾ ೫ ನಮಸ್ಕಾರ ಹಾಕಬೇಕು.
ನಂತರ ಪ್ರಾರ್ಥನೆ ಮಾಡಬೇಕು.   ಆಗ ಈ ಮಂತ್ರವನ್ನು ಹೇಳಬೇಕು.
ಅಂಧೋsಹಂ ಕರುಣಾಸಿಂಧೋ
ವೀಕ್ಷೇ ನ ಕ್ಷೇಮಪದ್ಧತಿಂ ! 
ಇಂದಿರೇಶ ಕರಂ ಗೃಣ್ಹನ್
ವರ್ತಯಾನಿಂದ್ಯವರ್ತ್ಮನಿ !!

ಅರ್ಥ :- ಕರುಣಾಮಯಿಯಾದ, ಇಂದಿರಾಪತಿಯಾದ ಎಲೋ ನಾರಾಯಣನೇ ನಾನು ಕುರುಡನಾಗಿದ್ದೀನಿ ಕ್ಷೇಮದದಾರಿ ಯಾವುದು ಗೊತ್ತಾಗ್ತಿಲ್ಲ. ನೀನು ನನ್ನ ಕೈ ಹಿಡಿದು ನಿರ್ದುಷ್ಟಮಾರ್ಗದಲ್ಲಿ ಕರೆದುಕೊಂಡುಹೋಗು ಅಂತ ಪ್ರಾರ್ಥನೆ ಮಾಡಬೇಕು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ